Breaking News

ಎಂಎನ್​ಸಿ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ₹14.23 ಲಕ್ಷ ಪೀಕಿದ HR

ಬೆಂಗಳೂರು: ಕೆಲಸಕ್ಕಾಗಿ ನೀವೇನಾದರೂ ಇಂಟರ್​ವ್ಯೂಗೆ ಹೋದರೆ ಹುಷಾರಾಗಿರಿ. ಕಾರಣ, ಸಂದರ್ಶನ ಮಾಡುವ ಸೋಗಿನಲ್ಲಿ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದ ಆರೋಪಿ ಮಾನವ ಸಂಪನ್ಮೂಲ ಅಧಿಕಾರಿ (ಹೆಚ್​ಆರ್​) ಸಿಸಿಬಿ ಪೊಲೀಸರ ಅತಿಥಿಯಾಗಿದ್ಧಾನೆ. ಮೆಕ್ರೋಸಾಪ್ಟ್​, ಬಾಷ್ ಸೇರಿ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 8 ಮಂದಿ ಉದ್ಯೊಗಾಂಕ್ಷಿಗಳಿಂದ 14.23 ಲಕ್ಷ ಹಣ ಪಡೆದಿದ್ದ ಖಾಸಗಿ ಕಂಪನಿ ನೌಕರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಂಚನೆಗೊಳಗಾದ ಯುವತಿಯು ನೀಡಿದ ದೂರು …

Read More »

ಸಂತಿಬಸ್ತವಾಡದಲ್ಲಿ ಶಾಂತಿ ಸಭೆ ನಡೆಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಸಂತಿಬಸ್ತವಾಡದಲ್ಲಿ ಶಾಂತಿ ಸಭೆ ನಡೆಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಳಗಾವಿ:ಸೋಮವಾರ ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮಂಗಳವಾರ ಸಂಜೆ ಸಂತಿಬಸ್ತವಾಡ ಗ್ರಾಮಕ್ಕೆ ಭೇಟಿ ನೀಡಿ, ಶಾಂತಿ ಸಭೆ ನಡೆಸಿದರು. ಬೆಂಗಳೂರಿನಿಂದ ಆಗಮಿಸಿದ ಸಚಿವರು, ವಿಮಾನ ನಿಲ್ದಾಣದಿಂದ ನೇರವಾಗಿ ಗ್ರಾಮಕ್ಕೆ ತೆರಳಿ, ಘಟನೆಯ ಮಾಹಿತಿ ಪಡೆದು ಶಾಂತಿ ಸಭೆ ನಡೆಸಿದರು. ಶಾಂತಿಯಿಂದ ಇರುವಂತೆ ಗ್ರಾಮಸ್ಥರಲ್ಲಿ ಸಚಿವರು ಮನವಿ ಮಾಡಿದರು. ಜೊತೆಗೆ …

Read More »

ಇ.ಡಿ ಸಮನ್ಸ್; ಹೈಕೋರ್ಟ್‌ ಮೊರೆ ಹೋದ ಶಾಸಕ ವಿನಯ್ ಕುಲಕರ್ಣಿ

ಬೆಂಗಳೂರು: ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ.ಸುರೇಶ್​ ಸಹೋದರಿಯ ಸೋಗಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚಿಸಿದ್ದ ಐಶ್ವರ್ಯಾ ಗೌಡ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್ಎ)ಯಡಿ ಸಮನ್ಸ್ ಜಾರಿ ಮಾಡಿರುವ ಜಾರಿ ನಿರ್ದೇಶನಾಲಯ (ಇ.ಡಿ) ಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಏಪ್ರಿಲ್ 24 ಮತ್ತು 25ರಂದು ತಮ್ಮ ವಿರುದ್ಧ ನಡೆಸಿರುವ ಶೋಧ ಕಾರ್ಯಾಚರಣೆ, ಜಪ್ತಿ ಹಾಗೂ ಪಿಎಂಎಲ್ಎ ಕಾಯಿದೆ ಸೆಕ್ಷನ್​ 17ರ ಅಡಿ …

Read More »

ದಲಿತ ಯುವಕನ ಮೇಲೆ ರಾಡ್’ನಿಂದ ಹಲ್ಲೆ…ಭೀಕರ ಹಲ್ಲೆಯ ದೃಶ್ಯ ಮೊಬೈಲ್’ನಲ್ಲಿ ಸೆರೆ.

ಬೆಳಗಾವಿ: ಓಕಳಿಯಲ್ಲಿ ದಲಿತ ಮಹಿಳೆಯರ ಮೇಲೆ ನೀರು ಎರಚಿದ್ದನ್ನ ಪ್ರಶ್ನಿಸಿದಕ್ಕೆ ಹಲ್ಲೆ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದಲ್ಲಿ ಹನುಮಂತ ದೇವರ ಓಕಳಿಯಲ್ಲಿ ದಲಿತ ಮಹಿಳೆಯರ ಮೇಲೆ ಒತ್ತಾಯಪೂರ್ವಕ ನೀರು ಎರಚಲಾಗಿದೆ. ಇದನ್ನ ಪ್ರಶ್ನಿಸಿದಕುನ್ನಾಳ ಗ್ರಾಮದ ಲಕ್ಷ್ಮಣ್ ಮಾದರ ಮತ್ತು ಮೂವರು ಮಹಿಳೆಯರ ಮೇಲೆ ಹಲ್ಲೆ ನಡೆಸುವುದಲ್ಲದೆ. ಕಬ್ಬಿನ …

Read More »

ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಸೋಳ್ಳೆಗಳಿಂದ ಉತ್ಪನ್ನವಾಗುವ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ ರೋಗಗಳು ಹರಡದಂತೆ ಕ್ರಮವಹಿಸಿ : ಜಿಪಂ ಸಿಇಒ ರಾಹುಲ್ ಶಿಂಧೆ.

ಬೆಳಗಾವಿ : ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಆರೋಗ್ಯ ಇಲಾಖೆಯ “ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮ”ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಸೋಳ್ಳೆಗಳಿಂದ ಉತ್ಪನ್ನವಾಗುವ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ ರೋಗಗಳು ಹರಡದಂತೆ ಕ್ರಮಕೈಗೊಳ್ಳಲು ಪಂಚಾಯತರಾಜ್ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಮಧುಮೇಹ(ಸಕ್ಕರೆ), ರಕ್ತದೊತ್ತಡ(ಬಿ.ಪಿ) ಖಾಯಿಲೆಗಳಿಗೆ ‘ಗೃಹ ಆರೋಗ್ಯ’ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯಲ್ಲಿ ಔಷಧಿಗಳ ದಾಸ್ತಾನು ಇದ್ದು ಈ ಕಾರ್ಯಕ್ರಮದಲ್ಲಿ …

Read More »

ಪಹಲ್ಗಾಮ್​ನಲ್ಲಿ ಮೃತಪಟ್ಟವರಿಗೆ ನ್ಯಾಯ ಸಿಕ್ಕಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ: “ಪಹಲ್ಗಾಮ್​ನಲ್ಲಿ ಮೃತಪಟ್ಟ 26 ಪ್ರವಾಸಿಗರಿಗೆ ನ್ಯಾಯ ಸಿಕ್ಕಿಲ್ಲ. ಅದಕ್ಕಾಗಿ ಮತ್ತೆ ಕಾಯಬೇಕಾಗುತ್ತದೆ. ಭಾರತ-ಪಾಕ್ ನಡುವೆ ಕದನ ವಿರಾಮದಿಂದಾಗಿ ಯುದ್ಧ ಸ್ಥಗಿತಗೊಂಡಿದೆ. ಮುಂದೇನು ಮಾಡಬೇಕು ಎಂಬ ಬಗ್ಗೆ ಚಿಂತನೆ ಮಾಡಬೇಕು” ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿಂದು ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. “ಪೂರ್ಣ ಪ್ರಮಾಣದ ಯುದ್ಧ ಆಗುತ್ತದೆ ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ ಆಗಿಲ್ಲ. ದೇಶವನ್ನು ಯಾವ ರೀತಿ ಕಟ್ಟಬೇಕು ಎನ್ನುವುದು ಮುಂದಿರುವ ಸವಾಲು. 1971ರಲ್ಲಿ …

Read More »

ರೌಡಿಶೀಟರ್ ಕಣುಮನ ಕೊಲೆ ಪ್ರಕರಣದಲ್ಲಿ 20 ಜನರ ಬಂಧನ;S.P.

ದಾವಣಗೆರೆ: ವೈಯಕ್ತಿಕ ದ್ವೇಷ ಹಾಗೂ ಹಣಕಾಸಿನ ವ್ಯವಹಾರ ಸಂಬಂಧ ರೌಡಿಶೀಟರ್ ಸಂತೋಷ್ ಕುಮಾರ್ ಆಲಿಯಾಸ್ ಕಣುಮ ಕೊಲೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ಒಟ್ಟು 20 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊಲೆ ಮಾಡಿದವರು ಸೇರಿ 10 ಮಂದಿಯನ್ನು ಈಗಾಗಲೇ ವಿದ್ಯಾನಗರ ಠಾಣೆಯ ಪೊಲೀಸರು ಬಂಧಿಸಿದ್ದರು. ಇದೀಗ ಘಟನೆ ಸಂಬಂಧ ಒಟ್ಟು 20 ಜನರನ್ನು ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು …

Read More »

ಸಿಡಿಲು ಬಡಿದು ಇಬ್ಬರು ಸಾವು

ಕಾರವಾರ(ಉತ್ತರ ಕನ್ನಡ): ಸಿಡಿಲು ಬಡಿದು ಎರಡು ಮನೆಗಳಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಅಂಕೋಲಾ ತಾಲೂಕಿನ ಹಾರವಾಡದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ. ಅಂಕೋಲಾ ಹಾರವಾಡದ ಗಾಬಿತವಾಡದಲ್ಲಿ ವಿಠ್ಠಲ ಸೀತಾರಾಮ ನಾಯ್ಕ ಮತ್ತು ಗೀತಾ ನಾರಾಯಣ ಖಾರ್ವಿ ಎಂಬುವರ ಮನೆಗಳಿಗೆ ಹಾನಿಯಾಗಿದೆ. ಮುಂಜಾನೆ ಮನೆಯಲ್ಲಿ ಕೆಲವರು ಎದ್ದು ಕೆಲಸದಲ್ಲಿ ತೊಡಗಿದ್ದ ವೇಳೆ ಇದ್ದಕ್ಕಿದ್ದಂತೆ ಕಣ್ಣೆದುರೇ ಮಿಂಚು ಹಾದು ಹೋಗಿದೆ. ಬಳಿಕ ಇಡೀ ಮನೆ ಹೊಗೆಯಿಂದ ತುಂಬಿಕೊಂಡಿತ್ತು. ಸಿಡಿಲು ಬಡಿತದಿಂದ ಮನೆಯ …

Read More »

ಹುಬ್ಬಳ್ಳಿ- ಹೈದರಾಬಾದ್ ನಡುವೆ “ಐರಾವತ” ವೋಲ್ವೊ

ಹುಬ್ಬಳ್ಳಿ: ಜಿಲ್ಲೆಯಿಂದ ಹೈದರಾಬಾದ್​​​ಗೆ ಹೋಗಿ ಬರುವ ಸಾರ್ವಜನಿಕ ಪ್ರಯಾಣಿಕರಿಗೆ ಮತ್ತಷ್ಟು ಆರಾಮದಾಯಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹುಬ್ಬಳ್ಳಿ ಹಾಗೂ ಹೈದರಾಬಾದ್ ನಡುವೆ ಐರಾವತ ವೋಲ್ವೊ ಎಸಿ ಬಸ್ ಸಂಚಾರವನ್ನು ಆರಂಭಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ ಅಧಿಕಾರಿಗಳು, ಸಾರ್ವಜನಿಕರ ಸಮಕ್ಷಮದಲ್ಲಿ ಬಸ್​​​ಗೆ ಪೂಜೆ ಸಲ್ಲಿಸಿ ನೂತನ ಮಾರ್ಗಕ್ಕೆ ಶುಭ ಹಾರೈಸಿ ಮಾತನಾಡಿದ ಅವರು, ವಾಣಿಜ್ಯ, …

Read More »

ಕರ್ತವ್ಯದ ತುರ್ತುಕರೆ: ಲಚ್ಯಾಣದಲ್ಲಿ ಯೋಧನಿಗೆ ಸಂಭ್ರಮದ ಬಿಳ್ಕೊಡುಗೆ

ಕರ್ತವ್ಯದ ತುರ್ತುಕರೆ: ಲಚ್ಯಾಣದಲ್ಲಿ ಯೋಧನಿಗೆ ಸಂಭ್ರಮದ ಬಿಳ್ಕೊಡುಗೆ ಪೆಹಲ್ಗಾಮ್‌ದಲ್ಲಿ ಅಮಾಯಕರ ಮೇಲೆ ಉಗ್ರರು ನಡೆಸಿದ ದಾಳಿಯ ಹಿನ್ನಲೆ ಪಾಕಿಸ್ಥಾನದಲ್ಲಿನ ಉಗ್ರರ ವಿರುದ್ಧ ಭಾರತವು “ಅಪರೇಷನ್ ಸಿಂಧೂರ” ಹೆಸರಿನಲ್ಲಿ ಯುದ್ದ ಅತ್ತ ಮುಂದುವರೆಸಿದೆ. ಇತ್ತ ಭಾರತೀಯ ಸೇನೆಯು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣದ ಸಿಆರ್‌ಪಿಎಫ್ ಯೋಧ ರಮೇಶ ಅಹಿರಸಂಗ ಅವರಿಗೆ ಕರ್ತವ್ಯದ ತುರ್ತು ಕರೆ ಮಾಡಿ ಆಹ್ವಾನಿಸಿದ ಹಿನ್ನೆಲೆ ಅವರು ತಮ್ಮ ರಜೆಯನ್ನು ಮೊಟಕುಗೊಳಿಸಿ ಶನಿವಾರ ಬೆಳಿಗ್ಗೆ ಗ್ರಾಮದ ಆರಾದ್ಯದೇವ …

Read More »