ಬಾಗಲಕೋಟೆ: ಗೋವಾದ ಕ್ಯಾಸಿನೋದಲ್ಲಿ ಜೂಜಾಟದಿಂದ ಬಂದ ಹಣಕ್ಕಾಗಿಯೇ ನವನಗರದ ಬಾಲಕಿ ಅಪಹರಣ ನಡೆದಿರುವುದು ಬೆಳಕಿಗೆ ಬಂದಿದೆ. ಅಕ್ಟೋಬರ್ 27ರಂದು ನವನಗರದ ಸೆಕ್ಟರ್ ನಂಬರ 61ರಲ್ಲಿ ಕೃತಿಕಾ ಕೊಡಗಾನೂರ (7) ಎಂಬ ಬಾಲಕಿಯನ್ನು ಅಪಹರಣ ಮಾಡಲಾಗಿತ್ತು. ಅಪಹರಣ ಆಗಿರುವ ಬಾಲಕಿ ಸಹೋದರ ಮಾವ ಅನಿಲ ಎಂಬುವನು ಗೋವಾಗೆ ಹೋಗಿ ಕ್ಯಾಸಿನೋದಲ್ಲಿ ಅಂದಾಜು 45 ಲಕ್ಷ ರೂಪಾಯಿಗಳು ತೆಗೆದುಕೊಂಡು ಬಂದಿದ್ದನು. ಅಪಹರಣಕ್ಕೆ ಪ್ಲ್ಯಾನ್ ಮಾಡಿದ ಪ್ರಮುಖ ಆರೋಪಿ ಭೀರಪ್ಪ ಬೂದಿಹಾಳ ಎಂಬುವನು ಅನಿಲ ಜೊತೆಗೆ …
Read More »ಉತ್ತರ ಕರ್ನಾಟಕ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗಿದೆ. ಹೀಗಾಗಿ, ಪ್ರತ್ಯೇಕ ರಾಜ್ಯದ ಕೂಗು ಸದ್ಯಕ್ಕೆ ಬೇಕಾಗಿಲ್ಲ.
ಬಾಗಲಕೋಟೆ : ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಆದಾಗ ಪ್ರತ್ಯೇಕ ರಾಜ್ಯದ ಬೇಡಿಕೆ ಕೂಗು ಇರಲಿದೆ. ಈಗ ಒಬ್ಬ ಜವಾಬ್ದಾರಿಯುತ ಮಂತ್ರಿಯಾಗಿದ್ದೇನೆ. ಹೀಗಾಗಿ, ಆ ವಿಚಾರ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು. ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾದಿಂದ ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಹೀಗಾಗಿ, ಉತ್ತರ ಕರ್ನಾಟಕ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ …
Read More »ಮಹಿಳಾ-ಯುವಕ ಮಂಡಳದಿಂದ ಅಗಲಿದ ಅಪ್ಪುಗೆ ಶ್ರದ್ಧಾಂಜಲಿ
ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ನಿಧನಕ್ಕೆ ಎಲ್ಲರೂ ಮಮ್ಮಲ ಮರಗುತ್ತಿದ್ದಾರೆ. ಈ ಸಾವು ನ್ಯಾಯವೇ ಎನ್ನುತ್ತಿದ್ದಾರೆ. ಇನ್ನು ನಾಡಿನ ಮೂಲೆ ಮೂಲೆಯಲ್ಲಿ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಅದೇ ರೀತಿ ಬೆಳಗಾವಿಯ ಕಪಿಲೇಶ್ವರ ಮಹಿಳಾ ಮಂಡಳ ಮತ್ತು ಯುವಕ ಮಂಡಳ ವತಿಯಿಂದಲೂ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬೆಳಗಾವಿಯ ಕಪಿಲೇಶ್ವರ ಏರಿಯಾದಲ್ಲಿ ಕಪಿಲೇಶ್ವರ ಮಹಿಳಾ ಮಂಡಳ ಮತ್ತು ಯುವಕ ಮಂಡಳದ ಪದಾಧಿಕಾರಿಗಳು ಅಗಲಿದ ಕನ್ನಡದ ಕಣ್ಮನಿ, ಯುವರತ್ನ, ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರ ಇರುವ …
Read More »ಉತ್ತರ ಪ್ರದೇಶ ಚುನಾವಣಾ ಮೇಲೆ ಬೆಲೆ ಏರಿಕೆ ಪರಿಣಾಮ ಬೀರುವದಿಲ್ಲ:ಅರವಿಂದ ಬೆಲ್ಲದ
ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಇಳಿಸಲು ಕೇಂದ್ರ ಕ್ರಮಗಳನ್ನು ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಬೆಲೆ ಇಳಿಕೆಯಾಗಲಿದೆ ಎಂಬ ವಿಶ್ವಾಸವನ್ನು ಶಾಸಕ ಅರವಿಂದ ಬೆಲ್ಲದ ವ್ಯಕ್ತಪಡಿಸಿದರು. ನಗರದಲ್ಲಿಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು,ಬೆಲೆ ಏರಿಕೆಯಾಗುತ್ತಿರುವದು ಸರ್ಕಾರದ ಗಮನಕ್ಕೆ ಇದೆ. ಸರ್ಕಾರ ಬೆಲೆ ಇಳಿಕೆ ಮಾಡಲು ಯತ್ನಿಸುತ್ತಿದೆ ಎಂದರು. ತೆರಿಗೆ ವಸೂಲಿ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ತಗೆದುಕೊಳ್ಳಲಿದೆ. ಎಲ್ಲಾ ರಾಜ್ಯಗಳಿಗಿಂತಲೂ ರಾಜ್ಯ ಸರ್ಕಾರ ಕಡಿಮೆ ತೆರಿಗೆ ಇದೆ. …
Read More »ದೇಶಾಧ್ಯಂತ ಪಾದಯಾತ್ರೆ ಕೈಗೊಂಡ ಮಹಾರಾಷ್ಟ್ರದ ಯುವಕ
ಪ್ಲಾಸ್ಟಿಕ್ ಮುಕ್ತ ಭಾರತ, ಗುರುಕುಲ ವ್ಯವಸ್ಥೆ ಪುನರ್ ಆರಂಭ ಹಾಗೂ ದೇಶದಲ್ಲಿ ಭ್ರಾತೃತ್ವ ಭಾವನೆ ಎಲ್ಲರಲ್ಲಿಯೂ ಬರಬೇಕು ಎಂಬ ಉದ್ದೇಶದಿಂದ ಮಹಾರಾಷ್ಟ್ರದ ಯುವಕನೊರ್ವ ದೇಶಾಧ್ಯಂತ ಪಾದಯಾತ್ರೆ ಕೈಗೊಂಡಿದ್ದಾನೆ. ಸಧ್ಯ ಬೆಳಗಾವಿಗೆ ಆಗಮಿಸಿರುವ ಈ ಯುವಕನಿಗೆ ಕನ್ನಡಪರ ಸಂಘಟನೆಗಳು ಆತ್ಮೀಯವಾಗಿ ಬರಮಾಡಿಕೊಂಡಿವೆ. ಹೌದು ನೀವು ನೋಡುತ್ತಿರುವ ಈ ಯುವಕನ ಹೆಸರು ರೋಹನ್ ಅಗರವಾಲ್ ಅಂತಾ. ಈತ ಮಹಾರಾಷ್ಟ್ರದ ನಾಗ್ಪುರದವನು. ಇನ್ನು ಕೇವಲ 19 ವರ್ಷ ವಯಸ್ಸು. ತನ್ನ ಕಾಲೇಜು, ತನ್ನ ಮನೆ …
Read More »ಪುನೀತ್ ನಿಧನದ ಬಳಿಕ ಬೆಂಗಳೂರಿನ ಜಯದೇವ, ಮಂಗಳೂರು.. ಸೇರಿದಂತೆ ಮಂಡ್ಯದ ಪ್ರಿಯದರ್ಶಿನಿ ಹಾರ್ಟ್ ಕೇರ್ ಸೆಂಟರ್‌ಗೆ ರೋಗಿಗಳ ದೌಡಾ
: ಮಂಡ್ಯ: ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಠಾತ್ ನಿಧನ ಜನರ ಆತಂಕಕ್ಕೆ ಕಾರಣವಾಗಿದೆ. ಪುನೀತ್ ನಿಧನದ ಬಳಿಕ ಆತಂಕದಿಂದಲೇ ಆಸ್ಪತ್ರೆಯತ್ತ ಜನ ದೌಡಾಯಿಸಿದ್ದಾರೆ. ಆಸ್ಪತ್ರೆಗೆ ಬರುವ ಹೃದಯ ಸಂಬಂಧಿ ರೋಗಿಗಳ ಸಂಖ್ಯೆ 1ಕ್ಕಿಂತ 3 ಪಟ್ಟು ಹೆಚ್ಚಾಗತೊಡಗಿದೆ. : ಬೆಂಗಳೂರಿನ ಜಯದೇವ, ಮಂಗಳೂರು.. ಸೇರಿದಂತೆ ಮಂಡ್ಯದ ಪ್ರಿಯದರ್ಶಿನಿ ಹಾರ್ಟ್ ಕೇರ್ ಸೆಂಟರ್‌ಗೆ ರೋಗಿಗಳ ದೌಡಾಯಿಸಿದ್ದಾರೆ. ಹೃದ್ರೋಗ ತಜ್ಞ ಡಾ. ಪ್ರಶಾಂತ್ ಬಳಿ ಚಿಕಿತ್ಸೆ ಪಡೆಯಲು ಸಾಲುಗಟ್ಟಿ ನಿಂತಿದ್ದಾರೆ. …
Read More »ಬೆಳಗಾವಿಯ ಸಾಹಿತ್ಯ ಕ್ಷೇತ್ರದ ಹಿರಿಯ ಕೊಂಡಿಯೊಂದು ಕಳಚಿದೆ.
ಬೆಳಗಾವಿಯ ಸಾಹಿತ್ಯ ಕ್ಷೇತ್ರದ ಹಿರಿಯ ಕೊಂಡಿಯೊಂದು ಕಳಚಿದೆ. ಖ್ಯಾತ ಸಾಹಿತಿಗಳು ಹಾಗೂ ಜಾನಪದ ಸಂಶೋಧಕರು ಆಗಿದ್ದ ಪ್ರೊ.ಜ್ಯೋತಿ ಹೊಸೂರ ಅವರು ಇಂದು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಪ್ರೊ.ಜ್ಯೋತಿ ಹೊಸೂರ ಅವರು ಜಾನಪದ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು ಮಾಡಿದ ಸಾಹಿತಿ. ಗಾದೆ, ಒಡಪು, ಗ್ರಾಮದೇವತೆ ಅವರು ಮಾಡಿದ ಸಂಶೋಧನೆಗಳು, ವಿದ್ವತ ಪ್ರಪಂಚದಲ್ಲಿ ಗೌರವ ಆದರಕ್ಕೆ ಪಾತ್ರವಾಗಿದ್ದವು. ರಾಯಬಾಗದಂತಹ ಸಣ್ಣ ಹಳ್ಳಿಯಲ್ಲಿದ್ದರು. ಅವರು ನಡೆಸಿದ ಸಂಶೋಧನೆಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ಚರ್ಚೆ …
Read More »ಬೆಳಗಾವಿಯ ಸಿಪಿಇಡ್ ಮೈದಾನದಲ್ಲಿ ನಡೆದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಬೆಳಗಾವಿಯ ಸಿಪಿಇಡ್ ಮೈದಾನದಲ್ಲಿ ನಡೆದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಇನ್‍ನ್ಯೂಸ್ ಪ್ರಧಾನ ಸಂಪಾದಕರಾದ ರಾಜಶೇಖರ್ ಪಾಟೀಲ್, ಸಂಯುಕ್ತ ಕರ್ನಾಟಕ ಪತ್ರಿಕೆ ಹಿರಿಯ ವರದಿಗಾರ ವಿಲಾಸ್ ಜೋಶಿ ಅವರನ್ನು ಸತ್ಕರಿಸಿದರು. ಇನ್ನು ಸಂಗೀತ ಕ್ಷೇತ್ರದಿಂದ ಕೆಎಲ್‍ಇ ಕ್ಯಾಂಪಸ್‍ನ ಯಾದವೇಂದ್ರ ಪೂಜಾರಿ, ಶೌರ್ಯ ಗೋಕಾಕ್ ತಾಲೂಕಿನ ಅಂಕಲಗಿಯ ರೈಲ್ವೇ ಹೋಮ್ ಗಾರ್ಡ ಹೊಳೆಪ್ಪ ನೇಸರಗಿ, ಸಾಹಿತ್ಯ …
Read More »18 ತಿಂಗಳ ಬಳಿಕ ವಿಮಾನ ಕಾರ್ಯಾಚರಣೆ ಆರಂಭಿಸಿದ ದೆಹಲಿ ವಿಮಾನ ನಿಲ್ದಾಣ ಟರ್ಮಿನಲ್-1
ಹೊಸದಿಲ್ಲಿ: ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1 ಹದಿನೆಂಟು ತಿಂಗಳ ಬಳಿಕ ಮೊದಲ ಬಾರಿಗೆ ಕಾರ್ಯಾರಂಭ ಮಾಡಿದೆ. ರವಿವಾರ ಸಂಜೆ 6 ಗಂಟೆವರೆಗೆ 133 ವಿಮಾನಗಳು ಟೇಕಾಫ್ ಅಥವಾ ಲ್ಯಾಂಡಿಗ್ ಆಗಿವೆ. ಇಡೀ ದಿನ 200ಕ್ಕೂ ಹೆಚ್ಚು ವಿಮಾನಗಳು ಮೊದಲ ದಿನ ಕಾರ್ಯಾಚರಣೆ ಮಾಡಿವೆ ಎಂದು ದೆಹಲಿ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಡಿಐಎಲ್‌ಎಲ್) ಪ್ರಕಟಿಸಿದೆ. “ಇಂಡಿಗೊ ಮತ್ತು ಸ್ಪೈಸ್ ಜೆಟ್ ವಿಮಾನಗಳೊಂದಿಗೆ ಟರ್ಮಿನಲ್-1ರಲ್ಲಿ ಮೊದಲ ಬಾರಿಗೆ 18 …
Read More »ವಿಜಯಪುರದಲ್ಲಿ, ಜಿಲ್ಲಾಡಳಿತದ ವತಿಯಿಂದ ೬೬ನೇ ಕನ್ನಡ ರಾಜ್ಯೋತ್ಸ
ಬದುಕಿನುದ್ದಕ್ಕೂ ಕನ್ನಡ ಪ್ರೀತಿ ಮೆರೆಯೋಣ, ಕನ್ನಡಾಂಬೆಯ ಸೇವೆ ಮಾಡೋಣ.” ವಿಜಯಪುರದಲ್ಲಿ, ಜಿಲ್ಲಾಡಳಿತದ ವತಿಯಿಂದ ೬೬ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಉಸ್ತುವಾರಿ ಹಾಗೂ ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು ಭಾಗವಹಿಸಿ, ಭುವನೇಶ್ವರಿ ತಾಯಿಗೆ ಪುಷ್ಪನಮನ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದ ಬಳಿಕ ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ಸಿಬ್ಬಂದಿ, ಅಗ್ನಿಶಾಮಕ ದಳದಿಂದ ಗೌರವ ವಂದನೆ ಸ್ವೀಕರಿಸಿದರು. ಕನ್ನಡ …
Read More »
Laxmi News 24×7