Breaking News

ರೈತರಿಗೆ ಶಾಕ್, ಪಂಪ್ಸೆಟ್ ಉಚಿತ ವಿದ್ಯುತ್ ಗೆ ಬ್ರೇಕ್..? ಗ್ಯಾಸ್ ಸಬ್ಸಿಡಿ ಮಾದರಿ ‘ಗಿವ್ ಇಟ್ ಅಪ್’ ಅಭಿಯಾನ.?

ಬೆಂಗಳೂರು: ಎಲ್ಪಿಜಿ ಗ್ಯಾಸ್ ಸಬ್ಸಿಡಿ ಸೌಲಭ್ಯವನ್ನು ಸ್ವಯಂಪ್ರೇರಿತರಾಗಿ ಬಿಟ್ಟುಕೊಡಲು ಗಿವ್ ಇಟ್ ಅಪ್ ನಡೆಸಿದಂತೆಯೇ ವಿದ್ಯುತ್ ಗಿವ್ ಇಟ್ ಅಪ್ ಅಭಿಯಾನ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಕೃಷಿ ನೀರಾವರಿ ಪಂಪ್ ಸೆಟ್ ಗಳ ಉಚಿತವಾಗಿ ವಿದ್ಯುತ್ ಸೌಲಭ್ಯವನ್ನು ರೈತರು ಸ್ವಯಂ ಪ್ರೇರಿತವಾಗಿ ಬಿಟ್ಟುಕೊಡಲು ಗಿವ್ ಇಟ್ ಅಪ್ ಅಭಿಯಾನ ಕೈಗೊಳ್ಳಲಾಗುತ್ತದೆ. ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುವುದನ್ನು ನಿಲ್ಲಿಸಿದರೆ, ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತದೆ. ಹೀಗಾಗಿ ರೈತರೇ ಸ್ವಯಂ …

Read More »

ದೇಗುಲ ಆಸ್ತಿಗೆ ದೇವರೇ ಮಾಲೀಕ, ಅರ್ಚಕನಲ್ಲ: ದೇವಾಲಯ ಭೂಮಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ದೇವಾಲಯಗಳಿಗೆ ಮೀಸಲಾದ ಆಸ್ತಿಯ ಒಡೆತನ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ದೇವಾಲಯದ ಭೂಮಿಗೆ ದೇವರೇ ಮಾಲೀಕ ಎಂದು ತಿಳಿಸಿದೆ. ಯಾವುದೇ ದೇವಾಲಯಗಳ ಆಸ್ತಿಗೆ ಅರ್ಚಕರು ಒಡೆಯರಲ್ಲ, ದೇವರೇ ನಿಜವಾದ ಮಾಲೀಕ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ದೇವಾಲಯಗಳಿಗೆ ಮೀಸಲಾದ ಭೂದಾಖಲೆಗಳಲ್ಲಿ ಅರ್ಚಕರ ಹೆಸರನ್ನು ಸೇರ್ಪಡೆ ಮಾಡಬೇಕೆಂಬುದರ ಕುರಿತಾಗಿ ಉಂಟಾದ ಗೊಂದಲದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ, ದೇಗುಲದ ಭೂಮಿಗೆ ದೇವರೇ ಮಾಲೀಕರಾಗಿದ್ದು, ತಾತ್ಕಾಲಿಕವಾಗಿ …

Read More »

1.06 ಬಿಲಿಯನ್‌ ಡಾಲರ್‌ ಕೊಟ್ಟರೆ ಕೇಸು ವಾಪಸ್‌: ಕೈರ್ನ್ ಎನರ್ಜಿ

ನವದೆಹಲಿ:ಭಾರತ ಸರ್ಕಾರ ಶೀಘ್ರವೇ 1.06 ಬಿಲಿಯನ್‌ ಡಾಲರ್‌ ಮೊತ್ತವನ್ನು ಪಾವತಿಸುವ ವಿಶ್ವಾಸವಿದೆ. ಈ ಮೊತ್ತ ಪಾವತಿ ಮಾಡಿದರೆ, ವಿದೇಶಗಳಲ್ಲಿರುವ ಕೇಂದ್ರದ ಆಸ್ತಿ ವಶಪಡಿಸಿಕೊಳ್ಳುವುದನ್ನು ಕೈ ಬಿಡುವುದಾಗಿ ಕೈರ್ನ್ ಎನರ್ಜಿ ಮಂಗಳವಾರ ಹೇಳಿದೆ. ಭಾರತದ 1.06 ಶತ ಕೋಟಿ ಡಾಲರ್‌ ಮರು ಪಾವತಿ ಆಫ‌ರ್‌ ಅನ್ನು ನಾವು ಸ್ವೀಕರಿಸಿದ್ದು, ತೆರಿಗೆ ವಿವಾದ ಶೀಘ್ರವೇ ಇತ್ಯರ್ಥಗೊಳ್ಳಲಿದೆ ಎಂದು ಕೈರ್ನ್ ಎನರ್ಜಿ ಸಿಇಒ ಸಿಮೊನ್‌ ಥಾಮ್ಸನ್‌ ಹೇಳಿದ್ದಾರೆ. ಕೇಂದ್ರ ಸರ್ಕಾರದ ಜತೆಗೆ ದೀರ್ಘ‌ ಕಾಲದಿಂದ ಇರುವ ವಿವಾದ …

Read More »

ದೇಶದಲ್ಲಿ ಕೋವಿಡ್ ದಿಂದಾಗಿ ಕಡಿಮೆಯಾಗಿದ್ದ ವಾಹನ ಮಾರಾಟ ಪ್ರಮಾಣ ಇದೀಗ ಮತ್ತೆ ಏರಿಕೆ

ನವದೆಹಲಿ: ದೇಶದಲ್ಲಿ ಕೋವಿಡ್ ದಿಂದಾಗಿ ಕಡಿಮೆಯಾಗಿದ್ದ ವಾಹನ ಮಾರಾಟ ಪ್ರಮಾಣ ಇದೀಗ ಮತ್ತೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ನಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ.39 ಏರಿಕೆಯಾಗಿದೆ ಎಂದು ಆಟೋಮೊಬೈಲ್‌ ವಿತರಕ ಸಂಘಗಳ ಒಕ್ಕೂಟ (ಎಫ್‌ಎಡಿಎ) ತಿಳಿಸಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ 1,82,651 ವಾಹನ ಮಾರಾಟ ವಾಗಿತ್ತು, ಈ ವರ್ಷ ಆಗಸ್ಟ್‌ಗೆ ಅದು 2,53,363ಕ್ಕೆ ಏರಿಕೆಯಾಗಿದೆ. ಕಳೆದ ಆಗಸ್ಟ್‌ ಗೆ 9,15,126 ಬೈಕುಗಳು ಮಾರಾಟವಾಗಿದ್ದು, ಈ ವರ್ಷ 9,76,051ಕ್ಕೆ ಏರಿದೆ. ವಾಣಿಜ್ಯ …

Read More »

ದ.ಕ.ಜಿಲ್ಲೆಯ ಪ್ರಮುಖ ದೇವಸ್ಥಾನಗಳ ನಿರ್ಬಂಧ ಸಡಿಲಿಕೆ ..!

ಮಂಗಳೂರು: ಕೋವಿಡ್ ಸೋಂಕು ನಿಯಂತ್ರಣದ ಹಿನ್ನಲೆಯಲ್ಲಿ ದ.ಕ.ಜಿಲ್ಲೆಯ ಪ್ರಮುಖ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಈ ಹಿಂದೆ ವಿಧಿಸಲಾಗಿದ್ದ ಕೆಲವು ನಿರ್ಬಂಧ, ಮಾರ್ಗಸೂಚಿಗಳನ್ನು ಹಿಂಪಡೆದು ದ.ಕ.ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳು ಸೇರಿದಂತೆ ಪ್ರಮುಖ ದೇವಸ್ಥಾನಗಳು ವಾರಾಂತ್ಯಗಳನ್ನು ಹೊರತುಪಡಿಸಿ ಭಕ್ತಾದಿಗಳಿಗೆ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ತೆರೆದಿರುತ್ತದೆ. ಈ ಸಂದರ್ಭ ಭಕ್ತಾದಿಗಳು ಕಡ್ಡಾಯವಾಗಿ ಸಾಮಾಜಿಕ ಅಂತರ, ಅಗತ್ಯ ಕೋವಿಡ್ ನಿಯಂತ್ರಣ ಮುಂಜಾಗ್ರತಾ …

Read More »

ದೇವಸ್ಥಾನದಲ್ಲಿ ಚಪ್ಪಲಿ ಧರಿಸಿ ಓಡಾಡಿದ ನಟಿ ತ್ರಿಷಾ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲೂ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ಕಾಲಿವುಡ್‌ನ ಖ್ಯಾತ ನಟಿ ತ್ರಿಷಾ ಕೃಷ್ಣನ್ ಇದೀಗ ವಿವಾದಕ್ಕೆ ಸಿಲುಕಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ನಟಿ ತ್ರಿಷಾ ಕೃಷ್ಣನ್ ಮಾಡಿದ ಎಡವಟ್ಟಿನಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ದೇವಸ್ಥಾನದಲ್ಲಿ ಚಪ್ಪಲಿ ಧರಿಸಿ ಓಡಾಡಿದ ನಟಿ ತ್ರಿಷಾ ಕೃಷ್ಣನ್ ಅವರನ್ನು ಬಂಧಿಸುವಂತೆ ಹಿಂದೂ ಪರ ಸಂಘಟನೆಗಳು ಆಗ್ರಹಿಸುತ್ತಿವೆ. ಶೂಟಿಂಗ್​ ನಡುವೆ ತ್ರಿಶಾ ಕೃಷ್ಣನ್​ ದಾರ್ಮಿಕ ಸ್ಥಳದಲ್ಲಿ ಎಡವಟ್ಟೊಂದನ್ನು ಮಾಡಿದ್ದಾರೆ. ಚಿತ್ರೀಕರಣ ವೇಳೆ ಚಪ್ಪಲಿ ಹಾಕಿಕೊಂಡು ತ್ರಿಶಾ …

Read More »

ಗುಂಡೇಟಿಗೆ ಎಮ್ಮೆ ಬಲಿ

ಬೆಳ್ತಂಗಡಿ :ಮೇಯಲು ಬಿಟ್ಟಿದ್ದ ಎಮ್ಮೆಯನ್ನು ಕಿಡಿಗೇಡಿಗಳು ಗುಂಡುಹಾರಿಸಿ ಕೊಂದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯ ಫಲಸ್ತಡ್ಕ ಎಂಬಲ್ಲಿ ನಡೆದಿದೆ. ಹೊಸ್ತೋಟ ವಾಳ್ಯದ ಅರೆಕ್ಕಲ್ ಮಹಾದೇವ ಭಟ್ ಎಂಬವರ ಹಾಲು ಕರೆಯುವ ಸುಮಾರು 10 ವರ್ಷ ಪ್ರಾಯದ ಎಮ್ಮೆಯನ್ನು ಮನೆ ಪರಿಸರದಲ್ಲಿ ಮೇಯಲು ಬಿಟ್ಟಿದ್ದರು. ಎಮ್ಮೆ ತಡರಾತ್ರಿವರೆಗೂ ಮನೆಗೆ ಬಾರದ ಕಾರಣ ಹುಡುಕಾಟ ನಡೆಸಿದಾಗ ಸಮೀಪದ ಫಲಸ್ತಡ್ಕ ಎಂಬಲ್ಲಿ ಮಂಗಳವಾರ ಮೃತದೇಹ ಪತ್ತೆಯಾಗಿದೆ. ಎಮ್ಮೆಯ ಮೈಮೇಲೆ ಗುಂಡಿನ ಗಾಯಗಳು …

Read More »

ಪಕ್ಷ ಸಂಘಟನೆಗೆ ಕ್ರಿಯಾಶೀಲತೆ ಅಗತ್ಯ

ಕೊಪ್ಪಳ: ‘ಜಿಲ್ಲಾ ಕಾಂಗ್ರೆಸ್ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದಲು ದೂರದೃಷ್ಟಿಯಿಂದ ಕೆಲಸ ಮಾಡಬೇಕಿದೆ. ಎಲ್ಲ ಮುಂಚೂಣಿ ಘಟಕಗಳು ಪ್ರತಿ ವಾರ ಒಂದು ಕಾರ್ಯಕ್ರಮ ಮಾಡಬೇಕು’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಮನವಿ ಮಾಡಿದರು. ಅವರು ಮಂಗಳವಾರ ಪಕ್ಷದ ಕಚೇರಿಯಲ್ಲಿ ವಿವಿಧ ಮೋರ್ಚಾ, ಬ್ಲಾಕ್‌ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ಪ್ರತಿ ಘಟಕವೂ ಸಹ ಜಿಲ್ಲಾ ಪದಾಧಿಕಾರಿಗಳು ಮತ್ತು ಏಳು ಬ್ಲಾಕ್‍ಗಳನ್ನು ಹೊಂದಿರಬೇಕು. ಎಲ್ಲರೂ ಒಂದೊಂದು …

Read More »

ಬಿಜೆಪಿಗೆ ಅಧಿಕಾರ ದುರುಪಯೋಗದ ಗೆಲುವು: ಜಿ.ಪರಮೇಶ್ವರ್‌

ಉಡುಪಿ: ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಕಾಂಗ್ರೆಸ್‌ ನಾಯಕ ಜಿ.ಪರಮೇಶ್ವರ್ ಹೇಳಿದರು. ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಪರಮೇಶ್ವರ್ ಪೆಟ್ರೋಲ್, ಡೀಸೆಲ್‌, ಸಿಲಿಂಡರ್‌ ಹಾಗೂ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಸಂದರ್ಭದಲ್ಲೂ ಬಿಜೆಪಿ ಗೆಲುವು ಸಾಧಿಸಿರುವುದು ಅಧಿಕಾರ ದುರುಪಯೋಗದಿಂದ ಎಂದರು. ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಕಾಂಗ್ರೆಸ್‌ ಪಕ್ಷವನ್ನು ನಿರಾಶೆಗೊಳಿಸಿಲ್ಲ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ವಿಧಾನಸಭಾ ಚುನಾವಣೆಯಲ್ಲಿ …

Read More »

ಜಿ.ಪಂ, ತಾ.ಪಂ ಕ್ಷೇತ್ರಗಳ ಮೀಸಲಾತಿಗಾಗಿ ಪ್ರತ್ಯೇಕ ಆಯೋಗ ರಚನೆ ಸಂವಿಧಾನ ಬಾಹೀರ : ಮಾಜಿ ಸಂಸದ ನಾರಾಯಣಸ್ವಾಮಿ

ಬಾಗಲಕೋಟೆ: ರಾಜ್ಯ ಸರ್ಕಾರ ಜಿ.ಪಂ, ತಾ.ಪಂ ಕ್ಷೇತ್ರಗಳ ಮೀಸಲಾತಿಗಾಗಿ ಪ್ರತ್ಯೇಕ ಆಯೋಗ ರಚನೆ ಮಾಡಲು ಮುಂದಾಗಿರುವುದು ಸಂವಿಧಾನ ಬಾಹೀರವಾಗಿದೆ. ಚುನಾವಣೆ ಆಯೋಗದ ಅಧಿಕಾರದ ವ್ಯಾಪ್ತಿ ಮೊಟಕುಗೊಳಿಸುವ ಉದ್ದೇಶದಿಂದ ಈ ಪ್ರಯತ್ನಕ್ಕೆ ಮುಂದಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಆಘಾತ ಎಂದು ಕಾಂಗ್ರೆಸ್ ಪಕ್ಷದ ರಾಜೀವಗಾಂಧಿ ಗ್ರಾಮೀಣ ಅಭಿವೃಧಿ ಹಾಗೂ ಪಂಚಾಯತ್ ರಾಜ್ ಸಂಘಟನೆಯ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಾರಾಯಣಸ್ವಾಮಿ ಆರೋಪಿಸಿದರು. ಈ ವರೆಗೆ ಚುನಾವಣೆ ಆಯೋಗವು ಕ್ಷೇತ್ರಗಳ ಪುನರ್ ವಿಂಗಡಣೆ, …

Read More »