ವಿಜಯನಗರ; ಚಲಿಸುವ ರೈಲಿನಿಂದ ಬಿದ್ದು ಅಪರಿಚಿತ ಯುವಕ- ಯುವತಿ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕೊಟಗಿನಾಳ್ ಗ್ರಾಮದ ಬಳಿ ನಡೆದಿದೆ. ಬಳ್ಳಾರಿಯಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ರೈಲಿನಿಂದ ಯುವಕ-ಯುವತಿ ಬಿದ್ದಿರೋ ಶಂಕೆ ಕಂಡು ಬಂದಿದೆ. ರೈಲ್ವೆ ಹಳಿಯಿಂದ 50 ಅಡಿ ದೂರದಲ್ಲಿ ಯುವತಿ ಮತ್ತು ಯುವಕನ ಮೃತದೇಹ ಪತ್ತೆಯಾಗಿದೆ. ಮೃತರ ಹೆಸರು, ವಿಳಾಸದ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಇಬ್ಬರ ಮೊಬೈಲ್ಗಳು ಆಫ್ ಆಗಿದ್ದು, ಸ್ಥಳಕ್ಕೆ …
Read More »ಬೆಂಗಳೂರು; ನಿಂತಿದ್ದ ವಾಹನಗಳಿಂದ ಡೀಸೆಲ್ ಕದಿಯುತ್ತಿದ್ದ ಕಳ್ಳರ ಕಾಲಿಗೆ ಗುಂಡಿಟ್ಟ ಪೊಲೀಸ್
ಬೆಂಗಳೂರು: ರಾತ್ರಿ ವೇಳೆಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಕಾಲಿಗೆ ಗುಂಡು ಹಾರಿಸಿರುವ ಪೊಲೀಸರು, ಆರೋಪಿಗಳನ್ನು ಬಂಧನ ಮಾಡಿರೋ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಬಳಿ ನಡೆದಿದೆ. ಶ್ರೀನಿವಾಸ್ ಅಲಿಯಾಸ್ ರಾಜು ಗುಂಡೇಟು ತಿಂದ ಆರೋಪಿಯಾಗಿದ್ದು, ಇಂದು ಮುಂಜಾನೆ 5 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಟಾಟಾ ಸುಮೋನಲ್ಲಿ ಬಂದು ಲಾರಿಗಳಲ್ಲಿ ಡೀಸೆಲ್ ಕದಿಯುತ್ತಿದ್ದ ಖತರ್ನಾಕ್ ಗ್ಯಾಂಗ್, ಆನೇಕಲ್ನ ಜಿಗಣಿಯ ಕೆಇಬಿ ಸರ್ಕಲ್ ಬಳಿ …
Read More »ಸಿನಿಮಾದ ಮೊದಲ ದಿನದ ಪ್ರತಿ ಶೋನ ತಲಾ 100 ಟಿಕೆಟ್ಗಳನ್ನು ಮೇಯರ್ ಕಚೇರಿಗೆ ಕಳುಹಿಸಿಕೊಡಿ.
ವಿಜಯವಾಡ(ಆಂಧ್ರಪ್ರದೇಶ) : ನಿಮ್ಮ ಚಿತ್ರಮಂದಿರದಲ್ಲಿ ಬಿಡುಗಡೆಯಾಗುವ ಸಿನಿಮಾದ ಮೊದಲ ದಿನದ ಪ್ರತಿ ಶೋನ ತಲಾ 100 ಟಿಕೆಟ್ಗಳನ್ನು ಮೇಯರ್ ಕಚೇರಿಗೆ ಕಳುಹಿಸಿಕೊಡಿ. ಹೀಗೆಂದು ವಿಜಯವಾಡ ಮೇಯರ್ ಚಿತ್ರಮಂದಿರಗಳಿಗೆ ಕಟ್ಟಾಜ್ಞೆ ಹೊರಡಿಸಿದ್ದಾರೆ. ಪಾಲಿಕೆ ಸದಸ್ಯರು ಮತ್ತು ಮುಖಂಡರು ಸಿನಿಮಾ ಟಿಕೆಟ್ಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಕಾರಣಕ್ಕೆ ಮೇಯರ್ ರಾಯನ ಭಾಗ್ಯಲಕ್ಷ್ಮಿ ವಿಜಯವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಚಿತ್ರಮಂದಿರಗಳಿಗೆ ಇಂತಹದೊಂದು ಪತ್ರ ಬರೆದು ಸೂಚಿಸಿದ್ದಾರೆ. ಮಲ್ಟಿಪ್ಲೆಕ್ಸ್ನಲ್ಲಿ ತೆರೆ ಕಾಣುವ ಪ್ರತಿ ಸಿನಿಮಾದ ಮೊದಲ …
Read More »ಯುಪಿಯಲ್ಲಿ ಬಿಜೆಪಿ ಗೆಲ್ಲಿಸಿದ ಮಾಯಾವತಿ,ಓವೈಸಿಗೆ ಪದ್ಮವಿಭೂಷಣ, ಭಾರತ ರತ್ನ ನೀಡಬೇಕು’: ಶಿವಸೇನೆ
ಮುಂಬೈ(ಮಹಾರಾಷ್ಟ್ರ): ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಗೆಲುವು ದಾಖಲು ಮಾಡಿ, ಸತತ ಎರಡನೇ ಅವಧಿಗೆ ಸರ್ಕಾರ ರಚನೆ ಮಾಡಲು ಮುಂದಾಗಿದೆ. ಈ ವಿಷಯವಾಗಿ ಮಾತನಾಡಿರುವ ಶಿವಸೇನೆಯ ಸಂಜಯ್ ರಾವತ್, ಬಹುಜನ ಸಮಾಜವಾದಿ ಪಕ್ಷದ ಅಧ್ಯಕ್ಷೆ ಮಾಯಾವತಿ ಹಾಗೂ ಎಐಎಂಐಎಂ ಮುಖ್ಯಸ್ಥ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸುವಲ್ಲಿ ಕೊಡುಗೆ ನೀಡಿರುವ ಓವೈಸಿ, ಮಾಯಾವತಿಗೆ ಪದ್ಮ ವಿಭೂಷಣ ಅಥವಾ ಭಾರತ ರತ್ನ ನೀಡಬೇಕು …
Read More »ಸತತ ಸೋಲು ಗಂಭೀರವಾದ ವಿಚಾರ : ಜಿ-23 ಸಭೆಯಲ್ಲಿ ಕಾಂಗ್ರೆಸ್ ನಾಯಕರ ಅಭಿಪ್ರಾಯ
ನವದೆಹಲಿ : ಇತ್ತೀಚೆಗೆ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವಗೊಂಡಿದ್ದು, ಈ ಹಿನ್ನೆಲೆಯಲ್ಲಿ ಸೋಲಿನ ವಿಶ್ಲೇಷಣೆಗಾಗಿ ಗ್ರೂಪ್- 23ರ ಭಾಗವಾಗಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಗುಲಾಂ ನಬಿ ಆಜಾದ್ ಅವರ ನಿವಾಸದಲ್ಲಿ ಸಭೆ ನಡೆಸಿದರು. ಈ ಸಭೆಯಲ್ಲಿ ಚುನಾವಣೆಗಳಲ್ಲಿ ಪಕ್ಷದ ಸತತ ಸೋಲಿನ ಬಗ್ಗೆ ಕಳವಳ ವ್ಯಕ್ತವಾಯಿತು. ಮೂಲಗಳ ಪ್ರಕಾರ ಈ ಸಭೆಯಲ್ಲಿ ಭಾಗವಹಿಸಿದ್ದ ಕೆಲವು ನಾಯಕರು ಮುಂದಿನ ಕಾರ್ಯಕಾರಿ ಸಮಿತಿಯಿಂದ ಹೊರಗುಳಿಯುವುದಾಗಿ ಹೇಳಿದ್ದಾರೆ. ಕೆಲವು ಮುಖ್ಯಮಂತ್ರಿಗಳು, ಯುವ …
Read More »ಚಿರತೆಯನ್ನ ಬೇಟೆಯಾಡಿ ಮಾಂಸ ತಿಂದು ಪಿಕ್ನಿಕ್ ಮಾಡಿದ ಕಿರಾತಕರು ನೇಪಾಳಕ್ಕೆ ಚರ್ಮ ಮಾರಲು ಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದೆ..
ಸಿಲಿಗುರಿ, (ಪಶ್ಚಿಮ ಬಂಗಾಳ) : ಚಿರತೆಯನ್ನು ಬೇಟೆಯಾಡಿ ಅದನ್ನು ಕೊಂದು ಬಳಿಕ ಅದರ ಮಾಂಸವನ್ನು ಕಿರಾತಕರು ತಿಂದಿದ್ದಾರೆ. ಬಳಿಕ ಚಿರತೆ ಮಾಂಸದೊಂದಿಗೆ ಪಿಕ್ನಿಕ್ ಮಾಡಿದ್ದಾರೆ. ಆಮೇಲೆ ಚಿರತೆ ಉಗುರುಗಳು ಮತ್ತು ಚರ್ಮ ಮಾರಾಟ ಮಾಡಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಸಿಲಿಗುರಿಯಲ್ಲಿ ನಡೆದಿದೆ. ಚಿರತೆಯನ್ನ ಬೇಟೆಯಾಡಿ ಮಾಂಸ ತಿಂದು ಪಿಕ್ನಿಕ್.. ಏನಿದು ಘಟನೆ : ಇತ್ತೀಚೆಗೆ ಚಿರತೆಯೊಂದು ಸತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಷಯ ವನ್ಯಜೀವಿ …
Read More »ಲವರ್ ಜೊತೆ ಫೋನ್ನಲ್ಲಿ ಮಾತನಾಡಿದ್ದಕ್ಕೆ ಗದರಿಸಿದ ತಾಯಿ.. ಪ್ರಾಣ ಕಳೆದುಕೊಂಡ ಯುವ ಜೋಡಿ
ನಾಗ್ಪುರ್(ಮಹಾರಾಷ್ಟ್ರ): ಚಲಿಸುತ್ತಿದ್ದ ರೈಲಿನಡಿ ಸಿಲುಕಿ ಯುವ ಜೋಡಿವೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಗ್ಪುರ ಜಿಲ್ಲೆಯ ಕಂಪ್ಟಿಯಲ್ಲಿರುವ ರೈಲ್ವೆ ಹಳಿ ಮೇಲೆ ಆದಿತ್ಯ ಲಕ್ಷಿನಾರಾಯಣ(18), ಸಯಾಲಿ ಗೌತಮ್(16) ಆತ್ಮಹತ್ಯೆಗೆ ಶರಣಾಗಿರುವ ಜೋಡಿ. ಹೌರಾ-ಮುಂಬೈ ಎಕ್ಸ್ಪ್ರೆಸ್ ರೈಲು ಚಲಿಸುತ್ತಿದ್ದ ವೇಳೆ ಏಕಾಏಕಿ ರೈಲು ಹಳಿ ಮೇಲೆ ತೆರಳಿ ಪ್ರಾಣ ಕಳೆದುಕೊಂಡಿದ್ದಾರೆಂದು ಉಪ ಪೊಲೀಸ್ ಆಯುಕ್ತ ವಿ ಮನೀಶ್ ಕಲ್ವಾನಿಯಾ ತಿಳಿಸಿದ್ದಾರೆ. ಈ …
Read More »ಗುಟ್ಕಾ ತಿನ್ನುತ್ತಿದ್ದಾಗ ದಿಢೀರ್ ಹಾರಿಹೋಯ್ತು ವ್ಯಕ್ತಿ ಪ್ರಾಣ..!
ಗುಟ್ಕಾ ತಿನ್ನುವಾಗ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಗೆ ಗುಟ್ಕಾದಲ್ಲಿದ್ದ ವೀಳ್ಯದೆಲೆ ಗಂಟಲಿಗೆ ಸಿಲುಕಿರುವುದು ಕಾರಣ ಎಂದು ತಿಳಿದುಬಂದಿದೆ. ಔರಂಗಾಬಾದ್(ಮಹಾರಾಷ್ಟ್ರ): ಇಲ್ಲಿನರೈಲ್ವೆ ನಿಲ್ದಾಣದ ನಿವಾಸಿ ಗಣೇಶ್ ಜಗನ್ನಾಥದಾಸ್ ವಾಘ್ (37) ಎಂಬುವರು ಕಳೆದ 20 ವರ್ಷಗಳಿಂದ ರಾಹುಲ್ ಸಾಹುಜಿ ಬಳಿ ಕೆಲಸ ಮಾಡುತ್ತಿದ್ದರು. ಗುರುವಾರ ಸಂಜೆ ಗುಟ್ಕಾ ತಿನ್ನುತ್ತಲೇ ಸಾವನ್ನಪ್ಪಿದ್ದಾರೆ. ಹಠಾತ್ ಸಾವು ಹಿನ್ನೆಲೆ ಉಸ್ಮಾನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗುಟ್ಕಾ ತಿನ್ನುವಾಗ ಕೆಮ್ಮು ಬಂದಿದ್ದು, ಗಂಟಲಲ್ಲಿ ವೀಳ್ಯದೆಲೆ ಸಿಕ್ಕಿಹಾಕಿಕೊಂಡು ಸಾವನ್ನಪ್ಪಿದ್ದಾರೆ …
Read More »ಹೋಳಿ ಹಬ್ಬ ಪ್ರಯುಕ್ತ ಡಾಲ್ಬಿ ನಿಶೇಧ: ಮಾರ್ಕೆಟ್ ಸಿಪಿಐ ಮಲ್ಲಿಕಾರ್ಜುನ್ ತುಳಸೀಗೇರಿ
ಬೆಳಗಾವಿ ನಗರದಲ್ಲಿ ಸರಕಾರಿ ನಿಯಮದ ಪ್ರಕಾರ ಹೋಳಿ ಹಬ್ಬವನ್ನು ಆಚರಣೆ ಮಾಡಬೇಕು. ಯಾರೂ ಕೂಡ ಡಾಲ್ಬಿಯನ್ನು ಬಳಸದಂತೆ ಸೌಹಾರ್ದ ರೀತಿಯನ್ನು ಹೋಳಿ ಆಚರಿಸಬೇಕೆಂದು ಮಾರ್ಕೆಟ್ ಸರ್ಕಲ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್ ತುಳಸೀಗೇರಿ ಹೇಳಿದರು. ಬೆಳಗಾವಿಯಲ್ಲಿ ಮಾರ್ಕೆಟ್ ಠಾಣಾ ವ್ಯಾಪ್ತಿಯ ಸಾರ್ವಜನಿಕರ ಜೊತೆ ಹೋಳಿ ಹಬ್ಬ ಆಚರಣೆ ಕುರಿತಂತೆ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಮಾರ್ಕೆಟ್ ಸಿಪಿಐ ಮಲ್ಲಿಕಾರ್ಜುನ್ ತುಳಸೀಗೇರಿ ಮಾತನಾಡಿ, ಬೆಳಗಾವಿಯಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಶಾಂತ ರೀತಿಯಲ್ಲಿ ಹೋಳಿ …
Read More »ಹೋಳಿ ಹಬ್ಬ ಬಳಿಕ ಬಿಜೆಪಿಯಿಂದ ಉತ್ತರ ಪ್ರದೇಶ ಸರ್ಕಾರ ರಚನೆ ಸಾಧ್ಯತೆ
ಲಖನೌ: ಉತ್ತರ ಪ್ರದೇಶದ ಹಂಗಾಮಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾನುವಾರ ದೆಹಲಿಗೆ ಭೇಟಿ ನೀಡಲಿದ್ದು, ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆಂದು ವರದಿಗಳು ತಿಳಿಸಿವೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದು, ಹೋಳಿ ಹಬ್ಬದ ಬಳಿಕ ಸರ್ಕಾರ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಗೆಲುವಿನ …
Read More »