Breaking News

ರಾಷ್ಟ್ರಪತಿ ಚುನಾವಣೆ:ಬಿಜೆಪಿ ಮಹಾನಗರ ಹಾಗೂ ಅನಿಲ ಬೆನಕೆ ನೇತೃತ್ವದಲ್ಲಿ ವಿಜಯೋತ್ಸವ ಆಚರಣೆ

ಬೆಳಗಾವಿ-: ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಗಿದೆ. ಗುರುವಾರ ಬೆಳಗಾವಿ ಗ್ಯಾಂಗವಾಡಿ ಮರಗಾಯಿದೇವಿ ಮಂದಿರದ ಬಳಿ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ಬಿಜೆಪಿ ಪದಾದಿಕಾರಗಳ ಜೊತೆಗೆ ವಿಜಯೋತ್ಸವ ಆಚರಿಸಿ ದ್ರೌಪದಿ ಮುರ್ಮು ಅವರಿಗೆ ಶುಭ ಹಾರೈಸಿದರು. ಈ ವೇಳೆ ಮಾತನಾಡಿ ಶಾಸಕ …

Read More »

ಬೆಳಗಾವಿ ಮೂಲದ ಯುವತಿ ಪುತ್ತೂರಿನ ಪೊಲೀಸರಿಗೆ ಅತಿತಿ

ಪುತ್ತೂರು : ಬೆಳಗಾವಿ ಮೂಲದ ಯುವತಿ ಪುತ್ತೂರಿನ ಸಂಸ್ಥೆಯೊಂದಕ್ಕೆ ಕೆಲಸ ಅರಸಿಕೊಂಡು ಬಂದ ವೇಳೆ ಅನ್ಯ ಧರ್ಮದ ವ್ಯಕ್ತಿಯ ಜತೆಗಿರುವುದನ್ನು ಗಮನಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಆತನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಜು.21 ರಂದು ಮಂಜಲ್ಪಡ್ಪು ಬಳಿ ಸಂಭವಿಸಿದೆ.   ಬೆಳಗಾವಿಯ ಗಾನಪುರ ಮೂಲದ ಹಿಂದೂ ಯುವತಿ ಮಂಗಳೂರು ಫಿಶ್ ಕಂಪೆನಿಯಲ್ಲಿ ಕೆಲಸಕ್ಕಿದ್ದು ಅಲ್ಲಿಂದ ಪುತ್ತೂರು ಮಂಜಲ್ಪಡ್ಪುವಿನಲ್ಲಿರುವ ಸಂಸ್ಥೆಯಲ್ಲಿ ಕೆಲಸಕ್ಕೆಂದು ಬಂದಿದ್ದರು. ಈ ವೇಳೆ ಮುಕ್ವೆಯ ಅನ್ಯ ಧರ್ಮದ ವ್ಯಕ್ತಿ ಆಕೆಗೆ …

Read More »

ದೇಶದ 15ನೇ ರಾಷ್ಟ್ರಪತಿಯಾಗಿ ಎನ್ ಡಿಎ ಅಭ್ಯರ್ಥಿ ದ್ರೌಪದಿ ಶ್ಯಾಮಚರಣ ಮುರ್ಮು ಆಯ್ಕೆ

ಹೊಸದಿಲ್ಲಿ: ದೇಶದ 15ನೇ ರಾಷ್ಟ್ರಪತಿಯಾಗಿ ಎನ್ ಡಿಎ ಅಭ್ಯರ್ಥಿ ದ್ರೌಪದಿ ಶ್ಯಾಮಚರಣ ಮುರ್ಮು ಆಯ್ಕೆಯಾಗಿದ್ದು ಅಧಿಕೃತ ಘೋಷಣೆ ಬಾಕಿಯಿದೆ. ಈ ಮೂಲಕ ಅವರು ಪ್ರತಿಭಾ ಪಾಟೀಲ್ ಅವರ ನಂತರ ದೇಶದ ಎರಡನೇ ಹಾಗೂ ಬುಡಕಟ್ಟು ಸಮುದಾಯದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನೂತನ ರಾಷ್ಟ್ರಪತಿಯಾಗಿ ಅವರು ಜು.25ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಗುರುವಾರ ಸಂಸತ್ ಭವನದಲ್ಲಿ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ದ್ರೌಪದಿ ಮುರ್ಮು ಅವರು 3.78 ಲಕ್ಷ …

Read More »

ಸ್ನಾನ ಮಾಡುವ ವಿಡಿಯೋ ತೆಗೆದು ಯುವಕನ ಬ್ಲ್ಯಾಕ​ ಮೇಲ್

ಮೈಸೂರು: ತಾನು ಸ್ನಾನ ಮಾಡುವ ವಿಡಿಯೋ ತೆಗೆದು ಯುವಕನೋರ್ವ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದು, ಈ ಯುವಕನನ್ನು ಬಂಧಿಸುವಂತೆ ನೊಂದ ಮಹಿಳೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ, ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ನಗರದ ನಿವಾಸಿಯಾದ ಈ ಮಹಿಳೆಯು  MEDIA ಜೊತೆ ಮಾತನಾಡಿ, ನಾನು ಸ್ನಾನ ಮಾಡುವ ವಿಡಿಯೋವನ್ನು ಪ್ರಮೋದ್ ಎಂಬ ಯುವಕ ತೆಗೆದಿದ್ದಾನೆ. ಕಳೆದ ಒಂದೂವರೆ ವರ್ಷದಿಂದ ನನ್ನನ್ನು ಎಲ್ಲ ರೀತಿಯಲ್ಲೂ ಬ್ಲ್ಯಾಕ್​ಮೇಲ್​ ಮಾಡಿದ್ದ. ಈ ವಿಚಾರ ನನ್ನ ಗಂಡನಿಗೆ …

Read More »

ಪಂಜಾಬ್ ಮಾದರಿಯಲ್ಲಿ ಕರ್ನಾಟಕದಲ್ಲೂ ಆಪ್ ಗೆ ಅಧಿಕಾರ: ಭಾಸ್ಕರ ರಾವ್

ಹುಬ್ಬಳ್ಳಿ: ಹೊಂದಾಣಿಕೆ ರಾಜಕೀಯಕ್ಕೆ ಅವಕಾಶ ನೀಡದೆ, ವಿಷಯಾಧಾರಿತ ಚುನಾವಣೆಗೆ ಹೋಗುತ್ತೇವೆ. ಪಂಜಾಬ್ ಮಾದರಿಯಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಆಪ್ ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್ ತಿಳಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಕಿತ್ತಾಟ, ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ. ಇರುವ ಪ್ರಮುಖ ಮೂರು ಪಕ್ಷಗಳು ಪರಸ್ಪರ ಆರೋಪ, ಹಗರಣಗಳ ಪ್ರಸ್ತಾಪಗಳ ಮೂಲಕ ಜನರ ಸಮಸ್ಯೆ, ನೈಜ ವಿಷಯಗಳನ್ನು ಮರೆಮಾಚಿಸಲಾಗುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಈಗಲೇ ಕಿತ್ತಾಟ ಶುರುವಾಗಿದೆ. ಮತದಾರರ ತೀರ್ಪು …

Read More »

ಧಾರವಾಡ : ಟಂಟಂ ವಾಹನ ತೊಳೆಯಲು ಹೋದ ತಂದೆ-ಮಗ ನೀರುಪಾಲು

ಧಾರವಾಡ: ಟಂಟಂ ವಾಹನವನ್ನು ತೊಳೆಯಲೆಂದು ಕೆರೆಗೆ ಇಳಿದಿದ್ದ ತಂದೆ-ಮಗ ಇಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ನಡೆದಿದೆ. ಕ್ಯಾರಕೊಪ್ಪ ಗ್ರಾಮದ ಗದಿಗೆಪ್ಪ ಅಂಗಡಿ (ತಂದೆ) ಹಾಗೂ ರವಿ ಅಂಗಡಿ (ಮಗ) ಸಾವಿಗೀಡಾದ ದುರ್ದೈವಿಗಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.   ಇವರಿಬ್ಬರೂ ಇಂದು ಬೆಳಿಗ್ಗೆ ಟಂಟಂ ವಾಹನ ತೊಳೆಯಲೆಂದು ಗ್ರಾಮದ ಹೊರವಲಯ ನವೋದಯ ಶಾಲೆಯ ಪಕ್ಕದ ಕರೆಗೆ ಇಳಿದಾಗ ಕಾಲು ಜಾರಿ ಕರೆಯಲ್ಲಿ …

Read More »

ಬರ್ಬರವಾಗಿ ಹತ್ಯೆಗೈದು ಯುವತಿಯ ರುಂಡದೊಂದಿಗೆ ಠಾಣೆಗೆ ಆಗಮಿಸಿದ ಪಾಗಲ್ ಪ್ರೇಮಿ

ವಿಜಯನಗರ (ಹೊಸಪೇಟೆ): ಪಾಗಲ್‌ ಪ್ರೇಮಿಯೋರ್ವ ಯುವತಿಯ ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಯುವತಿಯ ತಲೆಯೊಂದಿಗೆ ಠಾಣೆಗೆ ಆಗಮಿಸಿ ಪೊಲೀಸರಿಗೆ ಶರಣಾದ ಘಟನೆ ಕಾನಾಹೊಸಹಳ್ಳಿ ಕನ್ನಬೋರಯ್ಯನಹಟ್ಟಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ನಿರ್ಮಲಾ (23) ಕೊಲೆಯಾದ ಯುವತಿ, ಭೋಜರಾಜ ಎಂಬಾತ ಕೊಲೆ ಮಾಡಿದ ವ್ಯಕ್ತಿ. ನಿರ್ಮಲಾ ಹಾಗೂ ಭೋಜರಾಜ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಕಳೆದ ಮೂರು ತಿಂಗಳ ಹಿಂದೆ ಬೇರೆ ಯುವತಿಯೊಂದಿಗೆ ಬೋಜರಾಜ ಮದುವೆಯಾಗಿದ್ದ ಎಂದು ತಿಳಿದುಬಂದಿದೆ. ಯುವತಿ ಬಿಎಸ್ಸಿ ನರ್ಸಿಂಗ್ …

Read More »

ಇಂದು ಡಾ| ಹೆಗ್ಗಡೆ ಪ್ರಮಾಣ ವಚನ:

ಬೆಳ್ತಂಗಡಿ: ನಾಡಿನ ಪುಣ್ಯದ ನೆಲೆವೀಡಾಗಿ ಚತುರ್ದಾನ ಪರಂಪರೆಯೊಂದಿಗೆ ಸಮಾಜಮುಖೀ ಯೋಜನೆಗಳಿಂದ ಐತಿಹಾಸಿಕ ಗೌರವ ಗಳಿಗೆ ಸಾಕ್ಷಿಯಾ ಗಿರುವ ಧರ್ಮಸ್ಥಳ ಕ್ಷೇತ್ರವಿಂದು ಮಗದೊಂದು ಇತಿಹಾಸ ಬರೆಯುತ್ತಿದೆ. ಕ್ಷೇತ್ರದ ಧರ್ಮಾಧಿ ಕಾರಿಯವರಾದ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ರಾಜ್ಯ ಸಭೆಗೆ ಪ್ರವೇಶಿಸುವ ಮೂಲಕ ರಾಜಧರ್ಮ ಪರಿಪಾಲನೆಯ ಮತ್ತೊಂದು ಅಧ್ಯಾಯ ಬರೆಯಲಿದ್ದಾರೆ. ಜನಸಾಮಾನ್ಯರ ಏಳಿಗೆಗಾಗಿ ಹಲವು ಸೇವೆಗಳನ್ನು ಸಲ್ಲಿಸಿರುವ ಧರ್ಮಾಧಿಕಾರಿಗಳ ಅಗ್ರಮಾನ್ಯ ಸೇವೆ ಯನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಸಭೆಗೆ ನಾಮ ನಿರ್ದೇಶನಗೊಳಿಸಿದ ಕ್ಷಣದಿಂದ …

Read More »

ಆಂಬುಲೆನ್ಸ್ ಚಾಲಕನ ವೇಗ, ಟೋಲ್ ಸಿಬ್ಬಂದಿಯ ಅಜಾಗರುಕತೆಗೆ ಬಿತ್ತು ಒಂದೇ ಕುಟುಂಬದ 4 ಹೆಣ

ಉಡುಪಿ, ಜುಲೈ 20: ಜಿಲ್ಲೆಗೆ ಬುಧವಾರ ಕರಾಳ ಬುಧವಾರವಾಗಿ ಮಾರ್ಪಾಟಾಗಿದೆ. ಬೆಳಗ್ಗಿನ ವೇಳೆಗೆ ಚಾಕಲೇಟ್ ನಿಂದ ಉಸಿರುಗಟ್ಟಿ ಮಗು ಸಾವನ್ನಪ್ಪಿದರೆ ಸಂಜೆಯ ವೇಳೆಗೆ ಆಂಬುಲೆನ್ಸ್ ಒಂದು ಭೀಕರವಾಗಿ ಅಫಘಾತವಾಗಿ ಒಂದೇ ಕುಟುಂಬದ ನಾಲ್ವರು ಮೃತರಾಗಿದ್ದಾರೆ. ಅಂಬುಲೆನ್ಸ್ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು,ಎಂತವರ ಹೃದಯವೂ ನಡುಗಿಸುವಂತಿದೆ.   ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ ಬಳಿ ವೇಗವಾಗಿ ಬಂದ ಅಂಬುಲೆನ್ಸ್ ಟೋಲ್ ಕಂಬಕ್ಕೆ ಢಿಕ್ಕಿ ಹೊಡೆದು ಭೀಕರ …

Read More »

SSLC’ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ : ಇಂದು ಮಧ್ಯಾಹ್ನ 12 ಗಂಟೆಗೆ ‘ವೆಬ್ ಸೈಟ್’ನಲ್ಲಿ ಲಭ್ಯ |

ಬೆಂಗಳೂರು: ಕಳೆದ ಜೂನ್ ನಲ್ಲಿ ನಡೆದಿದ್ದಂತ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ( SSLC Supplementary Exam Result 2022 ) ಇಂದು ಪ್ರಕಟಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಇಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತ ವೆಬ್ ಸೈಟ್ https://karresults.nic.in/ ನಲ್ಲಿ ಫಲಿತಾಂಶ ಲಭ್ಯ ವೀಕ್ಷಿಸಬಹುದಾಗಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh ) ಮಾಹಿತಿ ಬಿಡುಗಡೆ ಮಾಡಿದ್ದು, 2022ರ ಜೂನ್ …

Read More »