ಪಟನಾ: ನೀವು ಮೇಲೆ ನೋಡುತ್ತಿರುವ ವ್ಯಕ್ತಿಯ ಹೆಸರು ಮೊಹಮ್ಮದ್ ರಫಿಕ್ ಅದ್ನಾನ್. ವಯಸ್ಸು 30 ವರ್ಷ. ಈತ ಬಿಹಾರ ಮೂಲದವನು. 200 ಕೆಜಿ ತೂಕವಿದ್ದಾನೆ. ಸಾಮಾನ್ಯ ಬೈಕ್ ಆತನ ಭಾರವನ್ನು ತಡೆಯುವುದೇ ಇಲ್ಲ. ಹೀಗಾಗಿ ಸದಾ ಬುಲೆಟ್ ಗಾಡಿಯಲ್ಲೇ ಈತ ಓಡಾಡುತ್ತಾನೆ. ಪ್ರತಿದಿನ ಮಾಂಸಾಹಾರ ಸೇರಿದಂತೆ ದಿನವೊಂದಕ್ಕೆ 14 ರಿಂದ 15 ಕೆಜಿ ಆಹಾರ ತಿನ್ನುತ್ತಾನೆ ಅಂದರೆ, ಈತನಿಗಿಂತ ಸುಖ ಪುರುಷ ಮತ್ಯಾರು ಇಲ್ಲ ಅಂತಾ ನೀವು ಅಂದುಕೊಳ್ಳಬಹುದು. ಆದರೆ, ಈತನ …
Read More »ಪ್ರವಾದಿ ಕುರಿತ ಹೇಳಿಕೆ ವಿರುದ್ಧ ಪ್ರತಿಭಟನೆ: ಯೋಗಿ ಸರ್ಕಾರದಿಂದ ಬುಲ್ಡೋಜರ್ ಅಸ್ತ್ರ
ಲಕ್ನೋ, ಜೂನ್ 11: ನೂಪುರ್ ಶರ್ಮಾ ಪ್ರವಾದಿ ಮುಹಮ್ಮದ್ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆಗಳ ಹಿಂಸಾಚಾರದ ನಂತರ, ಉತ್ತರ ಪ್ರದೇಶದ ಸಹರಾನ್‌ಪುರದ ಪೊಲೀಸರು ಭಾರಿ ಬಂದೋಬಸ್ತ್‌ನೊಂದಿಗೆ ಬುಲ್ಡೋಜರ್ ಕಾರ್ಯಾಚರಣೆ ಆರಂಭಿಸಿದ್ದಾರೆ. ಭಾರಿ ಪೊಲೀಸ್ ಉಪಸ್ಥಿತಿಯಲ್ಲಿ ಮುನ್ಸಿಪಲ್ ತಂಡಗಳೊಂದಿಗೆ ಬುಲ್ಡೋಜರ್‌ಗಳಿಂದ ಎರಡು ಮನೆಗಳನ್ನು ಧ್ವಂಸಗೊಳಿಸಿದ ವಿಡಿಯೊಗಳನ್ನು ಪೊಲೀಸರು ಹಂಚಿಕೊಂಡಿದ್ದಾರೆ. ಸಹರಾನ್‌ಪುರದಲ್ಲಿ ಒಟ್ಟು 64 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. ಪೊಲೀಸರು ಹಂಚಿಕೊಂಡ ದೃಶ್ಯಗಳಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾದ …
Read More »ಇಳಿದ ಟೊಮೆಟೊ ಬೆಲೆ, ಗ್ರಾಹಕರಿಗೆ ಸಮಾಧಾನ
ಹಲವು ವಾರಗಳಿಂದ ನಿರಂತರವಾಗಿ ಏರಿಕೆಯಾಗಿದ್ದ ಟೊಮೆಟೊ ಬೆಲೆ ಈ ವಾರ ಇಳಿಕೆ ಕಂಡಿದ್ದು, ಗ್ರಾಹಕರು ಸ್ವಲ್ಪ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ನಗರಕ್ಕೆ ಕೊಪ್ಪಳ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಟೊಮೆಟೊ ಬರುತ್ತದೆ. ಎರಡ್ಮೂರು ವಾರ ಅಲ್ಪ ಮಳೆಯಾಗಿದ್ದರಿಂದ ಬೆಳೆದಿದ್ದ ಟೊಮೆಟೊದಲ್ಲಿ ಕೆಲವೊಂದಿಷ್ಟು ಕೆಟ್ಟು ಹೋಗಿದ್ದವು. ಕಳೆದ ವಾರದಿಂದ ಮಳೆ ಇಲ್ಲ. ಹೀಗಾಗಿ ಈಗ ಬೆಲೆ ಇಳಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. ಚಿಲ್ಲರೆ ಮಾರುಕಟ್ಟೆಯಲ್ಲಿ ನಗರದಲ್ಲಿ ಹೋದ ವಾರ ಒಂದು ಕೆ.ಜಿ. ಟೊಮೆಟೊಗೆ ₹80 …
Read More »ರಾಜ್ಯದ ಈ ಜಿಲ್ಲೆಗಳಲ್ಲಿ ನಾಳೆ ‘ಶಾಲಾ-ಕಾಲೇಜು’ಗಳಿಗೆ ರಜೆ
ಬೆಂಗಳೂರು: ಕರ್ನಾಟಕದ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಹಲವಾರು ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಸೋಮವಾರ, ಅಂದರೆ ಜೂನ್ 13 ರಂದು ರಜೆ ಘೋಷಿಸಿದೆ. ವಿಜಯಪುರ, ಬಾಗಲಕೋಟೆ, ಬೆಳಗಾವಿ, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದೆ. ಇದಲ್ಲದೆ, ಸರ್ಕಾರಿ-ಅನುದಾನಿತ, ಅನುದಾನರಹಿತ ಮತ್ತು ಖಾಸಗಿ ಶಾಲೆಗಳು ಮತ್ತು ಕಾಲೇಜುಗಳು ( …
Read More »ಬೆಳಗಾವಿಯಲ್ಲಿ ಸ್ಟ್ರಾಂಗ್ ರೂಮ್ ಇರುವುದರಿಂದ ವಿಶೇಷ ಕಾಳಜಿ:ಬೊರಲಿಂಗಯ್ಯ
ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆಯ ಎಲ್ಲಾ ಹಂತದಲ್ಲಿಯೂ ವ್ಯಾಪಕ ಬಂದೋಬಸ್ತ್ ಮಾಡಲಾಗುತ್ತದೆ ಎಂದು ನಗರಪೊಲೀಸ್ ಆಯುಕ್ತರಾದ ಡಾ. ಬೊರಲಿಂಗಯ್ಯ ತಿಳಿಸಿದ್ದಾರೆ. ಬೆಳಗಾವಿ ನಗರದಲ್ಲಿ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಂದೋಬಸ್ತ್ ಕುರಿತಂತೆ ಮಾತನಾಡಿದ ಡಾ. ಬೊರಲಿಂಗಯ್ಯನವರು, ಪರಿಷತ್ ಚುನಾವಣೆ ಹಿನ್ನೆಲೆ ಪೋಲಿಂಗ್ ಡೇದಿಂದಲೇ ಬಂದೋಬಸ್ತ್ ಕಾರ್ಯವನ್ನು ಮಾಡಲಾಗುತ್ತದೆ. ಬೆಳಗಾವಿ ನಗರದಲ್ಲಿಯೂ ವಿಶೇಷ ಭದ್ರತೆ ಒದಗಿಸಲಾಗುತ್ತದೆ. ಬೆಳಗಾವಿ ಪ್ರಾದೇಶಿಕ ಆಯುಕ್ತರ ಅಧೀನದಲ್ಲಿ ಬರುವ ಎಲ್ಲಾ ಕಡೆ ಬಂದೋಬಸ್ತ್ …
Read More »ಹೊರಟ್ಟಿ ಮೇಲೆ ಕೇಸ್, ನೋಟಿಸ್ :R.C. ಆದಿತ್ಯಾ ಬಿಸ್ವಾಸ್
ವಿಧಾನಪರಿಷತ್ ಚುನಾವಣೆ ಹಿನ್ನೆಲೆ ನೀತಿಸಂಹಿತೆ ಉಲ್ಲಂಘನೆ ಕೇಸ್‍ನಡಿ ಐದು ಸೀಜ್‍ಗಳಾಗಿವೆ. ಇದು ಬಿಟ್ಟು ಎರಡು ಮೇಜರ್ ದೂರು ಬಂದಿವೆ, ಕೆಲವು ಸಣ್ಣಪುಟ್ಟ ದೂರುಗಳನ್ನು ನಾವು ಇತ್ಯರ್ಥ ಮಾಡಿದ್ದೇವೆ ಎಂದು ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯಾ ಬಿಸ್ವಾಸ್ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯಾ ಬಿಸ್ವಾಸ್ ಅವರು ಬಾಗಲಕೋಟೆಯಿಂದ ಓರ್ವ ವ್ಯಕ್ತಿ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಭಾಷ ಕೋಟೆ …
Read More »ಪೊಲೀಸ್ ಇನ್ಸ್ಪೆಕ್ಟರ್ ಧಮ್ಕಿಗೆ ಹೆದರಿದ 13 ವರ್ಷದ ಬಾಲಕಿ ಶಾಲೆಗೆ ಹೋಗದೇ, ಭಯಭೀತ
ಕಾರವಾರ: ಪೊಲೀಸ್ ಇನ್ಸ್ಪೆಕ್ಟರ್ ಧಮ್ಕಿಗೆ ಹೆದರಿದ 13 ವರ್ಷದ ಬಾಲಕಿಯೋರ್ವಳು ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದು ಕುಳಿತ ಘಟನೆ ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ನಡೆದಿದೆ. ಮುಂಡಗೋಡ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಿದ್ದಪ್ಪ ಸಿಮಾನಿ ಬಾಲಕಿಗೆ ಧಮ್ಕಿ ಹಾಕಿದ್ದಾರೆ ಎನ್ನಲಾಗ್ತಿದೆ. ಜೂನ್ 5ರಂದು ಹೊಲದ ವಿಷಯವಾಗಿ ಸುಭಾನ್‌ಸಾಬ್ ನಬಿಸಾಬ್ ಹುಲಗುರ ಹಾಗೂ ಮುಂಡಗೋಡ ಠಾಣೆ ಇನ್ಸ್ಪೆಕ್ಟರ್ ಸಿದ್ದಪ್ಪ ಸಿಮಾನಿ ನಡುವೆ ಜೋರಾದ ಮಾತುಕತೆ ನಡೆದಿದೆ. ಇದನ್ನು ದೂರದಿಂದಲೇ ನೋಡುತ್ತಿದ್ದ ಬಾಲಕಿ …
Read More »ಶಾಸಕರ ತಿಥಿ ಹಾಗೂ ಮಾಜಿ ಮುಖ್ಯಮಂತ್ರಿಯ ಕೈಲಾಸ ಸಮಾರಾಧನೆ ಕಾರ್ಡ್ ಮಾಡಿ ವಿಕೃತಿ
ತುಮಕೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದರಿಂದ ಉಂಟಾಗಿರುವ ಅಡ್ಡಪರಿಣಾಮ ಶಾಸಕರ ತಿಥಿ ಹಾಗೂ ಮಾಜಿ ಮುಖ್ಯಮಂತ್ರಿಯ ಕೈಲಾಸ ಸಮಾರಾಧನೆ ಕಾರ್ಡ್ ಮಾಡಿ ವಿಕೃತಿ ಮೆರೆಯುವ ಮಟ್ಟಕ್ಕೆ ತಲುಪಿದೆ. ಶುಕ್ರವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಅಡ್ಡ ಮತದಾನ ಮಾಡಿದ್ದರು. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗರಂ ಆಗಿದ್ದರು. ಶನಿವಾರ ಬೆಳಗ್ಗೆ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದ ಶ್ರೀನಿವಾಸ್, ತಾಕತ್ತಿದ್ದರೆ ನನ್ನ ಕ್ಷೇತ್ರದಲ್ಲಿ …
Read More »ಶಿಕ್ಷಕರ ಹಾಗೂ 2 ಪದವೀಧರರ ಕ್ಷೇತ್ರಗಳಿಗೆ ಸೋಮವಾರಮತದಾನ, ಜೂ.15 ರಂದು ಬೆಳಗಾವಿಯ ಜ್ಯೋತಿ ಪಿಯು ಕಾಲೇಜಿನಲ್ಲಿ ಮತ ಎಣಿಕೆ
ವಿಧಾನ ಪರಿಷತ್ತಿನ 2 ಶಿಕ್ಷಕರ ಕ್ಷೇತ್ರ ಹಾಗೂ 2 ಪದವೀಧರರ ಕ್ಷೇತ್ರಗಳಿಗೆ ಸೋಮವಾರ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ವಾಯವ್ಯ ಪದವೀಧರ ಕ್ಷೇತ್ರ, ವಾಯವ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಶಿಕ್ಷಕರ ಕ್ಷೇತ್ರ ಹಾಗೂ ದಕ್ಷಿಣ ಪದವೀಧರರ ಕ್ಷೇತ್ರಗಳ ಚುನಾವಣೆಗೆ ಚುನಾವಣಾ ಆಯೋಗ ಎಲ್ಲ ಸಿದ್ಧತೆ ಮಾಡಿದೆ. ನಾಲ್ಕು ಕ್ಷೇತ್ರದಲ್ಲಿ ಒಟ್ಟು 607 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 45 ಪುರುಷ ಹಾಗೂ 4 ಮಹಿಳೆ ಸೇರಿ 49 ಮಂದಿ …
Read More »ಬೆಳಗಾವಿ ಸೇರಿ ರಾಜ್ಯದೆಲ್ಲೆಡೆ ಇಂದಿನಿಂದ ಭಾರಿ ಮಳೆಯ ಸಾಧ್ಯತೆ
ಬೆಂಗಳೂರು : ರಾಜ್ಯದಲ್ಲಿ ಇಂದಿನಿಂದ ಮುಂಗಾರು ಮಳೆ ಬಿರುಸಾಗಲಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಯಾದಗಿರಿ, ವಿಜಯಪುರ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಬೆಳಗಾವಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ …
Read More »