ಬೆಳಗಾವಿ: ಬೆಂಗಳೂರಿನಲ್ಲಿ ವಿಶ್ವೇಶ್ವರ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ ರಚನೆ, ಶಿವಮೊಗ್ಗದಲ್ಲಿ ಕರ್ನಾಟಕ ರಾಜ್ಯ ಆಯುಷ್ ವಿಶ್ವವಿದ್ಯಾಲಯ ಸ್ಥಾಪನೆ ಹಾಗೂ 2021ನೇ ಸಾಲಿನ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಎರಡನೇ ತಿದ್ದುಪಡಿ ವಿಧೇಯಕ ಸೇರಿ ಒಟ್ಟು ಮೂರು ವಿಧೇಯಕಗಳನ್ನು ಇಂದು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಪ್ರಶ್ನೋತ್ತರ ವೇಳೆಯ ನಂತರ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಾಸನ ರಚನೆಗೆ ವಿಧೇಯಕಗಳನ್ನು ಮಂಡಿಸಲು ಆಹ್ವಾನಿಸಿದರು. ಉನ್ನತ ಶಿಕ್ಷಣ,ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, …
Read More »ವಿಜಯಪುರ ನಗರದಲ್ಲಿ ಇತ್ತಿಚೆಗೆ ನಡೆಯತ್ತಿದ್ದ ಜಾನುವಾರು ಕಳ್ಳತನ ಪ್ರಕರಣಗಳನ್ನು ವಿಜಯಪುರ ಪೊಲೀಸರು ಬೇಧಿಸುವಲ್ಲಿ ಯಶಸ್ವಿ
ವಿಜಯಪುರ ನಗರದಲ್ಲಿ ಇತ್ತಿಚೆಗೆ ನಡೆಯತ್ತಿದ್ದ ಜಾನುವಾರು ಕಳ್ಳತನ ಪ್ರಕರಣಗಳನ್ನು ವಿಜಯಪುರ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು 3 ಪ್ರಕರಣಗಳಿಗೆ ಸಂಬಂಧಿಸಿದಂತೆ 6 ಜನ ಕಳ್ಳರನ್ನು ಬಂಧಿಸಿದ್ದಾರೆ. ಅವರಿಂದ ಒಟ್ಟು 7 ಲಕ್ಷ ಮೌಲ್ಯದ 11 ಎಮ್ಮೆ ಮತ್ತು ಕರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ ಡಿ ಆನಂದಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 3 ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಜಯಪುರ ನಗರದ …
Read More »ಯಮಕನಮರಡಿ ಸಿಂಗ್ಮತಕ್ಷೇತ್ರದಲ್ಲಿ ಬರುವ ಹೊಸ ವಂಟಮುರಿ ಗ್ರಾಮಕ್ಕೆ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಐವತ್ತು ಕುರ್ಚಿ ಶ್ರೀಕಮಲಾ ದೇವಿ ದೇವಸ್ಥಾನಕ್ಕೆ ವಿತರಣೆ
ಕಲ್ಯಾಣ ಕರ್ನಾಟಕ ಕನಸುಗಾರ ಸತೀಶ್ ಅಣ್ಣಾ ಜಾರಕಿಹೊಳಿ ಅವರ ಯಮಕನಮರಡಿ ಸಿಂಗ್ಮತಕ್ಷೇತ್ರದಲ್ಲಿ ಬರುವ ಹೊಸ ವಂಟಮುರಿ ಗ್ರಾಮಕ್ಕೆ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಐವತ್ತು ಕುರ್ಚಿ ಶ್ರೀಕಮಲಾ ದೇವಿ ದೇವಸ್ಥಾನಕ್ಕೆ ವಿತರಣೆ ಮಾಡಿದ್ದರು ಈ ಸಂದರ್ಭದಲ್ಲಿ ಆಪ್ತ ಸಹಾಯಕ ಸುರೇಶ್ ನಾಯಿಕ ಗ್ರಾಮ ಪಂಚಾಯಿತಿ ಸದಸ್ಯರು ಊರಿನ ಹಿರಿಯರು ಗ್ರಾಮಸ್ಥರು ಉಪಸ್ಥಿತಿಇದ್ದರು
Read More »ಕೊಲ್ಲಾಪುರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಪ್ರಕರಣ; ವಿಧಾನಸಭೆಯಲ್ಲಿ ಕೋಲಾಹಲ
ಬೆಂಗಳೂರು: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿರುವ ವಿಷಯ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿತು. ಇದೇ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆದು ಕೆಲಕಾಲ ಸದನವನ್ನು ಮುಂದೂಡಿದ ಪ್ರಸಂಗ ನಡೆಯಿತು. ಶೂನ್ಯ ವೇಳೆಯಲ್ಲಿ ಶಾಸಕ ಡಾ.ಅನ್ನದಾನಿ ವಿಷಯ ಪ್ರಸ್ತಾಪಿಸಿ, ಪ್ರತಿ ಅಧಿವೇಶನದ ಸಂದರ್ಭದಲ್ಲಿ ಎಂಇಎಸ್‍ನವರು ಕನ್ನಡಿಗರ ಭಾವನೆಗಳನ್ನು ಕೆರಳಿಸುತ್ತಾರೆ. ನಾವು ಉದಾರಿಗಳು ಮೃದು ಸ್ವಭಾವದವರು ಎಂಬ ಕಾರಣಕ್ಕೆ ಕನ್ನಡ ಬಾವುಟಕ್ಕೆ ಬೆಂಕಿ …
Read More »ಪರಿಷತ್ನಲ್ಲಿ ಸದ್ದು ಮಾಡಿದ ಬಿಟ್ ಕಾಯಿನ್.. ಸಮರ್ಥಿಸಿಕೊಂಡ ಸರ್ಕಾರ
ಬೆಳಗಾವಿ: ವಿಧಾನ ಪರಿಷತ್ನಲ್ಲಿಂದು ಬಿಟ್ ಕಾಯಿನ್ ವಿಚಾರ ಪ್ರಸ್ತಾಪವಾಗಿ ಚರ್ಚೆ ನಡೆಯಿತು. ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಯಾವುದೇ ಕಾರಣಕ್ಕೂ ಬಿಟ್ ಕಾಯಿನ್ ವಿಚಾರವಾಗಿ ಸರ್ಕಾರದ ತನಿಖೆಯಲ್ಲಿ ಲೋಪ ಆಗಿಲ್ಲ. ಶ್ರೀಕಿಯನ್ನು ರಕ್ಷಣೆ ಮಾಡಿಲ್ಲ. ಪೊಲೀಸರು ಹೊಡೆದು, ಹಿಂಸಿಸಿಲ್ಲ. ತನಿಖೆ ಸಮರ್ಪಕವಾಗಿ, ಪಾರದರ್ಶಕವಾಗಿ ನಡೆದಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.ಬಿಟ್ ಕಾಯಿನ್ ಕದಿಯಲು ಪೊಲೀಸರು ಶ್ರೀಕಿಯನ್ನು ಬಳಸಿಕೊಂಡಿದ್ದಾರೆ, ಡ್ರಗ್ಸ್ ನೀಡಿದ್ದಾರೆ ಎನ್ನುವುದು ಆಧಾರ ರಹಿತ ಆರೋಪ. ಬೆಂಗಳೂರು ಪೊಲೀಸರು …
Read More »ಗೋಕಾಕ: ಇಲ್ಲಿಯ ಟಿಎಪಿಸಿಎಮ್‍ಎಸ್‍ನ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅಶೋಕ ನಾಯಿಕ ಅವರು ಮಾತನಾಡುತ್ತಿರುವುದು.
ಗೋಕಾಕ: ಇಲ್ಲಿಯ ಟಿಎಪಿಸಿಎಮ್‍ಎಸ್ ಪ್ರಸಕ್ತ ಸಾಲಿನಲ್ಲಿ 39.17 ಕೋಟಿ ರೂಗಳ ವಹಿವಾಟು ನಡೆಸಿ 60.53 ಲಕ್ಷ ಲಾಭವನ್ನು ಗಳಿಸಿ ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಅಶೋಕ ನಾಯಿಕ ಹೇಳಿದರು. ಗುರುವಾರದಂದು ನಗರದ ಸಂಘದ ಸಭಾ ಭವನದಲ್ಲಿ ಜರುಗಿದ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸಂಘವು ಸದಸ್ಯರಿಗೆ ಹಲವಾರು ಸೌಲಭ್ಯಗಳನ್ನು ನೀಡಿ ಅವರ ಆರ್ಥಿಕ ಅಭಿವೃದ್ದಿಗೆ ಶ್ರಮಿಸುತ್ತಿದ್ದು ಇನ್ನೂ ಮುಂದೆಯೂ ಸಂಘದ ಹಿತೈಸಿಗಳು …
Read More »ಆಸೆ, ಆಮಿಷಗಳಿಗೆ ಒಳಗಾಗಿ ಮತಾಂತರ ಆಗುವುದು ತಪ್ಪು – ಬೊಮ್ಮಾಯಿ.!
ಹುಬ್ಬಳ್ಳಿ : ಮತಾಂತರ ಸಮಾಜಕ್ಕೆ ಒಳ್ಳೆಯದಲ್ಲ. ಆಸೆ, ಆಮಿಷಗಳಿಗೆ ಒಳಗಾಗಿ ಮತತಾಂತರವಾಗುವುದು ತಪ್ಪು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ. ನಗರದಲ್ಲಿ ತಮ್ಮ ನಿವಾಸದ ಹತ್ತಿರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕೆ ಯಾವುದೇ ಧರ್ಮದವರು ಆತಂಕ ಪಡಬಾರದು. ಇದರಿಂದ ಅನ್ಯ ಧರ್ಮದ ಪ್ರಾರ್ಥನೆ, ನಂಬಿಕೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಈಗಾಗಲೇ ಬೇರೆ ರಾಜ್ಯಗಳಲ್ಲಿ ಮತಾಂತರ ಕಾಯ್ದೆ ಜಾರಿಯಾಗಿದೆ. ಕಾನೂನು ಇಲಾಖೆ ಇವುಗಳ ಕುರಿತು ಅಧ್ಯಯನ ನಡೆಸಿದೆ. ಪರಿಶೀಲನೆಯ ನಂತರ …
Read More »40 ಪರ್ಸೆಂಟ್ ಕಮಿಷನ್ ವಿಚಾರ ನಮ್ಮ ಸಮಸ್ಯೆಗಳ ಬಗ್ಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಪತ್ರ ಬರೆದು ತಿಳಿಸಿದರೂ ಸ್ಪಂದಿಸಿಲ್ಲ : ಡಿ. ಕೆಂಪಣ್ಣ
ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ವಿಚಾರವಾಗಿ ಮಾತನಾಡಿರುವ ಕರ್ನಾಟಕ ರಾಜ್ಯ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ, ಡಿ. ಕೆಂಪಣ್ಣ, ನಮ್ಮ ಸಮಸ್ಯೆಗಳ ಬಗ್ಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಪತ್ರ ಬರೆದು ತಿಳಿಸಿದರೂ ಸ್ಪಂದಿಸಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಂಪಣ್ಣ, ಯಾವುದೇ ಕಾಮಗಾರಿ ಮಾಡಬೇಕಾದರೂ 40 ಪರ್ಸೆಂಟ್ ಕಮಿಷನ್ ಕೊಡಬೇಕಾಗುತ್ತದೆ. ಅದಕ್ಕಾಗಿ ಈ ಹಿಂದೆ ಯಡಿಯೂರಪ್ಪಗೆ ನಾವು ಪತ್ರ ಬರೆದಿದ್ದೆವು. ಆದರೆ ಯಡಿಯೂರಪ್ಪನವರು ಸರಿಯಾಗಿ ಸ್ಪಂದಿಸಿಲ್ಲ. ಪ್ರಧಾನಿ …
Read More »ನಂದಿನಿ ಬ್ರ್ಯಾಂಡ್ ಹೆಸರಲ್ಲಿ ನಕಲಿ ತುಪ್ಪ ಮಾರಾಟ
ಮೈಸೂರು: ಪ್ರತಿಷ್ಠಿತ ಕೆ ಎಂ ಎಫ್ ಕಂಪನಿಯ ನಂದಿನಿ ತುಪ್ಪದ ಹೆಸರಲ್ಲಿ ನಕಲಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದ ಬೃಹತ್ ಜಾಲದ ಮೇಲೆ ಪೊಲಿಸರು ದಾಳಿ ನಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಚಾಮುಂಡಿ ಬೆಟ್ಟದ ಹಿಂಭಾಗ ಹೊಸಹುಂಡಿ ಗ್ರಾಮದಲ್ಲಿ ಗೌಡನ್ ನಲ್ಲಿ ಟನ್ ಗಟ್ಟಲೆ ನಕಲಿ ತುಪ್ಪ ಹಾಗೂ ಲೇಬಲ್ ಗಳ ಮುದ್ರಣ ಘಟಕ ಪತ್ತೆಯಾಗಿದೆ. ನಂದಿನಿ ತುಪ್ಪಕ್ಕೆ ಡಾಲ್ಡಾ ಬೆರೆಸಿ ಮಾರಾಟ ಮಾಡುತ್ತಿದ್ದ ಜಾಲ ಇದಾಗಿದ್ದು, ಜಿವನ್ ತುಪ್ಪದ ಕಂಪನಿಯಿಂದ …
Read More »ಕನ್ನಡ ದ್ವಜ ಸುಟ್ಟು ಹಾಕಿದ ಎಂ.ಇ.ಎಸ್ ಪುಂಡರ ವಿರುದ್ಧ ಸೂಕ್ತ ಕ್ರಮಕ್ಕೆ ಕನ್ನಡಪರ ಸಂಘಟನೆಗಳ ವತಿಯಿಂದ ಆಗ್ರಹ*
ಘಟಪ್ರಭಾ; ನಾಡ ದ್ರೋಹಿ ಎಂ.ಇ.ಎಸ್ ಸಂಘಟನೆಯನ್ನು ನಿಷೇದಿಸುವಂತೆ ಹಾಗೂ ಕೊಲ್ಹಾಪುರದಲ್ಲಿ ಕನ್ನಡ ದ್ವಜ ಸುಟ್ಟಂತಹ ನಾಡ ದ್ರೋಹಿಗಳ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುರುವಾರ ಘಟಪ್ರಭಾ ನಗರದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ವತಿಯಿಂದ ಮೃತ್ಯುಂಜಯ ವೃತ್ತದಲ್ಲಿ ಟೈರಗೆ ಬೆಂಕಿ ಹಚ್ಚಿ ನಾಡ ದ್ರೋಹಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಾಶಿ, ಕರ್ನಾಟಕ ರಕ್ಷಣಾ ವೇದಿಕೆ ಸಂತೋಷ …
Read More »