ಕಾಲೇಜು ಬಸ್ಸಿನ ಹಿಂಬದಿಗೆ ಕೆಎಸ್‌ಆರ್‌ಟಿ ಬಸ್ ಡಿಕ್ಕಿಯಾಗಿ ವಿದ್ಯಾರ್ಥಿಗಳು ಸೇರಿದಂತೆ 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದ ಬಳಿ ಸಂಭವಿಸಿದೆ.ಜತ್ತ-ಜಾಂಬೋಟಿ ಹೆದ್ದಾರಿ ಸಮೀಪ ಗುರ್ಲಾಪುರ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಮೂಡಲಗಿ ಖಾಸಗಿ ಕಾಲೇಜಿಗೆ ತೆರಳುತ್ತಿದ್ದ ಕಾಲೇಜು ಬಸ್‌ನಲ್ಲಿದ್ದ ೧೦ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ ೧೦ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು. ಇದರಲ್ಲಿ …
Read More »ಬೆಳಗಾವಿ ತಾಲೂಕಿನ ಹೊನ್ಯಾಳ ಗ್ರಾಮದಲ್ಲಿ ಮಹಾಲಕ್ಷ್ಮೀ ದೇವಿ ದೇವಸ್ಥಾನ ಜಾಗವನ್ನು ಅನಧಿಕೃತವಾಗಿ ದೇವಸ್ಥಾನದ ಪೂಜಾರಿ ಮಾರಾಟ ಮಾಡಿದ್ದಾನೆ.
ಬೆಳಗಾವಿ ತಾಲೂಕಿನ ಹೊನ್ಯಾಳ ಗ್ರಾಮದಲ್ಲಿ ಮಹಾಲಕ್ಷ್ಮೀ ದೇವಿ ದೇವಸ್ಥಾನ ಜಾಗವನ್ನು ಅನಧಿಕೃತವಾಗಿ ದೇವಸ್ಥಾನದ ಪೂಜಾರಿ ಮಾರಾಟ ಮಾಡಿದ್ದಾನೆ. ದೇವಸ್ಥಾನ ಜಾಗ ದೇವಸ್ಥಾನಕ್ಕೆ ಬಿಟ್ಟು ಕೊಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಬೆಳಗಾವಿ ಗ್ರಾಮೀಣ ಠಾಣೆ ಎಸಿಪಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಹೌದು ಹೊನ್ಯಾಳ ಗ್ರಾಮದಲ್ಲಿ 700-800 ವರ್ಷಗಳ ಹಿಂದೆ ಸ್ಥಾಪನೆ ಆಗಿರುವ ಹೊನ್ಯಾಳ ಗ್ರಾಮದಲ್ಲಿ 4 ಎಕರೆ 28 ಗುಂಟೆ ಜಮೀನಿನಲ್ಲಿ ಗ್ರಾಮದೇವಿ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಉಪಯೋಗ ಮಾಡಿಕೊಂಡು …
Read More »ನಾನು ಕಾನೂನು ಪ್ರಕಾರ ಖರೀದಿಸಿದ್ದೇನೆ: ಹೊನ್ಯಾಳ ಜಮೀನು ವಿವಾದ: ನಾಗೇಶ ದೇಸಾಯಿ ಸ್ಪಷ್ಟನೆ
ಬೆಳಗಾವಿ ತಾಲೂಕಿನ ಹೊನ್ಯಾಳ ಗ್ರಾಮದಲ್ಲಿ ದೇವಸ್ಥಾನ ಜಮೀನು ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ನಾಗೇಶ್ ದೇಸಾಯಿ ತಮ್ಮ ಮೇಲಿನ ಆರೋಪ ಸುಳ್ಳು. ನಾನು ಕಾನೂನು ಪ್ರಕಾರವೇ ಆ ಜಮೀನನ್ನು ಖರೀದಿ ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಹೊನ್ಯಾಳ ಗ್ರಾಮಸ್ಥರು ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನ ಜಾಗ ದೇವಸ್ಥಾನಕ್ಕೆ ಬಿಟ್ಟು ಕೊಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಗ್ರಾಮೀಣ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿರುವ ವಿಚಾರಕ್ಕೆ ಹಾಗೂ ತಮ್ಮ …
Read More »ರೈಲಿನಲ್ಲಿ 2 ಕೋಟಿ ಸಾಗಿಸುತ್ತಿದ್ದವನ ಬಳಿ ಟಿಕೆಟ್ಟೇ ಇರಲಿಲ್ಲ..!
ಕಾರವಾರ; ಸಾಮಾನ್ಯವಾಗಿ ಹಣ ಇಲ್ಲದೇ ಇದ್ದವರು ರೈಲಿನಲ್ಲಿ ಟಿಕೆಟ್ ಇಲ್ಲದೆ ಕಳ್ಳತನವಾಗಿ ಪ್ರಯಾಣ ಮಾಡುತ್ತಾರೆ. ಆದ್ರೆ, ಮುಂಬೈನಿಂದ ಬರುತ್ತಿದ್ದ ವ್ಯಕ್ತಿಯ ಬಳಿಯ ರೈಲು ಟಿಕೆಟ್ ಇರಲಿಲ್ಲ, ಹಣ ಅಂತೂ ಸಾಕಷ್ಟಿತ್ತು. ಅದು ಅಷ್ಟೋ ಇಷ್ಟೂ ಅಲ್ಲ, ಬರೋಬ್ಬರಿ 2 ಕೋಟಿ ರೂಪಾಯಿ. ಅದಕ್ಕೆ ದಾಖಲೆ ಇಲ್ಲದ ಕಾರಣಕ್ಕಾಗಿ ಆ ವ್ಯಕ್ತಿಯನ್ನು ಹಾಗೂ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೌದು, ವ್ಯಕ್ತಿಯೊಬ್ಬ ರೈಲಿನ ಮೂಲಕ ಮುಂಬೈನಿಂದ ಮಂಗಳೂರಿಗೆ 2 ಕೋಟಿ ರೂಪಾಯಿ ಹಣ …
Read More »ಕೊಲೆಗೆ ಹೊಸಪೇಟೆಯ ಕಾನ್ಸ್‌ಟೆಬಲ್ ಕೊಟ್ಟ ಸುಪಾರಿ- ಹತ್ಯೆ ಮಾಡಲು ಹೆದರಿದವ ಬಿಟ್ಟ ಬಾಯಿ!
ವಿಜಯನಗರ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಪೊಲೀಸ್ ಕಾನ್ಸ್‌ಟೆಬಲ್ ಸುಪಾರಿ ಕೊಟ್ಟು ಈಗ ಸಿಕ್ಕಿಬಿದ್ದಿರುವ ಘಟನೆ ವಿಜಯಗರದಲ್ಲಿ ನಡೆದಿದೆ. ಹೊಸಪೇಟೆ ಟ್ರಾಫಿಕ್ ಪೊಲೀಸ್ ಠಾಣೆಯ ಕಾನ್ಸ್‌ಟೆಬಲ್ ಪರಶುರಾಮ ನಾಯ್ಕ್ ವಿರುದ್ಧ ದೂರು ದಾಖಲಾಗಿದ್ದು, ಈತ ತಲೆ ಮರೆಸಿಕೊಂಡಿದ್ದಾನೆ. ಗ್ರಾಮ ಪಂಚಾಯಿತಿಯ ಸದಸ್ಯನ ಕೊಲೆಗೆ 10 ಲಕ್ಷ ರೂಪಾಯಿ ನಗದು ಹಾಗೂ ಹೊಸ ಮನೆ ಕಟ್ಟಿಸಿಕೊಡುವ ಭರವಸೆ ಕೊಟ್ಟು ಸುಪಾರಿ ಕೊಟ್ಟಿದ್ದ ಎನ್ನಲಾಗಿದೆ. ಸುಪಾರಿಗೆ ಕಾರಣವೇನು? ಹಗರಿಬೊಮ್ಮನಹಳ್ಳಿ ತಾಲೂಕಿನ ಮಾದೂರು ಗ್ರಾಮ ಪಂಚಾಯತಿ …
Read More »ದೇಶದಲ್ಲಿ ಈಗಾಗಲೇ ಕಾಂಗ್ರೆಸ್‌ನವರ ಚಡ್ಡಿ ಬಿಚ್ಚಿ ಕಳಿಸಿದ್ದಾರೆ. ಮುಂದೆ ಕರ್ನಾಟಕದಲ್ಲಿ ಇರುವ ಲಂಗೋಟಿಯನ್ನು ಬಿಚ್ಚಿ ಕಳುಹಿಸಲಿದ್ದಾರೆ : ಆರಗ ಜ್ಞಾನೇಂದ್ರ
ಚಿತ್ರದುರ್ಗ: ದೇಶದಲ್ಲಿ ಈಗಾಗಲೇ ಕಾಂಗ್ರೆಸ್‌ನವರ ಚಡ್ಡಿ ಬಿಚ್ಚಿ ಕಳಿಸಿದ್ದಾರೆ. ಮುಂದೆ ಕರ್ನಾಟಕದಲ್ಲಿ ಇರುವ ಲಂಗೋಟಿಯನ್ನು ಬಿಚ್ಚಿ ಕಳುಹಿಸಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಚಿತ್ರದುರ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಬೇರೆ ವಿಚಾರಗಳಿಲ್ಲ. ಅವರಿಗೆ ವಿರೋಧ ಪಕ್ಷವಾಗುವ ಅರ್ಹತೆಗಳೂ ಇಲ್ಲ. ಟೀಕೆಗಳು ಆರೋಗ್ಯಪೂರ್ಣವಾಗಿರಬೇಕು ಎಂದು ಚಡ್ಡಿ ಸುಡುವ ಅಭಿಯಾನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
Read More »ರಬಕವಿ-ಬನಹಟ್ಟಿ ಕಸಾಯಿಖಾನೆಗೆ ಅಕ್ರಮ ಗೋವು ಸಾಗಾಟ; ಆರೋಪಿಗಳು ಪೊಲೀಸ್ ವಶಕ್ಕೆ
ರಬಕವಿ-ಬನಹಟ್ಟಿ: ತಾಲೂಕಿನ ಬನಹಟ್ಟಿಯ ಬಿಲಾಲ್ ಮಸೀದಿ ಪಕ್ಕದಲ್ಲಿರುವ ಅನಧಿಕೃತ ಕಸಾಯಿಖಾನೆಯಲ್ಲಿ ಅಕ್ರಮವಾಗಿ ಟಾಟಾ ಏಸ್ ವಾಹನದಲ್ಲಿ ಗೋವುಗಳನ್ನು ಕರೆತಂದು ಕಸಾಯಿಖಾನೆಗೆ ಕಳಿಸಲಾಗುತ್ತಿರುವುದರ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸಾಗಾಟ ಮಾಡುತ್ತಿದ್ದ ಆರೋಪಿಗಳ ಸಮೇತ ಗೋವುಗಳನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜಮಖಂಡಿಯ ದನದ ಮಾರುಕಟ್ಟೆಯಿಂದ ಅಕ್ರಮವಾಗಿ ಕಸಾಯಿಖಾನೆಗೆ ಗೋವು ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬನಹಟ್ಟಿ ಪಿಎಸ್‌ಐ ಸುರೇಶ ಮಂಟೂರ ಹಾಗು ಕ್ರೈಂ ಪಿಎಸ್‌ಐ ಪುರಂದರ ಪೂಜಾರಿ …
Read More »ದಾಖಲೆಯ 11.50 ಲಕ್ಷ ರೂ.ಗೆ ಮಾರಾಟವಾದ ಕಿಲಾರಿ ಎತ್ತು !
ಮಹಾಲಿಂಗಪುರ: ತೆರಬಂಡಿ ಸ್ಪರ್ಧೆಯಲ್ಲಿ ಪ್ರತಿ ಬಾರಿ ಪ್ರಥಮ ಬಹುಮಾನ ಪಡೆಯುತ್ತ ಖ್ಯಾತಿ ಪಡೆದಿದ್ದ ಚಿಮ್ಮಡ ಗ್ರಾಮದ ಸೂರ್ಯ ಹೆಸರಿನ ಕಿಲಾರಿ ಎತ್ತು ದಾಖಲೆಯ 11.50 ಲಕ್ಷ ರೂ.ಗೆ ಮಾರಾಟವಾಗುವ ಮೂಲಕ ಈ ಭಾಗದ ರೈತಾಪಿ ಜನರಲ್ಲಿ ಅಚ್ಚರಿ ಮೂಡಿಸಿದೆ. ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಮುತ್ತಪ್ಪ ದೊಡಮನಿಯವರ ಮಕ್ಕಳಾದ ಶಿವಲಿಂಗಪ್ಪ, ಮಾಯಪ್ಪ ಸಹೋದರರು ಕಳೆದ ಆರು ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯ ಇಂಚಗೇರಿ ಬಳಿಯ ಹೊರ್ತಿ ಜಾತ್ರೆಯಲ್ಲಿ 45 …
Read More »ಅಸಮಾಧಾನದ ಹೊಳೆಯಲ್ಲಿ ಗೆಲುವಿಗೆ ಹೆಣಗಾಟ
ಬೆಳಗಾವಿ: ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹತ್ತಾರು ಸಮಸ್ಯೆಗಳ ನಡುವೆ ಚುನಾವಣೆ ನಡೆಯುತ್ತಿರುವ ವಾಯ ವ್ಯ ಶಿಕ್ಷಕರ ಕ್ಷೇತ್ರದಲ್ಲಿ ಜಾತಿ ಸಮೀಕರಣ ಮತ್ತು ಹಣದ ಪ್ರಭಾವದ ಮಾತು ಜೋರಾಗಿ ಕೇಳಿಬರುತ್ತಿದೆ. ಪಕ್ಷದೊಳಗಿನ ಮನಸ್ತಾಪ ಹಾಗೂ ಮತದಾರರಲ್ಲಿನ ಅಸಮಾಧಾನ ಕಣ ದಲ್ಲಿರುವ ಅಭ್ಯರ್ಥಿಗಳಿಗೆ ತಮ್ಮ ಪ್ರತಿಷ್ಠೆ ಯನ್ನೇ ಪಣಕ್ಕೊಡ್ಡುವ ಪರಿಸ್ಥಿತಿ ನಿರ್ಮಾಣ ಮಾಡಿದೆ. ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಗೆಲುವಿನ ಸಾಧ್ಯಾಸಾಧ್ಯತೆ ವಿಷಯಕ್ಕಿಂತ ಪಕ್ಷದೊಳಗಿನ ಅಸಮಾಧಾನವೇ ಹೆಚ್ಚು ಸುದ್ದಿಯಾಗುತ್ತಿದೆ. ಇದು ಬಿಜೆಪಿ ಹಾಗೂ ಕಾಂಗ್ರೆಸ್‌ಗಳೆರಡರಲ್ಲೂ ಇದೆ. …
Read More »ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆ ರೋಚಕ ಘಟ್ಟ
ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆ ರೋಚಕ ಘಟ್ಟತಲುಪಿದ್ದು, ಕಾಂಗ್ರೆಸ್, ಜೆಡಿಎಸ್ ನಡುವೆ “ಅಭ್ಯರ್ಥಿ ವಾಪಸಾತಿ ಅಥವಾ ನಿವೃತ್ತಿ’ ಸಮರ ಬಿರುಸಾಗಿದೆ. ಒಟ್ಟು ನಾಲ್ವರು ಸದಸ್ಯರನ್ನು ಆರಿಸುವ ಸಲುವಾಗಿ ಸೋಮವಾರ ಚುನಾವಣೆ ನಡೆಯಲಿದ್ದು, 6 ಮಂದಿ ಕಣದಲ್ಲಿದ್ದಾರೆ. ಒಟ್ಟು ನಾಲ್ವರು ಸದಸ್ಯರನ್ನು ಆರಿಸುವ ಸಲುವಾಗಿ ಸೋಮವಾರ ಚುನಾವಣೆ ನಡೆಯಲಿದ್ದು, 6 ಮಂದಿ ಕಣದಲ್ಲಿದ್ದಾರೆ. ಬಿಜೆಪಿಮೂವರನ್ನು ಕಣಕ್ಕಿಳಿಸಿದ್ದು, ಪಟ್ಟು ಸಡಿಲಿಸದೆ ಚುನಾವಣೆಗೆ ಸಿದ್ಧವಾಗಿದೆ. ಕಾಂಗ್ರೆಸ್, ಜೆಡಿಎಸ್ ಮಾತ್ರ ಹಿಂದಿನ ಚುನಾವಣೆಗಳಸಹಕಾರ …
Read More »