Breaking News

ಯಾರಿಗೂ ಮತ ಹಾಕದೆ ಬ್ಯಾಲೆಟ್ ಪೇಪರ್ ಬಿಟ್ಟಿದ್ದಾರೆ. ಶಾಸಕ ಎಸ್.ಆರ್.ಶ್ರೀನಿವಾಸ್

ಬೆಂಗಳೂರು,ಜೂ.10-ರಾಜ್ಯಸಭೆ ಚುನಾವಣೆಯಲ್ಲಿ ತುಮಕೂರು ಜಿಲ್ಲೆ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಯಾರಿಗೂ ಮತ ಹಾಕದೆ ಬ್ಯಾಲೆಟ್ ಪೇಪರ್ ಬಿಟ್ಟಿದ್ದಾರೆ. ಜೆಡಿಎಸ್ ಜೊತೆ ಮುನಿಸಿಕೊಂಡಿದ್ದ ಅವರು ಇತ್ತ ಸ್ವಪಕ್ಷದ ಅಭ್ಯರ್ಥಿಗೂ ಮತ ಹಾಕದೆ ಇನ್ನೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿಗೂ ಮತ ಹಾಕದೆ ಬ್ಯಾಲೆಟ್ ಪೇಪರ್‍ನಲ್ಲಿ ಯಾರಿಗೂ ಸೂಚಿಸದೆ ಖಾಲಿ ಬಿಟ್ಟಿದ್ದಾರೆ. ನಿಯಮಗಳ ಪ್ರಕಾರ ಮತ ಚಲಾಯಿಸುವ ಶಾಸಕರು ಬ್ಯಾಲೆಟ್ ಪೇಪರ್‍ನಲ್ಲಿ ಯಾವುದಾದರೂ ಒಬ್ಬ ಅಭ್ಯರ್ಥಿಗೆ ಬೆಂಬಲ ಸೂಚಿಸಬೇಕು. ಇಲ್ಲದಿದ್ದರೆ ಅದನ್ನು ಎಣಿಕೆ …

Read More »

ರಾಜ್ಯಸಭೆಯ ನಾಲ್ಕು ಸ್ಥಾನಗಳ ಚುನಾವಣೆಯಲ್ಲಿ ಬಿರುಸಿನ ಮತದಾನ, , 4ನೇ ಸ್ಥಾನ ಯಾರಿಗೆ ಎಂಬುದು ಫಲಿತಾಂಶದ ನಂತರ ಗೊತ್ತಾಗಲಿದೆ.

ಬೆಂಗಳೂರು,ಜೂ.10-ಜಿದ್ದಾಜಿದ್ದಿನ ಕಣವಾಗಿದ್ದ ರಾಜ್ಯಸಭೆಯ ನಾಲ್ಕು ಸ್ಥಾನಗಳ ಚುನಾವಣೆಯಲ್ಲಿ ಬಿರುಸಿನ ಮತದಾನ ನಡೆದಿದ್ದು, ನಾಲ್ಕನೇ ಅಭ್ಯರ್ಥಿಯ ಗೆಲುವು ಯಾರಿಗೆ ದಕ್ಕಲಿದೆ ಎಂಬುದಷ್ಟೇ ಬಾಕಿ ಉಳಿದಿದೆ. ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್, ಚಿತ್ರನಟ ಜಗ್ಗೇಶ್, ಕಾಂಗ್ರೆಸ್‍ನ ಜೈರಾಮ್ ರಮೇಶ್ ಗೆಲುವು ಬಹುತೇಕ ಖಚಿತವಾಗಿದ್ದು, 4ನೇ ಸ್ಥಾನ ಯಾರಿಗೆ ಎಂಬುದು ಫಲಿತಾಂಶದ ನಂತರ ಗೊತ್ತಾಗಲಿದೆ. ನಿರ್ಮಲಾಸೀತಾರಾಮನ್‍ಗೆ ಮೊದಲ ಪ್ರಾಶಸ್ತ್ಯದಲ್ಲಿ 46, ಜಗ್ಗೇಶ್ 44, ಕಾಂಗ್ರೆಸ್ ಜೈರಾಮ್ ರಮೇಶ್ ಅವರಿಗೆ 46 …

Read More »

ನಾಳೆಯಿಂದ ಕರ್ನಾಟಕದಲ್ಲಿ ಹೊಸ ಚ್ಯಾಪ್ಟರ್‌ ಶುರು :H.D.K.

ಬೆಂಗಳೂರು : ಇಂದು ರಾಜ್ಯಸಭೆ ಚುನಾವಣೆ ಹಿನ್ನೆಲೆ ವಿಧಾನ ಸೌಧಕ್ಕೆ ಜೆಡಿಎಸ್‌ ಶಾಸಕರು ಆಗಮಿಸಿದ ಬಳಿಕ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಮಾತನಾಡಿ ಆತ್ಮಸಾಕ್ಷಿಯ ಮತಗಳು ನಮಗೆ ಬರುತ್ತದೆ ಎಂದರು. ನಮ್ಮ ಪಕ್ಷದ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದರು ನಾಳೆಯಿಂದ ಕರ್ನಾಟಕದಲ್ಲಿ ಹೊಸ ಚ್ಯಾಪ್ಟರ್‌ ಶುರುವಾಗಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಮತದಾನ ಮಾಡುತ್ತಿದ್ದಾರೆ.   …

Read More »

ಪದವೀಧರ, ಶಿಕ್ಷಕರ ಪರಿಷತ್ ಚುನಾವಣೆ: ರಾಜ್ಯ ಸರ್ಕಾರದಿಂದ ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ನೀಡಿ ಆದೇಶ

ಬೆಂಗಳೂರು: 2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರಗಳಿಗೆ ವಿಧಾನ ಪರಿಷತ್ ಚುನಾವಣೆ ( Graduate, Teachers’ Council elections ) ದಿನಾಂಕ 13-06-2022ರಂದು ನಡೆಯಲಿದೆ. ಈ ಹಿನ್ನಲೆಯಲ್ಲಿ ಅಂದು ರಾಜ್ಯ ಸರ್ಕಾರದಿಂದ ಮತದಾನದಲ್ಲಿ ಭಾಗಿಯಾಗಲಿರುವಂತ ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ( Special casual leave ) ನೀಡಿ, ರಾಜ್ಯ ಸರ್ಕಾರ ಆದೇಶಿಸಿದೆ.   ಈ ಕುರಿತು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ದಿನಾಂಕ 13-06-2022ರಂದು …

Read More »

ಕಾಶ್ಮೀರದಲ್ಲಿ ಸುರಕ್ಷತೆ ಹಿನ್ನೆಲೆಯಲ್ಲಿ ಜನರಿಗೆ ಗನ್ ಲೈಸನ್ಸ್ ಕೊಡಿ- ಪ್ರಮೋದ್ ಮುತಾಲಿಕ್

ಬೆಳಗಾವಿಯಲ್ಲಿ ಬಿಜೆಪಿ ನಾಯಕಿ ನುಪೂರ್ ಶರ್ಮಾ, ರೋಹಿತ್ ಚಕ್ರತೀರ್ಥ ಅವರಿಗೆ ಶ್ರೀರಾಮಸೇನೆಯ ಬೆಂಬಲವಿದೆ. ನುಪೂರ್ ಶರ್ಮಾ ಸತ್ಯವನ್ನೇ ಹೇಳಿದ್ದಾರೆ ಎಂದು ಶ್ರೀರಾಮಸೇನೆಯ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀ ರಾಮಸೇನೆ ಮುಖ್ಯಸ್ಥರಾದ ಪ್ರೆಮೋದ್ ಮುತಾಲಿಕ್, ಬಿಜೆಪಿ ನಾಯಕಿ ನುಪುರ್‍ಶರ್ಮಾ ಹಾಗೂ ರೋಹಿತ್ ಚಕ್ರೀರ್ಥರವರಿಗೆ ಬೆಂಬಲ ಸೂಚಿಸಿದರು. ಸತ್ಯವನ್ನು ಹೇಳಿದವರನ್ನು ಯಾರಿದೋ ಒತ್ತಡಕ್ಕೆ ಮಣಿದು ಉಚ್ಚಾಟನೆ ಮಾಡುವುದು ಸರಿಯಲ್ಲ. ಪ್ರಖರ ವಾಗ್ಮಿ, ವಕ್ತಾರರಿಗೆ ಯಾವುದೇ ಹೇಳಿಕೆ ಹಿನ್ನೆಲೆ …

Read More »

ಬೆಳಗಾವಿಯ ಫೋರ್ಟ್ ರಸ್ತೆಯಲ್ಲಿ ವಿದ್ಯುತ್ ತಂತಿಗೆ ನೂಪುರ್ ಶರ್ಮಾ ಪ್ರತಿಕೃತಿಯನ್ನು ಜೋತು ಹಾಕಿ ಆಕ್ರೋಶ

ಪ್ರವಾದಿ ಮೊಹಮ್ಮದ್ ಪೈಗಂಬರರ ಕುರಿತಂತೆ ಬಿಜೆಪಿ ನಾಯಕಿ ನೂಪುರ್ ಶರ್ಮಾ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಬೆಳಗಾವಿ ನಗರದಲ್ಲಿ ತೀವೃ ಖಂಡನೆ ವ್ಯಕ್ತವಾಗಿದೆ. ನೂಪುರ್ ಶರ್ಮಾ ಪ್ರತಿಕೃತಿಯನ್ನು ವಿದ್ಯುತ್ ತಂತಿಗೆ ಜೋತು ಹಾಕುವ ಮೂಲಕ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ನಾಯಕಿ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ ಪೈಗಂಬರರ ಬಗ್ಗೆ ನೀಡಿದ್ದ ಅವಹೇಳನಕಾರಿ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಬೆಳಗಾವಿಯ ಫೋರ್ಟ್ ರಸ್ತೆಯಲ್ಲಿ ವಿದ್ಯುತ್ ತಂತಿಗೆ ನೂಪುರ್ ಶರ್ಮಾ ಪ್ರತಿಕೃತಿಯನ್ನು ಜೋತು ಹಾಕಿ …

Read More »

ಕಾಡು ಬೆಕ್ಕು ಬೇಟೆಯಾಡಿದ್ದ ಆರೋಪಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ..

ಕಾಡು ಬೆಕ್ಕನ್ನು ಬೇಟೆಯಾಡಿದ್ದ ಖದೀಮರನ್ನು ಅರಣ್ಯ ಇಲಾಖೆ ಸಿಬ್ಬಂದಿ ಹೆಡೆಮುರಿಕಟ್ಟಿದ ಘಟನೆ ಖಾನಾಪುರ ತಾಲೂಕಿನ ಖುದ್ದಾನಪೂರ್ ವ್ಯಾಪ್ತಿಯಲ್ಲಿ ನಡೆದಿದೆ. ಹೌದು ಕಿತ್ತೂರು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಕಾಡು ಬೆಕ್ಕು ಬೇಟೆಯಾಡಿದ್ದ ಆರೋಪಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ.. ಖುದ್ದಾನಪೂರ ವ್ಯಾಪ್ತಿಯಲ್ಲಿ ಬೇಟೆಯಾಡಿ ಬೆಳವಡಿಯ ಹರಿಜನಕೆರೆಯ ಮನೆಯಲ್ಲಿ ಇದನ್ನು ಇಟ್ಟಿದ್ದುರು. ಅಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಬೇಟೆಯಾಡಿದ ಕಾಡು ಬೆಕ್ಕಿನ ಮಾಂಸ ಸೇರಿದಂತೆ ಬೇಟೆಗೆ ಬೆಳೆಸಿದ ದಾರದ ಬೆಲೆ, 3 …

Read More »

ಪಹಣಿಯಲ್ಲಿ ಹೆಸರು ಕಡಿಮೆ ಮಾಡಲು 7 ಸಾವಿರ ಲಂಚಕ್ಕೆ ಬೇಡಿಕೆ:

ಪಹಣಿಯಲ್ಲಿ ಹೆಸರು ಕಡಿಮೆ ಮಾಡಲು ಖಾನಾಪೂರ ಹೋಬಳಿಯ ಕಂದಾಯ ನಿರೀಕ್ಷಕರು 7ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಖಾನಾಪೂರ ತಾಲೂಕಿನ ಹಿರೇ ಅಂಗ್ರೋಳ್ಳಿ ಗ್ರಾಮದ ರೈತ ಗೋಪಾಲ ಶಿವನಪ್ಪ ಗೋಲಿಹಳ್ಳಿ ಖಾನಾಪುರ ತಹಶೀಲ್ದಾರರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಖಾನಾಪೂರ ತಾಲೂಕಿನ ಹಿರೇ ಅಂಗ್ರೋಳ್ಳಿ ಗ್ರಾಮದ ರೈತ ಗೋಪಾಲ ಶಿವನಪ್ಪ ಗೋಲಿಹಳ್ಳಿ ಪಹಣಿಯಲ್ಲಿ ಹೆಸರು ಕಡಿಮೆ ಮಾಡಲು ಖಾನಾಪೂರ ಹೋಬಳಿಯ ಕಂದಾಯ ನಿರೀಕ್ಷಕರು ತಮಗೆ 7 ಸಾವಿರ ಹಣ ನೀಡುವಂತೆ ಬೇಡಿಕೆ …

Read More »

ಕನ್ನಡ ನ್ಯೂಸ್ ಚಾನಲ್‌ಗಳ 22ನೇ ವಾರದ ಬಾರ್ಕ್ TRP ರೇಟಿಂಗ್

ಬೆಂಗಳೂರು, ಜೂನ್ 09 : ಕರ್ನಾಟಕದ ಸುದ್ದಿವಾಹಿನಿಗಳ 22ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಬಾರ್ಕ್ ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಏರುಪೇರು ತಿಳಿಯಲಿದೆ. ಟಿಆರ್‌ಪಿ (Telivision Rating Point) ಬಿಡುಗಡೆಯಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನಲ್ ಗಳ ರೇಟಿಂಗ್ ಅಲ್ಪಪ್ರಮಾಣದಲ್ಲಿ ಏರಿಕೆಯಾಗಿರುವುದು ಕಂಡುಬಂದಿದೆ. ಕಳೆದ ಕೆಲವು ವಾರಗಳ ಟಿಆರ್‌ಪಿಯನ್ನು ಗಮನಿಸಿದಾಗ ಪವರ್ ಟಿವಿ ಬೆಳವಣಿಗೆ ರೇಟಿಂಗ್‌ನಲ್ಲಿ ಉತ್ತಮವಾಗುತ್ತ ಸಾಗುತ್ತಿದೆ. ಬಾರ್ಕ್ ನೀಡಿರುವ ರೇಟಿಂಗ್‌ನಲ್ಲಿ …

Read More »

ಕರ್ನಾಟಕದಲ್ಲಿ ಇಂದಿನಿಂದ 3ದಿನ ವ್ಯಾಪಕ ಮಳೆ

ಬೆಂಗಳೂರು: ಕರ್ನಾಟಕದ ಬಯಲುಸೀಮೆಯನ್ನು ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲೂ ಇಂದಿನಿಂದ ಮಳೆಯ ಆರ್ಭಟ ಜೋರಾಗಲಿದೆ. ಇಂದಿನಿಂದ ಜೂನ್ 11ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದೆ. ಇಂದು ಬೆಂಗಳೂರು, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಲಿದೆ.   ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಇನ್ನೂ 3 ದಿನ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ …

Read More »