ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಆಚರಣೆ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಆಗುವ ಅಪಮಾನ ತಡೆಗಟ್ಟಿ ರಾಷ್ಟ್ರದ ಗೌರವವನ್ನು ರಕ್ಷಿಸುವಂತೆ ಹಿಂದೂ ಜನಜಾಗೃತಿ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಹಿಂದೂ ಜನಜಾಗೃತಿ ಸಮಿತಿಯ ಪದಾಧಿಕಾರಿಗಳು ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಆಗುವ ಘಟನೆಗಳು ನಡೆಯುತ್ತವೆ. ಹೀಗಾಗಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ರೀತಿ ರಾಷ್ಟ್ರ ಧ್ವಜಕ್ಕೆ ಅಪಮಾನ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿ …
Read More »ಮನೆಹಾನಿ ತಕ್ಷಣವೇ ಪರಿಹಾರ ನೀಡಲು ಸಿಎಂ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ
ಹಿನ್ನೆಲೆಯಲ್ಲಿ ಬೆಳಗಾವಿ ಸೇರಿದಂತೆ ಹನ್ನೊಂದು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಂಗಳವಾರ ನಡೆಸಿದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಮನೆಹಾನಿಯಾದ ಸಂದರ್ಭದಲ್ಲಿ ಯಾವುದೇ ಕುಟುಂಬಗಳು ಪರಿಹಾರದಿಂದ ವಂಚಿತಗೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದರು. ಖಾನಾಪುರದಲ್ಲಿ ಮಳೆ ಜಾಸ್ತಿಯಾದಾಗ ಮಲಪ್ರಭಾ ನದಿ ನೀರು ಹರಿವು ಹೆಚ್ಚಾಗುತ್ತದೆ. ಆದ್ದರಿಂದ ನಿರಂತರ ನಿಗಾ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಮಹಾರಾಷ್ಟ್ರದ ಲ್ಲಿ ಆಗುತ್ತಿರುವ ಮಳೆಯ ವಿವರ ಪಡೆದುಕೊಂಡ ಅವರು, ಕೊಯ್ನಾ, ರಾಜಾಪುರ ಸೇರಿದಂತೆ ಪ್ರತಿಯೊಂದು ಜಲಾಶಯಗಳ ಮಟ್ಟ …
Read More »ಕಳೆದ 8 ವರ್ಷಗಳಿಂದ ಬಸವ ಪಂಚಮಿ ಆಚರಿಸುತ್ತ ಬರಲಾಗುತ್ತಿದೆ. ಆದರೆ, ಮೌಢ್ಯ, ಮೂಢನಂಬಿಕೆ ಇರುವುದರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗಿಲ್ಲ.
ನಾಗರ ಪಂಚಮಿಗೆ ಪರ್ಯಾಯವಾಗಿ ಬಸವ ಪಂಚಮಿ ಆಚರಿಸುವ ಮೂಲಕ ಘಟಪ್ರಭಾದ ಮಾನವ ಬಂಧುತ್ವ ವೇದಿಕೆ ವತಿಯಿಂದ ಘಟಪ್ರಭಾದ ಕೆಎಚ್‍ಐ ಆಸ್ಪತ್ರೆಯ ರೋಗಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಹಾಲು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಹೌದು ಇಂದು ಮಂಗಳವಾರ ಘಟಪ್ರಭಾದಲ್ಲಿ ನಾಗಪಂಚಮಿಗೆ ಪರ್ಯಾಯವಾಗಿ ಬಸವ ಪಂಚಮಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಘಟಪ್ರಭಾ ಕೆಎಚ್‍ಐ ಆಸ್ಪತ್ರೆಯ ರೋಗಿಗಳಿಗೆ ಹಾಲಿನ ಪಾಕೇಟ್‍ಗಳನ್ನು ವಿತರಿಸಲಾಯಿತು. …
Read More »ಸಿದ್ದರಾಮೋತ್ಸವ’ಕ್ಕೆ ಹೊರಟಿದ್ದ ಬಸ್ ಅಪಘಾತ : ಓರ್ವ ಸಾವು
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದವರ ಪೈಕಿ ಶಾಬಾಜ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಆರು ಮಂದಿಗೆ ಗಂಭೀರ ಗಾಯಗಳಾಗಿವೆ. ಮಹಮ್ಮದ್ ಉಸ್ಮಾನ್, ಶಿಫಾ, ರಿಯನ್ , ಖಮರುನ್ನಿಸಾ, ಜಬ್ರನ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಜೋಗ್ ಜಲಪಾತ ವೀಕ್ಷಿಸಿ ವಾಪಸ್ ಆಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಬಸ್ ನಲ್ಲಿದ್ದವರು ದಾವಣಗೆರೆ ಮೂಲದವರು. ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ …
Read More »ಸಿದ್ದರಾಮೋತ್ಸವ’ ದಲ್ಲಿ ಪಾಲ್ಗೊಳ್ಳುವವರಿಗೆ ಭರ್ಜರಿ ಭೋಜನ; ಹೀಗಿದೆ ಮೆನು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ನಾಳೆ ದಾವಣಗೆರೆಯಲ್ಲಿ ಹುಟ್ಟು ಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಇದಕ್ಕಾಗಿ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಅದ್ದೂರಿ ಸಿದ್ದತೆ ಕೈಗೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 6 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಲಿದ್ದಾರೆ ಎಂದು ಹೇಳಲಾಗಿದ್ದು, ಈಗಾಗಲೇ ದಾವಣಗೆರೆಯ ಲಾಡ್ಜ್, ಛತ್ರಗಳು, ಮಠಗಳು ಸೇರಿ 38,000 ರೂಮುಗಳನ್ನು ಬುಕ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ರಾಜ್ಯ ರಸ್ತೆ ಸಾರಿಗೆ …
Read More »ಭೂಮಿ ಕಂಪಿಸಲಿದೆ, ಮೇಘ ಘರ್ಜಿಸಲಿದೆ: ಕೋಡಿಮಠ ಸ್ವಾಮೀಜಿ
ಈ ಸಂವತ್ಸರದ ಫಲ ನೋಡಿದರೆ ಮೇಘ ಘರ್ಜಿಸೀತು , ಭೂಮಿ ತಲ್ಲಣಗೊಂಡೀತು . ಭೂಮಿ ಕಂಪಿಸುತ್ತೆ , ಗುಡ್ಡಗಳು ಕುಸಿಯುತ್ತವೆ , ಕೆರೆ ಕಟ್ಟೆಗಳು ಒಡೆದು ಹೋಗುತ್ತವೆ . ಇದು ಈ ಸಂವತ್ಸರದ ಕಡೆಯವರೆಗೂ ಇರುತ್ತೆ ಎಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಶ್ರೀಕ್ಷೇತ್ರ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ . ಶುಭಕೃತ ನಾಮ ಸಂವತ್ಸರದ ಫಲದಲ್ಲಿ ಗುಡುಗು , ಮಿಂಚು , ಗಾಳಿ …
Read More »ಸಿದ್ದರಾಮಯ್ಯ ಅಮೃತ ಮಹೋತ್ಸವ: ಬೆಳಗಾವಿಯಲ್ಲಿ 3 ಕಿಮೀ ಉದ್ದದ ಫೋಟೋ ಬಯೋಗ್ರಫಿ ಸಿದ್ಧ..!
ಬೆಳಗಾವಿ : ದಾವಣಗೆರೆಯಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಜನ್ಮದಿನದ ಸಂದರ್ಭದಲ್ಲಿ ಪ್ರದರ್ಶಿಸಲು ಸಿದ್ದರಾಮಯ್ಯರ ಜೀವನದ ವಿವಿಧ 500 ಫೋಟೋಗಳನ್ನು ಬಳಸಿ 3000 ಮೀಟರ್ (3 ಕಿಮೀ) ಉದ್ದದ ಫೋಟೋ ಬಯೋಗ್ರಫಿ ಸಿದ್ಧಪಡಿಸಲಾಗಿದೆ. ಜಿಲ್ಲೆಯ ಸವದತ್ತಿ ಪಟ್ಟಣದ ಕಾಂಗ್ರೆಸ್ ಮುಖಂಡ ಸೌರಭ್ ಚೋಪ್ರಾ ಮಾರ್ಗದರ್ಶನದಲ್ಲಿ ಆನಂದ ಚೋಪ್ರಾ ಅಭಿಮಾನಿ ಬಳಗ ಸಿದ್ದರಾಮಯ್ಯ ರಾಜಕೀಯ ಜೀವನದ ಫೋಟೋಗಳನ್ನು ಬಳಸಿ ಬಯೋಗ್ರಫಿ ತಯಾರಿಸಿದೆ. ಇದಕ್ಕೆ ಸುಮಾರು 500 ಫೋಟೋಗಳನ್ನು ಬಳಸಿಕೊಳ್ಳಲಾಗಿದ್ದು, 3 ಸಾವಿರ …
Read More »ಕಳ್ಳತನ ಪ್ರಕರಣ; ಇಬ್ಬರು ಖತರ್ನಾಕ್ ಆರೋಪಿಗಳು ಅರೆಸ್ಟ್
ಬೆಳಗಾವಿ: ಸುಮಾರು ಒಂದು ತಿಂಗಳ ಹಿಂದೆ ಯರಗಟ್ಟಿ ಪಟ್ಟಣದಲ್ಲಿ ನಡೆದ ಕಿರಾಣಿ ಅಂಗಡಿ ಕಳ್ಳತನ ಮತ್ತು ಮನೆ ಕಳ್ಳತನ ಮಾಡಲು ಪ್ರಯತ್ನ ಮಾಡಿದ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಮುರಗೋಡ ಪೊಲೀಸರು ಬಂದಿಸಿದ್ದಾರೆ. ಬಂಧಿತರಿಂದ 51,000/- ರೂ ಮೊತ್ತದ ಕಿರಾಣಿ ಅಂಗಡಿಯ ಮಾಲನ್ನು ಮತ್ತು ಕೃತ್ಯಕ್ಕೆ ಬಳಸಿದ್ದ 2,00,000/- ರೂ ಮೌಲ್ಯದ ಅಷೆ ಟಂಟಂ ವಾಹನವನ್ನು ಹಾಗೂ ಒಂದು ರಾಡ್ ಸೇರಿದಂತೆ ಒಟ್ಟು-2,51,000/- ರೂ ಮೌಲ್ಯದ ವಸ್ತುಗಳನು ಪೊಲೀಸರು ವಶಪಡಿಸಿಕೊಂಡಿರುತ್ತಾರೆ. ರಾಮದುರ್ಗ ಡಿ.ಎಸ್.ಪಿ …
Read More »ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ರಾಹುಲ್ ಜಾರಕಿಹೊಳಿ ವತಿಯಿಂದ ಹಾಲು ಹಣ್ಣು ವಿತರಣೆ
ದಿನಾಂಕ 02-08-2022 ರಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿಯವರ ಸುಪುತ್ರರಾದ ಯುವ ಪ್ರೇಮಿಗಳಾದ ರಾಹುಲ್ ಅಣ್ಣಾ ಜಾರಕಿಹೊಳಿಯವರು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಮಾನವ ಬಂದುತ್ವ ವೇದಿಕೆ ವತಿಯಿಂದ ಆಯೋಜಿಸಿದ ಬಸವ ಪಂಚಮಿ ನಿಮಿತ್ಯ ರೋಗಿಗಳಿಗೆ ಹಾಲು ಹಣ್ಣುಹಂಪಲ ವಿತರಣೆ ಮಾಡುವ ಮೂಲಕ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸಿ ಮಾತನಾಡಿ ಸತೀಶ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ …
Read More »ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಅತಿಸಾರ ಭೇದಿ ಪಾಕ್ಷಿಕ: ಗೋಕಾಕ
ಗೋಕಾಕ :ತಾಯಿ ಮತ್ತು ಮಕ್ಕಳ ಆಸ್ಪತ್ರೆ ಗೋಕಾಕದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಅತಿಸಾರ ಭೇದಿ ಪಾಕ್ಷಿಕ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಚಿಕ್ಕ ಮಕ್ಕಳ ವೈದ್ಯರಾದ ಡಾ ಗೋಪಾಲ ಹೊಂಗಲ ಮತ್ತು ಡಾ ಸಂಜೀವಿನಿ ಉಮರಾಣಿ ಯವರು ತಾಯಂದಿರಿಗೆ ಎದೆಹಾಲಿನ ಮಹತ್ವ ಬಗ್ಗೆ ಹೇಳಿದರು. ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಹುಟ್ಟಿದ ಪ್ರತಿ ಮಗುವೂ ಬದುಕಬೇಕು, ತಾಯಿಯೂ ಆರೋಗ್ಯವಾಗಿ ಇರಬೇಕು ಎಂಬುದು ಎಲ್ಲರ ಆಸೆ. ಅದಕ್ಕೆ ಪೂರಕವಾಗಿ ಸರ್ಕಾರಗಳು ಹಲವಾರು ಯೋಜನೆಗಳನ್ನು …
Read More »