Breaking News

ಪಾಕ್ ಮಹಿಳಾ​ ಏಜೆಂಟ್ ಜೊತೆ ಹನಿಟ್ರ್ಯಾಪ್​.. ಸಿಕ್ಕಬಿದ್ದ ಭಾರತೀಯ ಯೋಧ

ಜೈಪುರ್​(ರಾಜಸ್ಥಾನ): ಪಾಕಿಸ್ತಾನದ ಮಹಿಳಾ ಏಜೆಂಟ್​ ಜೊತೆ ಹನಿಟ್ರ್ಯಾಪ್​​ನಲ್ಲಿ ಸಿಲುಕಿಕೊಂಡು ಭಾರತೀಯ ಸೇನೆಯ ಗೌಪ್ಯ ಮಾಹಿತಿ ಮತ್ತು ಕಾರ್ಯತಂತ್ರದ ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ಯೋಧನೋರ್ವನ ಬಂಧನ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಗುಪ್ತಚರ ವಿಭಾಗದ ಡಿಜಿ ಉಮೇಶ್ ಮಿಶ್ರಾ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತೀಯ ಯೋಧ ಪ್ರದೀಪ್ ಕುಮಾರ್​ ಪಾಕಿಸ್ತಾನ ಗುಪ್ತಚರ ಇಲಾಖೆಯ ಮಹಿಳಾ ಏಜೆಂಟ್​ ಜೊತೆ ಸಂಪರ್ಕದಲ್ಲಿದ್ದರು. ಕಳೆದ ಕೆಲ ದಿನಗಳಿಂದ ಅವರ ಮೇಲೆ ತೀವ್ರ ನಿಗಾ ವಹಿಸಿ, ಇದೀಗ ಬಂಧನಕ್ಕೊಳಪಡಿಸಲಾಗಿದೆ. ಮಹಿಳಾ ಏಜೆಂಟ್ ಜೊತೆ …

Read More »

LPG ಗ್ರಾಹಕರಿಗೆ ಕೇಂದ್ರದಿಂದ ಗುಡ್ ನ್ಯೂಸ್; ಪ್ರತಿ ಸಿಲಿಂಡರ್ ಗೆ 200 ರೂ. ಸಹಾಯಧನ

ನವದೆಹಲಿ: ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ನಡುವ ಕೇಂದ್ರ ಸರ್ಕಾರ ಬಡವರಿಗೆ ಸಿಹಿ ಸುದ್ದಿ ನೀಡಿದೆ. ಪ್ರತಿ ಸಿಲಿಂಡರ್ ಖರೀದಿಗೆ 200 ರೂ. ಸಹಾಯಧನ ನೀಡಲಾಗುವುದು. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ 9 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಪ್ರತಿ ಗ್ಯಾಸ್ ಸಿಲಿಂಡರ್‌ ಗೆ (12 ಸಿಲಿಂಡರ್‌ ಗಳವರೆಗೆ) 200 ರೂ. ಸಬ್ಸಿಡಿ ನೀಡುತ್ತೇವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ. ಮಹತ್ವದ ಬೆಳವಣಿಗೆಯಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ …

Read More »

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ, ಡಿಸಿ ಮಂಜುನಾಥ್​ ವಿರುದ್ದವೂ ದೂರುದಾರ ಅರೋಪ

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹಬ್ಬಿದೆ ಎಂಬ ಪ್ರತತಿಪಕ್ಷಗಳ ಕೂಗಿನ ಮಧ್ಯೆ ರಾಜಧಾನಿ ಬೆಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಇಂದು ಶನಿವಾರ ದಾಳಿ ನಡೆಸಿದ್ದಾರೆ. ಜಿಲ್ಲಾಧಿಕಾರಿ ಜೆ. ಮಂಜುನಾಥ್ ಕಚೇರಿಯಲ್ಲಿ ಕಳೆದ ಅರ್ಧ ಗಂಟೆಯಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) 6 ಮಂದಿ ಅಧಿಕಾರಿಗಳ ತಂಡದಿಂದ ಡಿಸಿ ಕಚೇರಿ ಮೇಲೆ ದಾಳಿ ನಡೆದಿದೆ. ಡಿಸಿ ಕಚೇರಿಗೆ ಹಲವು ಹಿರಿಯ ಅಧಿಕಾರಿಗಳನ್ನ ಕರೆಸಿಕೊಂಡ ಎಸಿಬಿ ಅಧಿಕಾರಿಗಳು …

Read More »

ಸಂಭಾವ್ಯ ಪ್ರವಾಹ ಮತ್ತು ಅತೀವೃಷ್ಟಿ ನಿಯಂತ್ರಣ ಸಲುವಾಗಿ ಪೂರ್ವಭಾವಿ ಸಭೆ

ಗೋಕಾಕ: ನಿರಂತರ ಮಳೆ ಹಾಗೂ ಮುಂದೆ ಬರಬಹುದಾದ ಪ್ರವಾಹ ಭೀತಿಯನ್ನು ಎದುರಿಸುವ ಸಲುವಾಗಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ತಾಲೂಕಾ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪರಿಶಿಷ್ಟ ಪಂಗಡ ಕಲ್ಯಾಣಾಧಿಕಾರಿಗಳಾದ ಶ್ರೀ ಬಸವರಾಜ ಕುರಿಹುಲಿ ಅವರು ತಾಲೂಕಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು ತಹಶೀಲ್ದಾರ ಕಛೇರಿಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ನಿಯಂತ್ರಣದ ಬಗ್ಗೆ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಪಂಚಾಯತ ಮಟ್ಟದ ನೋಡಲ್ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳನ್ನು …

Read More »

ಬೆಳಗಾವಿಯಲ್ಲಿ ಪ್ರಮುಖ ಸಭೆ,ಬಾಲಚಂದ್ರ ಜಾರಕಿಹೊಳಿ ಭಾಗಿ,ರಮೇಶ್ ಜಾರಕಿಹೊಳಿ ಹಾಗೂ ಚುನಾವಣೆ ಬಗ್ಗೆ ಹೇಳಿದ್ದೇನು? ಕಂಪ್ಲೀಟ್ ಡೀಟೇಲ್ಸ್

ಬೆಳಗಾವಿ: ಇಂದು ಬೆಳಗಾವಿಯಲ್ಲಿ ಬಿಜೆಪಿಯ ಉನ್ನತ ಮಟ್ಟದ ಸಭೆ ಸಮಾರಂಭ ನಡೆಯಿತು, ಅಲ್ಲಿ ಬೆಳಗಾವಿಯ ಎಲ್ಲಾ ಜಿಲ್ಲಾ ನಾಯಕರು ಸೇರಿದಂತೆ ಅನೇಕ ನಾಯಕರು ಕೂಡ ಸೇರಿದ್ದರು ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೂಡ ಈ ಒಂದು ಸಭೆಗೆ ಹಾಜರಿದ್ದರು.   ಇನ್ನು ಪತ್ರಿಕಾ ಗೋಷ್ಠಿ ಶುರು ಆಗೊಕ್ಕು ಮುಂಚೆಯೇ ನ್ನಡೆದದ್ದೆ ಒಂದು ಪ್ರಮುಖ ಬೆಳವಣಿಗೆ, ಹೌದು ಅದೇನಪ್ಪಾ ಅಂದ್ರೆ ಬಾಲಚಂದ್ರ ಜಾರಕಿಹೊಳಿ ಯವರ ಸಭೆಗೆ ಆಗಮನ ವಿಶೇಷವಾಗಿ ಜಾರಕಿಹೊಳಿ …

Read More »

ಪಾಪದ ಕೊಡ ನಮ್ಮದಾ ನಿಮ್ಮದಾ? ಎಂದ ಸಿದ್ದರಾಮಯ್ಯ

ನವದೆಹಲಿ: ಪಾಪದ ಕೊಡ ನಮ್ಮದಾ ನಿಮ್ಮದಾ? ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಸಚಿವ ಆರ್.ಅಶೋಕ್ ಅವರಿಗೆ ತಿರುಗೇಟು ಕೊಟ್ಟರು. ವಿಧಾನ ಪರಿಷತ್ ಮತ್ತು ರಾಜ್ಯಸಭೆಗೆ ಟಿಕೆಟ್ ಹಂಚಿಕೆ ವಿಚಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಉಸ್ತುವಾರಿ ಸಚಿವ ರಣದೀಪ್ ಸುರ್ಜೆವಾಲ ಜೊತೆಗೆ ಸಭೆ ಮಾಡಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಇದ್ದರು. ಆದರೆ ಕಾಂಗ್ರೆಸ್ ನಾಯಕರು ಸೋನಿಯಾಗಾಂಧಿ ಅವರನ್ನು ಈ ವೇಳೆ ಭೇಟಿ ಮಾಡಿಲ್ಲ. ಈ …

Read More »

ಮೋಸಗಾರಿಕೆ ಮಾಡಿಕೊಂಡು ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿ ಖಾಲಿಯಾಗಿದೆ: ಕಾರಜೋಳ

ಬೆಳಗಾವಿ: ಮೋಸಗಾರಿಕೆ ಮಾಡಿಕೊಂಡು ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿ ಖಾಲಿಯಾಗಿದೆ ಎಂದು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಮೋಸಗಾರಿಕೆ ಮಾಡಿಕೊಂಡು ದೇಶದಲ್ಲಿ ಆಡಳಿತ ಮಾಡಿದೆ. ಜನರಿಗೆ ಬೇಕಾಗಿರುವುದು ಅಕ್ಕಿ ಅಲ್ಲ. ಸ್ವಾಭಿಮಾನದ ಬದುಕು. ಅದಕ್ಕೆ ಬೇಕಾದ ಉದ್ಯೋಗವನ್ನು ಕೊಡುವ ಕೆಲಸವನ್ನು ಮಾಡಬೇಕು. ಅದನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದರು.  ಬಿಜೆಪಿ ಭ್ರಷ್ಟಾಚಾರದ …

Read More »

ರೋಣ ತಾಲೂಕಿನ ಬೆಣ್ಣೆ ಹಳ್ಳ ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರು ಕಾರ್ಮಿಕರನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ದಳ ಯಶಸ್ವಿ

ಗದಗ: ಜಿಲ್ಲೆಯ ರೋಣ ತಾಲೂಕಿನ ಬೆಣ್ಣೆ ಹಳ್ಳ ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರು ಕಾರ್ಮಿಕರನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ದಳ ಯಶಸ್ವಿಯಾಗಿದೆ. ಯಾಸ ಹಡಗಲಿ ಗ್ರಾಮದ ಯಲ್ಲಪ್ಪ ರಾಘವಪುರ, ಅರುಣ್ ವಾಲ್ಮೀಕಿ, ಪರಶುರಾಮ ಮುತ್ತಣ್ಣವರ್ ಮತ್ತು ಗವಿಸಿದ್ದ ಕಲ್ಲಿ ಕಾರ್ಮಿಕರು ಪ್ರವಾಹದಲ್ಲಿ ಸಿಲುಕಿದ್ದರು. ಯಾಸ ಹಡಗಲಿ ಹಾಗೂ ಯಾವಗಲ್ ಸಂಪರ್ಕ ಕಲ್ಪಿಸುವ ಬೆಣ್ಣೆಹಳ್ಳ ಸೇತುವೆ ಕಾರ್ಯಭರದಿಂದ ಸಾಗಿತ್ತು. ಮಳೆಗಾಲ ಆರಂಭವಾದ್ದರಿಂದ ‘ಡೇ ಆಂಡ್ ನೈಟ್’ ಕೆಲಸ ಶುರುವಾಗಿತ್ತು. ಕೆಲಸ ಮಾಡ್ತಿದ್ದಂತಹ ಸಂದರ್ಭದಲ್ಲಿ ರಾತ್ರಿ 3 …

Read More »

ಲೈಂಗಿಕ ಕಾರ್ಯಕರ್ತರಿಗೂ ಆಧಾರ್ ನೀಡುವಂತೆ ಸುಪ್ರೀಂ ಸೂಚನೆ

ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡಿದ ಪ್ರಮಾಣಪತ್ರದ ಆಧಾರದ ಮೇಲೆ ಲೈಂಗಿಕ ಕಾರ್ಯಕರ್ತರಿಗೆ ಆಧಾರ್ ಕಾರ್ಡ್ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ಅವರಿದ್ದ ಪೀಠವು, ಲೈಂಗಿಕ ಕಾರ್ಯಕರ್ತರ ಲಿಂಗದ ಗೌಪ್ಯತೆಯನ್ನು ಉಲ್ಲಂಘಿಸಬಾರದು. ಅವರ ಗುರುತನ್ನು ಬಹಿರಂಗಪಡಿಸಬಾರದು. ಪ್ರತಿಯೊಬ್ಬ ವ್ಯಕ್ತಿಯನ್ನೂ ಗೌರವದಿಂದ ಕಾಣಬೇಕಿರುವುದು ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದೆ ಎಂದು ಹೇಳಿದೆ. ಯುಐಡಿಎಐ ಪ್ರಮಾಣಪತ್ರದ ಆಧಾರದ ಮೇಲೆ …

Read More »

ದಿಗ್ಗಜ ನಟರ ವಿರುದ್ಧ ದೂರು ದಾಖಲು

ಸಮಾಜಕ್ಕೆ ಹಾನಿ ಮಾಡುವಂತಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟ, ನಟಿಯರು ಹಾಗೂ ಸಿಲೆಬ್ರಿಟಿಗಳ ಬಗ್ಗೆ ಅಲ್ಲಲ್ಲಿ ವಿರೋಧಗಳು ವ್ಯಕ್ತವಾಗುತ್ತಿವೆ. ಕನ್ನಡ ಸಿನಿಮಾ ರಂಗದಲ್ಲಿ ಹಣಕ್ಕಾಗಿ ಆನ್‌ಲೈನ್ ಆಟಗಳಿಗೆ ರೂಪದರ್ಶಿಯಾಗಿ ಕೆಲಸ ಮಾಡುತ್ತಿದ್ದ ಕಲಾವಿದರ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಈಗಲೂ ಅದು ಮುಂದುವರಿದಿದೆ.  ಹಾಗೆಯೇ ಈ ವಿರೋಧದ ಅಲೆಯು ಬಾಲಿವುಡ್‌ನಲ್ಲೂ ಮುಂದುವರಿದಿದೆ. ಆನ್‌ಲೈನ್ ಜೂಜು, ತಂಬಾಕು ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟರ ಮೇಲೆ ಮುಂಬೈನಲ್ಲಿ ದೂರು ಕೊಟ್ಟಿದ್ದು, …

Read More »