ಬೆಂಗಳೂರು: ಮಾಜಿ ಶಾಸಕ ಅಶೋಕ್ ಪಟ್ಟಣ್ ಅವರಿಗೆ ನೋಟಿಸ್ ನೀಡಿದ ವಿಚಾರದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಆ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಬಣ ರಾಜಕೀಯ ಸದ್ದು ಮಾಡುತ್ತಿದೆ. ಮೇಕೆದಾಟು ಪಾದಯಾತ್ರೆಯಲ್ಲಿ ಪ್ರದರ್ಶಿಸಿದ್ದ ಒಗ್ಗಟ್ಟು ಈಗ ನೋಟಿಸ್ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಗುದ್ದಾಟಕ್ಕೆ ಕಾರಣವಾದಂತಿದೆ. ಅಶೋಕ್ ಪಟ್ಟಣ್ ವಿರುದ್ಧ ಪರಾಮರ್ಶಿಸಿ ಕ್ರಮ ಕೈಗೊಳ್ಳಬಹುದಾಗಿತ್ತು. ದಿಢೀರ್ ನೋಟಿಸ್ ನೀಡಿರುವುದು ಸಿದ್ದರಾಮಯ್ಯನವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ …
Read More »ಸೈಬರ್ ಖದೀಮರ ಹೆಡೆಮುರಿ ಕಟ್ಟಲು ಪೊಲೀಸ್ ಇಲಾಖೆ ತಯಾರಿ
ಬೆಂಗಳೂರು: ಸೈಬರ್ ಖದೀಮರ ಹೆಡೆಮುರಿ ಕಟ್ಟಲು ಪೊಲೀಸ್ ಇಲಾಖೆ ತಯಾರಿ ನಡೆಸಿದ್ದು, ನಗರದ ಎಂಟು ಸಿಇಎನ್ ಠಾಣೆಗೆ ಇಬ್ಬರು ಸೈಬರ್ ಎಕ್ಸ್ಪರ್ಟ್ಸ್ಗಳನ್ನು ನೇಮಿಸಿಕೊಳ್ಳಲು ಪ್ರಕಟಣೆ ಹೊರಡಿಸಲಾಗಿದೆ. ನಗರದಲ್ಲಿ ಇತ್ತೀಚೆಗೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಎಕ್ಸ್ಪರ್ಟ್ಸ್ ನೇಮಕಕ್ಕೆ ಜಾಹೀರಾತು ನೀಡಲಾಗಿದೆ. ಕೇಸ್ ಪತ್ತೆ ಹಚ್ಚಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಪ್ರಕರಣ ಭೇದಿಸುವಲ್ಲಿ ಪರದಾಡುತ್ತಿದ್ದಾರೆ. ಕೌಶಲ್ಯತೆಯ ಕೊರತೆ ಕಂಡು ಬರುತ್ತಿದೆ. ಜೊತೆಗೆ ವರ್ಷದಿಂದ ವರ್ಷಕ್ಕೆ ಸಾವಿರಾರು …
Read More »ರಾಜ್ಯಕ್ಕೆ ಮತ್ತೆ ಅನ್ಯಾಯ ಮಾಡಿದ ಕೇಂದ್ರ: ಸತೀಶ್ ಜಾರಕಿಹೊಳಿ ಟೀಕೆ
ಬೆಳಗಾವಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ 2022-23ನೇ ಸಾಲಿನ ಬಜೆಟ್ ಶೂನ್ಯ ಬಜೆಟ್ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ 25 ಜನ ಬಿಜೆಪಿ ಸಂಸದರಿದ್ದರೂ, ರಾಜ್ಯವನ್ನೇ ಪ್ರತಿನಿಧಿಸಿದ್ದರೂ ಹಣಕಾಸು ಸಚಿವರು, ರಾಜ್ಯದ ಜನರ ನಿರೀಕ್ಷೆ ಹುಸಿಗೊಳಿಸಿದ್ದಾರೆ ಎಂದು ಟೀಕಿಸಿದ್ದಾರೆ. ದೇಶದ ಜನರು ಏಳು ವರ್ಷಗಳಿಂದ …
Read More »ಶೀಘ್ರದಲ್ಲಿಯೇ ಆರಂಭವಾಗಲಿದೆ ಕಛೇರಿ ತಾಲೂಕಿನ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಅಸ್ಥೆ, ಕಾಳಜಿಯಿಂದ ಮೂಡಲಗಿ ತಾಲೂಕಿಗೆ ಹೊಸ ಉಪ ನೋಂದಣಿ ಕಛೇರಿಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ. ಈ ಮೂಲಕ ಶೀಘ್ರದಲ್ಲಿಯೇ ಮೂಡಲಗಿ ತಾಲೂಕಿನಲ್ಲಿ ಉಪ ನೋಂದಣಿ ಕಛೇರಿ ಆರಂಭಗೊಳ್ಳಲಿದೆ. ಹೊಸದಾಗಿ ಈ ಉಪ ನೋಂದಣಿ ಕಛೇರಿಯನ್ನು ಆರಂಭವಾಗಿರುವುದರಿಂದ ಮೂಡಲಗಿ, ಅರಭಾವಿ ಸೇರಿದಂತೆ ಸುತ್ತಮುತ್ತಲಿನ ಹೋಬಳಿ ಮತ್ತು ಗ್ರಾಮಗಳಲ್ಲಿರುವ ಸಾರ್ವಜನಿಕರಿಗೆ ಬಹಳ ಅನುಕೂಲವಾಗಲಿದೆ. ಈ ಮೊದಲು ಗೋಕಾಕ …
Read More »ಎಂಟು ಮಂದಿಗೆ ಒಬ್ಬನೇ ಗಂಡ..!ಎಲ್ಲರೂ ಒಟ್ಟಿಗೆ ಬಾಳೋ ಈತನ ಸಂಸಾರದಲ್ಲಿ ಇಲ್ಲಿವರೆಗೂ ಕಿತ್ತಾಟ ನಡೆದಿಲ್ಲ
ಬಹುಪತ್ನಿತ್ವವನ್ನು ಹೊಂದಿರುವ ಹೆಚ್ಚಿನ ಪುರುಷರು ಒಂದೇ ಮನೆಯಲ್ಲಿ ಇಬ್ಬರು ಹೆಂಡತಿಯರೊಂದಿಗೆ ಸಹಬಾಳ್ವೆಯಿಂದ ಬದುಕಲು ಕಷ್ಟಪಡುತ್ತಾರೆ, ಆದರೆ ಥೈಲ್ಯಾಂಡ್‌ನ ವ್ಯಕ್ತಿಯೊಬ್ಬರು ಒಂದೇ ಸೂರಿನಡಿ ಎಂಟು ಯುವತಿಯರೊಂದಿಗೆ ವಾಸಿಸುವ ಕಥೆಯು ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯವಾಗಿದ್ದು ಅನೇಕ ನೆಟಿಜನ್‌ಗಳನ್ನು ಬೆಚ್ಚಿಬೀಳಿಸಿದೆ. ಆಡಿಟಿ ಸೆಂಟ್ರಲ್‌ನಿಂದ ಓಂಗ್ ಡ್ಯಾಮ್ ಸೊರೊಟ್ ಎಂದು ಹೆಸರಿಸಲಾದ ವ್ಯಕ್ತಿ, ವ್ಯಾಪಾರದಲ್ಲಿ ಹಚ್ಚೆ ಕಲಾವಿದ. ಟಿವಿ ಶೋನಲ್ಲಿ ಕಾಣಿಸಿಕೊಂಡು ತಮ್ಮ ಅನುಭವವನ್ನು ಹೇಳಿಕೊಂಡ ನಂತರ ಅವರು ಎತ್ತರಕ್ಕೆ ಏರಿದರು. ಲೇಖನದ ಪ್ರಕಾರ, ಸಂದರ್ಶನದ …
Read More »ಹಿರಿಯ ನಟಿ, ಬಿಜೆಪಿ ಮುಖಂಡೆ ಜಯಪ್ರದಾ ಮನೆಯಲ್ಲಿ ಸಂಭವಿಸಿದ ದುರಂತ
ನವದೆಹಲಿ: ಹಿರಿಯ ನಟಿ ಹಾಗೂ ಬಿಜೆಪಿ ಮುಖಂಡೆ ಜಯಪ್ರದಾ ಅವರಿಗೆ ಮಾತೃ ವಿಯೋಗವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರ ತಾಯಿ ನೀಲವೇಣಿ (85) ಮಂಗಳವಾರ (ಫೆ. 01) ಮೃತಪಟ್ಟಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ನೀಲವೇಣಿ ಅವರನ್ನು ಹೈದರಾಬಾದ್ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಇದೇ ಸಮಯದಲ್ಲಿ ದೆಹಲಿಯಲ್ಲಿದ್ದ ಜಯಪ್ರದಾ ತಾಯಿ ಮೃತಪಟ್ಟಿರುವ ಸುದ್ದಿ ಕೇಳಿ ತಕ್ಷಣ ಹೈದರಾಬಾದ್ ಕಡೆ ಪ್ರಯಾಣ ಬೆಳೆಸಿದರು. ಜಯಪ್ರದಾ ತಾಯಿಯ ಸಾವಿಗೆ ಚಿತ್ರರಂಗದ ಗಣ್ಯರು …
Read More »ರವಿ ಡಿ ಚೆನ್ನಣ್ಣನವರ ವಿರುದ್ಧದ ಅಕ್ರಮ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ : ಗೃಹ ಸಚಿವ ಆರಗ ಜ್ಞಾನೇಂದ್ರ
ಮೈಸೂರು: ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ ವಿರುದ್ಧ ಕೇಳಿಬಂದಿರುವ ಅಕ್ರಮ ಆಸ್ತಿ ಸಂಪಾದನೆ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ನಗರದ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ 228 ಪ್ರೊಬೆಷನರಿ ಪಿಎಸ್ಐ ಗಳ ಪಥ ಸಂಚಲನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರ ವಿರುದ್ಧ ಕೇಳಿಬಂದ ಆರೋಪದ ದೂರಿನ ಹಿನ್ನೆಲೆಯಲ್ಲಿ ತನಿಖೆ ಶುರುವಾಗಿದೆ. ಯಾರು …
Read More »ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಪೊಲೀಸ್ ಇಲಾಖೆ; ಟೋಯಿಂಗ್‌ಗೆ ಶೀಘ್ರದಲ್ಲೇ ಹೊಸ ರೂಲ್ಸ್..!
ಬೆಂಗಳೂರು: ಇತ್ತೀಚಿನ ಕೆಲ ಘಟನೆಗಳ ನಂತರ ನಗರದಲ್ಲಿ ಸದ್ಯ ಟೋಯಿಂಗ್ ಮಾಡುತ್ತಿಲ್ಲ. ಟೋಯಿಂಗ್ ಅನ್ನು ಕಟ್ಟುನಿಟ್ಟಿನ ನಿಯಮಗಳೊಂದಿಗೆ ಆರಂಭಿಸಲಾಗುತ್ತದೆ ಅಂತ ಪೊಲೀಸ್ ಇಲಾಖೆ ಹೇಳುತ್ತಿದೆ. ಹಾಗಾದರೆ ಟೋಯಿಂಗ್ ಪುನಾರಂಭ ಆದರೆ ಯಾವೆಲ್ಲ ನಿಯಮಗಳು ಇರಲಿವೆ ಎಂಬುದರ ಮಾಹಿತಿ ಇಲ್ಲಿದೆ. ಇತ್ತೀಚಿಗೆ ಟೋಯಿಂಗ್ ಸಿಬ್ಬಂದಿ ಸಾರ್ವಜನಿಕರೊಂದಿಗೆ ನಡೆದುಕೊಳ್ಳುವ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರಿ ಜನಾಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಸದ್ಯ ಟೋಯಿಂಗ್ ನಿಲ್ಲಿಸಿರುವ ಬೆಂಗಳೂರು ಸಂಚಾರಿ ಪೊಲೀಸರು ಪುನಃ ಟೋಯಿಂಗ್ ಆರಂಭಿಸಲು …
Read More »ಶಶಿಕಲಾರಿಂದ ಲಂಚ ಪಡೆದ ಆರೋಪ ಪ್ರಕರಣ.. ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದ ಎಸಿಬಿ
ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆಯಡಿ ಜೈಲು ಶಿಕ್ಷೆ ಅನುಭವಿಸಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಆಪ್ತೆ ವಿ.ಶಶಿಕಲಾ ಹಾಗೂ ಜೈಲಾಧಿಕಾರಿಗಳಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಜೈಲಿನಲ್ಲಿ ರಾಜಾತಿಥ್ಯ ಕಲ್ಪಿಸಲು ಶಶಿಕಲಾರಿಂದ ಲಂಚ ಪಡೆದ ಆರೋಪ ಪ್ರಕರಣದ ತನಿಖೆ ಕೈಗೊಂಡಿದ್ದ ಎಸಿಬಿ ಇದೀಗ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಶಿಕಲಾ, ಇಳವರಸಿಯಿಂದ ಹಣ ಪಡೆದು ರಾಜಾತಿಥ್ಯ ಕಲ್ಪಿಸಿದ ಆರೋಪದಡಿ ಆಗಿನ ಜೈಲಾಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ …
Read More »ಬಿಎಸ್‌ವೈ ಯುಗ ಅಂತ್ಯವಾಗಿದೆ, ಇನ್ನೂ ಮೂರ್ನಾಲ್ಕು ಜನರ ಯುಗ ಮುಗಿಯಲಿದೆ : ಶಾಸಕ ಯತ್ನಾಳ್
ಬೆಳಗಾವಿ : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯ ಹಾಗೂ ಅವಶ್ಯಕವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಜಪೇಯಿ ನಂತರ ಕೇಂದ್ರದಲ್ಲಿ ನರೇಂದ್ರ ಮೋದಿ ಬಂದ ಮೇಲೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯ ಹಾಗೂ ಅವಶ್ಯಕವಾಗಿದೆ. ಕ್ರಿಯಾಶೀಲವಾಗಿ ಕೆಲಸ ಮಾಡುವ ಎರಡನೇ ನಾಯಕತ್ವ ರಾಜ್ಯಕ್ಕೆ ಬೇಕಾಗಿದೆ. ಬಿಎಸ್‌ವೈ ಯುಗ ಅಂತ್ಯವಾಗಿದೆ. ಅವರ ಸಮಕಾಲೀನ ಇನ್ನೂ ಮೂರ್ನಾಲ್ಕು ಜನರದ್ದು ಯುಗ ಮುಗಿಯಲು ಬಂದಿದೆ. ಬಸವರಾಜ ಬೊಮ್ಮಾಯಿ …
Read More »
Laxmi News 24×7