ರಾಮನಗರ: ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಮಾಗಡಿಯ ಖಾಸಗಿ ಶಾಲೆಯ ಕ್ಲರ್ಕ್ನನ್ನು ಬಂಧಿಸಿದ್ದಾರೆ. ಮಾಗಡಿಯ ಕೆಂಪೇಗೌಡ ಪ್ರೌಢಶಾಲೆಯ ಕ್ಲರ್ಕ್ ರಂಗೇಗೌಡ ಬಂಧಿತ ಆರೋಪಿ. ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ವಿಜ್ಞಾನ ಪತ್ರಿಕೆಯು ವಾಟ್ಸಪ್ ಮೂಲಕ ಸೋರಿಕೆ ಆಗಿತ್ತು. ಬೆಳಗ್ಗೆ 10.30ಕ್ಕೆ ಪರೀಕ್ಷೆ ಆರಂಭವಾಗಿತ್ತು. ಅದೇ ಸಮಯದಲ್ಲಿ ಪ್ರಶ್ನೆ ಪತ್ರಿಕೆಯನ್ನು ಹೆಡ್ ಮಾಸ್ಟರ್ ಹಾಗೂ ಶಿಕ್ಷಕರಿರುವ ಗ್ರೂಪ್ನಲ್ಲೇ ಶೇರ್ ಮಾಡಲಾಗಿತ್ತು. ಇದಲ್ಲದೇ ಕೆಂಪೇಗೌಡ ಶಾಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತಮ …
Read More »ಬಡವರಿಗಲ್ಲ, ರೈಸ್ ಮಿಲ್ಗಳಿಗೆ ಸೇರುತ್ತಿದೆ ‘ಅನ್ನಭಾಗ್ಯ’ ಅಕ್ಕಿ
ಕೋಲಾರ: ಬಡವರ ಹಸಿವು ನೀಗಿಸಲು ಸರ್ಕಾರ ಕೊಡುತ್ತಿರುವ ಅನ್ನಭಾಗ್ಯ ಯೋಜನೆಯ ಅಕ್ಕಿ ಜಿಲ್ಲೆಯ ಬಂಗಾರಪೇಟೆಯ ಕಾಳಸಂತೆಯಲ್ಲಿ ರಾಜಾರೋಷವಾಗಿ ಮಾರಾಟವಾಗುತ್ತಿದೆ. ಮಾರಾಟವಾದ ಅಕ್ಕಿಯು ಅಕ್ರಮವಾಗಿ 15ಕ್ಕೂ ಹೆಚ್ಚು ರೈಸ್ ಮಿಲ್ಗಳನ್ನು ಸೇರುತ್ತಿವೆ. ಹಲವು ಬಾರಿ ದಾಳಿ ನಡೆದರೂ ದಂಧೆ ಮಾತ್ರ ನಿಂತಿಲ್ಲ. ಈ ಹಿಂದೆ ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ 2017ರಲ್ಲಿ ಟನ್ಗಟ್ಟಲೆ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಸೀಜ್ ಮಾಡಿದ್ದರು. ಕಳೆದ ವರ್ಷ ಪಿಆರ್ಎಸ್ ಆಗ್ರೋಟೆಕ್ ರೈಸ್ ಮಿಲ್ ಮೇಲೆ ದಾಳಿ …
Read More »ಬೆಳಗಾವಿಯಲ್ಲಿ ಮಾವು ಮೇಳ ಮೇ 26ರಿಂದ
ಬೆಳಗಾವಿ: ತೋಟಗಾರಿಕೆ ಇಲಾಖೆಯಿಂದ ರೈತರಿಂದ ನೇರವಾಗಿ ಗ್ರಾಹಕರಿಗೆ ಗುಣಮಟ್ಟದ ಮಾವಿನ ಹಣ್ಣುಗಳನ್ನು ಯೋಗ್ಯ ದರದಲ್ಲಿ ತಲುಪಿಸುವ ಉದ್ದೇಶದಿಂದ ನಗರದ ಕ್ಲಬ್ ರಸ್ತೆಯಲ್ಲಿರುವ ಹ್ಯೂಮ್ ಪಾರ್ಕ್ನಲ್ಲಿ ಮೇ 26ರಿಂದ ಮೇ 29ರವರೆಗೆ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ. ‘ಜಿಲ್ಲೆಯ ಮಾವು ಬೆಳೆಗಾರರು ಈ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ತಮ್ಮ ಉತ್ಪನ್ನವನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ಯೋಗ್ಯ ಬೆಲೆಗೆ ಮಾರಬಹುದು. ವಿಷೇಶವಾಗಿ ಈ ಬಾರಿ ಬೆಳಗಾವಿ, ಧಾರವಾಡ ಹಾಗೂ ರತ್ನಗಿರಿ ರೈತರಿಂದ …
Read More »ಇಂಡೊ-ಅಮೆರಿಕನ್ ಪ್ರೆಸ್ ಕ್ಲಬ್ನಿಂದ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಅವರಿಗೆ ‘ಜೀವಮಾನ ಸಾಧನೆ’ ಪ್ರಶಸ್ತಿ ನೀಡಿ ಗೌರವಿ
ಬೆಳಗಾವಿ: ನ್ಯೂಯಾರ್ಕ್ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಮೇ 21ರಂದು ನಡೆದ ಸಮಾರಂಭದಲ್ಲಿ ಅಮೆರಿಕದ ಇಂಡೊ-ಅಮೆರಿಕನ್ ಪ್ರೆಸ್ ಕ್ಲಬ್ನಿಂದ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರಿಗೆ ‘ಜೀವಮಾನ ಸಾಧನೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಗ್ರಾಮೀಣ ಜನರಿಗೆ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ ಒದಗಿಸುತ್ತಿರುವುದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಭಾರತೀಯ ರಾಯಭಾರಿ ಕಚೇರಿಯ ಕನ್ಸೂಲ್ ಜನರಲ್ ರಣಧೀರ ಜೈಸ್ವಾಲ್ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಭಾರತೀಯ …
Read More »ದುಬಾರಿಯಾಗಲಿವೆ ಎಲ್ಲಾ ಮೊಬೈಲ್ ರೀಚಾರ್ಜ್ ಪ್ಲಾನ್ಗಳು
ನವದೆಹಲಿ, ಮೇ 24: ಕಳೆದ ವರ್ಷವಷ್ಟೇ ಶೇ. 25ರವರೆಗೂ ರೀಚಾರ್ಜ್ ಪ್ಲಾನ್ ದರಗಳನ್ನು ಏರಿಸಿದ್ದ ಟೆಲಿಕಾಂ ಆಪರೇಟರ್ಗಳು ಈಗ ಒಂದೇ ವರ್ಷದ ಅಂತರದಲ್ಲಿ ಮತ್ತೊಮ್ಮೆ ಭಾರೀ ಏರಿಕೆಗೆ ಮುಂದಾಗುತ್ತಿವೆ. ಮುಂದಿನ ದಿನಗಳಲ್ಲಿ ಮೊಬೈಲ್ ರೀಚಾರ್ಜ್ ಪ್ಲಾನ್ಗಳು ಶೇ. 10-12ರಷ್ಟು ದುಬಾರಿಯಾಗಲಿವೆ. ನವೆಂಬರ್ನಲ್ಲಿ ಬರಲಿರುವ ದೀಪಾವಳಿ ಹಬ್ಬದಷ್ಟರಲ್ಲಿ ತಮ್ಮ ಪ್ರೀಪೇಯ್ಡ್ ದರಗಳನ್ನು ಏರಿಸಲು ಭಾರ್ತಿ ಏರ್ಟೆಲ್, ರಿಲಾಯನ್ಸ್ ಜಿಯೋ ಮತ್ತು ವೊಡಫೋನ್ ಐಡಿಯಾ ಸಂಸ್ಥೆಗಳು ನಿರ್ಧರಿಸಿವೆ. 2021ರ ನವೆಂಬರ್ ತಿಂಗಳಲ್ಲೇ ಈ …
Read More »ಕಮಿಷನ್ ಆರೋಪ: ಮಂತ್ರಿಯನ್ನೇ ವಜಾಗೊಳಿಸಿದ ಪಂಜಾಬ್ ಸಿಎಂ! ದೇಶವೇ ಬೆರಗು
ಪಂಜಾಬ್ನಲ್ಲಿ ಒಂದು ಅಪರೂಪದ ಬೆಳವಣಿಗೆಯಾಗಿದೆ. ಕಮಿಷನ್ ತಗೆದುಕೊಂಡ ಆರೋಪದ ಮೇಲೆ ಅಲ್ಲಿನ ಸಚಿವರೊಬ್ಬರನ್ನ ವಜಾಗೊಳಿಸಲಾಗಿದೆ. ವಿಶೇಷ ಅಂದ್ರೆ ಖುದ್ದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮನ್ ಈ ಕ್ರಮ ಕೈಗೊಂಡಿದ್ದು ಆರೋಪಿ ಮಂತ್ರಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಂದ್ಹಾಗೆ ಈ ರೀತಿ ಕಮಿಷನ್ ಕೇಳಿ ತಮ್ಮ ಸರ್ಕಾರದಿಂದಲೇ ವಜಾಗೊಂಡವರು ಪಂಜಾಬ್ನ ಆರೋಗ್ಯ ಮಂತ್ರಿ ವಿಜಯ್ ಸಿಂಗ್ಲಾ. ಟೆಂಡರ್ನಲ್ಲಿ ಒಂದು ಪರ್ಸೆಂಟ್ ಕಮಿಷನ್ ಕೇಳಿದ್ರು ಅಂತ ಅಲ್ಲಿನ ಅಧಿಕಾರಿಗಳು ಹಿಂದಿನ ವಾರವಷ್ಟೇ ಸಿಎಂ …
Read More »ಯಡಿಯೂರಪ್ಪ ಮತ್ತು ಪಕ್ಷದ ನಡುವಿನ ಶೀತಲ ಸಮರ ಮತ್ತಷ್ಟು ಬಿಗಡಾಯಿಸುವಂತೆ ಮಾಡುವ ಸಾಧ್ಯತೆ.?
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಿದ್ದು, ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವಿಜಯೇಂದ್ರಗೆ ಟಿಕೆಟ್ ನಿರಾಕರಣೆ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್ ಕುಟುಂಬ ರಾಜಕಾರಣಕ್ಕೆ ಬೆಂಬಲ ನೀಡುವುದಿಲ್ಲ ಎನ್ನುವ ತನ್ನ ನಿರ್ಧಾರವನ್ನು ಮತ್ತೆ ಪ್ರಕಟಿಸುವ ಕೆಲಸ ಮಾಡಿದೆ. ಹಲವು ರೀತಿ ವ್ಯಾಖ್ಯಾನ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಅಧಿಕೃತವಾಗಿ …
Read More »ಮೇ 25ಕ್ಕೆ ಭಾರತ್ ಬಂದ್: ಬಂದ್ಗೆ ಕರೆ !
ಅದೇ ವೇಳೆ ಚುನಾವಣಾ ಸಮಯದಲ್ಲಿ ಇವಿಎಂ ಬಳಕೆ ಮತ್ತು ಖಾಸಗಿ ವಲಯಗಳಲ್ಲಿ ಎಸ್ಸಿ/ಎಸ್ಟಿ/ಒಬಿಸಿಗೆ ಮೀಸಲಾತಿ ವಿಚಾರದ ವಿರುದ್ಧವೂ ಬಿಎಎಂಸಿಇಎಫ್ ಪ್ರತಿಭಟನೆ ನಡೆಸುತ್ತಿದೆ.ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನೌಕರರ ಒಕ್ಕೂಟ (BAMCEF ) ಮೇ 25 ರಂದು ಭಾರತ್ ಬಂದ್ಗೆ ( Bharat Bandh ) ಕರೆ ನೀಡಿದೆ. ಇತರೆ ಹಿಂದುಳಿದ ವರ್ಗಗಳ (OBC) ಜಾತಿ ಆಧಾರಿತ ಜನಗಣತಿಯನ್ನು ಕೇಂದ್ರ ಸರ್ಕಾರ ನಡೆಸದಿರುವುದನ್ನು ವಿರೋಧಿಸಿ ಫೆಡರೇಶನ್ ಕ್ರಮಕ್ಕೆ ಒತ್ತಾಯಿಸಿದೆ. ಅದೇ ವೇಳೆ ಚುನಾವಣಾ …
Read More »ಮಕ್ಕಳ ಅಕ್ರಮ ಸಾಗಾಟ ಪ್ರಕರಣ: ಆರೋಪಿ ಸ್ಟಾಪ್ ನರ್ಸ್ ಅರೆಸ್ಟ್,
ವಿಜಯಪುರ: ಮಕ್ಕಳ ಅಕ್ರಮ ( Illegal ) ಸಾಗಾಟ ( Trafficking ) ಪ್ರಕರಣ ಪತ್ತೆ ಸಂಬಂಧ ಓರ್ವ ಮಹಿಳಾ ಆರೋಗ್ಯ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಡಚಣ ತಾಲೂಕಿನ ಜಿಗಜಿವಣಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಜಯಮಾಲಾ ಬಂಧಿತ ಆರೋಪಿಯಾಗಿದ್ದಾಳೆ. ಈಕೆ ವಿಜಯಪುರ ನಗರದ ಅಥಣಿ ಗಲ್ಲಿ ವಾಸಿಯಾಗಿದ್ದಾಳೆ. ಐದುಮಕ್ಕಳ ಸಾಕಾಣಿಕೆಹಾಗೂ ಸಾಗಾಟ ಮಾಡಿದ್ದ ಆರೋಪದ ಮೇಲೆ ವಿಜಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ತಾಯಿಯಿಂದ ಪರಿತ್ಯಕವಾದ, …
Read More »ಪಂಜಾಬ್ ಆರೋಗ್ಯ ಸಚಿವ: ಸಂಪುಟದಿಂದ ವಜಾ, ಅರೆಸ್ಟ್!
ಭ್ರಷ್ಟಾಚಾರದ ಆರೋಪದ ಮೇಲೆ ಆರೋಗ್ಯ ಸಚಿವ ವಿಜಯ್ ಸಿಂಘ್ಲಾ ಅವರನ್ನು ಪಂಜಾಬ್ ಮುಖ್ಯಮಂತ್ರಿ ಭಗವತ್ ಮನ್ ವಜಾಗೊಳಿಸಿದ ಬೆನ್ನಲ್ಲೇ ಪೊಲೀಸರು ಬಂಧಿಸಿದ್ದಾರೆ. ಪಂಜಾಬ್ ನಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದ ಆಮ್ ಆದ್ಮಿ ೨ ತಿಂಗಳು ಪೂರೈಸುವ ಮುನ್ನವೇ ಭ್ರಷ್ಟಾಚಾರ ಆರೋಪದಿಂದ ತತ್ತರಿಸಿದ್ದು, ೨ ತಿಂಗಳಲ್ಲೇ ಮೊದಲ ವಿಕೆಟ್ ಪತನಗೊಂಡಂತಾಗಿದೆ. ಗುತ್ತಿಗೆದಾರರಿಂದ ಶೇ.೧ರಷ್ಟು ಲಂಚ ಕೇಳಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಆರೋಗ್ಯ ಸಚಿವ ವಿಜಯ್ ಸಿಂಘ್ಲಾ ಅವರನ್ನು …
Read More »