ಚಿಕ್ಕೋಡಿ: ಸಮಾಜದಲ್ಲಿ ತುಳಿತಕ್ಕೆ ಒಳಗಾದ ವಿಧವೆಯರಿಗೆ ಬೆಳಗಾವಿ ಜಿಲ್ಲೆಗೆ 8 ಸಾವಿರ ಮನೆ ಮಂಜೂರು ಮಾಡಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ತಾಲೂಕಿನ 9 ಗ್ರಾಮ ಪಂಚಾಯತಿಯ 120 ಮನೆಗಳು ಮಂಜೂರಾಗಿವೆ ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು. ಇಲ್ಲಿನ ಸಿಎಲ್ ಇ ಸಂಸ್ಥೆಯ ಸಭಾ ಭವನದಲ್ಲಿ ರಾಜೀವ ಗಾಂಧಿ ವಸತಿ ನಿಗಮ ಬೆಂಗಳೂರು ಇವರ ವತಿಯಿಂದ ದೇವರಾಜ ಅರಸು ವಿಶೇಷ ವಸತಿ ಯೋಜನೆಯಡಿ ಚಿಕ್ಕೋಡಿ ಸದಲಗಾ ಕ್ಷೇತ್ರದ ವಿವಿಧ ಗ್ರಾಮ …
Read More »ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಧಾರವಾಡ ಮೂಲದ ಪೈಲ್ವಾನ್ ರಫೀಕ್ ಹೊಳಿ
.ಧಾರವಾಡ: ಈ ಊರಿನ ಹೆಸರು ಕೇಳಿದ ಕೂಡಲೇ ಫೇಡಾ ನೆನಪಿಗೆ ಬರುತ್ತದೆ. ಅಷ್ಟೇ ಅಲ್ಲ ಧಾರವಾಡಕ್ಕೆ ವಿದ್ಯಾಕಾಶಿ ಅಂತಾನೂ ಕರೆಯುತ್ತಾರೆ. ಇದೀಗ ಇಂಥ ಧಾರವಾಡ ಬೇರೆ ಬೇರೆ ಕಾರಣಗಳಿಗೂ ಹೆಸರು ಪಡೆಯುತ್ತಿದೆ. ಅದರಲ್ಲೂ ಧಾರವಾಡ ಮೂಲದ ಕುಸ್ತಿಪಟುವೊಬ್ಬರು ರಾಷ್ಟ್ರ ಹಾಗೂ ಅಂತಾರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ. ತೀರಾ ಬಡ ಮನೆತನದಲ್ಲಿ ಹುಟ್ಟಿ ಬೆಳೆದ ಆ ಕುಸ್ತಿಪಟುವಿನ ಹೆಸರು ರಫೀಕ್ ಹೊಳಿ. ಕೃಷಿ ಕೂಲಿಕಾರರ ಮನೆಯಲ್ಲಿ ಜನಿಸಿ, ಇಂದು ಇಡೀ ದೇಶದಲ್ಲಿಯೇ ಕುಸ್ತಿಯಲ್ಲಿ …
Read More »ತೀವ್ರ ಕಾಲು ನೋವಿನಿಂದ ಬಳಲುತ್ತಿದ್ದ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಚಿಕಿತ್ಸೆಗಾಗಿ ಮುಂಬೈ ಆಸ್ಪತ್ರೆಗೆ
ತೀವ್ರ ಕಾಲು ನೋವಿನಿಂದ ಬಳಲುತ್ತಿದ್ದ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಚಿಕಿತ್ಸೆಗಾಗಿ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿ ಖುದ್ದು ರೇಣುಕಾಚಾರ್ಯ ಅವರೇ ಸ್ಪಷ್ಟಪಡಿಸಿದ್ದಾರೆ. ಆತ್ಮೀಯ ಬಂಧುಗಳೇ, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಂಭವಿಸಿದ್ದ ಅಪಘಾತದಿಂದಾಗಿ ಕಳೆದ ಕೆಲ ತಿಂಗಳಿಂದ ಕಾಲು ನೋವು ಕಾಣಿಸಿಕೊಂಡಿದೆ. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಮುಂಬೈ ಆಸ್ಪತೆಯಲ್ಲಿ ಆಪರೇಷನ್ಗೆ ಒಳಗಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಆತ್ಮೀಯ ಬಂಧುಗಳೇ… ಕಳೆದ ವಿಧಾನ ಸಭಾ …
Read More »ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು
ಕನ್ನಡದ ಶ್ರೀಮಂತಿಕೆ ಇರುವುದೇ ಸಾಹಿತ್ಯದಲ್ಲಿ…. ಸಾಹಿತ್ಯವೆಂದರೆ ಪುಸ್ತಕ… ಆದರೆ, ಕನ್ನಡವನ್ನು ಪೋಷಿಸಿ, ಬೆಳೆಸುವ ಪುಸ್ತಕೋದ್ಯಮಕ್ಕೆ ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ನೀಡಿದ ಪೆಟ್ಟು ಮಾತ್ರ ಸಹಿಸಲು ಸಾಧ್ಯವೇ ಇಲ್ಲದಂಥದ್ದು! ಕೋವಿಡ್ ಮತ್ತು ಲಾಕ್‌ಡೌನ್ ಕಾಲದಲ್ಲಿ ಸಾಹಿತ್ಯ ಬರೆಯುವವವರಿಗೆ ಯಾವುದೇ ರೀತಿಯಲ್ಲೂ ಕೊರತೆಯಾಗಲಿಲ್ಲ. ಆದರೆ, ಬರೆದ ಮೇಲೆ ಪುಸ್ತಕ ರೂಪದಲ್ಲಿ ಪ್ರಿಂಟ್ ಮಾಡಿ ಮಾರಾಟ ಮಾಡುವ ಪ್ರಕ್ರಿಯೆಗೆ ಮಾತ್ರ ದೊಡ್ಡ ಪೆಟ್ಟು ಬಿದ್ದಿರುವುದು ಸತ್ಯ. ಕೋವಿಡ್ ಎರಡು ಬಾರಿಯ ಲಾಕ್‌ಡೌನ್ ಹಾಗೂ …
Read More »ರಾಜ್ಯೋತ್ಸವ ಪ್ರಶಸ್ತಿಗೆ ಲಾಬಿ ಒಂದೇ ಸಂಸ್ಥೆ ಪರ ಸಾವಿರ ಶಿಫಾರಸು!
ಬೆಂಗಳೂರು: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಅರ್ಹರಿಗೆ ನೀಡುವ ಸಲುವಾಗಿ ರಾಜ್ಯ ಸರಕಾರ ಜನರಿಂದಲೇ ಶಿಫಾರಸು ಆಹ್ವಾನಿಸಿತ್ತು. ಆದರೆ ಒಂದೇ ಸಂಸ್ಥೆಯ ಪರವಾಗಿ 1 ಸಾವಿರಕ್ಕೂ ಹೆಚ್ಚು ಶಿಫಾರಸುಗಳು ಬಂದಿದ್ದು, ಸರಕಾರವೇ ಬೆಚ್ಚಿ ಬೀಳುವಂತೆ ಮಾಡಿದೆ. ಕೆಲವು ವ್ಯಕ್ತಿಗಳ ಪರವೂ ಭರಪೂರ ಶಿಫಾರಸುಗಳು ಬಂದಿವೆ. “ಇಂಥವರಿಗೆ’ ಪ್ರಶಸ್ತಿ ಕೊಡಿ ಎಂದು ದಾಖಲೆಗಳ ಸಮೇತ 200 – 300 ಶಿಫಾರಸುಗಳು ಸೇವಾ ಸಿಂಧು ಮೂಲಕ ಸಲ್ಲಿಕೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿವೆ. ಈ ಬಾರಿ …
Read More »ಭಾರತದ ವಿರುದ್ಧ ಪಾಕ್ ಗೆಲುವು ಸಂಭ್ರಮಾಚರಣೆ; ಶಿಕ್ಷಕಿ ಬಂಧನ
ಇತ್ತೀಚೆಗೆ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕ್ ಗೆಲುವು ಸಾಧಿಸಿತ್ತು. ಈ ಬೆನ್ನಲ್ಲೇ ಭಾರತ ವಿರುದ್ಧ ಪಾಕ್ ಗೆಲುವನ್ನು ಸಂಭ್ರಮಿಸಿದ್ದ ರಾಜಸ್ಥಾನದ ಉದಯಪುರದ ಖಾಸಗಿ ಶಾಲೆಯೊಂದರ ಶಿಕ್ಷಕಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಅಲ್ಲದೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಫೀಸಾ ಅಟಾರಿ ಎಂಬಾಕೆ ಅಮಾನತು ಒಳಗಾದ ಖಾಸಗಿ ಶಾಲೆಯ ಶಿಕ್ಷಕಿ. ಈಕೆ ಉದಯಪುರದ ನೀರಜಾ ಮೋದಿ ಎಂಬ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ …
Read More »ಭಗವಂತ ಖೂಬಾ ಹೇಳಿಕೆಗೆ ದಿನೇಶ್ ಗುಂಡೂರಾವ್ ಆಕ್ರೋಶ
ಬೆಂಗಳೂರು: ಬೆಲೆ ಏರಿಕೆ ಎಲ್ಲಿದೆ ಎಂದಿರುವ ಸಚಿವ ಭಗವಂತ ಖೂಬಾ ಯಾವ ಗ್ರಹದಲ್ಲಿದ್ದಾರೆ. ಜನ ಬೆಲೆ ಏರಿಕೆಯ ವಿರುದ್ಧ ಬೀದಿಗಿಳಿದಿರುವುದು ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. ಬೆಲೆ ಏರಿಕೆಯ ವಿರುದ್ಧ ಜನ ಅಸಹನೆ ಆಕ್ರೋಶದ ರೂಪ ಪಡೆಯುತ್ತಿದೆ. ಇಷ್ಟಾದರೂ ಅದ್ಯಾವ ಭಂಡತನದಿಂದ ಬೆಲೆ ಏರಿಕೆ ಆಗಿಲ್ಲ ಎಂದು ಹೇಳುತ್ತೀರಿ ಎಂದಿದ್ದಾರೆ. 80 ರೂ. ಇದ್ದ ಅಡುಗೆ ಎಣ್ಣೆ 180 ರೂ. ಆಗಿದೆ. 75 ರೂ. …
Read More »ಮಾತಾಡ್ ಮಾತಾಡ್ ಕನ್ನಡ” ಎಂಬ ವಿನೂತನ ಕಾರ್ಯಕ್ರಮ ಪ್ರಕಾಶ ಹೊಳೆಪ್ಪನವರ
ಗೋಕಾಕ: ನಗರದ ಎಲ್ಲ ಸಾರ್ವಜನಿಕ ಬಂಧುಗಳಿಗೆ ತಿಳಿಸುವದೇನೆಂದರೆ ಬರುವ 01 ನವೆಂಬರ 2021 ರ ಕರ್ನಾಟಕ ರಾಜ್ಯೋತ್ಸವವನ್ನು ಸರಕಾರ ಸೂಚಿಸಿದಂತೆ ಅತಿ ವಿಜೃಂಭಣೆಯಿಂದ ಹಾಗೂ ನಿಯಮಾನುಸಾರ ಆಚರಿಸುವ ನಿಟ್ಟಿನಲ್ಲಿ “ಮಾತಾಡ್ ಮಾತಾಡ್ ಕನ್ನಡ” ಎಂಬ ವಿನೂತನ ಕಾರ್ಯಕ್ರಮವನ್ನು ದಿನಾಂಕ 31-10-2021 ರಂದು ಮುಂಜಾನೆ 10-00 ಘಂಟೆಯಿಂದ ನಗರದ ಸಮುದಾಯ ಭವನದಲ್ಲಿ ರಂಗೋಲಿ ಬಿಡಿಸುವ ಕಾರ್ಯಕ್ರಮ ಹಾಗೂ ದೇಶಿ ತಿಂಡಿಗಳ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆದಕಾರಣ ಸದರಿ ಕಾರ್ಯಕ್ರಮದಲ್ಲಿ ಗೋಕಾಕ …
Read More »ಮರಾಠಿ ಶಿಕ್ಷಕನ ಕಂಠಸಿರಿಯಲ್ಲಿ ಕನ್ನಡ ಗೀತಗಾಯನ….
ಬೆಳಗಾವಿ, – ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗುತ್ತಿರುವ “ಲಕ್ಷ ಕಂಠಗಳಲ್ಲಿ” ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಬೆಳಗಾವಿ ಜಿಲ್ಲೆಯಲ್ಲಿನ 2000 ವಿದ್ಯಾರ್ಥಿನಿಯರಿಗೆ ಆಯ್ದ ಕನ್ನಡ ಗೀತೆಗಳನ್ನು ಕಲಿಸುವ ಮಹತ್ವಪೂರ್ಣ ಕಾರ್ಯವನ್ನು ಮರಾಠಿ ಶಿಕ್ಷಕರಾದ ಹಾಗೂ ಸಮೂಹ ಗಾಯನದ ಮಾಸ್ಟರ್ ಎಂದು ಪ್ರಸಿದ್ಧರಾದ ವಿನಾಯಕ ಮೋರೆಯವರು ಮಾಡಿದ್ದಾರೆ. ಅ.28 ರಂದು ನಡೆಯಲಿರುವ ಸಮೂಹ ಗೀತಗಾಯನ ಕಾರ್ಯಕ್ರಮದಲ್ಲಿ ಈ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇದರಲ್ಲಿ …
Read More »ಸೈಬರ್ ವಂಚಕರ ಸದೆಬಡೆದ ಸೈಬರ್ ಪೊಲೀಸ್*
ಬೆಳಗಾವಿ :ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಳೆದ ಒಂದು ವರ್ಷದಿಂದ ಇಲ್ಲಿಯವರೆಗೆ ಒಟ್ಟು 1309 ಪ್ರಕರಣಗಳಲ್ಲಿ ( ಅರ್ಜಿಗಳು ಸೇರಿದಂತೆ ) ಸೈಬರ್ ಹಣಕಾಸು ವಂಚನೆಗಳಲ್ಲಿ ( CYBER FINANCIAL FRAUD ) ದೂರುದಾರರು ಕಳೆದುಕೊಂಡ ರೂಪಾಯಿ 2,45,37,052 / – ಹಣದ ಬಗ್ಗೆ ತನಿಖೆ ಕೈಕೊಂಡು ಸೈಬರ್ ವಂಚಕರ ಸುಮಾರು 1825 ಬ್ಯಾಂಕ್ ಖಾತೆ ಹಾಗೂ ವ್ಯಾಲೆಟ್‌ಗಳಲ್ಲಿದ್ದ ಒಟ್ಟು ರೂಪಾಯಿ 2,33,09,350 / – ಹಣವನ್ನು …
Read More »