ಬೆಂಗಳೂರು : PSI ಅಕ್ರಮದಲ್ಲಿ ಮಾಜಿ ಸಿಎಂ ಪುತ್ರನೇ 150 ಲಕ್ಷಕ್ಕೂ ಹೆಚ್ಚು ಹಣ ಮಾಡಿರೋದಾಗಿ ಸುದ್ದಿಯಿದೆ. ಅಲ್ಲದೇ ಈ ಪ್ರಕರಣದಲ್ಲಿ ದೊಡ್ಡ ದೊಡ್ಡವರೆಲ್ಲಾ ಇದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ . ಈ ಹಗರಣದಲ್ಲಿ ಪೌಲ್ ಒಬ್ಬರೇ ಅಲ್ಲ. ಪೌಲ್ ಜೊತೆ ಹಲವರು ಪಾಲು ಪಡೆದುಕೊಂಡಿದ್ದಾರೆಂದು. ಈ ಪ್ರಕರಣದ ವಿಚಾರಣೆ ಮಾಡುತ್ತಿರುವ ಜರ್ಡ್ಜ್ ಸ್ಟ್ರಾಂಗ್ ಇದ್ದಾರೆ. ಅದಕ್ಕೆ ಇಷ್ಟು ಮಾಹಿತಿ ಹೊರಬಂದಿದೆ. ಇಲ್ಲದೇ ಹೋಗಿದ್ದರೆ …
Read More »ಬೆಳ್ಳಂಬೆಳಗ್ಗೆ RSS ಕಚೇರಿ ಮೇಲೆ ಬಾಂಬ್ ದಾಳಿ
ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿರುವ ಆರ್.ಎಸ್.ಎಸ್. ಕಚೇರಿ ಮೇಲೆ ಬಾಂಬ್ ದಾಳಿ ನಡೆದಿದೆ. ಮಂಗಳವಾರ ಬೆಳಗ್ಗೆ ಕಣ್ಣೂರು ಜಿಲ್ಲೆ ಪಯ್ಯನ್ನೂರಿನ ಆರ್‌ಎಸ್‌ಎಸ್ ಕಚೇರಿ ಮೇಲೆ ಬಾಂಬ್ ದಾಳಿ ನಡೆದಿದ್ದು, ದಾಳಿಯಿಂದಾಗಿ ಟ್ಟಡದ ಕಿಟಕಿ ಗಾಜುಗಳು ಮುರಿದು ಬಿದ್ದಿವೆ. ಪಯ್ಯನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರ್.ಎಸ್.ಎಸ್. ಕಚೇರಿ ಮೇಲೆ ನಡೆದ ಬಾಂಬ್ ದಾಳಿಯಿಂದ ಕಿಟಿಕಿ ಗಾಜುಗಳು ಪುಡಿಯಾಗಿವೆ. ಪೀಠೋಪಕರಣಗಳಿಗೆ ಹಾನಿಯಾಗಿದೆ ಎಂದು ಹೇಳಲಾಗಿದೆ.
Read More »ಬಸವಸಾಗರ ಡ್ಯಾಂನಿಂದ ಕೃಷ್ಣಾಗೆ ಭಾರೀ ಪ್ರಮಾಣದ ನೀರು, ನದಿ ತೀರದಲ್ಲಿ ಪ್ರವಾಹ ಭೀತಿ!
ಯಾದಗಿರಿ: ಮಹಾರಾಷ್ಟ್ರದಲ್ಲಿ (Maharashtra) ಭಾರಿ ಪ್ರಮಾಣದ ಮಳೆಯಾಗುತ್ತಿರುವ (Rain) ಪರಿಣಾಮ ಮಹಾರಾಷ್ಟ್ರದ ಮಹಾಮಳೆಗೆ ಯಾದಗಿರಿ (Yadagiri) ಜಿಲ್ಲೆಯ ಕೃಷ್ಣಾ (Krishna) ಹಾಗೂ ಭೀಮಾನದಿ (Bhima River) ತೀರದಲ್ಲಿ ಪ್ರವಾಹ (Flood) ಭೀತಿ ಎದುರಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯ (Narayanapur Dam) ಈಗ ಭರ್ತಿಯಾಗಿದೆ. 33.33 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 28.820 ಟಿಎಂಸಿ ನೀರು ಸಂಗ್ರಹವಾಗಿದೆ. ಕೃಷ್ಣಾ ನದಿಗೆ ಒಳಹರಿವು ಹೆಚ್ಚಾದ ಹಿನ್ನೆಲೆ …
Read More »ಬಿಎಸ್‌ವೈಗೆ ಸಿಎಂ ಸ್ಥಾನದ ಆಸೆ ತೋರಿಸಿ ‘ಆಪರೇಷನ್ ಕಮಲ’ ಮಾಡಿಸಿದ್ದು ಯಾರು?: ಸಿದ್ದರಾಮಯ್ಯ
ಬೆಂಗಳೂರು: 4 ದಶಕಗಳ ಕಾಲ ರಕ್ತ-ಬೆವರು ಹರಿಸಿ ಪಕ್ಷ ಕಟ್ಟಿದ್ದ ಬಿ.ಎಸ್.ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿದವರು ಯಾರು? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಪ್ರಶ್ನಿಸಿದ್ದಾರೆ. ಖರ್ಗೆ, ಪರಮೇಶ್ವರ್ ಮುಗಿಸಿರುವ ಸಿದ್ದು ಮುಂದಿನ ಗುರಿ ಡಿಕೆಶಿ. ಸಿದ್ದರಾಮೋತ್ಸವದಿಂದ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂಬ ಪ್ರಹ್ಲಾದ್ ಜೋಶಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. #ಒಡೆದಮನೆಬಿಜೆಪಿ ಹ್ಯಾಶ್ ಟ್ಯಾಗ್ ಬಳಸಿ ಸೋಮವಾರ ಸರಣಿ ಟ್ವೀಟ್ ಮಾಡಿರುವಸಿದ್ದರಾಮಯ್ಯ, ‘ಪಕ್ಷ ಅಧಿಕಾರದಲ್ಲಿದ್ದಾಗಲೇ ಬಿಎಸ್‍ವೈಯನ್ನು ಜೈಲಿಗೆ ಕಳಿಸಿ ಮುಖ್ಯಮಂತ್ರಿ …
Read More »ಸಂಪಾದಿಸಲು ಶಕ್ತನಾದ ಪತಿಗೆ ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು: ಸಂಪಾದಿಸಲು ಸಶಕ್ತನಾದ ಪತಿಗೆ ಜೀವನಾಂಶ ನೀಡಬೇಕಿಲ್ಲ ಎಂದು ಹೈಕೋರ್ಟ್ ಹೇಳಿದೆ. ಜೀವನಾಂಶ ಕೋರಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ, ಜೆ.ಎಂ. ಖಾಜಿ ಅವರಿದ್ದ ಪೀಠ ಈ ಕುರಿತಾಗಿ ಆದೇಶ ನೀಡಿದೆ. ಪತ್ನಿಯಿಂದ ಶಾಶ್ವತ ಜೀವನಾಂಶ ನೀಡಬೇಕೆಂದು ಪತಿ ಕೋರಿದ್ದರು. 1994 ರಿಂದಲೂ ಪತಿ, ಪತ್ನಿ ಬೇರೆಯಾಗಿ ವಾಸಿಸುತ್ತಿದ್ದರು. ಸೆಕ್ಯೂರಿಟಿ ಗಾರ್ಡ್ ಆಗಿದ್ದ ಪತಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಜೀವನಾಂಶ ಕೋರಿದ್ದರು. ಕೆಲಸ ಬಿಟ್ಟಿರುವುದಾಗಿ …
Read More »ದೇಶದ ಅತಿ ಕಿರಿಯ ಮೇಯರ್ ವರಿಸಲಿದ್ದಾರೆ ರಾಜ್ಯದ ಅತಿ ಕಿರಿಯ MLA! ಸೆ.4ಕ್ಕೆ ಅಪರೂಪದ ಮದ್ವೆಗೆ ಕೇರಳ ಸಾಕ್ಷಿ
ಕೊಯಿಕ್ಕೋಡ್: ದೇಶದ ಅತಿ ಕಿರಿಯ ಮೇಯರ್ ಹಾಗೂ ಕೇರಳದ ಅತಿ ಕಿರಿಯ ಶಾಸಕರ ನಡುವಿನ ಮದುವೆಗೆ ದಿನಾಂಕ ಫಿಕ್ಸ್ ಆಗಿದೆ. ದೇಶದಲ್ಲೇ ವಿನೂತನ ಮದುವೆ ಸಂಭ್ರಮಕ್ಕೆ ದೇವರ ನಾಡು ಕೇರಳ ಸಾಕ್ಷಿಯಾಗಲಿದೆ. ತಿರುವನಂತಪುರದ ಮೇಯರ್ ಆರ್ಯಾ ರಾಜೇಂದ್ರನ್ (21) ಹಾಗೂ ಬಲುಸ್ಸೆರಿ ಕ್ಷೇತ್ರದ ಶಾಸಕ ಕೆ.ಎಂ. ಸಚಿನ್ ದೇವ್ (28) ಅವರ ವಿವಾಹ ಸಮಾರಂಭವು ಸೆಪ್ಟೆಂಬರ್ 4ರಂದು ಬೆಳಗ್ಗೆ 11 ಗಂಟೆಗೆ ಎಕೆಜಿ ಹಾಲ್ನಲ್ಲಿ ಅದ್ಧೂರಿಯಾಗಿ ನೆರವೇರಲಿದೆ. ಕಳೆದ ಮಾರ್ಚ್ನಲ್ಲಿ ಇಬ್ಬರ …
Read More »ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ; ಹೊಲಕ್ಕೆ ನುಗ್ಗಿದ ವಾಹನ, 29 ವರ್ಷದ ಇಂಜಿನಿಯರ್ ಸಾವು..
ಧಾರವಾಡ: ಕಾರು ಚಲಾಯಿಸುತ್ತಿರುವಾಗಲೇ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೀಡಾಗಿ ಸಾವಿಗೀಡಾಗಿದ್ದು, ಕಾರು ಹೊಲಕ್ಕೆ ನುಗ್ಗಿ ನಿಂತಿದೆ. ಧಾರವಾಡ ಜಿಲ್ಲೆಯಲ್ಲಿ ಇಂಥದ್ದೊಂದು ಅಪಘಾತ ಸಂಭವಿಸಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕರ್ಲವಾಡ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಧಾರವಾಡ ಜಿಲ್ಲಾ ಪಂಚಾಯತ್ ಇಂಜಿನಿಯರ್, ನವಲಗುಂದ ತಾಲೂಕಿನ ಲೋಕನಾಥ್ ಗುತ್ತಲ್ (29) ಸಾವಿಗೀಡಾಗಿದ್ದಾರೆ. ಇವರು ಕರ್ತವ್ಯದ ಮೇಲೆ ಹುಬ್ಬಳ್ಳಿಯಿಂದ ನವಲಗುಂದಗೆ ಹೊರಟಿದ್ದರು. ಮಾರ್ಗಮಧ್ಯೆ ಹೃದಯಾಘಾತಕ್ಕೀಡಾಗಿದ್ದು, ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹೊಲಕ್ಕೆ ನುಗ್ಗಿದೆ. ಇಂಜಿನಿಯರ್ …
Read More »ಸಂಪಾದಿಸಲು ಶಕ್ತನಾದ ಪತಿಗೆ ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು: ಸಂಪಾದಿಸಲು ಸಶಕ್ತನಾದ ಪತಿಗೆ ಜೀವನಾಂಶ ನೀಡಬೇಕಿಲ್ಲ ಎಂದು ಹೈಕೋರ್ಟ್ ಹೇಳಿದೆ. ಜೀವನಾಂಶ ಕೋರಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ, ಜೆ.ಎಂ. ಖಾಜಿ ಅವರಿದ್ದ ಪೀಠ ಈ ಕುರಿತಾಗಿ ಆದೇಶ ನೀಡಿದೆ. ಪತ್ನಿಯಿಂದ ಶಾಶ್ವತ ಜೀವನಾಂಶ ನೀಡಬೇಕೆಂದು ಪತಿ ಕೋರಿದ್ದರು. 1994 ರಿಂದಲೂ ಪತಿ, ಪತ್ನಿ ಬೇರೆಯಾಗಿ ವಾಸಿಸುತ್ತಿದ್ದರು. ಸೆಕ್ಯೂರಿಟಿ ಗಾರ್ಡ್ ಆಗಿದ್ದ ಪತಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಜೀವನಾಂಶ ಕೋರಿದ್ದರು. ಕೆಲಸ ಬಿಟ್ಟಿರುವುದಾಗಿ …
Read More »ಶ್ರಾವಣ ಮಾಸದ ಕೊನೆಯ ವಾರದಲ್ಲಿ ರಾಜ್ಯದಿಂದ ಕಾಶಿ ಯಾತ್ರೆಗೆ ಭಾರತ್ ಗೌರವ್ ರೈಲು ಯೋಜನೆ ಪ್ರಾರಂಭ: ಜೊಲ್ಲೆ
ಬೆಂಗಳೂರು: ಶ್ರಾವಣ ಮಾಸದ ಕೊನೆಯ ವಾರದಲ್ಲಿ ರಾಜ್ಯದಿಂದ ಕಾಶಿ ಯಾತ್ರೆಗೆ ಭಾರತ್ ಗೌರವ್ ರೈಲು ಯೋಜನೆ ಪ್ರಾರಂಭವಾಗಲಿದೆ ಎಂದು ಮಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಅ ಜೊಲ್ಲೆ ತಿಳಿಸಿದರು. ಸೋಮವಾರ ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿ ಕಾಶಿ ಯಾತ್ರೆಗೆ ಕಾಯ್ದಿರಿಸಲಾಗಿರುವ ರೈಲಿನ ಪರಿಶಿಲನೆ ಹಾಗೂ ರೈಲ್ವೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಜೀವನದಲ್ಲಿ ಒಮ್ಮೆಯಾದರೂ ಕಾಶಿ ಯಾತ್ರೆಯನ್ನು ಕೈಗೊಳ್ಳಬೇಕು ಎನ್ನುವುದು …
Read More »ನಮ್ ಗೌಡ್ರಿಗೆ ಏನೂ ಅನ್ನಬೇಡಿರಪ್ಪಾ; ಕಾಂಗ್ರೆಸ್ ಕೊಟ್ಟ ಕಟ್ಟಪ್ಪಣೆ ಅಸಲಿಯತ್ತು ಏನು!?
ಬೆಂಗಳೂರು, ಜುಲೈ 11: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ರಾಜಕೀಯ ಲೆಕ್ಕಾಚಾರಗಳು ಶುರುವಾಗಿದೆ. ಕಾಂಗ್ರೆಸ್ ಕಟ್ಟಾಳುಗಳನ್ನು ಕೂಗಿ ಕರೆದ ಹೈಕಮಾಂಡ್ ಕಟ್ಟುನಿಟ್ಟಿನ ಕಟ್ಟಪ್ಪಣೆಯೊಂದನ್ನು ನೀಡಿದೆ. ಸುಖಾಸುಮ್ಮನೆ ವೈಯಕ್ತಿಕ ದಾಳಿ ನಡೆಸದಂತೆ ಎಚ್ಚರಿಕೆ ನೀಡಿದೆ. ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜೊತೆಗೆ ಕೇಂದ್ರದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೌಪ್ಯ ಸಭೆಯೊಂದನ್ನು ನಡೆಸಿದ್ದಾರೆ. ಈ ವೇಳೆ ಚುನಾವಣಾ ತಂತ್ರಗಾರಿಕೆ ಕುರಿತು …
Read More »