Breaking News

ಕಳಪೆ ಬೀಜ ಖರೀದಿಸಿ ಮೋಸ ಹೋದ ರೈತ

ಹಾವೇರಿ: ಕಳಪೆ ಬೀಜ ಖರೀದಿಸಿ ಮೋಸ ಹೋದ ರೈತರಿಬ್ಬರು 9 ಎಕರೆಯಲ್ಲಿ ಬೆಳೆದಿದ್ದ ಹತ್ತಿ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ್ದಾರೆ. ನಕಲಿ ಬೀಜ ವಿತರಣೆಗೆ ಕಂಗಾಲಾಗಿರುವ ರೈತರ ಸ್ಥಿತಿ ಈಗ ಶೋಚನೀಯವಾಗಿದೆ. ರೂಟರ್ ಮೂಲಕ ರೈತ ಹತ್ತಿಗಿಡಗಳನ್ನು ನಾಶಪಡಿಸಿದ್ದು, ಈ ಮೂಲಕ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದಾರೆ. ಹಾವೇರಿ ತಾಲೂಕಿನ ಗುತ್ತಲ,ಹಾವನೂರು ಗ್ರಾಮದಲ್ಲಿ 9 ಎಕರೆ ಪ್ರದೇಶದಲ್ಲಿ ಇಬ್ಬರು ರೈತರು ಹತ್ತಿ ಬೀಜವನ್ನು ಬಿತ್ತನೆ ಮಾಡಿದ್ದರು. ಇದೀಗ ಗ್ರಾಮದ ಬಸವರಾಜ್​, ಪರಮೇಶ್​ …

Read More »

ಸತ್ತ ಗಂಡ ಹಾವಿನ ರೂಪದಲ್ಲಿ ಮನೆಗೆ ಬಂದನೇ. ಬಾಗಲಕೋಟೆಯಲ್ಲಿ ಹಾವಿನ ಜತೆ 4 ದಿನ ವಾಸವಿದ್ದ ಅಜ್ಜಿ!

ಬಾಗಲಕೋಟೆ: ಹಾವು ಅಂದ್ರೆ ಸಾಕು ಎದ್ನೋ-ಬಿದ್ನೋ ಎಂದು ಓಡುವ ಜನರೇ ಹೆಚ್ಚು. ಇನ್ನು ಮನೆಯೊಳಗೇ ಬುಸ್​ ಬುಸ್​ ಅಂದ್ರೆ ಜೀವ ಬಾಯಿಗೆ ಬಂದಂತೆ ಆಗುತ್ತೆ. ಆದರೆ ಇಲ್ಲೊಬ್ಬ ಅಜ್ಜಿ, ಮನೆಗೆ ನುಗ್ಗಿದ ಹಾವಿನ ಜತೆಯಲ್ಲೇ 4 ದಿನ ವಾಸವಿದ್ದಾಳೆ. ಅಷ್ಟೇ ಅಲ್ಲ, ಸತ್ತು ಹೋದ ಗಂಡನೇ ಹಾವಿನ ರೂಪದಲ್ಲಿ ಬಂದಿದ್ದಾನೆ ಎಂದು ನಂಬಿ ಚಾಪೆ ಮೇಲೆಯೇ ಹಾವನ್ನು ಮಲಗಿಸಿದ್ದಾಳೆ! ಹೌದು ಇಂತಹ ವಿಚಿತ್ರ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿ …

Read More »

ಬೈಕ್ ಸಮೇತ ಕೆರೆಗೆ ಬಿದ್ದು ಸವಾರ ಸಾವು

ಹಾವೇರಿ: ತಿರುವೊಂದರಲ್ಲಿ ಸಂಭವಿಸಿದ ಅಪಘಾತದಿಂದಾಗಿ ಸವಾರನೊಬ್ಬ ಬೈಕ್​ ಸಮೇತ ಕೆರೆಗೆ ಬಿದ್ದು ಸಾವಿಗೀಡಾಗಿದ್ದಾನೆ. ಹಾವೇರಿ ಜಿಲ್ಲೆಯಲ್ಲಿ ಇಂಥದ್ದೊಂದು ಅಪಘಾತ ಸಂಭವಿಸಿದೆ. ಬಾಷಾಸಾಬ್​ ಜಿಗಳೂರ (49) ಅಪಘಾತದಲ್ಲಿ ಸಾವಿಗೀಡಾದ ಬೈಕ್ ಸವಾರ. ಬಾಷಾಸಾಬ್​ ಸವಣೂರು ಪಟ್ಟಣದ ಕಡೆಯಿಂದ ಹಾವೇರಿಯತ್ತ ಸಾಗುತ್ತಿದ್ದಾಗ ಸವಣೂರು ತಾಲೂಕಿನ ಕಲ್ಮಡವು ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಕಲ್ಮಡವು ಗ್ರಾಮದ ಬಳಿ ತಿರುವು ಇದ್ದಿದ್ದರಿಂದ ತಕ್ಷಣಕ್ಕೆ ಬೈಕ್​ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಆಗದೆ ಅದು ಸೀದಾ ರಸ್ತೆ ಪಕ್ಕದ ಕೆರೆಗೆ …

Read More »

ಆರ್​ಎಸ್​ಎಸ್​ ಚಡ್ಡಿ ಸುಡುವ ಇವರು ಮೊದಲು ಅವರ ಚಡ್ಡಿ ಇದೆಯೋ ಇಲ್ಲವೋ ಎಂಬುದನ್ನು ನೋಡಿಕೊಳ್ಳಲಿ: ಜೋಶಿ

ವಿಜಯಪುರ: ಆರ್​ಎಸ್​ಎಸ್​ ಚಡ್ಡಿ ಸುಡುವ ಇವರು ಮೊದಲು ಅವರ ಚಡ್ಡಿ ಇದೆಯೋ ಇಲ್ಲವೋ ಎಂಬುದನ್ನು ನೋಡಿಕೊಳ್ಳಲಿ, ದೇಶಾದ್ಯಂತ ಅವರ ಚಡ್ಡಿಯನ್ನು ಜನರೇ ಕಸಿದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ನಿಡಗುಂದಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎಲ್ಲ ಕಡೆಯು ಜನ ನಿಮ್ಮ ಚಡ್ಡಿ ಕಸಿದುಕೊಂಡಿದ್ದಾರೆ. ರಾಜಸ್ತಾನದಲ್ಲಿ ಕಾಂಗ್ರೆಸ್ ಚೆಡ್ಡಿ ಲೂಸ್ ಆಗಿದೆ.ಜನ ಚೆಡ್ಡಿ ಕಸಿದುಕೊಂಡಿದ್ದಕ್ಕೆ ಕಾಂಗ್ರೆಸ್ RSS ಚಡ್ಡಿ ಸುಡುವ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಅಲ್ಲಲ್ಲಿ ಉಳಿದಿರುವ ಚಡ್ಡಿಯನ್ನು …

Read More »

ಸಿಂದಗಿ ತಾಲೂಕಿನಲ್ಲಿ ಡಬಲ್ ಮರ್ಡರ್ – ಕೌಟುಂಬಿಕ ಕಲಹ ಹಿನ್ನೆಲೆ ಅಕ್ಕ- ತಮ್ಮನ ಬರ್ಬರ ಕೊಲೆ

ಸಿಂದಗಿ(ವಿಜಯಪುರ): ಅಕ್ಕ ಹಾಗೂ ತಮ್ಮನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ. ಸದ್ಯ ನಾನಾಗೌಡ ಯರಗಲ್ಲ ಹಾಗೂ ರಾಜಶ್ರೀ ಯರಗಲ್ಲ ಕೊಲೆಯಾದವರಾಗಿದ್ದು,ಶಂಕರಲಿಂಗ ಬಿರಾದಾರ ಹತ್ಯೆಗೈದಿರುವ ಆರೋಪಿ ಎಂದು ತಿಳಿದು ಬಂದಿದೆ.   ಅಂದ ಹಾಗೇ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅಕ್ಕನ ಗಂಡ ಶಂಕರಲಿಂಗ ಬಿರಾದಾರ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇನ್ನು ವಿಷಯ ತಿಳಿದು ಘಟನಾ ಸ್ಥಳಕ್ಕೆ ಸಿಂದಗಿ ಠಾಣೆ ಪೊಲೀಸರು …

Read More »

ಹಿಜಾಬ್ ಬೇಕು ಎಂದವರು ಸೌದಿ, ಪಾಕಿಸ್ತಾನಕ್ಕೆ ಹೋಗಲಿ : ಯುಟಿ ಖಾದರ್

ಮಂಗಳೂರು: ಕಳೆದ ವರ್ಷ ಶುರುವಾದ ಹಿಜಾಬ್ ವಿವಾದ ಇನ್ನು ಮುಗಿದಿಲ್ಲ. ಕೋರ್ಟ್ ನೀಡಿದ ತೀರ್ಪಿಗೂ ಕೆಲ ವಿದ್ಯಾರ್ಥಿಗಳು ಡೋಂಟ್ ಕೇರ್ ಎಂದಿದ್ದಾರೆ. ಹಿಜಾಬ್ ಧರಿಸಿಯೇ ಕಾಲೇಜಿನ ಅಂಗಳಕ್ಕೆ ಬರುತ್ತಿದ್ದಾರೆ. ಈ ಬಗ್ಗೆ ಆ ಆರು ವಿದ್ಯಾರ್ಥಿನಿಯರು ಶಾಸಕ ಯು ಟಿ ಖಾದರ್ ಅವರನ್ನು ಭೇಟಿ ಮಾಡಿ ಕಿಡಿಕಾರಿದ್ದರು. ಇದೀಗ ಯು ಟಿ ಖಾದರ್ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಯು ಟಿ ಖಾದರ್, ಹಿಜಾಬ್ ಗಾಗಿ ಪಟ್ಟು …

Read More »

ದೇವರ ವಿಗ್ರಹ ವಿರೂಪಗೊಳಿಸಿದ ಪ್ರಕರಣ; ಕೊನೆಗೂ ನಾಲ್ವರು ಅರೆಸ್ಟ್

ಹಾಸನ: ಐತಿಹಾಸಿಕ ಮಾಲೇಕಲ್ಲು ತಿರುಪತಿ ಬೆಟ್ಟದ ಬಳಿಯ ದೇವರ ವಿಗ್ರಹಗಳ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿರುವ ಪ್ರಕರಣದ ಬೆನ್ನು ಬಿದ್ದಿರುವ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ನಿರ್ಮಾಣ ಹಂತದಲ್ಲಿರುವ ದೇವರ ವಿಗ್ರಹಗಳನ್ನು ವಿರೂಪಗೊಳಿಸಿರುವ ಪ್ರಕರಣ ಮೇ 31 ರಂದು ಬೆಳಕಿಗೆ ಬಂದಿತ್ತು. ಬೆಟ್ಟದ ಈಜುಕೊಳ ಹಿಂಭಾಗ, ಶ್ರೀನಿವಾಸ ಕಲ್ಯಾಣ ಮ್ಯೂಸಿಯಂ ನಿರ್ಮಾಣಕ್ಕೆಂದು ಹಲವು ವಿಗ್ರಹಗಳನ್ನು ಕೆತ್ತನೆ ಮಾಡಿ ಇಡಲಾಗಿತ್ತು. ಈ ವಿಗ್ರಹಗಳನ್ನ ದುಷ್ಕರ್ಮಿಗಳು ವಿರೂಪಗೊಳಿಸಿದ್ದರು. ಮೂವರು ಅಪ್ರಾಪ್ತರು ಸೇರಿ ಒಟ್ಟು ನಾಲ್ವರನ್ನು …

Read More »

ರೈತರಿಗೆ ಬಿತ್ತನೆ ಬೀಜ ಗೊಬ್ಬರ ಪೂರೈಸುವಂತೆ ಡಿಸಿಗೆ ಮನವಿ

ರಾಜ್ಯದಲ್ಲಿ ಈಗಾಗಲೇ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಬಿತ್ತನೆ ಮಾಡುವ ಈ ಸಂದರ್ಭದಲ್ಲಿ ರೈತರಿಗೆ ರಾಸಾಯನಿಕ ಗೊಬ್ಬರ ಹಾಗೂ ಬಿತ್ತನೆ ಬೀಜಗಳ ಕೊರತೆಯಾಗುತ್ತಿದ್ದು ಸರಕಾರ ಈ ಕುರಿತಂತೆ ಯಾವುದೇ ಕ್ರಮ ಕೈಗೊಳ್ಳುತ್ತಿ ಎಂದು ಆಕ್ರೋಶಗೊಂಡ ನೇಗಿಲಯೋಗಿ ರೈತ ಸಂಘಟನೆಯ ಕಾರ್ಯಕರ್ತರು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ರಾಜ್ಯದಲ್ಲಿ ಈಗಾಗಲೇ ಮುಂಗಾರು ಹಂಗಾಮು ಪ್ರಾರಂಭವಾಗಿದೆ ರಾಜ್ಯಾದ್ಯಂತ ರೈತರು ಬಿತ್ತನೆ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಆದರೆ ಇಲ್ಲಿಯವರೆಗೂ ರೈತರಿಗೆ ಬಿತ್ತನೆ ಮಾಡಲು ಸಮರ್ಪಕ ಬೀಜ ಹಾಗೂ ಗೊಬ್ಬರಗಳನ್ನು …

Read More »

ಪಂಚಾಯಿತಿ ಮುಂದೆ ಬುಟ್ಟಿ ಮತ್ತು ಪಿಕಾಸಿ ಹಿಡಿದುಕೊಂಡು ಪಂಚಾಯ್ತಿ ಎದುರುಗಡೆ ಧರಣಿ ಮಾಡಿದ ನರೇಗಾ ಕೂಲಿ ಕಾರ್ಮಿಕರು

ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮ ಪಂಚಾಯತಿ ಕಛೇರಿಗೆ ನರೇಗಾ ಕೂಲಿ ಕಾರ್ಮಿಕರಿಂದ ಗ್ರಾಮ ಪಂಚಾಯಿತಿ ಮುಂದೆ ಬುಟ್ಟಿ ಮತ್ತು ಪಿಕಾಸಿ ಹಿಡಿದುಕೊಂಡು ಪಂಚಾಯ್ತಿ ಎದುರುಗಡೆ ಧರಣಿ ಮಾಡಿದರು. ಕಳೆದ 2ವರ್ಷಗಳ ಹಿಂದೆ ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡಿರುವ ಕೂಲಿ ಕಾರ್ಮಿಕ ರಾದ ನಿಲ್ಲುವ ಬಾಳಪ್ಪ ಪಾಟೀಲ ಇವರಿಗೆ ಇನ್ನೂವರೆಗೆ ಸಂಬಳ ಬಂದಿಲ್ಲ ಇದನ್ನು ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಕಂಪ್ಯೂಟರ್ ಆಪರೇಟರ್ ಸಂತೋಷ್ ಅವರಿಗೆ ಕಳೆದ 2 …

Read More »

ಜೊಮ್ಯಾಟೊ ಆರ್ಡರ್​ನಲ್ಲಿ ಚಿಕನ್ ಜತೆ ಮಿಕ್ಸರ್ಬ್ಲೇಡ್​

ಹುಬ್ಬಳ್ಳಿ: ಜೊಮ್ಯಾಟೊ ಆರ್ಡರ್​ನಲ್ಲಿ ಚಿಕನ್ ಜತೆ ಮಿಕ್ಸರ್ಬ್ಲೇಡ್​ ಬಂದಂತಹ ಘಟನೆ ನಗರದಲ್ಲಿ ನಡೆದಿದೆ. ಗ್ರಾಹಕ ಎಚ್ಚೆತ್ತಕೊಂಡಿದ್ದು, ಭಾರೀ ಅಪಾಯ ತಪ್ಪಿದೆ. ಮಲ್ಲಿಕಾರ್ಜುನ ಎಂಬುವವರು ಜೊಮ್ಯಾಟೊ ಆಯಪ್ ಮೂಲಕ ವಿದ್ಯಾನಗರದ ಪಂಜುರ್ಲಿ ಹೋಟೆಲ್​ನಿಂದ ಚಿಕನ್ ಸುಕ್ಕಾ ಆರ್ಡರ್ ಮಾಡಿದ್ದರು. ಊಟ ಮಾಡುವಾಗ ಚಿಕನ್ ಫಿಸ್​ನಲ್ಲಿ ಮಿಕ್ಸರ್ ಬ್ಲೇಡ್ ಕಾಣಿಸಿಕೊಂಡಿದೆ. ಈ ಬಗ್ಗೆ ಜೂಮಾಟೋ ಆಯಪ್ ಮತ್ತು ಹೋಟೆಲ್​ನವರಿಗೆ ವಿಚಾರಿಸಿದರೆ ಹಾರಿಕೆ ಉತ್ತರ ನೀಡಿದ್ದಾರೆ. ಊಟ ಮಾಡುವಾಗ ಚಿಕನ್ ಫಿಸ್​ನಲ್ಲಿ ಮಿಕ್ಸರ್ ಬ್ಲೆಡ್ …

Read More »