Breaking News

ಅಂಜನಾದ್ರಿಯ ದೇವಸ್ಥಾನದ ಹುಂಡಿಯಲ್ಲಿ ಥಾಯ್ಲೆಂಡ್, ಅಮೆರಿಕದ ಕರೆನ್ಸಿ

ಗಂಗಾವತಿ: ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪೂರದ ಬಳಿ ಇರುವ ಅಂಜನಾದ್ರಿಯ ದೇಗುಲದಲ್ಲಿ ಇರಿಸಲಾಗಿದ್ದ ಕಾಣಿಕೆ ಪೆಟ್ಟಿಗೆಗಳನ್ನು ಬುಧವಾರ ಎಣಿಕೆ ಮಾಡಲಾಗಿದ್ದು, ಥಾಯ್ಲೆಂಡಿನ 20 ಬಾತ್ ಮತ್ತು ಅಮೆರಿಕದ ಒಂದು ಡಾಲರ್ ಕರೆನ್ಸಿ ಪತ್ತೆಯಾಗಿವೆ. ಅಂಜನಾದ್ರಿಯ ಹನುಮಪ್ಪನ ಸನ್ನಿಧಾನದಲ್ಲಿ ಇರಿಸುವ ಕಾಣಿಕೆ ಹುಂಡಿ ಎಣಿಕೆ ಮಾಡಿದ ಪ್ರತಿ ಬಾರಿ ವಿದೇಶಿ ನೋಟು, ನಾಣ್ಯಗಳು ಪತ್ತೆಯಾಗುವುದು ಸಹಜವಾಗಿ ಆಂಜನೇಯನ ಭಕ್ತರು ಸಪ್ತ ಸಾಗರದಾಚೆಗೂ ಹರಡಿರುವುದು ಖಚಿತವಾಗುತ್ತಿದೆ. 63.10 ಲಕ್ಷ ರೂಪಾಯಿ ನಗದು ಸಂಗ್ರಹ: ಈ …

Read More »

ಹು-ಧಾ ಮಹಾನಗರ ಪಾಲಿಕೆಗೆ ಜೂ.30 ರಂದು ಚುನಾವಣೆ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಗೆ ಮಹಾಪೌರ ಹಾಗೂ ಉಪ ಮಹಾಪೌರರ ಸ್ಥಾನಗಳಿಗೆ ಜೂನ್ 30 ರಂದು ಬೆಳಗ್ಗೆ 9 ಗಂಟೆಗೆ ಪಾಲಿಕೆಯ ಸಭಾಭವನದಲ್ಲಿ ಚುನಾವಣೆ ನಡೆಯಲಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಎಸ್. ಬಿ. ಶೆಟ್ಟೆಣ್ಣವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜೂನ್ 30ರ ಬೆಳಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ಮಹಾಪೌರ ಹಾಗೂ ಉಪಮಹಾಪೌರರ ಸ್ಥಾನಗಳಿಗೆ ನಾಮಪತ್ರಗಳ ಸಲ್ಲಿಸುವುದು, ನಂತರ ನಾಮಪತ್ರಗಳ ಪರಿಶೀಲನೆ, ಕ್ರಮಬದ್ಧ ನಾಮಪತ್ರಗಳ ಘೋಷಣೆ, …

Read More »

ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಮಾತುಕತೆ ನಡೆಸಿದ ಶಾಸಕ ಬಿ.ಆರ್.ಪಾಟೀಲ್

ಬೆಂಗಳೂರು: ತಮ್ಮ ಸರ್ಕಾರದ ವಿರುದ್ಧವೇ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ಅಳಂದ ಕ್ಷೇತ್ರದ ಶಾಸಕ ಬಿ.ಆರ್‌.ಪಾಟೀಲ್‌, ಕಾಗವಾಡ ಕ್ಷೇತ್ರದ ರಾಜು ಕಾಗೆ ಅವರ ಜೊತೆ ಸಿಎಂ ಸಿದ್ದರಾಮಯ್ಯ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾಹಿತಿ ನೀಡಿದ ರಾಜು ಕಾಗೆ: ನವದೆಹಲಿಯಿಂದ ಇಂದು ಸಂಜೆ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಅವರು, ಶಾಸಕರನ್ನು ಕರೆಸಿ ಚರ್ಚೆ ನಡೆಸಿದ್ದಾರೆ. ಮೊದಲಿಗೆ ಸಿಎಂ ನಿವಾಸ ಕಾವೇರಿಗೆ ಆಗಮಿಸಿದ ಶಾಸಕ ರಾಜು ಕಾಗೆ ಅವರು ಸಿದ್ದರಾಮಯ್ಯ …

Read More »

ಬೆಳಗಾವಿ, ಖಾನಾಪುರ, ಕಿತ್ತೂರು ಶಾಲಾ ಕಾಲೇಜುಗಳಿಗೆ ಗುರುವಾರವೂ ರಜೆ ಘೋಷಣೆ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮಹಾಮಳೆ ಬುಧವಾರವೂ ಮುಂದುವರೆದಿರುವ ಹಿನ್ನೆಲೆಯಲ್ಲಿ ಜೂನ್ 26ರಂದು ಗುರುವಾರ ಬೆಳಗಾವಿ, ಖಾನಾಪುರ ಮತ್ತು ಕಿತ್ತೂರು ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹೌದು, ಕಳೆದ ಮೂರು ದಿನಗಳಿಂದ ಬೆಳಗಾವಿಯಲ್ಲಿ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಹಾಗಾಗಿ, ಬುಧವಾರ ಎರಡು ತಾಲೂಕಿನ ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮಳೆ ಆರ್ಭಟ ಇನ್ನೂ ಜೋರಾಗಿದ್ದರಿಂದ ಜಿಲ್ಲೆಯ ಮೂರು ತಾಲೂಕುಗಳ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ …

Read More »

ಜಾನಪದ ಕಲೆಯ ಮೂಲಕ ಶ್ರೀ ಕೃಷ್ಣ ಪಾರಿಜಾತ ಬಯಲಾಟ

ಮೂಡಲಗಿ(ಕೌಜಲಗಿ): ಜಾನಪದ ಕಲೆಯ ಮೂಲಕ ಶ್ರೀ ಕೃಷ್ಣ ಪಾರಿಜಾತ ಬಯಲಾಟವನ್ನು ಜನಪ್ರಿಯಗೊಳಿಸಿದ ಕೌಜಲಗಿ ನಿಂಗಮ್ಮ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಪ್ರೊ. ಕೆ.ಜಿ ಕುಂದನಗಾರ ಮತ್ತು ಕೌಜಲಗಿಯನ್ನು ಕಟ್ಟುವಲ್ಲಿ ಪ್ರರಿಶ್ರಮ ಮಾಡಿದ ಅಂದಿನ ಕೆ.ಎಲ್,ಇ ಸಂಸ್ಥೆಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಬಿ.ಜಿ ದೇಸಾಯಿ ಇಂತಹ ಅತಿರಥ ಮಹಾರಥರಿಗೆ ಜನ್ಮ ನೀಡಿದ ಕೌಜಲಗಿ ಗ್ರಾಮದಲ್ಲಿ ಜನರು ದೈವ ಭಕ್ತಿಯ ಪರಂಪರೆಯನ್ನು ಕೂಡಾ ಹೊಂದಿದವರಾಗಿದ್ದು ಯಲ್ಲಮ್ಮದೇವಿ ದೇವಸ್ಥಾನ ಸೇರಿದಂತೆ ಹಲವಾರು …

Read More »

ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಅಲದಾಳ ಗ್ರಾಮದ 2 ನೂತನ ಕೂಠಡಿ

ಇವತ್ತು ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಸಚಿವರ ಸೂಚನೆ ಮೇರೆಗೆ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಹುಲ ಅಣ್ಣಾ ಜಾರಕಿಹೊಳಿ* ಅವರು ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಅಲದಾಳ ಗ್ರಾಮದ 2 ನೂತನ ಕೂಠಡಿ ಒಟ್ಟು 36 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸರ್ಕಾರಿ ಹಿರಿಯ …

Read More »

ಮೂಡಲಗಿ | ಅವರಾದಿ ಸೇತುವೆ ಜಲಾವೃತ: ಸಂಪರ್ಕ ಸ್ಥಗಿತ

ಮೂಡಲಗಿ | ಅವರಾದಿ ಸೇತುವೆ ಜಲಾವೃತ: ಸಂಪರ್ಕ ಸ್ಥಗಿತ ಮೂಡಲಗಿ: ಪಶ್ಚಿಮಘಟ್ಟ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಬಿಡುವು ಇಲ್ಲದೆ ಮಳೆಯಾಗುತ್ತಿರುವುದರಿಂದ ಘಟಪ್ರಭಾ ನದಿಗೆ ಒಳಹರಿವು ಹೆಚ್ಚಾಗಿದೆ. ತಾಲ್ಲೂಕಿನ ಅವರಾದಿ ಬಳಿಯ ಘಟಪ್ರಭಾ ನದಿಗೆ ಇರುವ ಬ್ರಿಡ್ಜ್‌ ಕಂ ಬ್ಯಾರೆಜ್‌ ಬುಧವಾರ ಮಧ್ಯಾಹ್ನ ಜಲಾವೃತಗೊಂಡು ಹಲವು ಗ್ರಾಮಗಳ ಸಂಪರ್ಕ ಸ್ಥಗಿತಗೊಂಡಿದೆ. ನದಿಯ ನೀರಿನ ಮಟ್ಟವು ಇನ್ನು ಏರಿಕೆಯಾಗುವ ಸಂಭವವಿದ್ದು ಮೂಡಲಗಿ ಸುಣಧೋಳಿ ಸಂಪರ್ಕ ಇರುವ ಸುಣಧೋಳಿ ಸೇತುವೆ, ವಡೇರಹಟ್ಟಿ ಸೇತುವೆ, ಕಮಲದಿನ್ನಿ …

Read More »

41ನರ್ಸ್ ಕ್ಲಬ್’ನ ನೂತನ ಪದಾಧಿಕಾರಿಗಳ ಪದಗ್ರಹಣ ಬೆಳಗಾವಿಯ ಫೋಟ್ಟಿ ವನ್ನರ್ಸ್ ಕ್ಲಬ್’ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಅತ್ಯಂತ ಉತ್ಸಾಹದಲ್ಲಿ ನಡೆಯಿತು.

41ನರ್ಸ್ ಕ್ಲಬ್’ನ ನೂತನ ಪದಾಧಿಕಾರಿಗಳ ಪದಗ್ರಹಣ ಬೆಳಗಾವಿಯ ಫೋಟ್ಟಿ ವನ್ನರ್ಸ್ ಕ್ಲಬ್’ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಅತ್ಯಂತ ಉತ್ಸಾಹದಲ್ಲಿ ನಡೆಯಿತು. ಬೆಳಗಾವಿಯ ಫೋಟ್ಟಿ ವನ್ನರ್ಸ್ ಕ್ಲಬ್’ ಮತ್ತು ಬೆಲಗಾಮ್ ಚಾಲೆಂಜರ್ಸ್ ಟ್ಯಾಜೆಂಟ್-38 ಕ್ಲಬ್’ಗಳು ತಮ್ಮ ಸಕ್ರಿಯ ಸಹಭಾಗಿತ್ವದೊಂದಿಗೆ ರಕ್ತದಾನ, ಶಾಲೆಗಳಿಗೆ ಮೂಲಸೌಕರ್ಯ ವಿತರಣೆ, ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ, ಆರೋಗ್ಯ ತಪಾಸಣೆಯಂತಹ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿದ್ದು, ಬುಧವಾರದಂದು ಬೆಳಗಾವಿಯಲ್ಲಿ ಫೋಟ್ಟಿ ವನ್ನರ್ಸ್ ಕ್ಲಬ್’ನ ನೂತನ ಪದಾಧಿಕಾರಿಗಳ ಪದಗ್ರಹಣ …

Read More »

ರಾಯಬಾಗದಲ್ಲಿ ಶೀಘ್ರವೇ ಸುಸುಜ್ಜಿತ ಕ್ರೀಡಾಂಗಣ ನಿರ್ಮಾಣ: ಸಂಸದೆ ಪ್ರಿಯಂಕಾ ಜಾರಕಿಹೊಳಿ

ರಾಯಬಾಗದಲ್ಲಿ ಶೀಘ್ರವೇ ಸುಸುಜ್ಜಿತ ಕ್ರೀಡಾಂಗಣ ನಿರ್ಮಾಣ: ಸಂಸದೆ ಪ್ರಿಯಂಕಾ ಜಾರಕಿಹೊಳಿ ರಾಯಬಾಗ: ಸಂಸದೆಯಾಗಿ ಒಂದು ವರ್ಷದ ಅವಧಿಯಲ್ಲಿ ರಾಯಬಾಗ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುಮಾರು 25 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಹಂತ-ಹಂತವಾಗಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಹೇಳಿದರು. ಚಿಕ್ಕೋಡಿ ಲೋಕಸಭೆ ರಾಯಬಾಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಂಗಳವಾರ ಎಸಿಪಿ, ಟಿಎಸ್‌ …

Read More »

ಮಹಿಳೆಯನ್ನು ಪುಸಲಾಯಿಸಿ ಬಂಗಾರದ ಸರ ಕದ್ದ ಹಾಗೂ ಬಸ್ ನಲ್ಲಿದ್ದ ಬ್ಯಾಗ ಎಗರಿಸಿದ್ದ ಕಳ್ಳರ ಬಂಧನ

ಮಹಿಳೆಯನ್ನು ಪುಸಲಾಯಿಸಿ ಬಂಗಾರದ ಸರ ಕದ್ದ ಹಾಗೂ ಬಸ್ ನಲ್ಲಿದ್ದ ಬ್ಯಾಗ ಎಗರಿಸಿದ್ದ ಕಳ್ಳರ ಬಂಧನ ಮಹಿಳೆಯನ್ನು ಪುಸಲಾಯಿಸಿ ಬಂಗಾರದ ಸರ ಕದ್ದಿದ್ದ ಹಾಗೂ ಬಸ್ ನಲ್ಲಿ ಪ್ರಯಾಣಿಸುವಾಗ ಬ್ಯಾಗ್ ಎಗರಿಸಿದ್ದ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಕಳ್ಳರನ್ನು ಹಾರೂಗೇರಿ ಪೊಲೀಸರು ಬಂಧಿಸಿ ಬಂಗಾರ ವಶಪಡಿಸಿಕೊಂಡಿದ್ದಾರೆ ಬೆಳಗಾವಿ ಶಹಪುರ್ ನಿವಾಸಿ ಪದ್ಮಾವತಿ ರಾಜೇಂದ್ರ ಕುಡಚಿ ಹಾರೋಗೇರಿ ಕ್ರಾಸ್ ನಿಂದ ಮಿರಜಕ್ಕೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅವರ ಬ್ಯಾಗಿನಲ್ಲಿಟ್ಟಿದ್ದ 3.60.000 ಬೆಲೆಬಾಳುವ …

Read More »