Breaking News

ವೀಕೆಂಡ್ ರದ್ದುಗೊಳಿಸಿದ ಸರ್ಕಾರ; ತಜ್ಞರ ಸಲಹೆ ಮೆರೆಗೆ ನಿರ್ಧಾರ

ಬೆಂಗಳೂರು :ಕೊರೊನಾ ಮಾರ್ಗಸೂಚಿಗಳಲ್ಲಿ ಬದಲಾವಣೆ ಹಾಗೂ ಇನ್ನಿತರ ನಿರ್ಬಂಧಗಳ ಕುರಿತು ಇಂದು ಸಿಎಂ ನೇತೃತ್ವದಲ್ಲಿ ಸಭೆ ನಡೆದಿತ್ತು. ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ತಜ್ಞರು, ಅಧಿಕಾರಿಗಳು ಹಾಗೂ ಸಚಿವರು ಭಾಗಿಯಾಗಿದ್ದರು. ಸಭೆಯಲ್ಲಿ ವಾರಾಂತ್ಯ ಕರ್ಫ್ಯೂ ನಿರ್ಧಾರವನ್ನು ಹಿಂಪಡೆಯಲಾಗಿದೆ ಎನ್ನುವ ಮಾತು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಸಭೆ- ಸಮಾರಂಭಗಳಿಗೆ ಇರುವ ನಿಯಮ ಹಳೆಯ ನಿಯಮವೇ ಮುಂದುವರಿಕೆಯಾಗಲಿದೆ. ಈ ಕುರಿತು ಅಧಿಕೃತ ಘೋಷಣೆ ಬಾಕಿ ಇದೆ. ಸಭೆಯಲ್ಲಿ ಸಚಿವರಾದ ಡಾ.ಕೆ …

Read More »

ರವಿಕೃಷ್ಣಾ ರೆಡ್ಡಿ ಸೇರಿ 54 ಮಂದಿ ಬಂಧನ

ಪಾಂಡವಪುರ: ಕೆಆರ್‌ಎಸ್ ಪಕ್ಷದ ಕಾರ್ಯಕರ್ತರ ಬಂಧನ ವಿರೋಧಿಸಿ ಕಾನೂನು ಭಂಗ ಚಳವಳಿ ನಡೆಸಲು ಗುರುವಾರ ಪಟ್ಟಣಕ್ಕೆ ಬಂದಿದ್ದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಹಾಗೂ 54 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.   ತಾಲ್ಲೂಕು ಆಡಳಿತದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಹಾಗೂ ಕೆಆರ್‌ಎಸ್ ಪಕ್ಷದ 9 ಮಂದಿ ಕಾರ್ಯಕರ್ತರ ಬಂಧನ ವಿರೋಧಿಸಿ ಪಾಂಡವಪುರ ಚಲೋ ರೂಪಿಸಲಾಗಿತ್ತು. ಪಟ್ಟಣದ ಐದು ದೀಪ ವೃತ್ತಕ್ಕೆ ಬರುತ್ತಿದ್ದಂತೆ ರವಿಕೃಷ್ಣಾ ರೆಡ್ಡಿ ಅವರನ್ನು ಸಬ್‌ …

Read More »

BIRTHDAY ದಿನದಂದೇ ಇಹಲೋಕ ತ್ಯಜಿಸಿದ 19 ವರ್ಷದ ಯುವತಿ!

.ಬೆಂಗಳೂರು: ಸ್ನೇಹಿತನೊಂದಿಗೆ ಬೈಕಿನಲ್ಲಿ ಹೋಗುವಾಗ ಯುವತಿಯೊಬ್ಬಳು ಆಯತಪ್ಪಿ ಬಿದ್ದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಕ್ಯಾಂಟರ್ ವಾಹನ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಹೆಬ್ಬಾಳ‌ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ‌.   ಹೆಬ್ಬಾಳದ ಭದ್ರಪ್ಪ ಲೇಔಟ್ ನಿವಾಸಿಯಾಗಿರುವ ಮಹಶ್ರೀ ಮೃತಪಟ್ಟಿರುವ ದುದೈರ್ವಿಯಾಗಿದ್ದಾರೆ. ಮಲ್ಲೇಶ್ವರಂ ಸರ್ಕಾರಿ ಕಾಲೇಜಿನಲ್ಲಿ ಮೃತ ಮಹಶ್ರೀ ವ್ಯಾಸಂಗ ಮಾಡುತ್ತಿದ್ದಳು‌. ಟೆಕ್ಸ್​ಟೈಲ್ಸ್ ಅಂಗಡಿಯೊಂದರಲ್ಲಿ ಪಾರ್ಟ್​ ಟೈಮ್ ಕೆಲಸ ಮಾಡಿಕೊಂಡಿದ್ದರು. ಇಂದು ಬರ್ತ್ ಡೇ ಇದ್ದಿದ್ದರಿಂದ ಮನೆಯಲ್ಲಿಯೇ ಇರು …

Read More »

ಬನಹಟ್ಟಿ: ಬನಹಟ್ಟಿಯ ನಾಲ್ಕು ಜನರು ಪಿಎಸ್‌ಐ ಹುದ್ದೆಗೆ ಆಯ್ಕೆ

ರಬಕವಿ-ಬನಹಟ್ಟಿ: ಬನಹಟ್ಟಿಯ ನಾಲ್ಕು ಜನರು ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಸ್ಥಳೀಯ ಮಂಗಳವಾರ ಪೇಟೆಯಲ್ಲಿ ಸ್ಟೇಶನರಿ ಅಂಗಡಿಯನ್ನು ಇಟ್ಟುಕೊಂಡಿರುವ ಸೋಮಶೇಖರ ಹಿರೇಮಠರ ಮಗಳು ದೀಪಾ ಹಿರೇಮಠ ಆಯ್ಕೆಯಾಗುವುದರ ಮೂಲಕ ರಾಜ್ಯಕ್ಕೆ 14 ನೇ ಸ್ಥಾನ ಪಡೆದುಕೊಂಡಿದ್ದಾರೆ. ಸ್ಥಳೀಯ ಎಸ್ಟಿಸಿ ಕಾಲೇಜಿನಲ್ಲಿ 2016ರಲ್ಲಿ ಬಿಎ ಪದವಿ ಪಡೆದುಕೊಂಡಿದ್ದ ದೀಪಾ ಅರ್ಥಶಾಸ್ತ್ರ ವಿಷಯದಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯಕ್ಕೆ ಬಂಗಾರದ ಪಡೆದುಕೊಂಡಿದ್ದರು. ಮುಂದೆ ಕೆಎಎಸ್ ಮಾಡುವ ಗುರಿಯನ್ನು ದೀಪಾ ಹಿರೇಮಠ ಹೊಂದಿದ್ದಾರೆ. ಆರು ತಿಂಗಳುಗಳ ಕಾಲ …

Read More »

ಸೀನಿಯರ್ ಆಫೀಸರ್ ಆದ್ರೂ ಅಷ್ಟು ಗೊತ್ತಾಗೋದಿಲ್ವಾ; ಐಜಿಪಿಗೆ ಗದರಿದ ಸಿಎಂ

ತುಮಕೂರು: ತ್ರಿವಿದ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರ ಮೂರನೇ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ ದಾಸೋಹ ದಿನಾಚರಣೆಗೆ ಚಾಲನೆ ನೀಡಿದರು. ಈ ವೇಳೆ ಜನ ಗುಂಪು ಸೇರಿದ್ದಕ್ಕೆ ಐಜಿಪಿ ಮೇಲೆ ಸಿಎಂ ಗದರಿದ ಪ್ರಸಂಗ ನಡೆದಿದೆ.   ಸಿದ್ದಂಗಂಗಾ ಮಠದ ಬಳಿ ಸಿಎಂ ಬೊಮ್ಮಾಯಿ ಕಾರು ಇಳಿಯುತ್ತಿದ್ದಂತೆ ಜನರು ಜಮಾವಣೆಗೊಂಡಿದ್ದಾರೆ. ಈ ವೇಳೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್, ಡಿವೈ ಎಸ್ …

Read More »

2022: ಕೇಂದ್ರ ಬಜೆಟ್​ನಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಕಿ- ಅಂಶಗಳು

ಕೇಂದ್ರ ಬಜೆಟ್ (Union Budget) ಎಂಬುದು ಪ್ರತಿ ವರ್ಷ ಭಾರತದಲ್ಲಿ ಬಿಡುಗಡೆ ಆಗುವ ಅತಿ ಮುಕ್ಯವಾದ ದಾಖಲಾತಿ. ಆದರೆ ಬಹಳ ಮಂದಿಗೆ ಇದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಬಜೆಟ್​ನ ಅತಿ ಮುಖ್ಯವಾದ ಸಂಖ್ಯೆಗಳ ವಿವರ ಇಲ್ಲಿದೆ. ಇತರ ಸಂಖ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು ಒತ್ತಟ್ಟಿಗಿರಲಿ, ಬಹಳ ಸುಲಭಕ್ಕೆ ಅರ್ಥ ಆಗುವುದು ಬಜೆಟ್​ನ ಗಾತ್ರ. ಬಜೆಟ್​ ಗಾತ್ರ ಹೀಗಂದರೆ ಒಂದು ಹಣಕಾಸು ವರ್ಷದಲ್ಲಿ ಸರ್ಕಾರದಿಂದ ಮಾಡುವ ಅಂದಾಜು ವೆಚ್ಚ. 2021- 22ನೇ …

Read More »

ಸಿದ್ದಗಂಗಾ ಶ್ರೀ ʼಶಿವಕುಮಾರ ಸ್ವಾಮೀಜಿʼ 3ನೇ ವರ್ಷದ ಪುಣ್ಯಸ್ಮರಣೆ

ತುಮಕೂರು : ಇಂದು ಸಿದ್ದಗಂಗೆ ಮಠಾಧೀಶರಾಗಿದ್ದ ದಿವಂಗತ ಶ್ರೀ ಶಿವಕುಮಾರ ಸ್ವಾಮೀಜಿ ಅವರ 3ನೇ ವರ್ಷದ ಪುಣ್ಯ ಸ್ಮರಣೆಯಿದೆ. ಕೊರೊನಾ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿಯೇ ಸರಳವಾಗಿ ಆಚರಿಸಲು ಮಠದ ಆಡಳಿತ ಮಂಡಳಿ ನಿರ್ಧರಿಸಿದೆ. ಇನ್ನು ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ನಡೆಯಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಸಹ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಗದ್ದುಗೆಯ ದರ್ಶನ ಪಡೆಯಲಿದ್ದಾರೆ ಎನ್ನಲಾಗ್ತಿದೆ.

Read More »

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದು: ಅಧಿಕೃತ ಘೋಷಣೆ ಒಂದೇ ಬಾಕಿ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಕೊವಿಡ್ ಸಭೆಯಲ್ಲಿ ವೀಕೆಂಡ್ ಕಫ್ರ್ವೂವನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಒಂದೇ ಬಾಕಿಯಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಇಂದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಕೊವಿಡ್ ತಜ್ಞರ, ಸಚಿವರ ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಯಿತು. ಈ ವೇಳೆ ಹಲವು ಸಚಿವರು ವೀಕೆಂಡ್ ಕಫ್ರ್ಯೂವನ್ನು ಜಾರಿ ಮಾಡದಂತೆ ಹಲವು ಸಚಿವರು ಸಿಎಂ ರನ್ನು ಕೇಳಿಕೊಂಡರು. ಈ ವೇಳೆ ಸಚಿವರ ಮಾತಿಗೆ ಸಹಮತ …

Read More »

ಸಿದ್ಧಗಂಗಾ ಶ್ರೀಮಠದ ದಾಸೋಹ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಗಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ಡಾ. ಶಿವಕುಮಾರ ಸ್ವಾಮಿಯವರ ಲಿಂಗೈಕ್ಯ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ದಾಸೋಹ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಠದ ವಿದ್ಯಾರ್ಥಿಗಳಿಗೆ ದಾಸೋಹ ಬಡಿಸಿದರು. ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ಡಾ. ಶಿವಕುಮಾರ ಸ್ವಾಮಿಯವರ ಲಿಂಗೈಕ್ಯ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ದಾಸೋಹ ದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದರು. ಈ ವೇಳೆ ಶ್ರೀಮಠದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ದಾಸೋಹ ದಿನದ …

Read More »

ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಪ್ರಾರಂಭವಾದ ಕೊವಿಡ್ ಸಭೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಶುಕ್ರವಾರ ರಾಜ್ಯದ ಕೋವಿಡ್ ಸ್ಥಿತಿಗತಿ ಕುರಿತು ಗೃಹ ಕಚೇರಿ ಕೃμÁ್ಣದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಕೊವಿಡ್ ಪರಿಣಿತರು, ಸಚಿವರು, ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಸಚಿವರಾದ ಆರ್. ಅಶೋಕ್, ಗೋವಿಂದ ಕಾರಜೋಳ, ಡಾ. ಕೆ. ಸುಧಾಕರ್, ಆರಗ ಜ್ಞಾನೇಂದ್ರ, ಬಿ.ಸಿ. ನಾಗೇಶ್, …

Read More »