ಕಲಬುರಗಿ: PSI ಪರೀಕ್ಷಾ ಅಕ್ರಮ ಕುರಿತು ಸಿಐಡಿ ತನಿಖೆ ಚುರುಕುಗೊಳಿಸಿದ್ದು, ಬಂಧಿತ ಆರೋಪಿಗಳ ಸಂಖ್ಯೆ 40ರ ಗಡಿ ದಾಟಿದೆ. ಇಂದೂ ಸಹ ಬೆಂಗಳೂರಿನಲ್ಲಿ ಒರ್ವ ಆರೋಪಿಯನ್ನು ಬಂಧಿಸಲಾಗಿದೆ. ಕಲಬುರಗಿಯಲ್ಲಿ ಇನ್ನೊಬ್ಬ ಆರೋಪಿ ತಾನೇ ಠಾಣೆಗೆ ಹೋಗಿ ಶರಣಾಗಿದ್ದಾನೆ. ಇಲ್ಲಿನ ಮತ್ತೊಂದು MSI ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಬಯಲಾಗಿದೆ. ಈ ಕೇಂದ್ರದಲ್ಲಿ ಒಟ್ಟು 8 ಅಭ್ಯರ್ಥಿಗಳು ಪರೀಕ್ಷೆ ಪಾಸ್ ಮಾಡಿದ್ದರು. ಅವರಲ್ಲಿ ಓರ್ವ ಅಭ್ಯರ್ಥಿ ಪ್ರಭು ಬ್ಲೂಟೂತ್ ಬಳಸಿ ಅಕ್ರಮವಾಗಿ ಪರೀಕ್ಷೆ ಪಾಸ್ …
Read More »ಮೇ 10ರ ಒಳಗಡೆ ಸಿಎಂ ಬದಲಾವಣೆ ಆಗಲಿದ್ದಾರೆ:ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು: ಒಂದೊಂದು ರಾಜ್ಯದಲ್ಲಿ ಒಂದೊಂದು ಮಾದರಿಯನ್ನು ಜಾರಿ ಮಾಡುತ್ತಿರುವ ಬಿಜೆಪಿ ಹೈಕಮಾಂಡ್ ಚುನಾವಣೆ ಹತ್ತಿರ ಬರುತ್ತಿರುವ ಕರ್ನಾಟಕದಲ್ಲಿ ಯಾವ ಮಾದರಿಗೆ ಮಣೆ ಹಾಕುತ್ತದೆ? ಅಥವಾ ಕರ್ನಾಟಕದ್ದೇ ಮಾಡೆಲ್ ತರುತ್ತಾ ಎಂಬ ಕುತೂಹಲ ಎದ್ದಿದೆ. ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮೇ 10ರ ಒಳಗಡೆ ಸಿಎಂ ಬದಲಾವಣೆ ಆಗಲಿದ್ದಾರೆ ಎಂದು ಹೇಳಿದರೆ ಯಡಿಯೂರಪ್ಪ, ಅಶೋಕ್ ಸಿಎಂ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ ನಾಯಕರು ಏನೇ ಹೇಳಿದರೂ ಬಿಜೆಪಿ ಹೈಕಮಾಂಡ್ ಭಿನ್ನವಾಗಿ …
Read More »MES ಮುಖಂಡ ಶುಭಂ ಶಳಕೆಯಿಂದ DDPI ಕಚೇರಿಗೆ ನುಗ್ಗಿ ಪುಂಡಾಟಿಕೆ
ಬೆಳಗಾವಿ: ಗಡಿವಿವಾದ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಿದ್ದ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಯುವ ಘಟಕದ ಅಧ್ಯಕ್ಷ ಶುಭಂ ಶೆಳಕೆ ಇದೀಗ ಸರ್ಕಾರಿ ಕಚೇರಿಯಲ್ಲೂ ಪುಂಡಾಟ ಪ್ರದರ್ಶಿಸಿರುವುದು ಬೆಳಕಿಗೆ ಬಂದಿದೆ. ಮೂರು ದಿನಗಳ ಹಿಂದೆ ನಡೆದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಿಕ್ಷಣ ಇಲಾಖೆ ಸಿಆರ್‍ಪಿ ಕೌನ್ಸೆಲಿಂಗ್ ವೇಳೆ ಮರಾಠಿ ಶಾಲೆಗೆ ಕನ್ನಡಿಗ ಸಿಆರ್‍ಪಿ ನಿಯೋಜನೆ ಮಾಡಲಾಗಿದೆ. ಮರಾಠಿ ಶಿಕ್ಷಕರ ಮೇಲೆ ಕನ್ನಡ ಹೇರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ …
Read More »ಎಂಟು ತಿಂಗಳ ಹಿಂದೆಯಷ್ಟೇಮದುವೆಯಾಗಿದ್ದ ಯುವಕ ಬರ್ಬರವಾಗಿ ಕೊಲೆ
ಚಿಕ್ಕೋಡಿ: ಎಂಟು ತಿಂಗಳ ಹಿಂದೆಯಷ್ಟೇಮದುವೆಯಾಗಿದ್ದ ಯುವನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ- ಕಾತ್ರಾಳ ರಸ್ತೆ ನಡುವೆ ನಡೆದಿದೆ. ಚಿಂತಾಮಣಿ ಬಂಡಗರ (26) ಕೊಲೆಯಾದ ಯುವಕನಾಗಿದ್ದು, ತಡರಾತ್ರಿ 10 ಗಂಟೆ ಸುಮಾರಿಗೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಐನಾಪೂರದಿಂದ ಕಾತ್ರಾಳ ಕಡೆ ಬೈಕ್ ನಲ್ಲಿ ತೆರಳುವಾಗ ಹಿಂಬದಿಯಿಂದ ಲಾಂಗ್ ನಿಂದ ಹೊಡೆದು ಕೊಲೆ ಮಾಡಲಾಗಿದೆ. ಕೊಲೆಯಾದ ಯುವಕ ಚಿಂತಾಮಣಿ ಬಂಡಗರ, …
Read More »ಈದ್ ಉಲ್ ಫಿತ್ರ್’ ಹಬ್ಬ ಪೊಲೀಸ್ ರಿಂದ ಬಂದೋಬಸ್ತ್ : ಬೆಳಗಾವಿ
ಬೆಳಗಾವಿ: ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ‘ಈದ್ ಉಲ್ ಫಿತ್ರ್’ ಹಬ್ಬ, ಬಸವೇಶ್ವರ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ನಿಮಿತ್ತ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ ತಿಳಿಸಿದ್ದಾರೆ. ಈ ಬಗ್ಗೆ ಸೋಮವಾರ ಪ್ರಕಟಣೆ ನೀಡಿರುವ ಅವರು, ‘ಜಯಂತಿಗಳ ಹಿನ್ನೆಲೆಯಲ್ಲಿ ಪೂಜೆ, ಪ್ರಾರ್ಥನೆ, ಮೆರವಣಿಗೆಗಳು ಜರುಗಲಿರುವುದರಿಂದ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಮೂರು ದಿನದ ಸೂಕ್ತ ಬಂದೋಬಸ್ತ್ ಕರ್ತವ್ಯಕ್ಕೆ ರಾಜ್ಯದ ವಿವಿಧ ಜಿಲ್ಲೆ …
Read More »ನೆರೆಯ ರಾಜ್ಯಕ್ಕೆ ಕರ್ನಾಟಕ ತನ್ನ ಒಂದು ಇಂಚು ಭೂಮಿಯನ್ನು ಸಹ ಕೊಡುವುದಿಲ್ಲ
ಬೆಂಗಳೂರು: ಮಹಾರಾಷ್ಟ್ರದ ರಾಜಕಾರಣಿಗಳು ತಮ್ಮ ರಾಜಕೀಯ ಉಳಿವಿಗಾಗಿ ಭಾಷೆ ಅಥವಾ ಗಡಿ ವಿವಾದವನ್ನು ಬಳಸಿಕೊಳ್ಳಬೇಡಿ ಎಂದು ಒತ್ತಾಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನೆರೆಯ ರಾಜ್ಯಕ್ಕೆ ಕರ್ನಾಟಕ ತನ್ನ ಒಂದು ಇಂಚು ಭೂಮಿಯನ್ನು ಸಹ ಕೊಡುವುದಿಲ್ಲ ಎಂದು ಸೋಮವಾರ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರು ಕರ್ನಾಟಕದ ಗಡಿ ವಿಚಾರದ ಬಗ್ಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನಮ್ಮ ಒಂದಿಂಚೂ ಜಾಗವನ್ನೂ ಬಿಟ್ಟು ಕೊಡುವುದಿಲ್ಲ. ಮಹಾರಾಷ್ಟ್ರದಲ್ಲಿ …
Read More »ಅಮಿತ್ ಶಾ ಸಮ್ಮುಖದಲ್ಲಿ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದ ಬಸವರಾಜ ಹೊರಟ್ಟಿ
ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಅವರು ಇಂದು (ಮೇ 03) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಸೇರ್ಪಡೆಯಾಗಿ ಮಾತನಾಡಿದ ಬಸವರಾಜ ಹೊರಟ್ಟಿ, ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಬಿಜೆಪಿಗೆ ಬರುವುದು ಒಳ್ಳೆಯದು ಎಂದು ಅಮಿತ್ ಶಾ ಹೇಳಿದರು. ಜೆಡಿಎಸ್ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿದೆ. ಆದರೆ ಮತದಾರರ …
Read More »ಮೋದಿ ವಿದೇಶದಿಂದ ಹಿಂದಿರುಗಿದ ನಂತರ ಕರ್ನಾಟಕದಲ್ಲಿ ಸಿಎಂ ಬದಲಾವಣೆ, ಸಂಪುಟ ಪುನಾರಚನೆ: ಬಸನಗೌಡ ಯತ್ನಾಳ
ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸದಿಂದ ಹಿಂದಿರುಗಿದ ಬಳಿಕ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಸಚಿವ ಸಂಪುಟ ಪುನಾರಚನೆ ಬಗ್ಗೆ ಪಕ್ಷದ ವರಿಷ್ಠರು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಇನ್ನು ಎರಡು ದಿನಗಳಲ್ಲಿ ಮೋದಿ ವಿದೇಶ ಪ್ರವಾಸದಿಂದ ಹಿಂದಿರುಗಲಿದ್ದಾರೆ. ಅನಂತರ ಸಿಎಂ ಬದಲಾವಣೆ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುತ್ತಾರೆ. ಈಗಾಗಲೇ ಪಕ್ಷದ ಹೈಕಮಾಂಡ್ ಅಗತ್ಯ ಮಾಹಿತಿ ಪಡೆದುಕೊಂಡಿದೆ. ದೆಹಲಿಯಲ್ಲಿ …
Read More »ಬಿ.ಎಲ್. ಸಂತೋಷ್ ಹೇಳಿಕೆಗೆ ಟಾಂಗ್ ನೀಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ
ಶಿವಮೊಗ್ಗ: ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ ಎಂದು ಹೇಳುವ ಮೂಲಕ ಪರೋಕ್ಷವಾಗಿ ನಾಯಕತ್ವ ಬದಲಾವಣೆ ಮಾತುಗಳನ್ನು ಆಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿಕೆಗೆ ಟಾಂಗ್ ನೀಡಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಯಾವುದೇ ನಾಯಕತ್ವದ ಬದಲಾವಣೆ ಪ್ರಶ್ನೆ ಇಲ್ಲ ಎಂದು ತಿಳಿಸಿದ್ದಾರೆ. ಶಿವಮೊಗ್ಗದ ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ನಾಯಕತ್ವ ಬದಲಾವಣೆಯ ಯಾವುದೇ ಚರ್ಚೆಯಿಲ್ಲ, ಅಂತಹ ವಿಚಾರವಿದ್ದರೆ ನನಗೆ ಗೊತ್ತಾಗುತ್ತಿತ್ತು. ಈಗಿರುವ ಸಿಎಂ ಬಸವರಾಜ್ …
Read More »ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿಸುದ್ದಿ : ಅರ್ಜಿ ಸಲ್ಲಿಸಿದ 72 ಗಂಟೆಯೊಳಗೆ ಮನೆ ಬಾಗಿಲಿಗೆ ಬರಲಿದೆ ಪಿಂಚಣಿ!
ಬೆಂಗಳೂರು : ಪಿಂಚಣಿದಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದ್ದು, ಪಿಂಚಣಿ ಮಂಜೂರಾತಿಗೆ ‘ಹಲೋ ಕಂದಾಯ ಸಚಿವರೇ’ ಎಂಬ ಸಹಾಯವಾಣಿ ಆರಂಭಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಕಂದಾಯ ಸಚಿವ ಆರ್ ಅಶೋಕ್ ( Minister R Ashok ), ಬೆಂಗಳೂರಿನ ನಾಗರೀಕರಿಗೆ ವಿವಿಧ ಪಿಂಚಣಿ ಸೌಲಭ್ಯ ತಲುಪಿಸಲು ಇ-ಕಾಮರ್ಸ್ ಮೊರೆ ಹೋಗೋದಕ್ಕೆ ಚಿಂತನೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ಸ್ವಿಗ್ಗಿ, ಡಂಜೋ, ಜೊಮ್ಯಾಟೋ ಸಿಬ್ಬಂದಿ …
Read More »