ಹುಕ್ಕೇರಿ : ತಾಲೂಕು ಕೇಂದ್ರಗಳಲ್ಲಿ ಶೀಘ್ರದಲ್ಲಿ ವೈದ್ಯರ ನೇಮಕ – ಆರೋಗ್ಯ ಸಚಿವ ದಿನೇಶ ಗುಂಡೂರಾವ. ತಾಲೂಕು ಕೇಂದ್ರಗಳಲ್ಲಿ ಶೀಘ್ರದಲ್ಲೇ ತಜ್ಞ ವೈದ್ಯರನ್ನು ನೇಮಕ ಮಾಡಿ ಜನರ ಸೇವೆಗೆ ಸಹಕರಿಸಲಾಗುವದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ ಹೇಳಿದರು.ಅವರು ಇಂದು ಹುಕ್ಕೇರಿ ತಾಲೂಕಿನ ಸಂಕೇಶ್ವರ ಅಮ್ಮಣಗಿ ಮತ್ತು ಹುಕ್ಕೇರಿ ನಗರಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜರುಗಿದ ವಿವಿಧ ಕಾರ್ಯಕ್ರಮಗಳಲ್ಲಿ ಹುಕ್ಕೇರಿ ಶಾಸಕ …
Read More »ಅಗ್ನಿವೀರ್ ಯೋಧ ಕಿರಣರಾಜ ಕೇದಾರಿ ತೆಲಸಂಗ ಅವರ ಪಾರ್ಥೀವ ಶರೀರವನ್ನು ಮೆರವಣಿಗೆ ಮೂಲಕ ಸ್ವಗ್ರಾಮಕ್ಕೆ ತರಲಾಯಿತು
ಚಿಕ್ಕೋಡಿ (ಬೆಳಗಾವಿ) : ಭಾರತೀಯ ಸೈನ್ಯದಲ್ಲಿ ಕರ್ತವ್ಯದಲ್ಲಿದ್ದಾಗ ಅಗ್ನಿವೀರ್ ಯೋಧ ಕಿರಣರಾಜ ಕೇದಾರಿ ತೆಲಸಂಗ (23) ಎಂಬವರು ತೀವ್ರ ಹೃದಯಾಘಾತದಿಂದ ಮಂಗಳವಾರ ನಿಧನರಾಗಿದ್ದಾರೆ. ಇಂದು ಅವರ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರಾದ ಐಗಳಿ ಗ್ರಾಮದಲ್ಲಿ ಲಿಂಗಾಯತ ಧರ್ಮದ ವಿಧಿ-ವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕಳೆದ 15 ತಿಂಗಳಿನಿಂದ ಅಗ್ನಿವೀರ್ ಮುಖಾಂತರ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕಳೆದ ಮಂಗಳವಾರ ಬೆಳಿಗ್ಗೆ ಓಟದ ಸ್ಪರ್ಧೆಯ ನಂತರ ಹೃದಯಾಘಾತದಿಂದ ನಿಧನರಾಗಿದ್ದರು. ಇವತ್ತು …
Read More »ದಸರಾ ದೀಪಾಲಂಕಾರ 2025: ಆಕರ್ಷಕ ಹಾಗೂ ವಿನೂತನವಾಗಿರಲಿ – ಕೆ. ಎಂ. ಮುನಿಗೋಪಾಲ್ ರಾಜು
ಮೈಸೂರು : ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿದ್ಯುತ್ ದೀಪಾಲಂಕಾರವನ್ನು ಈ ಬಾರಿ ಹೊಸ ವಿನ್ಯಾಸಗಳ ಜತೆಗೆ, ಸುರಕ್ಷತೆಗೆ ಆದ್ಯತೆ ನೀಡುವ ಮೂಲಕ ಆಕರ್ಷಣೀಯವಾಗಿಸಲು ಆಸಕ್ತಿ ವಹಿಸಿ, ಕೆಲಸ ಮಾಡಿ ಎಂದು ಅಧಿಕಾರಿಗಳು ಹಾಗೂ ದೀಪಾಲಂಕಾರ ಮಾಡುವ ವಿದ್ಯುತ್ ಗುತ್ತಿಗೆದಾರರಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ವ್ಯವಸ್ಥಾಪಕ ನಿರ್ದೇಶಕ ಕೆ. ಎಂ. ಮುನಿಗೋಪಾಲ್ ರಾಜು ಅವರು ಸಲಹೆ ನೀಡಿದ್ದಾರೆ. ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿರುವ ನಿಗಮದ ಪ್ರಧಾನ …
Read More »ಧರ್ಮಸ್ಥಳ ಪ್ರಕರಣ: ಬೊಳಿಯಾರ್ನಲ್ಲಿ ಹೊಸ ಸ್ಥಳ ಗುರುತಿಸಿದ ದೂರುದಾರ, ಎಸ್ಐಟಿಯಿಂದ ಶೋಧ
ಧರ್ಮಸ್ಥಳ (ದಕ್ಷಿಣ ಕನ್ನಡ): ಧರ್ಮಸ್ಥಳ ಗ್ರಾಮದಲ್ಲಿ ಹಲವು ಮೃತದೇಹಗಳನ್ನು ಹೂತಿರುವುದಾಗಿ ಅನಾಮಧೇಯ ವ್ಯಕ್ತಿಯೊಬ್ಬ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಎಸ್ಐಟಿ ಶೋಧ ಕಾರ್ಯ ಮುಂದುವರಿಸಿದೆ. ಇಂದು ಬೋಳಿಯಾರ್ ಬಳಿ ದೂರುದಾರ ಗುರುತಿಸಿದ ಮತ್ತೊಂದು ಹೊಸ ಸ್ಥಳದಲ್ಲಿ ವಿಶೇಷ ತನಿಖಾ ಶೋಧ ಕಾರ್ಯಾಚರಣೆ ನಡೆಸಿತು. ಧರ್ಮಸ್ಥಳ ಗ್ರಾಮದ ಬೊಳಿಯಾರ್ ಬಳಿಯ ಗೋಂಕ್ರತಾರ್ ಸಮೀಪದ ಅರಣ್ಯ ಪ್ರದೇಶಕ್ಕೆ ದೂರುದಾರನೊಂದಿಗೆ ಅಧಿಕಾರಿಗಳ ತಂಡ 1:15 ರಿಂದ ಸಂಜೆ 5:30 ಗಂಟೆಯವರೆಗೆ ಮಿನಿ ಜೆಸಿಬಿ ಮತ್ತು ಕಾರ್ಮಿಕರೊಂದಿಗೆ ಶೋಧ …
Read More »ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವಕ್ಕೆ ಚಾಲನೆ
ರಾಯಚೂರು: ಮಂತ್ರಾಲಯದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವಕ್ಕೆ ಶುಕ್ರವಾರ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಶ್ರೀಮಠದ ಮುಂಭಾಗದಲ್ಲಿ ಸಾಂಪ್ರದಾಯಿಕ ಧ್ವಜಾರೋಹಣ ಸಮಾರಂಭವು ಅಪಾರ ಭಕ್ತಿ ಮತ್ತು ಭವ್ಯತೆಯಿಂದ ನಡೆಯಿತು. ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು ಗೋ ಪೂಜೆ ಮತ್ತು ಅಶ್ವ ಪೂಜೆ ನೆರವೇರಿಸಿದರು. ನಂತರ ಆರಾಧನಾ ಆಚರಣೆಗಳ ಆರಂಭವನ್ನು ಸೂಚಿಸುವ ವಿಧ್ಯುಕ್ತ ಧ್ವಜಾರೋಹಣವು ವೇದ ಪಠಣ ಹಾಗೂ ಮಂಗಳವಾದ್ಯಗಳೊಂದಿಗೆ ನಡೆಯಿತು. ಈ ಕ್ಷಣಕ್ಕೆ ಅಪಾರ …
Read More »ಯಲ್ಲಮ್ಮನಗುಡ್ಡದಲ್ಲಿ ಮಳೆರಾಯನ ಆರ್ಭಟ
ಬೆಳಗಾವಿ: ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಸವದತ್ತಿ ತಾಲೂಕಿನ ಉಗರಗೋಳ–ಯಲ್ಲಮ್ಮನಗುಡ್ಡ ಮಾರ್ಗದಲ್ಲಿನ ಹಳ್ಳ ಉಕ್ಕಿ ಹರಿದ ಪರಿಣಾಮ ಯಲ್ಲಮ್ಮದೇವಿ ದೇವಸ್ಥಾನಕ್ಕೆ ಜಲದಿಗ್ಬಂಧನವಾಗಿದೆ. ದೇವಿ ದರ್ಶನಕ್ಕೆ ಬಂದಿದ್ದ ಭಕ್ತರು ಪರದಾಡಿದ್ದಾರೆ. ಹೌದು, ಆಗಸ್ಟ್ 9ರಂದು ಯಲ್ಲಮ್ಮನಗುಡ್ಡದಲ್ಲಿ ನೂಲು ಹುಣ್ಣಿಮೆ ಹಿನ್ನೆಲೆ ಜಾತ್ರೆ ನಡೆಯಲಿದ್ದು, ದೇವಿ ದರ್ಶನಕ್ಕೆ ಶುಕ್ರವಾರ ಸಂಜೆಯಿಂದಲೇ ಗದಗ, ಕೊಪ್ಪಳ, ಬಾಗಲಕೋಟೆ, ವಿಜಯಪುರ ಸೇರಿ ವಿವಿಧ ಜಿಲ್ಲೆಗಳಿಂದ ಉಗರಗೋಳ ಮಾರ್ಗವಾಗಿ ಗುಡ್ಡಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದರು. ಶುಕ್ರವಾರ ಮಧ್ಯಾಹ್ನ 3 …
Read More »ಗೋಕಾಕ ಉಗ್ರಾಣದಲ್ಲಿ 98 ಲಕ್ಷ ರೂ ಮೌಲ್ಯದ ಅವಧಿ ಮೀರಿದ ಔಷಧಿ ಪತ್ತೆ: ನ್ಯಾ.ಬಿ.ಎಸ್.ಪಾಟೀಲ
ಬೆಳಗಾವಿ: ಗೋಕಾಕ್ ಉಗ್ರಾಣದಲ್ಲಿ 98 ಲಕ್ಷ ರೂಪಾಯಿ ಮೌಲ್ಯದ ಔಷಧ ಅವಧಿ ಮೀರಿದೆ. ಜನವರಿಯಿಂದ ಈವರೆಗೆ 6 ಲಕ್ಷ ರೂ. ಮೌಲ್ಯದ ಔಷಧ ಅವಧಿ ಮೀರಿದ್ದು ಕಂಡು ಬಂದಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ತಿಳಿಸಿದರು. ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಲ್ಲಿಂದ ಐದಾರು ತಾಲೂಕುಗಳ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಔಷಧ ಸರಬರಾಜು ಆಗುತ್ತದೆ. ಆ ಔಷಧ ಉಪಯೋಗ ಮಾಡಿಲ್ಲ. …
Read More »ಈ ಬಾರಿಯೂ ಅಂಬಾರಿ ಹೊರಲಿರುವ ಅಭಿಮನ್ಯು: ಆದರೂ ಈ ಆನೆಗಳಿಗೆ ನಡೆಯಲಿದೆ ತಾಲೀಮು
ಮೈಸೂರು: ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯಲ್ಲಿ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವೇ ಆಗಲಿದ್ದು, ಈ ಬಾರಿಯೂ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗುವ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಸಾಗಲಿದ್ದಾನೆ. ಆರನೇ ಬಾರಿ ಅಂಬಾರಿ ಹೊರಲು ಅಭಿಮನ್ಯು ಸನ್ನದ್ಧ: 2025ರ ದಸರಾ ಮಹೋತ್ಸವದ ವಿಜಯ ದಶಮಿಯಲ್ಲಿ ಅಭಿಮನ್ಯು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿದರೆ, ಒಟ್ಟು 6 ಬಾರಿ ಅಂಬಾರಿ ಹೊತ್ತಂತಾಗುತ್ತದೆ. ಅಭಿಮನ್ಯುವಿಗೆ ಅಂಬಾರಿ ತಾಲೀಮು ನಡೆಸುವಂತೆ ಉಳಿದ ಆನೆಗಳಾದ ಮಹೇಂದ್ರ, ಧನಂಜಯ, ಏಕಲವ್ಯ, ಪ್ರಶಾಂತ ಆನೆಗಳಿಗೂ …
Read More »ಬಿಡಾದಿ ದನಗಳನ್ನು ಗೋಶಾಲೆಗೆ ಕಳುಹಿಸಿ…ಶ್ರೀರಾಮಸೇನೆ ಹಿಂದೂಸ್ಥಾನ ಕಮಿಷ್ನರ್’ಗೆ ಮನವಿ
ಬಿಡಾದಿ ದನಗಳನ್ನು ಗೋಶಾಲೆಗೆ ಕಳುಹಿಸಿ…ಶ್ರೀರಾಮಸೇನೆ ಹಿಂದೂಸ್ಥಾನ ಕಮಿಷ್ನರ್’ಗೆ ಮನವಿ ಬೆಳಗಾವಿ ಮಹಾನಗರದಲ್ಲಿ ಹೆಚ್ಚುತ್ತಿರುವ ಬಿಡಾದಿ ದನಗಳನ್ನು ಗೋಶಾಲೆಗೆ ಕಳುಹಿಸಿ ಕೊಡಬೇಕೆಂದು ಆಗ್ರಹಿಸಿ, ಗ್ರಾಮೀಣ ಶ್ರೀರಾಮಸೇನೆ ಹಿಂದೂಸ್ಥಾನ ಆಗ್ರಹಿಸಿದೆ. ಇಂದು ಈ ಕುರಿತಾದ ಮನವಿಯನ್ನು ಗ್ರಾಮೀಣ ಶ್ರೀರಾಮಸೇನೆ ಹಿಂದೂಸ್ಥಾನನ ಪದಾಧಿಕಾರಿಗಳು ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರಿಗೆ ನೀಡಿದರು. ಬೀದಿಯಲ್ಲಿ ದನಗಳು ರಸ್ತೆಯ ಮೇಲೆ ಕುಳಿತುಕೊಳ್ಳುತ್ತಿದ್ದು, ಇದರಿಂದಾಗಿ ಒಂದೆಡೇ ಸಂಚಾರ ದಟ್ಟಣೆಯಾದರೇ, ಇನ್ನೊಂದೆಡೇ ದನಕರುಗಳಿಗೆ ವಾಹನಗಳು ಗುದ್ದಿ ಗಾಯಗೊಳ್ಳುವ ಉದಾಹರಣೆಗಳಿವೆ. …
Read More »ಚಿಕ್ಕೋಡಿಯಲ್ಲಿ ಸರಣಿ ಕಳ್ಳತನ, ಕಾರ್ ಹಾಗೂ ಮನೆಗಳ್ಳತನ ಮಾಡಿ ಕಳ್ಳರು ಪರಾರಿ
ಚಿಕ್ಕೋಡಿಯಲ್ಲಿ ಸರಣಿ ಕಳ್ಳತನ, ಕಾರ್ ಹಾಗೂ ಮನೆಗಳ್ಳತನ ಮಾಡಿ ಕಳ್ಳರು ಪರಾರಿ ಚಿಕ್ಕೋಡಿ: ಒಂದು ಮನೆ ಹಾಗೂ ಕಾರ ದರೋಡೆ ಮಾಡಿ ಕಳ್ಳರು ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಮೆಹಬೂಬ್ ನಗರದಲ್ಲಿ ನಡೆದಿದೆ. ಕಾರ್ ಗಾಜು ಒಡೆದು ಬ್ಯಾಗನಲ್ಲಿದ್ದ 6 ಸಾವಿರ ರೂ ಕಳ್ಳತನ ಮಾಡಲಾಗಿದೆ. ಒಬ್ಬರಿಗೆ ಸೇರಿದ ಕಾರಿನ ಗಾಜು ಒಡೆದು ಕಳ್ಳತನ ಮಾಡಿ ಅಲ್ಲಿಂದ ಸ್ವಲ್ಪ ಅಂತರದಲ್ಲಿದ್ದ ಮನೆಯಲ್ಲಿ ಕಳ್ಳತನ ಮಾಡಿ ಮನೆಯಲ್ಲಿದ್ದ 5 …
Read More »