Breaking News

ಬೆಳಗಾವಿ: ಪ್ರೇಯಸಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ, ಕಾರಣ?

ಬೆಳಗಾವಿ: ಯುವಕನೋರ್ವ ಪ್ರೇಯಸಿಯ ಕೊಂದು ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬಸವ ಕಾಲೋನಿಯಲ್ಲಿ ನಡೆದಿದೆ. ಜಿಲ್ಲೆಯ ಸವದತ್ತಿ ತಾಲೂಕಿನ ಮದ್ಲೂರು ಗ್ರಾಮದ ರೇಣುಕಾ ಎಂಬುವಳನ್ನು ಬೂದಿಗೊಪ್ಪ ಗ್ರಾಮದ ರಾಮಚಂದ್ರ ತೆಣಗಿ (29) ಎಂಬಾತ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ರೇಣುಕಾ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ರಾಮಚಂದ್ರ ತೆಣಗಿ ರಾಜ್ಯಶಾಸ್ತ್ರದಲ್ಲಿ ಉನ್ನತ ಪದವಿ ವ್ಯಾಸಂಗ ಮಾಡುತ್ತಿದ್ದ. ಕೊಲೆಯಾದ ರೇಣುಕಾ …

Read More »

ಈಶ್ವರಪ್ಪಗೆ ಕ್ಲೀನ್‌ಚಿಟ್‌: ನ್ಯಾಯ ಸಿಗುವವರೆಗೆ ಹೋರಾಟ; ಸಂತೋಷ್‌ ಸಹೋದರ ಪ್ರಶಾಂತ

ಬೆಳಗಾವಿ: ‘ಸಂತೋಷ್‌ ಪಾಟೀಲ ಹಾಗೂ ಶಾಸಕ ಕೆ.ಎಸ್‌.ಈಶ್ವರಪ್ಪ ಅವರ ಸಹವರ್ತಿಗಳ ಮೊಬೈಲ್‌ ಸಂಭಾಷಣೆಯ ದಾಖಲೆಗಳನ್ನು ಪಡೆದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುತ್ತೇವೆ’ ಎಂದು ಸಂತೋಷ್‌ ಅವರ ಹಿರಿಯ ಸಹೋದರ ಪ್ರಶಾಂತ ಪಾಟೀಲ ತಿಳಿಸಿದರು.   ಗುತ್ತಿಗೆದಾರ ಸಂತೋಷ್‌ ಪಾಟೀಲ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪ ಹೊತ್ತಿದ್ದ ಶಾಸಕ ಕೆ.ಎಸ್‌.ಈಶ್ವರಪ್ಪ ಅವರಿಗೆ ಕ್ಲೀನ್‌ಚಿಟ್‌ ನೀಡಿದ ಹಿನ್ನೆಲೆಯಲ್ಲಿ, ಅವರು ಗುರುವಾರ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರು.   ‘ಆರೋಪಿ …

Read More »

ದೇಹಲಿ ಭೇಟಿ ಬಳಿಕ ನಿಗಮ, ಮಂಡಳಿ ನೇಮಕ: ಸಿ.ಎಂ

ಮಂಡ್ಯ: ‘ದೆಹಲಿಗೆ ಭೇಟಿ ನೀಡಿದ ನಂತರ ನಿಗಮ, ಮಂಡಳಿ ನೇಮಕಾತಿ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಮಂತ್ರಿಮಂಡಲಕ್ಕೆ ಸೇರ್ಪಡೆ ವಿಚಾರವನ್ನೂ ಪಕ್ಷದ ವರಿಷ್ಠರ ಜೊತೆ ಚರ್ಚಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ತಿಳಿಸಿದರು.   ಕೆ.ಆರ್‌.ಪೇಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಶೀಘ್ರದಲ್ಲೇ ದೆಹಲಿಗೆ ಭೇಟಿ ನೀಡಲಿದ್ದು ನೇಮಕಾತಿ ಕುರಿತಂತೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ನಿಗಮ, ಮಂಡಳಿಗೆ ನೇಮಕಾತಿ ಕುರಿತಂತೆ ಇಲ್ಲಿಯವರೆಗೂ ಯಾವುದೇ ಚರ್ಚೆ ನಡೆಸಿಲ್ಲ’ ಎಂದರು. ಕೆ.ಎಸ್‌.ಈಶ್ವರಪ್ಪ ಅವರು …

Read More »

ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ : ಶಂಕರ ಪಾಟೀಲ ಮುನೇನಕೊಪ್ಪ

ಹುಬ್ಬಳ್ಳಿ: ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸದ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಮಾಹಿತಿ ನೀಡುವಂತೆ ತಾಕೀತು ಮಾಡಿದರು. ಇಲ್ಲಿನ ಮಿನಿವಿಧಾನಸೌಧದ ತಾಪಂ ಸಭಾಭವನದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ತ್ತೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈಗಾಗಲೇ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವಾರು ಕಟ್ಟಡಗಳ ಕಾಮಗಾರಿ ಅರ್ಧಕ್ಕೆ ಮಾಡಲಾಗಿದೆ ಎಂದರಲ್ಲದೆ, ಕಾಮಗಾರಿಗಳ ಕುರಿತು ಮಾಹಿತಿ ನೀಡುವಂತೆ ಅಧಿಕಾರಿಗೆ …

Read More »

ಒಬಿಸಿಗೆ ಶೇ.33 ಮೀಸಲಾತಿ

ಬೆಂಗಳೂರು: ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ) ಗಳಿಗೆ ಶೇ. 33ರಷ್ಟು ರಾಜಕೀಯ ಮೀಸಲಾತಿ ನೀಡುವಂತೆ ನ್ಯಾ| ಭಕ್ತವತ್ಸಲ ಸಮಿತಿಯು ತನ್ನ ವರದಿಯಲ್ಲಿ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ. ಸಮಿತಿಯು ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವರದಿ ಸಲ್ಲಿಸಿದೆ. ಬಿಬಿಎಂಪಿ, ಜಿಲ್ಲಾ ಮತ್ತು ತಾ.ಪಂ. ಚುನಾವಣೆ ನಡೆಸಲು ಆಯೋಗದ ವರದಿ ನಿರ್ಣಾಯಕವಾಗಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾಕರನ್ನು ಒಳಗೊಂಡಂತೆ ಇತರ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇ. 44.40ರಷ್ಟಿದೆ. …

Read More »

ಭಿಕ್ಷಾಟಣೆ ಮಾಡುತ್ತಿದ್ದ 8 ಜನ ಹೆಣ್ಣು ಮಕ್ಕಳು 2 ಜನ ಗಂಡು ಮಕ್ಕಳು ಹಾಗೂ 12 ಜನ ಮಹಿಳೆ ವಶಕ್ಕೆ

ಬೆಳಗಾವಿ ನಗರದ ಮಹಿಳಾ ಪೊಲೀಸ್ ಠಾಣೆಯ ಮಾನವ ಕಳ್ಳಸಾಗಾಣಿಕೆ ನಿಗ್ರಹ ಪಡೆ (AHTU) ಹಾಗೂ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ 1098, ಕಾರ್ಮಿಕ ಇಲಾಖೆ, ಯೋಜನಾ ನಿರ್ದೇಶಕರು ಬಾಲ ಕಾರ್ಮಿಕ ಯೋಜನೆ ಬೆಳಗಾವಿ ಮತ್ತು ಸಮಾಲೋಚಕರ ಸಹಯೋಗದೊಂದಿಗೆ ಬೆಳಗಾವಿ ನಗರದ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕ ರಸ್ತೆಗಳ ಮೇಲೆ ಸಂಚರಿಸುವ ವಾಹನಗಳ ಸಿಗ್ನಲ್ ಹತ್ತಿರ ಭಿಕ್ಷಾಟಣೆ ಮಾಡುತ್ತಿದ್ದ 8 ಜನ ಹೆಣ್ಣು ಮಕ್ಕಳು 2 …

Read More »

ಆರು ದಿನಗಳ ಪರಿಯಂತ ಮಳೆಯನ್ನ ಲೆಕ್ಕಿಸದೆ ಸೈಕಲ್ ಜಾತಾ

ಆರು ದಿನಗಳ ಪರಿಯಂತ ಮಳೆಯನ್ನ ಲೆಕ್ಕಿಸದೆ ಸೈಕಲ್ ಜಾತಾದಲ್ಲಿ ಪಾಲಗೋಂಡ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಸೈಕಲ್ ಸವಾರರಿಗೆ ಪಕ್ಷದ ಮುಖಂಡ ಮಹೇಂದ್ರ ತಮ್ಮಣ್ಣವರ ಇವರಿಂದ ಸತ್ಕಾರ ರಾಯಬಾಗ ತಾಲೂಕಿನಲ್ಲಿ ಇದೆ 11–7-2022 ರಿಂದ 16-7-2022 ರ ವರೆಗೆ ಕುಡಚಿ ಮತ ಕ್ಷೇತ್ರದ ಮುಖಂಡ ಮಹೇಂದ್ರ ತಮ್ಮಣ್ಣವರ ಕ್ಷೇತ್ರದ 32 ಹಳ್ಳಿಗಳಲ್ಲಿ ಸೈಕಲ್‌ ಜಾತಾ ಮಾಡುವ ಮೂಲಕ ಆಡಳಿತ ಪಕ್ಷದವಾದ ಬಿಜೆಪಿ ಸರಕಾರದ ಕಾರ್ಯ ವೈಪಲ್ಯ ಹಾಗೂ ಬೆಲೆ ಏರಿಕೆ ಖಂಡಿಸಿ …

Read More »

ಶಾಲೆಯಲ್ಲಿ ಬಿಸಿಯೂಟ ತಿಂದು 50 ಮಕ್ಕಳಿಗೆ ವಾಂತಿ, ಭೇದಿ, ಮಕ್ಕಳು ಅಸ್ವಸ್ಥ

ಶಾಲೆಯಲ್ಲಿ ಮಧ್ಯಾಹ್ನ ಊಟಕ್ಕೆ ಅನ್ನ ಹಾಗೂ ತರಕಾರಿ ಸಾಂಬಾರ್​ ಮಾಡಿದ್ರು. ಎಲ್ಲಾ ಮಕ್ಕಳು ಅದೇ ಊಟ ಮಾಡಿದ್ದಾರೆ. ಊಟ ತಿಂದ ಬಳಿಕ 50 ಮಕ್ಕಳಿಗೆ ವಾಂತಿ, ಭೇದಿ ಶುರುವಾಗಿ ಅಸ್ವಸ್ಥಗೊಂಡಿದ್ದಾರೆ. ಚಿತ್ರದುರ್ಗ (ಜು 21):  ಬಿಸಿಯೂಟ ಸೇವಿಸಿದ್ದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳುಅಸ್ವಸ್ಥಗೊಂಡಿದ್ದಾರೆ. ಚಿತ್ರದುರ್ಗದ ಇಸಾಮುದ್ರ ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ‌ ನಡೆದಿದೆ. ವಾಂತಿ, ಭೇದಿಯಿಂದ ಅಸ್ವಸ್ಥಗೊಂಡವರನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಭರಮಸಾಗರ ಪ್ರಾಥಮಿಕ …

Read More »

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಎಂದ B.S.Y.

ಬೆಂಗಳೂರು: ತಮ್ಮನ್ನು ಪಕ್ಷವು ಮೂಲೆಗುಂಪು ಮಾಡುತ್ತಿದೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಎಂದು ಗುರುವಾರ ಹೇಳಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದ ರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಉಲ್ಲೇಖಿಸದೆ ಮಾತನಾಡಿದ ಯಡಿಯೂರಪ್ಪ, “ಕಾಂಗ್ರೆಸ್ ನಾಯಕರು ಆತುರಾತುರವಾಗಿ ಮತ್ತು ಮುಖ್ಯಮಂತ್ರಿಯಾಗಲು ಪರಸ್ಪರ ಪೈಪೋಟಿ ನಡೆಸುತ್ತಿದ್ದಾರೆ. ನಾವು ಹಾಗೆ ಆಗಲು ಬಿಡುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ” …

Read More »

ಸಂಕೇಶ್ವರ : ಟಿಪ್ಪರ್ ಢಿಕ್ಕಿ ಹೊಡೆದು 50ಕ್ಕೂ ಹೆಚ್ಚು ಕುರಿಗಳ ಸಾವು

ಸಂಕೇಶ್ವರ : ಟಿಪ್ಪರ್ ವಾಹನವೊಂದು ಹಾಯ್ದು 50ಕ್ಕೂ ಅಧಿಕ ಕುರಿಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಟಿಪ್ಪರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಕುರಿಗಳ ಮೇಲೆ ಹಾಯ್ದು ವಾಹನ ಪಲ್ಟಿಯಾಗಿದೆ ಘಟನೆ ನಡೆಯುತ್ತಿದ್ದಂತೆ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.   ಅಮ್ಮಣಗಿ ಗ್ರಾಮದ ಕುರಿಗಾಯಿ ಹಾಲಪ್ಪ ಸಿದ್ದಪ್ಪ ಹೆಗಡೆ ಎಂಬುವವರಿಗೆ ಸೇರಿದ ಕುರಿಗಳು ಇದಾಗಿವೆ. ಘಟನಾ ಸ್ಥಳಕ್ಕೆ ಸಂಕೇಶ್ವದ ಪೋಲಿಸರು ಭೇಟಿ ನೀಡಿ ಪರಿಶೀಲನೆ …

Read More »