ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಬಹುಪಾಲು ಕಡೆಗಳಲ್ಲಿ ಸೋಮವಾರ ಧಾರಾಕಾರ ಮಳೆ ಸುರಿಯಿತು. ಬೆಳಗಾವಿ ನಗರದಲ್ಲಿ ಭಾನುವಾರ ಸಾಧಾರಣ ಮಳೆ ಸುರಿದಿತ್ತು. ಸೋಮವಾರ ಬೆಳಿಗ್ಗೆಯಿಂದ ತುಸು ಬಿರುಸು ಪಡೆಯಿತು. ತಾಲ್ಲೂಕಿನಲ್ಲಿ ಕೂಡ ಮಧ್ಯಾಹ್ನ 12ರಿಂದ ಧಾರಾಕಾರವಾಗಿ ಸುರಿಯುತ್ತಿದೆ. ಇದರಿಂದ ಶಾಲೆ, ಕಾಲೇಜಿಗೆ, ಕಚೇರಿ, ಹೊಲಗಳಿಗೆ ತೆರಳುವವರೆಲ್ಲ ರೇನ್ ಕೋರ್ಟ್, ಕೊಡೆಗಳ ಆಶ್ರಯ ಪಡೆದರು. ಇನ್ನೊಂದೆಡೆ ಮಲಪ್ರಭಾ, ಘಟಪ್ರಭಾ ಜಲಾನಯನ ಪ್ರದೇಶದಲ್ಲಿ ಕೂಡ ಉತ್ತಮ ಮಳೆಯಾದ ಕಾರಣ ಒಳಹರಿವು ಹೆಚ್ಚಾಗಿದೆ. …
Read More »ಯಲ್ಲಮ್ಮನಗುಡ್ಡಕ್ಕೆ ಹರಿದುಬರುತ್ತಿದೆ ಭಕ್ತರ ದಂಡು
ಉಗರಗೋಳ: ಸವದತ್ತಿ ತಾಲ್ಲೂಕಿನ ಉಗರಗೋಳದ ಯಲ್ಲಮ್ಮನ ಗುಡ್ಡಕ್ಕೆ ಭಕ್ತರ ದಂಡೇ ಹರಿದುಬರುತ್ತಿದ್ದು, ಮೂರು ತಿಂಗಳಲ್ಲಿ ₹ 2.15 ಕೋಟಿ ದೇಣಿಗೆ ಸಂಗ್ರಹವಾಗಿದೆ. ಯಲ್ಲಮ್ಮನ ಗುಡ್ಡದಲ್ಲಿ ಸೋಮವಾರ ಎರಡನೇ ಹಂತದ ಹುಂಡಿ ಎಣಿಕೆ ನಡೆಯಿತು. ₹ 33.44 ಲಕ್ಷ ನಗದು, ₹ 5.11 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹ 62,390 ಮೌಲ್ಯದ ಬೆಳ್ಳಿ ಆಭರಣಗಳು ಸಂಗ್ರಹವಾಗಿವೆ. ಕೊರೂನಾ ನಂತರ ಆದಾಯ ಉತ್ತಮ: ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ …
Read More »ನಾಳೆ ಹುಬ್ಬಳ್ಳಿಯಲ್ಲಿ ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ
ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಚಂದ್ರಶೇಖರ ಗುರೂಜಿ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಗುರೂಜಿ ಆತ್ಮೀಯ ಮೋಹನ ಲಿಂಬಿಕಾಯಿ ಹೇಳಿಕೆ ನೀಡಿದ್ದಾರೆ. ಹೌದು ದುಷ್ಕರ್ಮಿಗಳಿಂದ ಚಾಕುವಿನಿಂದ ಇರಿದು ಹತ್ಯೆ ಆಗಿರುವ ಚಂದ್ರಶೇಖರ ಗುರೂಜಿ ಅಂತ್ಯ ಸಂಸ್ಕಾರದ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಮೋಹನ ಲಿಂಬಿಕಾಯಿ ಗೂರೂಜಿಯವರಿಗೆ ಬಹಳಷ್ಟು ಅನುಯಾಯಿಗಳು ಇದ್ದಾರೆ. ದೇಶದ ಬೇರೆ ಬೇರೆ ಕಡೆಗಳಲ್ಲಿ ಇದ್ದಾರೆ. ಕುಟುಂಬದವರೊಂದಿಗೆ ಚರ್ಚಿಸಿದ್ದೇವೆ. ನಾಳೆ ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ. ಹುಬ್ಬಳ್ಳಿಯ …
Read More »ಸರ್ಕಾರಿ ಶಾಲೆ ಬಿಸಿಯೂಟ ಸೇವಿಸಿ ಕಳಪೆ ಮಟ್ಟದ ಆಹಾರ ಇದೆ ಎಂದು B.E.O.ಗೆ ತರಾಟೆಗೆ ತೆಗೆದುಕೊಂಡ ಅಭಯ ಪಾಟೀಲ
ಸರ್ಕಾರಿ ಶಾಲಾ ಮಕ್ಕಳ ಜೊತೆಗೆ ಬಿಸಿಯೂಟ ಸೇವಿಸುವ ಮೂಲಕ ಬೆಳಗಾವಿಯ ದಕ್ಷಿಣ ಶಾಸಕ ಅಭಯ್ ಪಾಟೀಲ್ ತಮ್ಮ ಸರಳತೆ ಮೆರೆದಿದ್ದಾರೆ. ಹೌದು ಶಾಹಪುರದ ಅಳವಾನ್ ಗಲ್ಲಿಯ ಸರ್ಕಾರಿ ಶಾಲೆಗೆ ಇಂದು ದಿಢೀರ್ ಅಂತಾ ಭೇಟಿ ನೀಡಿದ ಶಾಸಕ ಅಭಯ್ ಪಾಟೀಲ್ ಮಧ್ಯಾಹ್ನದ ಬಿಸಿಯೂಟವನ್ನು ಪರೀಕ್ಷಿಸಿದರು. ಇದೇ ವೇಳೆ ಮಕ್ಕಳ ಜೊತೆಗೆ ಕುಳಿತುಕೊಂಡು ಬಿಸಿಯೂಟ ಸವಿದ ಅಭಯ್ ಪಾಟೀಲ್, ಗುಣಮಟ್ಟದ ಬೇಳೆ ಮತ್ತು ಅಕ್ಕಿಯನ್ನು ಊಟದಲ್ಲಿ ಯಾಕೆ ಬಳಸುತ್ತಿಲ್ಲ ಎಂದು ಬಿಇಓ …
Read More »ಬೆಳಗಾವಿಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ ಡ್ರೈನೇಜ್ ನೀರು ರಸ್ತೆ ಮೇಲೆ
ಬೆಳಗಾವಿಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ ಅವಾಂತರವನ್ನೇ ಸೃಷ್ಟಿ ಮಾಡಿದೆ. ಚರಂಡಿ ನೀರು ಓವರ್ ಫ್ಲೋ ಆಗಿ ಡ್ರೈನೇಜ್ ನೀರು ರಸ್ತೆ ಮೇಲೆ ಹರಿದಿದೆ. ಹೌದು ಬೆಳಗಾವಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಳೆರಾಯ ಅಕ್ಷರಶಃ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದ ಬೆಳಗಾವಿಯ ಹಳೆ ಪಿಬಿ ರೋಡ್‍ನಲ್ಲಿ ಚರಂಡಿಯಲ್ಲಿ ಮಳೆ ನೀರು ಹೆಚ್ಚಾಗಿ ಓವರ್ ಫ್ಲೋ ಆಗಿ ಡ್ರೈನೇಜ್ ನೀರು ರಸ್ತೆಯ ಮೇಲೆ ಹರಿಯುತ್ತಿದೆ. …
Read More »ಸ್ವ ಸಹಾಯ ಗುಂಪುಗಳಿಗೆ ಹಣಕಾಸು ನೆರವು; ಬೆಳಗಾವಿಯಲ್ಲಿ ಹೀಗೆ ಅರ್ಜಿ ಸಲ್ಲಿಸಿ
ಬೆಳಗಾವಿ: ಸ್ವ ಸಹಾಯ ಸಂಘಗಳ ಅಭಿವೃದ್ಧಿಗೆ ಪೂರಕವಾಗಿ ಹಣಕಾಸಿನ ನೆರವು ನೀಡಲು ಸರಕಾರವು ಮುಂದಾಗಿದೆ. ಯಾವುದೇ ಮಹಿಳಾ ಅಥವಾ ಪುರುಷ ಸದಸ್ಯರುಗಳುಳ್ಳ ಸ್ವ ಸಹಾಯ ಸಂಘಗಳು (Self Help Groups) ಧನ ಸಹಾಯ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. 2022-23 ನೇ ಸಾಲಿನ ದೀನ್ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿಯಲ್ಲಿ ಸ್ವ ಸಹಾಯ ಗುಂಪುಗಳ ಸಾಮಾಜಿಕ ಕ್ರೋಢೀಕರಣ ಮತ್ತು ಸಾಂಸ್ಥಿಕ ಅಭಿವೃದ್ಧಿ ಉಪಘಟಕದಡಿ ಬೆಳಗಾವಿಯ (Belagavi News) …
Read More »ಸರ್ಕಾರಿ ಕಾಮಗಾರಿಗೆ ರೈತನ ಜಮೀನಿನ ಮಣ್ಣು ಬಳಕೆ; ಅಕ್ರಮದ ವಿರುದ್ಧ ಕ್ರಮಕ್ಕೆ ಆಗ್ರಹ
ಧಾರವಾಡ : ಇಂದಿರಮ್ಮನ ಕೆರೆ ಧಾರವಾಡ ಜಿಲ್ಲೆಯ ಬೃಹತ್ ಕೆರೆಗಳಲ್ಲಿ (Dharwad Lakes) ಒಂದಾಗಿರುವ ಕೆರೆ. ಜಿಲ್ಲೆಯ ಅಳ್ನಾವರ ತಾಲೂಕಿನ ಹುಲಿಕೆರೆ ಗ್ರಾಮದ (Hulikere Village) ಈ ಕೆರೆ ಕಳೆದ ಎರಡು ವರ್ಷಗಳ ಹಿಂದೆ ಸುರಿದ ಬಾರಿ ಮಳೆಯಿಂದ ಕೆರೆಯ ತಡೆ ಗೋಡೆ ಒಡೆದಿತ್ತು. ಇದರ ತಡೆಗೋಡೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಕೋಟಿ ಕೋಟಿ ಹಣ ಬಿಡುಗಡೆ ಸಹ ಮಾಡಿದೆ. ಕಾಮಗಾರಿಯೂ ಸಹ ಭರದಿಂದ ಸಾಗಿದೆ. …
Read More »ಜಮೀರ್ ಫ್ಲ್ಯಾಟ್ನಲ್ಲಿ 24 ಜೀವಂತ ಗುಂಡುಗಳು ಪತ್ತೆ;
ಬೆಂಗಳೂರು (ಜು.07): ಎಸಿಬಿ ಅಧಿಕಾರಿಗಳು ಸಿಲ್ವರ್ ಓಕ್ ಅಪಾರ್ಟ್ಮೆಂಟ್ನ ಫ್ಲ್ಯಾಟ್ ಮೇಲೆ ದಾಳಿ ನಡೆಸಿದ್ಧಾರೆ. ಮಲ್ಯ ರಸ್ತೆಯ UB ಸಿಟಿ ಎದುರಿನ ಫ್ಲ್ಯಾಟ್ (Near UB City Flat) ಮೇಲೆ ರೇಡ್ ನಡೆಸಿದ್ದಾರೆ. ನಾಲ್ಕನೇ ಪ್ಲೋರ್ನ 402ನೇ ಫ್ಲ್ಯಾಟ್ನಲ್ಲಿ ಪರಿಶೀಲನೆ ನಡೆದಿದೆ. ಮನೆ, ಟ್ರಾವೆಲ್ಸ್ ಕಚೇರಿ, ಫ್ಲ್ಯಾಟ್ನಲ್ಲಿ ಅಧಿಕಾರಿಗಳ ಶೋಧ ನಡೆಸಿದ್ದಾರೆ. ಫ್ಲ್ಯಾಟ್ನಲ್ಲಿ 24 ಜೀವಂತ ಗುಂಡು ಪತ್ತೆಯಾಗಿದೆ. ಜಮೀರ್ ಅಹಮ್ಮದ್ (Zameer Ahmed) ಪಿಸ್ತೂಲ್ ಪರವಾನಗಿ ಹೊಂದಿದ್ದಾರೆ. ಹಾಗಾಗಿ ಇದೇ …
Read More »ವಿಡಿಯೋಗಳನ್ನು ಮಾಡಿದ್ದು ನಾನೇ; ತಪ್ಪೊಪ್ಪಿಕೊಂಡ ಕಾಮುಕ ಶಿಕ್ಷಕ
ಬಂಧಿತನಾಗಿರುವ ಕೊಪ್ಪಳ ಜಿಲ್ಲೆಯ ಕಾರಟಗಿಯ (Karatagi, koppala) ಕಾಮುಕ ಶಿಕ್ಷಕ (Teacher) ಮಹಮ್ಮದ್ ಅಜರುದ್ದೀನ್ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ವಿಡಿಯೋ ವೈರಲ್ (Viral Video) ಬೆನ್ನಲ್ಲೇ ಶಿಕ್ಷಕ ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡು ಗೋವಾದಲ್ಲಿ ತಲೆಮರೆಸಿಕೊಂಡಿದ್ದನು. ಸದ್ಯ ಆರೋಪಿ ಶಿಕ್ಷಕ ನ್ಯಾಯಾಂಗ ಬಂಧನದಲ್ಲಿದ್ದಾನೆ (Judicial Cutody). ಗೊರೇಬಾಳ ವಲಯ ಶಿಕ್ಷಣ ಸಂಯೋಜಕರ ವಿಚಾರಣೆಯ ವೇಳೆ ಶಿಕ್ಷಕ ಮಹಮ್ಮದ್ ಅಜರುದ್ದೀನ್ ತಪ್ಪೊಪ್ಪಿಕೊಂಡಿದ್ದಾನೆ. ಮೂರು ವರ್ಷದ ಹಿಂದೆ ನನ್ನ ಮನೆಯಲ್ಲಿ ಮಹಿಳೆಯೊಂದಿಗಿನ ವಿಡಿಯೋ …
Read More »ಗುಡ್ಡ ಕುಸಿತ- ಕರ್ನಾಟಕ, ಗೋವಾ ಸಂಪರ್ಕಿಸುವ ರಸ್ತೆ 5 ಗಂಟೆ ಬಂದ್
ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರಕ್ಕೆ ಗೋವಾ ಸಮೀಪದ ಮಾಲಶೇಜ್ ಘಾಟ್‍ನಲ್ಲಿ ಗುಡ್ಡ ಕುಸಿದು, ಕರ್ನಾಟಕ ಸಂಪರ್ಕಿಸುವ ರಸ್ತೆ 5 ಘಂಟೆಗಳ ಕಾಲ ಬಂದ್ ಆಗಿತ್ತು. ಬಳಿಕ ಗೋವಾದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ 5 ಗಂಟೆಗಳ ಕಾರ್ಯಾಚರಣೆ ನಡೆಸಿ ರಸ್ತೆ ಸುಗಮಗೊಳಿಸಿದ್ದಾರೆ. ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ ಮಾಲಶೇಜ್ ಘಾಟ್ ಗೋವಾ ಸಮೀಪದಲ್ಲಿದೆ. ಪಶ್ಚಿಮ ಘಟ್ಟದಲ್ಲಿ ಮಳೆಯ ಆರ್ಭಟಕ್ಕೆ ಮಾಲಶೇಜ್ ಘಾಟ್‍ನಲ್ಲಿ ಗುಡ್ಡ ಕುಸಿತವಾಗಿತ್ತು. ಗುಡ್ಡ ಕುಸಿತದಿಂದ ಕರ್ನಾಟಕ-ಗೋವಾ ಸಂಪರ್ಕಿಸುವ ರಸ್ತೆಯಲ್ಲೂ …
Read More »
Laxmi News 24×7