Breaking News

ಸ್ಥಳೀಯ ಸಂಸ್ಥೆಗಳ ಆಸ್ತಿ ದಾಖಲೆಗೆ ಹೈಟೆಕ್ ಸ್ಪರ್ಶ: ಡಿಜಿಟಲೀಕರಣಕ್ಕೆ ‘ಇ-ಆಸ್ತಿ ತಂತ್ರಾಂಶ’ ಜಾರಿ; ಆನ್​ಲೈನ್​ನಲ್ಲೇ ಸಕಲ ಮಾಹಿತಿ

ಬೆಳಗಾವಿ :ನಗರ -ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸರ್ಕಾರಿ, ಖಾಸಗಿ ಒಡೆತನದ ಲಕ್ಷಾಂತರ ಆಸ್ತಿ ದಾಖಲೆಗಳಿಗೆ ಇನ್ಮುಂದೆ ಹೈಟೆಕ್ ಸ್ಪರ್ಶ ಸಿಗಲಿದೆ. ಏಕಕಾಲದಲ್ಲಿ ಆನ್​ಲೈನ್​ನಲ್ಲಿಯೇ ಆಸ್ತಿ ದಾಖಲೆಗಳ ಮಾಹಿತಿ ಲಭ್ಯವಾಗಲಿದೆ. ಹೌದು. ರಾಜ್ಯದಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುಮಾರು 1.20 ಕೋಟಿ ಆಸ್ತಿಗಳಿವೆ. ಆದರೆ, ಲಕ್ಷಾಂತರ ಆಸ್ತಿಗಳ ದಾಖಲೆಗಳ ನಿರ್ವಹಣೆ, ಸಂರಕ್ಷಣೆ ಇಲ್ಲದೆ ಸಂಪೂರ್ಣ ಹಾಳಾಗಿವೆ. ಇದರಿಂದಾಗಿ ಸಾರ್ವಜನಿಕರಿಗೆ ಆಸ್ತಿಯ ಮೂಲ ದಾಖಲೆಗಳು ಲಭ್ಯವಾಗುತ್ತಿಲ್ಲ. …

Read More »

ಶಾಸಕರಿಗೆ ಹಣದ ಆಮಿಷ ಪ್ರಕರಣ ಬಿ.ಎಲ್.ಸಂತೋಷ್‌ಗೆ ಸಮನ್ಸ್ ಜಾರಿ

ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷದ ಶಾಸಕರಿಗೆ ಬಿಜೆಪಿಗೆ ಸೇರುವಂತೆ ಹಣದ ಆಮಿಷವೊಡ್ಡಿದ ಪ್ರಕರಣ ಸಂಬಂಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್‌ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ. ತೆಲಂಗಾಣ ವಿಶೇಷ ತನಿಖಾ ತಂಡ (ಎಸ್‌ಐಟಿ) ಶುಕ್ರವಾರ ಈ ಸಮನ್ಸ್ ಜಾರಿ ಮಾಡಿದೆ. ಶಾಸಕರಿಗೆ ಹಣದ ಆಮಿಷವೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ. 21ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಬಿ.ಎಲ್​.ಸಂತೋಷ್​ಗೆ ಸಮನ್ಸ್ ಜಾರಿಗೊಳಿಸಿರುವ ಎಸ್‌ಐಟಿ, ತಪ್ಪಿದರೆ ಬಂಧನದ ಎಚ್ಚರಿಕೆಯನ್ನೂ …

Read More »

ರಾಜ್ಯ ಸರ್ಕಾರದಿಂದ ಎಲ್ಲಾ ನೇರ ನೇಮಕಾತಿ, ಮುಂಬಡ್ತಿಗೆ ತಡೆ

ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಕೆಲ ದಿನಗಳ ಹಿಂದೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿಯನ್ನು ಹೆಚ್ಚಿಸಲಾಗಿತ್ತು. ಈ ಮೀಸಲಾತಿ ಹೆಚ್ಚಳದ ಅನ್ವಯ ನೇರನೇಮಕಾತಿ, ಮುಂಬಡ್ತಿಯಲ್ಲಿ ಅವಕಾಶ ನೀಡೋ ಸಲುವಾಗಿ, ಈಗ ಎಲ್ಲಾ ನೇರ ನೇಮಕಾತಿ, ಮುಂಬಡ್ತಿಗೆ ( Direct Recruitment, Promotion ) ತಡೆ ನೀಡಲಾಗಿದೆ.     ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ( Karnataka Chief Secretory Vandita …

Read More »

ಸಿಹಿ ಬೆಳೆದ ಅನ್ನದಾತರಿಗೆ ಕಹಿ ಅನುಭವ

ಕಬ್ಬು ಬೆಳೆಗಾರರ ಸಮಸ್ಯೆ ಪ್ರತೀವರ್ಷವೂ ಕಗ್ಗಂಟು. ಸಕ್ಕರೆ ಕಾರ್ಖಾನೆ ಮಾಲಕರು ಹಾಗೂ ಬೆಳೆಗಾರರ ನಡುವೆ ಬೆಲೆ ತಿಕ್ಕಾಟ ಸಾಮಾನ್ಯವಾಗಿ ಬಿಟ್ಟಿದೆ. ಕೃಷ್ಣಾ ತೀರದ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಹೋರಾಟ ನಡೆಯುತ್ತಲೇ ಇರುತ್ತದೆ. ಸರಕಾರವೇ ಮಧ್ಯಸ್ಥಿಕೆ ವಹಿಸಿದರೂ ಪರಿಹಾರ ಎಂಬುದು ಮರೀಚಿಕೆಯಾಗಿದೆ. ಈ ವರ್ಷವೂ ಪ್ರತಿಭಟನೆ ಕಾವು ತುಸು ಹೆಚ್ಚೇ ನಡೆದಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ 50 ದಿನಗಳಿಂದ ಹೋರಾಟದ ಕಿಚ್ಚು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಸಂಘರ್ಷ, ಸಂಧಾನದ …

Read More »

ಖಾನಾಪುರ ಬಳಿ ಟೆಂಪೋ ಪಲ್ಟಿ: 30 ಜನರಿಗೆ ಗಾಯ

ಖಾನಾಪುರ ತಾಲೂಕಿನ ಗರ್ಲಗುಂಜಿ ಗ್ರಾಮದ ಬಳಿ ಟೆಂಪೋ ಪಲ್ಟಿಯಾಗಿ 30 ಪ್ರಯಾಣಿಕರಿಗೆ ಗಾಯವಾಗಿರುವ ಘಟನೆ ನಡೆದಿದೆ. ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿದೆ. ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ 30 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಗಾಯಾಳುಗಳನ್ನು ಯಳ್ಳೂರ ಕೆಎಲ್ಇ ಚಾರಿಟೇಬಲ್ ಆಸ್ಪತ್ರೆ ಮತ್ತು ವಿಜಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಎಲ್ಲರೂ ಹುದಲಿ ಗ್ರಾಮದವರಾಗಿದ್ದು, ಗರ್ಲಗುಂಜಿಗೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

Read More »

ಸಿಐಟಿಯು ರಾಜ್ಯಾಧ್ಯಕ್ಷೆ ಕಾರು ಘಾಟಿಯಲ್ಲಿ ಅಪಘಾತ: ಪಾರು

ಕುಂದಾಪುರ: ಇಲ್ಲಿ ಮೂರು ದಿನಗಳ ಕಾಲ ನಡೆದ ಸಿಐಟಿಯುವಿನ 15ನೇ ರಾಜ್ಯ ಸಮ್ಮೇಳನ ಮುಗಿಸಿ ಗುರುವಾರ ರಾತ್ರಿ ಹಾಸನಕ್ಕೆ ಹೋಗುತ್ತಿದ್ದ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಅವರ ಕಾರು ಆಗುಂಬೆಯಲ್ಲಿ ಅಪಘಾತಕ್ಕೊಳಗಾಗಿದೆ. ಧರ್ಮೇಶ್ ಅವರು ಕಾರು ಚಲಾಯಿಸುತ್ತಿದ್ದು, ಆಗುಂಬೆ ಘಾಟ್‌ ನಂತರ ಜಯಪುರದಿಂದ ಆಲ್ದೂರಿಗೆ 5 ಕಿ.ಮೀ. ಇದೆ ಎನ್ನುವಾಗ ರಾತ್ರಿ 10.30ರ ಸುಮಾರಿಗೆ ಕಾರು ರಸ್ತೆ ಬಿಟ್ಟು ಪ್ರಪಾತದೆಡೆಗೆ ಹೋಗಿದೆ. 50ಅಡಿಗಿಂತ ಹೆಚ್ಚು ಕೆಳಗಿಳಿದಿತ್ತು. ಮಾಹಿತಿ ತಿಳಿಸಲು ನೆಟ್‌ವರ್ಕ್‌ ಕೂಡಾ …

Read More »

ಇಂದಿನಿಂದ ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ

ಬೆಂಗಳೂರು: ಪರಂಪರಾಗತ ಆಚಾರ ವಿಚಾರಗಳು, ಸಂಸ್ಕೃತಿ-ಸಾಹಿತ್ಯ ಪ್ರಕಾರಗಳ ಜತೆಗೆ ಈ ನಾಡಿನ ಕಲೆಗಳಾದಿಗಳು ಒಂದೆಡೆ ಕೇ೦ದ್ರೀಕೃತವಾಗುವ ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಾನದಲ್ಲಿ ನ.19ರಿಂದ ನ.23ರವರೆಗೆ ನಾಡಿನ ಗಣ್ಯರು, ವಿದ್ವಾಂಸರು ಹಾಗೂ ಕಲಾವಿದರ ಸಹಭಾಗಿತ್ವದಲ್ಲಿ ಲಕ್ಷದೀಪೋತ್ಸವ ನೆರವೇರಲಿದೆ.   ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ, ಧರ್ಮಸ್ಥಳ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಹಾಗೂ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನದ 90ನೇ ಅಧಿವೇಶನವು ನೆರವೇರಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ದೇವಸ್ಥಾನ, …

Read More »

ಮುಂದಿನ C.M.ನಾನೇ: H.D.K.

ಮಳವಳ್ಳಿ: ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಬಸವ ತತ್ವಗಳನ್ನು ಪಾಲನೆ ಮಾಡಲು ಮುಂದಾಗಬೇಕು. ಈಗ ನಿರ್ಮಾಣವಾಗಲಿರುವ ಬಸವ ಭವನಕ್ಕೆ ಮುಂದಿನ ಮುಖ್ಯಮಂತ್ರಿಯಾಗಿ ಅನುದಾನ ನೀಡುವೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.   ತಾಲೂಕಿನ ಶೆಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯ ಉಪ್ಪನಹಳ್ಳಿ(ಕನ್ನಹಳ್ಳಿ)-ಮೂಗನಕೊಪ್ಪಲು ಬಳಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಬಸವ ಭವನ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಸವ ಭವನಕ್ಕೆ …

Read More »

ಮತದಾರರ ಗೌಪ್ಯತೆ: ಪಾರದರ್ಶಕವಾಗಿ ತನಿಖೆ ನಡೆಯಲಿ

ಬೆಂಗಳೂರಿನ 28 ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ದೊಡ್ಡ ಗದ್ದಲವೇ ಏರ್ಪಟ್ಟಿದ್ದು, ರಾಜ್ಯ ಸರಕಾರ ಭಾರೀ ಚುನಾವಣ ಅಕ್ರಮ ಮಾಡಿದೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸುತ್ತಿದ್ದಾರೆ. ಗುರುವಾರ ಬೆಳಗ್ಗೆಯಿಂದಲೂ ರಾಜ್ಯದಲ್ಲಿ ಇದೇ ಸುದ್ದಿ ದೊಡ್ಡ ಸದ್ದು ಮಾಡಿದ್ದು, ಚುನಾವಣ ಅಕ್ರಮ ಮಾಡುವ ಸಲುವಾಗಿಯೇ ಮತದಾರರ ಗೌಪ್ಯತೆ ಹರಣ ಮಾಡಲಾಗಿದೆ ಎಂದು ಕಾಂಗ್ರೆಸ್‌ ನೇರವಾಗಿಯೇ ಆರೋಪಿಸುತ್ತಿದೆ.   ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿ ಹೊತ್ತಿರುವ …

Read More »

“ಕಾಶ್ಮೀರ್ ಫೈಲ್ಸ್‌’ನ ಗಳಿಕೆ ದಾಖಲೆ ಮುರಿದ “ಕಾಂತಾರ’

ಮುಂಬೈ: ಬಾಕ್ಸ್‌ ಆಫಿಸ್‌ನಲ್ಲಿ ಹಿಂದಿ ಅವತರಿಣಿಕೆಯ “ಕಾಂತಾರ’ ಸಿನಿಮಾದ ಅಬ್ಬರ ಮುಂದುವರಿದಿದೆ. ಬಾಕ್ಸ್‌ ಆಫಿಸ್‌ ಗಳಿಕೆಯಲ್ಲಿ ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾದ “ಕಾಶ್ಮೀರ್ ಫೈಲ್ಸ್‌’ನ ಎಲ್ಲಾ ದಾಖಲೆಗಳನ್ನು ಕಾಂತಾರಾ ಸಿನಿಮಾ ಮುರಿದಿದೆ. ಗಳಿಕೆಯಲ್ಲಿ ಶೇ. 1,000 ಪಟ್ಟು ಲಾಭ ಗಳಿಸುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ. ರಿಷಭ್‌ ಶೆಟ್ಟಿ ನಿರ್ದೇಶನ ಮತ್ತು ನಟ ನೆಯ ಕಾಂತಾರ ಸಿನಿಮಾದ ಹಿಂದಿ ಅವ ತರಿಣಿಕೆಯು ಸೆ.30ರಂದು ಬಿಡುಗಡೆಯಾ ಯಿತು. ಈಗಾಗಲೇ ಕೆಜಿಎಫ್-2 ಸಿನಿಮಾದ ದಾಖಲೆಗಳನ್ನು ಕಾಂತಾರ …

Read More »