ಬೆಳಗಾವಿ: ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿ 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಸಿಟಿ ಕಂಪೋಸ್ಟ್ ಮಾರ್ಕೆಟ್ ಲೈಸನ್ಸ್ ನೀಡಲು ಬೆಳಗಾವಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿ ಯೋಗೇಶ್ ಫಕೀರೇಶ ಅಗಡಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಇಂದು ಸ್ವೀಕರಿಸುತ್ತಿದ್ದ 20 ಸಾವಿರ ಲರೂ. ಹಾಗೂ ನಿನ್ನೆ ಸ್ವೀಕರಿಸಿದ್ದ 10 …
Read More »2024ರ ಲೋಕಸಭೆ ಚುನಾವಣೆ ಬಳಿಕ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ: ಉಮೇಶ್ ಕತ್ತಿ
ಬೆಳಗಾವಿ: 2024ರ ಲೋಕಸಭೆ ಚುನಾವಣೆ ಬಳಿಕ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ ಎಂದು ಆಹಾರ ಮತ್ತು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವುದು ನಿಶ್ಚಿತ. 2024 ರ ಲೋಕಸಭಾ ಚುನಾವಣೆ ನಂತರ ಕರ್ನಾಟಕ 2 ರಾಜ್ಯವಾಗಲಿದೆ. ದೇಶದಲ್ಲಿ 50 ಹೊಸ ರಾಜ್ಯಗಳಾಗಲಿದ್ದು, ಈ ಕುರಿತು ಚರ್ಚೆ ಈಗಾಗಲೇ ನಡೆಯುತ್ತಿದೆ ಎಂದಿದ್ದಾರೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವುದು ಖಚಿತ. …
Read More »ಗೋಕಾಕ : 20 ವರ್ಷದ ಮಹಿಳೆ ನಾಪತ್ತೆ……?
ಗೋಕಾಕ ತಾಲೂಕಿನ ಕೆಮ್ಮನಕೋಲ ಗ್ರಾಮದ ೨೦ ವರ್ಷದ ಬಸವ್ವ ಬಸವರಾಜ ಹಣಮಂತನ್ನವರ ಜೂನ್ ೧೬ ರಂದು ಬೆಳಿಗ್ಗೆ ೬ ಗಂಟೆಯ ಸುಮಾರಿಗೆ ಮನೆಯಿಂದ ಹೊರಟು ನಾಪತ್ತೆಯಾಗಿದ್ದಾರೆ. ನಾಪತ್ತೆ ಮಹಿಳೆ ಚಹರೆ: ಎತ್ತರ ೫’೩, ಸದೃಢ ಮೈ, ಮುಖ ಬಣ್ಣ ಸಾದಾಗಪ್ಪು ಬಣ್ಣ , ಮಾತನಾಡುವ ಭಾಷೆ ಕನ್ನಡ , ಧರಿಸಿರುವ ಉಡುಪು ಚಾಕಲೇಟ್ ಗವನ. ಮಹಿಳೆ ಪತ್ತೆಯಾದ್ದಲ್ಲಿ ಕುಲಗೋಡ ಪೋಲಿಸ್ ಠಾಣೆಯ ದೂರವಾಣಿ ಸಂಖ್ಯೆ – ೦೮೩೩೪-೨೨೨೨೩೩ನ್ನು ಸಂಪರ್ಕಿಸಬಹುದು …
Read More »ಗೌಂಡವಾಡ ಗ್ರಾಮಕ್ಕೆ ಭೇಟಿ-ಗ್ರಾಮಸ್ಥರಲ್ಲಿ ಧೈರ್ಯ ತುಂಬಿದ ಶಾಸಕ ಸತೀಶ್ ಜಾರಕಿಹೊಳಿ
ಬೆಳಗಾವಿ: ಗೌಂಡವಾಡ ಗ್ರಾಮದಲ್ಲಿ ದೇವಸ್ಥಾನ ಜಮೀನಿಗಾಗಿ ಗ್ರಾಮಸ್ಥರಿಗೆ ಬೆನ್ನೆಲುಬಾಗಿ ನಿಂತಿದ್ದ ಹತ್ಯೆಯಾದ ಸತೀಶ್ ಪಾಟೀಲ್ ಮನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾಕಿಹೊಳಿ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಇದೇ ವೇಳೆ ಸತೀಶ್ ತಾಯಿ ತಮ್ಮ ಅಳಲು ತೋಡಿಕೊಂಡು, ನನ್ನ ಮಗ ಅಮಾಯಕ, ಗ್ರಾಮಸ್ಥರ ಒತ್ತಾಯದ ಮೇರೆಗೆ ದೇವಸ್ಥಾನದ ಜಮೀನಿಗಾಗಿ ಪೈಟ್ ಮಾಡುತ್ತಿದ್ದ, ಇದೇ ವಿಷಯ ಇಟ್ಟುಕೊಂಡು ಮೂರು ಬಾರಿ ಮಗನ ಕೊಲೆಗೆ ಯತ್ನಿಸಿದ್ದರು. ಆದರೆ …
Read More »ಮನೆ ಕಳ್ಳನನ್ನು ಬಂಧಿಸಿದ ಹುಕ್ಕೇರಿ ಪೊಲೀಸರು
ಹುಕ್ಕೇರಿ – ಐದು ದಿನಗಳ ಹಿಂದೆ ಹುಕ್ಕೇರಿ ಪಟ್ಟಣದ ವಿವಿಧ ಗಲ್ಲಿಗಳಲ್ಲಿ 6 ಮನೆಗಳ ಸರಣಿ ಕಳ್ಳತನ ಆಗಿ ಸುಮಾರು 48,000/-ರೂ ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ಆಭರಣ ಹಾಗೂ 5000/- ರೂ ನಗದು ಕಳ್ಳತನ ಆಗಿತ್ತು. ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ (ಅಪರಾಧ ಸಂಖ್ಯೆ: 116/2022, ಕಲಂ 454, 457, 380, 51 ಐ.ಪಿ.ಸಿ) ಪ್ರಕರಣ ದಾಖಲಾಗಿತ್ತು. ಹುಕ್ಕೇರಿ ತಾಲೂಕಿನ ಸಂಕೇಶ್ವರ, ಯಮಕನಮರಡಿ ಮತ್ತು ಹುಕ್ಕೇರಿ ಠಾಣಾ …
Read More »ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಇಡೀ ಕ್ಷೇತ್ರ ಅಭಿವೃದ್ಧಿ ಪಥದತ್ತ *ಕಳ್ಳಿಗುದ್ದಿ-ಕೌಜಲಗಿ ರಸ್ತೆ ಸುಧಾರಣಾ ಕಾಮಗಾರಿಗೆ 4 ಕೋಟಿ ರೂ.
ಗೋಕಾಕ- :ಕಳ್ಳಿಗುದ್ದಿ, ರಡ್ಡೇರಹಟ್ಟಿ ಮತ್ತು ಮನ್ನಿಕೇರಿ ಗ್ರಾಮಗಳ ಅಭಿವೃದ್ಧಿಗಾಗಿ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದ ಸಾಕಷ್ಟು ಪ್ರಗತಿಪರ ಯೋಜನೆಗಳನ್ನು ಸಾಕಾರಗೊಳಿಸಿದ್ದು, ಕಳ್ಳಿಗುದ್ದಿಯಿಂದ ಕೌಜಲಗಿವರೆಗಿನ ರಸ್ತೆ ಕಾಮಗಾರಿಗೆ 4 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದ್ದಾರೆಂದು ಕಳ್ಳಿಗುದ್ದಿ ಗ್ರಾಪಂ ಅಧ್ಯಕ್ಷ ಬಾಳಪ್ಪ ಗೌಡರ ತಿಳಿಸಿದರು. ಇತ್ತೀಚೆಗೆ ಲೋಕೋಪಯೋಗಿ ಇಲಾಖೆಯ ಎಸ್‍ಎಚ್‍ಡಿಪಿ ಯೋಜನೆಯಡಿ ಮಂಜೂರಾದ 4 ಕೋಟಿ ರೂ. ವೆಚ್ಚದ ಕಳ್ಳಿಗುದ್ದಿ-ಕೌಜಲಗಿ ರಸ್ತೆ ಸುಧಾರಣಾ …
Read More »ಹಂಗಾಮಾ ಸೃಷ್ಟಿಸಿದ ಸಚಿವನ ‘ಪತ್ನಿ’: ಪರಪುರುಷನ ಜತೆ ಲಾಡ್ಜ್ನಲ್ಲಿ ಅರೆಸ್ಟ್!
ಮುಂಬೈ: ಒಂದೆಡೆ ಮಹಾರಾಷ್ಟ್ರ ಸರ್ಕಾರದ ಪತನದ ಅಂಚಿನಲ್ಲಿದ್ದರೆ, ಅದೇ ಇನ್ನೊಂದೆಡೆ ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಖಾತೆಯ ಸಚಿವ ಧನಂಜಯ್ ಮುಂಡೆ ನನ್ನ ಗಂಡ, ನಾನು ಆತನ ಎರಡನೆಯ ಹೆಂಡತಿ ಎಂದು ಭಾರಿ ಕೋಲಾಹಲ ಸೃಷ್ಟಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕರುಣಾ ಶರ್ಮಾ (43) ಎಂಬ ಮಹಿಳೆ ಬಂಧನಕ್ಕೆ ಒಳಗಾಗಿದ್ದಾರೆ. ಈಕೆ ಈ ಹಿಂದೆ ಭಾರಿ ಸುದ್ದಿ ಮಾಡಿದ್ದರು. ತಾವು ಮುಂಡೆ ಅವರ ಎರಡನೆಯ ಪತ್ನಿ ಎಂದು ಹೇಳಿಕೊಂಡು ತೀವ್ರ ಗಲಾಟೆ …
Read More »ಒಂದೇ ಕುಟುಂಬದ ಒಂಬತ್ತು ಮಂದಿಯ ಆತ್ಮಹತ್ಯೆ
ಸಾಂಗ್ಲಿ: ಸಾಂಗ್ಲಿ ಜಿಲ್ಲೆಯ ಎರಡು ಮನೆಗಳಲ್ಲಿ ಒಂದೇ ಕುಟುಂಬದ ಒಂಬತ್ತು ಮಂದಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ. ಬಂಧಿಸಲ್ಪಟ್ಟವರು ಕುಟುಂಬಕ್ಕೆ ಸಾಲ ನೀಡಿದವರಾಗಿದ್ದಾರೆ. ಮಣಿಕ್ ವಾನ್ಮೋರೆ ಮತ್ತು ಪೋಪರ್ ವಾನ್ಮೋರೆ ಸದಸ್ಯರು ತಮ್ಮ ಪತ್ನಿಯರು, ಮಕ್ಕಳು ಮತ್ತು ತಾಯಿಯೊಂದಿಗೆ ಸೋಮವಾರ ಮಹೈಸಲ್ ಪಟ್ಟಣದ ತಮ್ಮ ಮನೆಗಳಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಹೋದರರ ಮನೆಗಳು ಒಂದು ಕಿಮೀ ಅಂತರದಲ್ಲಿವೆ. ಮಣಿಕ್ ಮನೆಯಲ್ಲಿ ಆರು ಮಂದಿ …
Read More »ಗೌಂಡವಾಡ ಮರ್ಡ್‍ರ್ ಪ್ರಕರಣ ಮತ್ತೆ ಮೂವರ ಅರೆಸ್ಟ್: ಡಿಸಿ ಕಚೇರಿ ಬಳಿ ಮೃತ ಕುಟುಂಬಸ್ಥರ ಆಕ್ರಂದನ
ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಸತೀಶ್ ಪಾಟೀಲ ಹತ್ಯೆ ಹಾಗೂ ಬಳಿಕ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಧಿಸಿದಂತೆ ಮತ್ತೆ ಮೂವರು ಆರೋಪಿಗ¼ನ್ನು ಪೊಲೀಸರು ವಶಕ್ಕೆ ಪಡೆದಿದ್ದು ಬಂಧಿತರ ಸಂಖ್ಯೆ 32 ಕ್ಕೆ ಏರಿಕೆಯಾಗಿದೆ. ಜೂನ್ 18ರಂದು ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಸತೀಶ್ ಪಾಟೀಲ ಹತ್ಯೆ ಯಾಗಿತ್ತು. ಇನ್ನು ಹತ್ಯೆಯನ್ನು ಖಂಡಿಸಿ ಗ್ರಾಮದಲ್ಲಿ ರಾತ್ರಿವೇಳೆ ಹಿಂಸಾಚಾರವೂ ಕೂಡ ನಡೆದಿತ್ತು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, …
Read More »ಬೆಳಗಾವಿ ಪುಟ್ಟ ಮಗಳು ಕೃಷ್ಣವೇಣಿಯ ಸಂಪೂರ್ಣ ಚಿಕಿತ್ಸೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯವಸ್ಥೆ
ಬೆಂಗಳೂರು: ದೃಷ್ಟಿ ದೋಷ, ಮಿದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬೆಳಗಾವಿ ಜಿಲ್ಲೆಯ ಕೇಳಿಗ್ರಾಮದ ಶಂಕ್ರಮ್ಮ ಎಂಬುವರ ಪುಟ್ಟ ಮಗಳು ಕೃಷ್ಣವೇಣಿಯ ಸಂಪೂರ್ಣ ಚಿಕಿತ್ಸೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯವಸ್ಥೆ ಮಾಡಿದ್ದಾರೆ. ಮುಖ್ಯಮಂತ್ರಿಯವರು ಮೈಸೂರಿನಲ್ಲಿ ಯೋಗ ದಿನಾಚರಣೆ ಮುಗಿಸಿ ಬೆಂಗಳೂರಿನ ತಮ್ಮ ನಿವಾಸಕ್ಕೆ ಹಿಂದಿರುಗಿದಾಗ ಹಸುಗೂಸು ಎತ್ತಿಕೊಂಡ ಶಂಕ್ರಮ್ಮ ಗಮನ ಸೆಳೆದರು. ಆಕೆಯ ಬಳಿ ಸಮಸ್ಯೆಯನ್ನು ವಿಚಾರಿಸಿದಾಗ, ಮಗುವಿನ ಕಾಯಿಲೆ ಬಗ್ಗೆ ವಿವರಿಸಿ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗಲಿದ್ದು, ನೆರವು ನೀಡಬೇಕು …
Read More »