Breaking News

ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಂಡ ನಟಿ ಶುಭ್ರ ಅಯ್ಯಪ್ಪ

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ನಟಿ ಶುಭ್ರ ಅಯ್ಯಪ್ಪ ಹಾಟ್ ಆಯಂಡ್ ಸ್ಪೈಸಿ ಲುಕ್ ನಲ್ಲಿ ಪೋಟೋಗೇ ಫೋಸ್ ನೀಡಿದ್ದಾರೆ. ಇತ್ತೀಚೆಗೆ ಫೋಟೋಶೂಟ್ ಮಾಡಿಸಿರುವ ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುವ ಮೂಲಕ ಯುವಕರ ನಿದ್ದೆಗೆಡಸಿದ್ದಾರೆ. ಈ ಫೋಟೋಗಳಿಗೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳು ಬಂದಿವೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ವಜ್ರಕಾಯ’ ಚಿತ್ರದಲ್ಲಿ ಅಭಿನಯಿಸಿದ್ದ ಶುಭ್ರ ಅಯ್ಯಪ್ಪ ನಂತರ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿಲ್ಲ, …

Read More »

ರಾಜ್ಯದ ಆರು ಪೊಲೀಸರಿಗೆ ರಾಷ್ಟ್ರೀಯ ‘ಶ್ರೇಷ್ಠ ತನಿಖಾ ಪದಕ’

ಬೆಂಗಳೂರು : ರಾಷ್ಟ್ರದಲ್ಲಿ ಅಪರಾಧ ಪ್ರಕರಣಗಳ ತನಿಖೆ ವೇಳೆ ಉತ್ತಮ ಸೇವೆ ಸಲ್ಲಿಸುವ ತನಿಖಾಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯ ನೀಡುವ ಶ್ರೇಷ್ಠ ತನಿಖಾ ಪದಕಕ್ಕೆ ರಾಜ್ಯದ 6 ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ. ಸಿಸಿಬಿ ಎಸಿಪಿ ಎಚ್.ಎನ್.ಧರ್ಮೇಂದ್ರ, ಮಂಗಳೂರು ಉಪವಿಭಾಗದ ಡಿವೈಎಸ್ಪಿ ಪರಮೇಶ್ವರ ಹೆಗಡೆ, ಬಿಡಿಎ ಡಿವೈಎಸ್ಪಿ ಸಿ.ಬಾಲಕೃಷ್ಣ, ಕೆಐಎ ಎಸ್‌ಐಟಿ ಮನೋಜ್ ಎನ್.ಹೂವಳೆ, ದಾವಣಗೆರೆ ಜಿಲ್ಲೆ ಹೊನ್ನಾಳಿ ಇನ್‌ಸ್ಪೆಕ್ಟರ್ ಟಿ.ವಿ.ದೇವರಾಜ್ ಹಾಗೂ ಹಳೇ ಹುಬ್ಬಳ್ಳಿ ಠಾಣೆ ಇನ್‌ಸ್ಪೆಕ್ಟರ್ ಶಿವಪ್ಪ ಶೆಟ್ಟಿಪ್ಪ …

Read More »

ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಭೇಟಿ ಮಾಡಿದ ಸಲ್ಮಾನ್ ಖಾನ್

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ವೇಟ್‌ಲಿಫ್ಟರ್‌ ಮೀರಾಬಾಯ್ ಚಾನುರನ್ನು ಭೇಟಿ ಮಾಡಿದ ನಟ ಆಕೆಯೊಂದಿಗೆ ಫೋಟೋ ತೆಗೆದುಕೊಂಡು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ವೇಟ್‌ಲಿಫ್ಟಿಂಗ್ ಶಿಸ್ತಿನ ಮಹಿಳೆಯರ ವಿಭಾಗದ 49 ಕೆಜಿ ಕೆಟಗರಿಯಲ್ಲಿ ಮೀರಾಬಾಯ್ ಬೆಳ್ಳಿ ಪದಕ ಜಯಿಸಿದ್ದರು. “ಬೆಳ್ಳಿ ಪದಕ ವಿಜೇತೆ ನಿಮ್ಮನ್ನು ಭೇಟಿಯಾಗಿದ್ದು ಬಹಳ ಸಂತಸವಾಗಿದೆ.. ನನ್ನ ಹಾರೈಕೆಗಳು ನಿಮ್ಮಂದಿಗೆ ಸದಾ ಇರಲಿವೆ!” ಎಂದು ಸಲ್ಮಾನ್ ಪೋಸ್ಟ್‌ ಮಾಡಿದ್ದಾರೆ.

Read More »

ಪೊಲೀಸ್ ನೇಮಕಾತಿಯಲ್ಲಿ ಮೋಸ ಅಧಿಕಾರಿಗಳ ಬಲೆಗೆ ಬಿದ್ದ ಆರೋಪಿಗಳಿಬ್ಬರು

ಬೆಳಗಾವಿ: ಕಳೆದ ಅಗಸ್ಟ್ 8 ರಂದು ಕೆ.ಎಸ್.ಆರ್.ಪಿ 2 ನೇ ಪಡೆ ಮಚ್ಚೆ ಮೈದಾನದಲ್ಲಿ ನಾಗರೀಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಸಹಿಷ್ಣುತೆ ಪರೀಕ್ಷೆ, ದೇಹದಾರ್ಡ್ಯತೆ ಪರೀಕ್ಷೆಯಲ್ಲಿ ಅಕ್ರಮ ಎಸಗುತ್ತಿದ್ದ ಆರೋಪಿಗಳಿಬ್ಬರನ್ನು ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ. ಚಿಕ್ಕೋಡಿ ತಾಲ್ಲೂಕಿನ ಜಾಗನೂರದ ಬಾಳೇಶ ಸನ್ನಪ್ಪ ದುರದುಂಡಿ ಹಾಗೂ ಮೂಡಲಗಿ ತಾಲ್ಲೂಕು ಕುಲಗೋಡದ ಉಮೇಶ ಎನ್ ಬಂಧಿತ ಆರೋಪಿಗಳು, ಅಭ್ಯರ್ಥಿ ಬಾಳೇಶ ಎತ್ತರ ಕಡಿಮೆ ಇರೊದರಿಂದ ತನ್ನ ತಲೆಯ ಮೇಲ್ಬಾದಲ್ಲಿ ಥರ್ಮಾಕೋಲ್ …

Read More »

ಕಾಂಗ್ರೆಸ್ ಕಚೇರಿಗಳಲ್ಲಿ ಹುಕ್ಕಾ ಬಾರ್ ತೆರೆಯಲಿ ಎಂದ ಸಿ.ಟಿ ರವಿ

ಬೆಂಗಳೂರು: ‘1984ರಲ್ಲಿ ಇಂದಿರಾ ಗಾಂಧಿ ಹತ್ಯೆ ನಡೆದಿದೆ. 2017-18ರಲ್ಲಿ ಇಂದಿರಾ ಗಾಂಧಿ ಕ್ಯಾಂಟೀನ್ ಆರಂಭಿಸಲಾಯಿತು. ಕಾಂಗ್ರೆಸ್‌ನವರು ಇಂದಿರಾ ಗಾಂಧಿ ಅವರ ಮೇಲೆ ಪ್ರೇಮದಿಂದ ಈ ಕ್ಯಾಂಟೀನ್ ಆರಂಭಿಸಿಲ್ಲ. ಅದು ರಾಜಕಾರಣಕ್ಕಾಗಿ ಮತ್ತು ದುಡ್ಡು ಹೊಡೆಯಲು ಮಾಡಿದ ನಿರ್ಧಾರ. ಬದ್ಧತೆಗಾಗಿ ಅಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘1989- 94, 1999-2006, 2013ರಿಂದ 2017ರ ನಡುವೆ ಕಾಂಗ್ರೆಸ್ ಸರ್ಕಾರ ಇದ್ದರೂ ಯಾಕೆ …

Read More »

ಪ್ರವಾಸಿಗರ ಫೇವರೇಟ್ ಗೋವಾ | ಭೇಟಿಗೆ ಷರತ್ತುಗಳು ಅನ್ವಯ

ಪಣಜಿ : ಕೋವಿಡ್ ಎರಡನೇಯ ಅಲೆಯಿಂದಾಗಿ ಸಂಪೂರ್ಣ ಲಾಕ್ ಆಗಿದ್ದ ಪ್ರಸಿದ್ಧ ಪ್ರವಾಸಿ ತಾಣ ಗೋವಾ ಇದೀಗ ಹಂತ ಹಂತವಾಗಿ ಅನ್ ಲಾಕ್ ಆಗುತ್ತಿದೆ. ಪ್ರವಾಸಿರ ಅಚ್ಚುಮೆಚ್ಚಿನ ತಾಣ ಗೋವಾ ಇದೀಗ ಪ್ರವಾಸಿಗರಿಗೆ ಅನ್‍ಲ ಲಾಕ್ ಗೊಳಿಸಲಾಗಿದೆ. ಕೆಲವು ಷರತ್ತುಗಳ ಮೂಲಕ ಪ್ರವಾಸಿಗರು(ಕೇರಳ ಮತ್ತು ಮಹಾರಾಷ್ಟ್ರ ಪ್ರವಾಸಿಗರು ಹೊರತುಪಡಿಸಿ) ಗೋವಾಕ್ಕೆ ಆಗಮಿಸಲು ಸರ್ಕಾರ ಅನುಮತಿ ನೀಡಿದೆ.   ಗೋವಾದಲ್ಲಿನ ಹಲವು ಪ್ರವಾಸಿ ತಾಣಗಳು, ಬೀಚ್‍ ಗಳಲ್ಲಿ ಪ್ರವಾಸಿಗರ ಆಗಮನಕ್ಕೆ ಅವಕಾಶ …

Read More »

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಮತ್ತೆ ಗಡಿ ಕ್ಯಾತೆ

ಬೆಳಗಾವಿ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಮತ್ತೆ ಗಡಿ ಕ್ಯಾತೆ ತೆಗೆದಿದ್ದು, ಉಭಯ ರಾಜ್ಯಗಳ ಗಡಿ ವಿವಾದ ಇತ್ಯರ್ಥಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯಪ್ರವೇಶಿಸ ಬೇಕೆಂದು ಒತ್ತಾಯ ಮಾಡಿದ್ದಾರೆ. ಈ ಹಿಂದೆ ಗಡಿ ತಕರಾರು ಕುರಿತು ಎಂಇಎಸ್​ ಪುಂಡರು ಪ್ರಧಾನಿಗೆ ಪತ್ರ ಅಭಿಯಾನ ನಡೆಸಿದ ಬೆನ್ನಲ್ಲೇ ಮಹಾರಾಷ್ಟ್ರ ಡಿಸಿಎಂ ಮತ್ತೆ ಗಡಿ ತಾಕರಾರೆತ್ತಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿವಾದವನ್ನ ಇತ್ಯರ್ಥ ಪಡಿಸಬೇಕು, ಮತ್ತು ಈ ಗಡಿ ವಿವಾದದಲ್ಲಿ ನರೇಂದ್ರ …

Read More »

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ, ಬಹುಮತದೊಂದಿಗೆ ಕೈ ಅಧಿಕಾರಕ್ಕೆ: ಎಸ್.ಆರ್. ಪಾಟೀಲ

ಬೀದರ್: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಜನಾದೇಶದಿಂದ ಬಂದ ಸರ್ಕಾರ ಇಲ್ಲ. ಹಣದ ಹೊಳೆ ಹರಿಸಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟವಾಗಲಿದ್ದು, ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಭವಿಷ್ಯ ನುಡಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕ ಭಾಗದವರು. ಅಭಿವೃದ್ಧಿ ಕೆಲಸಗಳು ನಡೆಯಬೇಕಾದರೆ ಸ್ಥಿರ ಸರ್ಕಾರ ಇರಬೇಕು ಎನ್ನುವದು ನಮ್ಮ …

Read More »

2ಎ ಮೀಸಲಾತಿ ನೀಡದಿದ್ದರೆ ಅ. 1ರಿಂದ ವಿವಿಧ ಹಂತದ ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಹುಬ್ಬಳ್ಳಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೆ.15 ರೊಳಗೆ 2ಎ ಮೀಸಲಾತಿ ನೀಡದಿದ್ದರೆ, ಅ 1ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸೇರಿದಂತೆ ವಿವಿಧ ಹಂತದ ಹೋರಾಟ ಕೈಗೊಳ್ಳಲು, ಪಂಚಮಸಾಲಿ ಮೀಸಲಾತಿ ಚಳವಳಿಗಾರರ ದುಂಡು ಮೇಜಿನ ಸಭೆ ನಿರ್ಣಯಿಸಿದೆ. ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, 2ಎ ಮೀಸಲಾತಿಗೆ ಒತ್ತಾಯಿಸಿ ಕೂಡಲಸಂಗಮದಿಂದ ಬೇಂಗಳೂರುವರೆಗೆ ನಡೆಸಿದ ಪಾದಯಾತ್ರೆ ಹಾಗೂ ಹೋರಾಟದ ವೇಳೆ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಗೃಹ …

Read More »

ಪಿಯುಸಿಯಲ್ಲಿ ಶೇ.94 ಅಂಕ ಪಡೆದ ವಿದ್ಯಾರ್ಥಿಯನ್ನು ಕೂಲಿ ಕೆಲಸಕ್ಕಿಳಿಸಿದ ಚಾಮರಾಜನಗರ ಆಕ್ಸಿಜನ್​ ದುರಂತ!

ಚಾಮರಾಜನಗರ: 2021ರ ಮೇ 2ರಂದು ಚಾಮರಾಜನಗರದ ಕೋವಿಡ್​ ಆಸ್ಪತ್ರೆಯಲ್ಲಿ ಸಂಭವಿಸಿದ ಆಕ್ಸಿಜನ್​ ದುರಂತಕ್ಕೆ 36 ಮಂದಿ ಬಲಿಯಾಗಿದ್ದರು. ಇಂದಿಗೆ ಆಕ್ಸಿಜನ್ ದುರಂತಕ್ಕೆ ನೂರು ದಿನ ಆಗಿದ್ದು, ಮೃತರ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. ಈ ಪೈಕಿ ದೊಡ್ಡಯ್ಯ ಕುಟುಂಬವೂ ಒಂದು. ಚಾಮರಾಜನಗರ ತಾಲೂಕು ಮಂಗಲ ಹೊಸೂರು ಗ್ರಾಮದ ದೊಡ್ಡಯ್ಯ ಮೃತಪಟ್ಟ ಬಳಿಕ ಕುಟುಂಬ ಭಾರೀ ಅಂಕಷ್ಟಕ್ಕೆ ಸಿಲುಕಿದೆ. ಜೀವನೋಪಾಯಕ್ಕೆ ಬೇರೆ ದಾರಿ ಇಲ್ಲದೆ ದೊಡ್ಡಯ್ಯರ ಮಗ ಶಶಾಂಕ್​ ವಿದ್ಯಾಭ್ಯಾಸವನ್ನು ಅರ್ಧಕ್ಕೆ …

Read More »