Breaking News

ಆಬಾ ಸ್ಫೋರ್ಟ್ಸ್ ಕ್ಲಬ್’ನ ವತಿಯಿಂದ ಆಯೋಜಿಸಿದ್ದ ದಿವ್ಯಾಂಗ ಈಜು ಸ್ಪರ್ಧೆಯ ಸಮಾರೋಪ

ಆಬಾ ಸ್ಫೋರ್ಟ್ಸ್ ಕ್ಲಬ್’ನ ವತಿಯಿಂದ ಆಯೋಜಿಸಿದ್ದ ದಿವ್ಯಾಂಗ ಈಜು ಸ್ಪರ್ಧೆಯ ಸಮಾರೋಪ ಮಾರ್ಚ್ 3 ರಿಂದ 18 ರ ವರೆಗೆ ಬೆಳಗಾವಿಯ ಆಬಾ ಸ್ಫೋರ್ಟ್ಸ್ ಕ್ಲಬ್’ನ ವತಿಯಿಂದ ಬೆಳಗಾವಿಯ ಮಹಾನಗರ ಪಾಲಿಕೆ ಈಜುಕೊಳದಲ್ಲಿ ದಿವ್ಯಾಂಗ ಈಜು ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ದಿವ್ಯಾಂಗ ಹಾಗೂ ಬಡ ಮಕ್ಕಳು ಹೀಗೆ 50 ಕ್ಕೂ ಹೆಚ್ಚೂ ಮಕ್ಕಳು ಭಾಗಿಯಾಗಿದ್ಧರು. ವಿಜೇತರಿಗೆ ಮಹಾಪೌರ ಮಂಗೇಶ ಪವಾರ್ ಮತ್ತು ನಗರಸೇವಕ ನಿತೀನ್ ಜಾಧವ್ ಅವರು ಪಾರಿತೋಷಕವನ್ನು ವಿತರಿಸಿದರು. …

Read More »

ಧಾರವಾಡ ತಾಲೂಕಿನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ಸಕ್ಕರೆ ಕಾರ್ಖಾನೆಗೆ ವಿರೋಧ

ಧಾರವಾಡ ತಾಲೂಕಿನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ಸಕ್ಕರೆ ಕಾರ್ಖಾನೆಗೆ ವಿರೋಧ.. ಸಕ್ಕರೆ ಕಾರ್ಖಾನೆ ಆರಂಭಿಸುತ್ತಿರುವುದಕ್ಕೆ ಯಾದವಾಡ ಗ್ರಾಮಸ್ಥರ ವಿರೋಧ ಧಾರವಾಡ ತಾಲೂಕಿನ ಕರಡಿಗುಡ್ಡ, ಯಾದವಾಡ ಹಾಗೂ ಪುಡಕಲಕಟ್ಟಿ ಗ್ರಾಮಗಳ ಮಧ್ಯೆದ ಜಮೀನಿನಲ್ಲಿ ಆರಂಭವಾಗುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಮೃಣಾಲ್ ಸಕ್ಕರೆ ಕಾರ್ಖಾನೆಗೆ ಯಾದವಾಡ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆ ಆರಂಭಿಸಬಾರದು ಇದರಿಂದ ಮೂರೂ ಗ್ರಾಮಗಳ ರೈತರಿಗೆ ತೀವ್ರ ತೊಂದರೆಯಾಗುತ್ತದೆ ಎಂದು ಆರೋಪಿಸಿ ಪ್ರತಿಭಟನೆ …

Read More »

ಉಚಿತ ಬಸ್ ಟಿಕೆಟ್ ಕಳೆದುಕೊಂಡು ಪರದಾಡಿದ ಅಜ್ಜಿ

ವೃದ್ದೆಯೊಬ್ಬರು ಸಾರಿಗೆ ಬಸ್‌ನಲ್ಲಿ ಟಿಕೆಟ್ ಕಳೆದುಕೊಂಡು ಪರದಾಡಿದ ಘಟನೆ ನಡೆದಿದೆ. ಸಾರಿಗೆ ಬಸ್ ನಲ್ಲಿ ಕಂಡಕ್ಟರ್ ಕೊಟ್ಟ ಉಚಿತ ಪ್ರಯಾಣ ಟಿಕೆಟ್ ನ್ನು ವೃದ್ಧೆ ಕಳೆದುಕೊಂಡ ಘಟನೆ ವಿಜಯಪುರ ಜಿಲ್ಲೆಯ ಇಂಡಿ – ಚಡಚಣ ಮಾರ್ಗದ ಬಸ್ ನಲ್ಲಿ ನಡೆದಿದೆ‌. ಟಿಕೆಟ್ ಕಳೆದುಕೊಂಡ ಅಜ್ಜಿ ಮತ್ತೊಂದು ‌ಟಿಕೆಟ್ ನೀಡುವಂತೆ ಕಂಡಕ್ಟರ್ ಗೆ ಮನವಿ ಮಾಡಿಕೊಂಡರು. ಆಗ ಕಂಡಕ್ಟರ್ ಟಿಕೆಟ್ ನೀಡಲು ನಿರಾಕರಿಸಿದ್ದಾರೆ‌. ಅಜ್ಜಿ ಟಿಕೆಟ್ ಎಲ್ಲಿ ಹೋಯ್ತು ಅಂತ ಬಸ್ …

Read More »

ಬೋರವೆಲ್ ಗಳನ್ನು ರೀ ಚಾರ್ಜ ಮಾಡಿಸಲು ಕ್ರಮ ಕೈಗೊಳ್ಳಿ; ವಿನಾಯಕ ಪೂಜಾರ

ಹುಕ್ಕೇರಿ : ಹೋಸದಾಗಿ ಬೋರವೆಲ್ ಗಳನ್ನು ಹಾಕುವ ಬದಲು ಇದ್ದ ಕೋಳವೇ ಭಾವಿಗಳಿಗೆ ನೀರು ಸಂಗ್ರಹವಾಗುವಂತೆ ನೋಡಿಕೋಳ್ಳ ಬೇಕು ಎಂದು ಹುಕ್ಕೇರಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿನಾಯಕ ಪೂಜಾರ ಹೇಳಿದರು. ವಿಶ್ವ ಜಲ ದಿನ ಅಂಗವಾಗಿ ಹುಕ್ಕೇರಿ ಕಾನೂನು ಸೇವಾ ಸಮಿತಿ,ನ್ಯಾಯವಾದಿಗಳ ಸಂಘ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಕಾರದಿಂದ ಜರುಗಿದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಹಿರಿಯ …

Read More »

ಬಾಗಲಕೋಟೆ ಮಣ್ಣು ಮಾಫಿಯಾಗೆ ಅನುಮತಿ ನೀಡಿದ್ದೇನೆ ಎಂದು ಹೇಳಿದ್ದಕ್ಕಾಗಿ ಗಣಿ ಡಿಡಿ ಸಂಕಷ್ಟದಲ್ಲಿ

ಬಾಗಲಕೋಟೆ ಮಣ್ಣು ಮಾಫಿಯಾಗೆ ಅನುಮತಿ ನೀಡಿದ್ದೇನೆ ಎಂದು ಹೇಳಿದ್ದಕ್ಕಾಗಿ ಗಣಿ ಡಿಡಿ ಸಂಕಷ್ಟದಲ್ಲಿದ್ದಾರೆ.. ರೈತರ ಪಟ್ಟಾ ಭೂಮಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಅನುಮತಿ ನೀಡಿದ್ದಾರೆಯೇ?. ಅಕ್ರಮ ಭೂ ಕಬಳಿಕೆದಾರರಿಗೆ ಗಣಿ ಮತ್ತು ಪೊಲೀಸ್ ಅಧಿಕಾರಿಗಳು ಬೆಂಬಲ ನೀಡಿದ್ದಾರೆಯೇ ಗಣಿ ಮತ್ತು ಭೂವಿಜ್ಞಾನ ಇಲಾಖೆ ಡಿಡಿ ರೇಷ್ಮಾ ಅವರ ಸುತ್ತವೇ ಅನುಮಾನಗಳು ಮೂಡುತ್ತಿವೆ ಬಾಗಲಕೋಟ ಜಿಲ್ಲೆ ಮುಧೋಳ ತಾಲೂಕಿನ ಲೋಕಾಪುರ ಬಳಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ …

Read More »

ನೂತನ ಕೊಠಡಿ, ಶಾಲೆ ಸೌಂದರ್ಯೀಕರಣ ಕಾಮಗಾರಿ ಉದ್ಘಾಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ವಿಜಯ ನಗರದಲ್ಲಿರುವ ಸರ್ಕಾರಿ ಪ್ರಾಥಮಿಕ ಕನ್ನಡ ಮತ್ತು ಮರಾಠಿ ಶಾಲೆಗಳಿಗೆ ಸುಣ್ಣ -ಬಣ್ಣ ಹಚ್ಚುವ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬುಧವಾರ ಚಾಲನೆ ನೀಡಿದರು. ಇದೇ ಸಮಯದಲ್ಲಿ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಒಂದು ಹೆಚ್ಚುವರಿ ಕೊಠಡಿಯನ್ನು ಸಹ ಸಚಿವರು ಉದ್ಘಾಟಿಸಿದರು. ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಕ್ಷೇತ್ರದಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶೈಕ್ಷಣಿಕ …

Read More »

ರೌಡಿ ಶೀಟರ್‌ ಹಬೀದ್‌ಗೆ ಗುಂಡೇಟು

ಶಿವಮೊಗ್ಗ: ಬಂಧನ ಕಾರ್ಯಾಚರಣೆ ವೇಳೆ ಪೊಲೀಸ್​ ಸಿಬ್ಬಂದಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ರೌಡಿಶೀಟರ್​​ ಕಾಲಿಗೆ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್‌ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ. ಮಂಗಳವಾರ ಶಿವಮೊಗ್ಗದ ರೌಡಿಶೀಟರ್​​​​ ಕಡೆಕಲ್​​ ಹಬೀದ್​​ ಹಾಗೂ ಆತನ ಸಹಚರರು​​ ಓರ್ವ ವ್ಯಕ್ತಿಯ ಕೊಲೆಗೆ ಸಂಚು ರೂಪಿಸಿ ಹೊಂಚು ಹಾಕಿದ್ದರು. ಈ ಕುರಿತು ಮಾಹಿತಿ ಪಡೆದ ಭದ್ರಾವತಿ ಪೇಪರ್‌ಟೌನ್​ ಪೊಲೀಸ್​ ಠಾಣೆಯ ಇನ್ಸ್‌ಪೆಕ್ಟರ್ ನಾಗಮ್ಮ ತಮ್ಮ ತಂಡದೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿದ್ದಾರೆ. …

Read More »

ಆದರ್ಶ ದಂಪತಿ, ಆದರ್ಶ ಅತ್ತೆ ಸೊಸೆ ಪ್ರಶಸ್ತಿ ನೀಡಿದ್ದು ಮಾದರಿ; ಸುಶ್ಮಿತಾ ಕ್ರಿಶ್ಚಾಲಿನ್‌

ಆದರ್ಶ ದಂಪತಿ, ಆದರ್ಶ ಅತ್ತೆ ಸೊಸೆ ಪ್ರಶಸ್ತಿ ನೀಡಿದ್ದು ಮಾದರಿ; ಸುಶ್ಮಿತಾ ಕ್ರಿಶ್ಚಾಲಿನ್‌ ಕ್ರಾಂತಿ ಮಹಿಳಾ ಮಂಡಳ, ಉಮಾ ಸಂಗೀತ ಪ್ರತಿಷ್ಠಾನ ಹಾಗೂ ಮಿರಾಕಿ ಇಲಾಯಿಟ್ ಇವೆಂಟ್ಸ್ ವತಿಯಿಂದ ಮಹಿಳಾ ದಿನ ನಗರದ ಕ್ರಾಂತಿ ಮಹಿಳಾ ಮಂಡಳ, ಉಮಾ ಸಂಗೀತ ಪ್ರತಿಷ್ಠಾನ ಹಾಗೂ ಮಿರಾಕಿ ಇಲಾಯಿಟ್ ಇವೆಂಟ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನಲೆಯಲ್ಲಿ ಆದರ್ಶ ದಂಪತಿ, ಆದರ್ಶ ಅತ್ತೆ ಸೊಸೆ, ಮಹಿಳಾ ಸಂಗೀತ ವಿದೂಷಕಿ ಪ್ರಶಸ್ಥಿ, …

Read More »

ದಂಪತಿಗಳ ಸಾವಿನಿಂದ ಅಂಧಕಾರದಲ್ಲಿ‌ ಮುಳುಗಿದ ನಾಲ್ಕು ಮಕ್ಕಳ ಭವಿಷ್ಯ

ದಂಪತಿಗಳ ಸಾವಿನಿಂದ ಅಂಧಕಾರದಲ್ಲಿ‌ ಮುಳುಗಿದ ನಾಲ್ಕು ಮಕ್ಕಳ ಭವಿಷ್ಯ ಆ ದಂಪತಿಗಳಿಗೆ ನಾಲ್ಕು ಪುಟಾಣಿ ಮಕ್ಕಳು. ಹೊಲಕ್ಕೆ ಹೋದವರು ಶವವಾಗಿ ಪತ್ತೆಯಾಗಿದ್ದಾರೆ. ಪತಿಯ ಶವ ಮರದಲ್ಲಿ ನೇತಾಡುತ್ತಿದ್ದರೇ, ಇತ್ತ ಇಪ್ಪತ್ತು ಮೀಟರ್ ದೂರದಲ್ಲಿ ಪತ್ನಿ ಶವ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೌಟುಂಬಿಕ ಕಾರಣ ಹಿನ್ನೆಲೆಯಲ್ಲಿ ಪತಿಯೇ ಕೊಲೆ ಮಾಡಿ ತಾನು ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಆದ್ರೆ ಪತ್ನಿಯ ತವರಿನವರು ಇದೊಂದು ಕೊಲೆ ಎಂದು ದೂರು ದಾಖಲಿಸಿದ್ದಾರೆ. ಈ ಕುರಿತು ಇಲ್ಲಿದೆ …

Read More »

ಬೆಳಗಾವಿಯಲ್ಲಿ ಭೀಕರ ಸರಣಿ ಅಪಘಾತ

ಬೆಳಗಾವಿ :ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿಯ ಕಮಕಾರಟ್ಟಿ ಘಾಟ್ ಬಳಿ ಮೂರು ಕೆಎಸ್‌ಆರ್‌ಟಿಸಿ ಬಸ್, ಮೂರು ಲಾರಿ, ಒಂದು ಬೈಕ್ ಹಾಗೂ ಕಂಟೇನರ್ ವಾಹನದ ನಡುವೆ ಭೀಕರ ಅಪಘಾ**ತ ಸಂಬಂಧಿಸಿದ್ದು ಬಸ್ ಪ್ರಯಾಣಿಕರಿಗೆ ಸಣ್ಣಪುಟ ಗಾ**ಯವಾದ ಘಟನೆ ಮಂಗಳವಾರ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ನಾಲ್ಕು ಬೆಂಗಳೂರು ಪುಣೆ ಹೆದ್ದಾರಿಯಲ್ಲಿ ನಡೆದ ಘಟನೆ ನಡೆದಿದೆ. ಮೊದಲು ನಿಯಂತ್ರಣ ತಪ್ಪಿ ಪಲ್ಟಿಯಾದ ಕಂಟೇನರ್ ವಾಹನ. ಕಂಟೇನರ್ ವಾಹನಕ್ಕೆ ಡಿಕ್ಕಿ ಆಗುತ್ತೆ ಅಂತಾ ಬಸ್ …

Read More »