Breaking News

ಮಹಾರಾಷ್ಟ್ರದ ವನ್ಯಜೀವಿ ಸೌಹಾರ್ದ ರಾಯಭಾರಿಯಾಗಿ ರವೀನಾ ಟಂಡನ್

ಮುಂಬಯಿ: ಬಾಲಿವುಡ್ ನಟಿ ರವೀನಾ ಟಂಡನ್ ಅವರು ಮಹಾರಾಷ್ಟ್ರದ ವನ್ಯಜೀವಿ ಸೌಹಾರ್ದ ರಾಯಭಾರಿಯಾಗಿ ಗುರುವಾರ ನೇಮಕಗೊಂಡಿದ್ದಾರೆ. “ಮಹಾರಾಷ್ಟ್ರಕ್ಕೆ ವನ್ಯಜೀವಿ ಸೌಹಾರ್ದ ರಾಯಭಾರಿಯಾಗಿ ರವೀನಾ ಅವರ ಉತ್ಸಾಹ ಮತ್ತು ವನ್ಯಜೀವಿಗಳ ಮೇಲಿನ ಪ್ರೀತಿ ಮತ್ತು ಅವರ ಸಂರಕ್ಷಣೆಗೆ ನಾವು ಅನೇಕ ಸಂದರ್ಭಗಳಲ್ಲಿ ಸಾಕ್ಷಿಯಾಗಿದ್ದೇವೆ” ಎಂದು ಮಹಾರಾಷ್ಟ್ರ ಅರಣ್ಯ ಸಚಿವ ಸುಧೀರ್ ಮುಂಗಂತಿವಾರ್ ಹೇಳಿದ್ದಾರೆ.     ಇದು ವನ್ಯಜೀವಿ ಸೌಹಾರ್ದ ರಾಯಭಾರಿಯಾಗಿ ಸೇವೆ ಸಲ್ಲಿಸಲು ಒಂದು ಗೌರವ ಎಂದು ಟಂಡನ್ ಬಣ್ಣಿಸಿ “ಮಹಾರಾಷ್ಟ್ರ …

Read More »

ಅನಾರೋಗ್ಯಕ್ಕೆ ತುತ್ತಾಗಿ ಚೆನ್ನೈಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ.

ಬೆಳಗಾವಿ: ಅನಾರೋಗ್ಯದ ಕಾರಣಕ್ಕೆ ಚೆನ್ನೈ ‌ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ, ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ್​ ಶಿವಾಚಾರ್ಯ ಸ್ವಾಮೀಜಿ ಹಾಗೂ ಶಾಸಕ ದುರ್ಯೋಧನ ಐಹೊಳೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಹುಕ್ಕೇರಿ ಶ್ರೀಗಳಿಂದ ಆನಂದ ಮಾಮನಿ ಆರೋಗ್ಯ ವಿಚಾರಣೆಈ ವೇಳೆ ಮಾತನಾಡಿದ ಚಂದ್ರಶೇಖರ ಸ್ವಾಮೀಜಿ, ಉಪಸಭಾಪತಿ ಆನಂದ ಮಾಮನಿ ಅವರ ಆರೋಗ್ಯ ಚೆನ್ನಾಗಿದೆ. ಯಾವುದೇ ಆತಂಕ …

Read More »

ನಾಳೆ ನಾವೇ ಶಾಸಕರು ಸೇರಿಕೊಂಡು ‘PAYCM’ ಪೋಸ್ಟರ್​ ಅಂಟಿಸ್ತೀವಿ: ಡಿ.ಕೆ. ಶಿವಕುಮಾರ್

ಬೆಂಗಳೂರು: ಬೆಂಗಳೂರು ನಗರದ ಹಲವೆಡೆ ‘PAYCM’ ಪೋಸ್ಟರ್ ಅಂಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಕಾರ್ಯಕರ್ತರ ಬಂಧನವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಖಂಡಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾಳೆ (ಶುಕ್ರವಾರ) ನಮ್ಮ ಪಕ್ಷದ ಪರಿಷತ್ ಸದಸ್ಯರು ಸೇರಿದಂತೆ ಎಲ್ಲ ಶಾಸಕರು ಸೇರಿ ಯಾವುದಾದರೂ ಸರ್ಕಾರಿ ಕಟ್ಟಡಗಳ ಮೇಲೆ ನಮಗೆ ಅನುಕೂಲ ಆಗುವ ಸ್ಥಳಗಳಲ್ಲಿ ಪೋಸ್ಟರ್ ಗಳನ್ನು ಅಂಟಿಸುವ ಬಗ್ಗೆ ತೀರ್ಮಾನ ಮಾಡಿಕೊಂಡಿದ್ದು, ನಾವು ಮಾಡುತ್ತಿರೋದರಲ್ಲಿ ತಪ್ಪೇನಿಲ್ಲ’ ಎಂದು …

Read More »

ಭಾರತಕ್ಕೆ ನಕಲಿ ನೋಟು ತಲುಪಿಸುತ್ತಿದ್ದ ಪಾಕಿಸ್ತಾನ ಐಎಸ್‌ ಐ ಏಜೆಂಟ್‌ ನೇಪಾಳದಲ್ಲಿ ಹತ್ಯೆ!

ಭಾರತಕ್ಕೆ ಭಾರೀ ಪ್ರಮಾಣದಲ್ಲಿ ನಕಲಿ ನೋಟುಗಳ ಸರಬರಾಜು ಮಾಡುತ್ತಿದ್ದ ಪಾಕಿಸ್ತಾನದ ಐಎಸ್‌ ಐ ಏಜೆಂಟ್‌ ನೇಪಾಳದಲ್ಲಿ ಗುಂಡಿನ ದಾಳಿಯಲ್ಲಿ ಹತ್ಯೆಗೊಳಗಾಗಿದ್ದಾನೆ. ಐಎಸ್‌ ಐ ಏಜೆಂಟ್‌ ಲಾಲ್‌ ಮೊಹಮದ್‌ (55) ಅಲಿಯಾಸ್‌ ಮೊಹಮದ್‌ ಧೀರಜ್ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಸೆಪ್ಟೆಂಬರ್‌ 19ರಂದು ಹತ್ಯೆಗೊಳಗಾಗಿದ್ದಾನೆ. ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಸಿಸಿಟಿವಿ ದೃಶ್ಯಗಳು ಭಾರತದ ಮಾಧ್ಯಮಗಳಿಗೆ ಲಭ್ಯವಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ತಯಾರಿಸುತ್ತಿದ್ದ ನಕಲಿ ನೋಟುಗಳನ್ನು ನೇಪಾಳಕ್ಕೆ ರವಾನಿಸಿ, ಅಲ್ಲಿಂದ ಭಾರತಕ್ಕೆ ತಲುಪಿಸುವ ಕೆಲಸವನ್ನು ಲಾಲ್‌ …

Read More »

ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಿಂದ ಹಿಂದೆ ಸರಿದ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ‘ಒಬ್ಬ ವ್ಯಕ್ತಿ-ಒಂದು ಹುದ್ದೆ’ಯ ‘ಉದಯಪುರ ನಿರ್ಣಯ’ದ ಬದ್ಧತೆಯನ್ನು ಕಾಯ್ದುಕೊಳ್ಳುವ ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರಿದ್ದು, ಜೈಪುರದ ಉನ್ನತ ಹುದ್ದೆಯ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರ ಹೇಳಿಕೆ ಬಂದಿದೆ. ಈ ವರ್ಷದ ಮೇ ತಿಂಗಳಲ್ಲಿ, ಪಕ್ಷದ ‘ಚಿಂತನ್ ಶಿವೀರ್’ …

Read More »

ಹಾವೇರಿ: ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ; 300 ಕ್ಕೂ ಹೆಚ್ಚು ಜನರ ಮೇಲೆ ದೂರು

ಹಾವೇರಿ, ಸೆಪ್ಟೆಂಬರ್ 21: ರಾಣೇಬೆನ್ನೂರು ನಗರದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡುವ ವೇಳೆ 300ರಿಂದ 500 ಜನರ ಅನ್ಯಕೋಮಿನ ಗುಂಪು ಹಿಂದೂ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ. ಮಂಗಳವಾರ ತಡರಾತ್ರಿ ಕಾಕಿ ಗಲ್ಲಿಯ ಗಣಪತಿ ವಿಸರ್ಜನಾ ಮೆರವಣಿಗೆ ನಡೆದಿದ್ದು, ದರ್ಗಾ ಸರ್ಕಲ್‌ಗೆ ಬಂದಾಗ ಅನ್ಯಕೋಮಿನ ಗುಂಪು ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಹಲವು ಯುವಕರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಘಟನೆ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ದರ್ಗಾ …

Read More »

ಮೇಲ್ಮನೆಯಲ್ಲಿ ಕೋಲಾಹಲ ಸೃಷ್ಟಿಸಿದ ಕೆಪಿಸಿಸಿ ಜಾಲತಾಣ ಮುಖ್ಯಸ್ಥನ ಬಂಧನ! ಕಲಾಪ ಮುಂದೂಡಿಕೆ

ಬೆಂಗಳೂರು: ಕಾಂಗ್ರೆಸ್​ನ ಸೋಷಿಯಲ್ ಮೀಡಿಯಾ ಚೀಫ್ ಬಿ.ಆರ್ ನಾಯ್ಡು ಹಾಗೂ ಅರುಣ್ ಎನ್ನುವವರನ್ನು ಬುಧವಾರ ತಡರಾತ್ರಿ ಪೊಲೀಸರು ಬಂಧಿಸಿರುವುದು ಮೇಲ್ಮನೆಯಲ್ಲಿ ಗುರುವಾರ ವಾಗ್ವಾದ, ಗದ್ದಲಕ್ಕೆ ಕಾರಣವಾಯಿತು. ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಪದೇ ಪದೇ‌ ವಿನಂತಿಸಿದರೂ ಕಾಂಗ್ರೆಸ್​ನವರ ಧರಣಿ, ಎರಡೂ ಕಡೆಯವರ ಪರ-ವಿರೋಧ ಧಿಕ್ಕಾರದ ಮೊಳಗು, ಮಾತಿನ ಚಕಮಕಿ ನಿಲ್ಲಲಿಲ್ಲ. ಇದರಿಂದಾಗಿ ಕಲಾಪವನ್ನು 10 ನಿಮಿಷ ಮುಂದೂಡಿದರು. ಸದನ ಸೇರುತ್ತಿದ್ದಂತೆಯೇ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ವಿಷಯ ಪ್ರಸ್ತಾಪಿಸಿ, ಕಾಂಗ್ರೆಸ್​ಗೊಂದು ಬಿಜೆಪಿಗೊಂದು ಕಾನೂನೇ, …

Read More »

ಕಾಂಗ್ರೆಸ್ ಮುಖಂಡರ ಬಂಧನ: ಬಿಜೆಪಿಯಿಂದ ಅಧಿಕಾರ ದುರ್ಬಳಕೆ, ದ್ವೇಷದ ರಾಜಕಾರಣ- ಡಿಕೆಶಿ

ಬೆಂಗಳೂರು: ಪೇ ಸಿಎಂ ಪೋಸ್ಟರ್ ಅಭಿಯಾನದ ಹಿನ್ನೆಲೆಯಲ್ಲಿ ನಗರದ ಪೊಲೀಸರು ಐವರು ಕಾಂಗ್ರೆಸ್ ಮುಖಂಡರನ್ನು ವಶಕ್ಕೆ ಪಡೆದಿದ್ದು, ಹೈಗ್ರೌಂಡ್ಸ್ ಠಾಣೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಭೇಟಿ ನೀಡಿ ವಿಚಾರಿಸಿದ್ದಾರೆ. ಡಿಕೆಶಿ ಕಿಡಿ: ಪಕ್ಷದ ಮುಖಂಡರ ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆಶಿ, ಪ್ರಜಾಪ್ರಭುತ್ವದ ಅಡಿ ನಾವು ಕೆಲಸ ಮಾಡುತ್ತಿದ್ದೇವೆ. 40% ಕಮಿಷನ್ ಸರ್ಕಾರ ಅಂತ ನಾವೆಲ್ಲ ಕ್ಯಾಂಪೇನ್ ಮಾಡಿದ್ದೇವೆ. ಬಿಜೆಪಿ ವಿರುದ್ಧ ಮಾಧ್ಯಮದ ಸೋರ್ಸ್ ರೇಟ್ ಕಾರ್ಡ್ ಬಳಸಿ ಕ್ಯಾಂಪೇನ್​ ಮಾಡಲಾಗಿದೆ. ಇದು ಸತ್ಯ, …

Read More »

ಲಂಚದ ಹಣ ವಾಪಸ್​ ನೀಡುವಾಗ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿಗಳು

ಬೆಂಗಳೂರು: ಸಾಮಾನ್ಯವಾಗಿ ಲಂಚ ಪಡೆಯುವಾಗ ಭ್ರಷ್ಟ ಅಧಿಕಾರಿಗಳು ಸಿಕ್ಕಿ ಬೀಳುತ್ತಾರೆ. ಆದರೆ ಈ ಪ್ರಕರಣದಲ್ಲಿ ಲಂಚ ಪಡೆಯುವಾಗ ಸಿಕ್ಕಿಬೀಳದೆ, ಲಂಚದ ಹಣವನ್ನು ವಾಪಸ್​ ಕೊಡುವಾಗ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ–2 ಹುದ್ದೆಯಲ್ಲಿದ್ದ ಕೆಎಎಸ್‌ ಅಧಿಕಾರಿ ಎ.ಬಿ. ವಿಜಯಕುಮಾರ್‌ ಮತ್ತು ಅವರ ಕಚೇರಿಯ ಭೂಮಾಪಕ ರಘುನಾಥ್‌ ಬಂಧಿತ ಆರೋಪಿಗಳಾಗಿದ್ದಾರೆ. ವ್ಯಕ್ತಿಯೊಬ್ಬರ ಜಮೀನು ಸ್ವಾಧೀನಪಡಿಸಿಕೊಂಡಿಲ್ಲ‌ ಎಂದು ನಿರಾಕ್ಷೇಪಣಾ ಪತ್ರ (ಎನ್ಓಸಿ) ಪತ್ರ ನೀಡಲು 2.5 ಲಂಚ ಪಡೆದಿದ್ದರು ಎನ್ನಲಾಗ್ತಿದೆ. …

Read More »

ಅಥಣಿಯಲ್ಲಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ.. ನವಜಾತ ಮಗು ಪತ್ತೆ.. ಸಿಕ್ಕಿ ಬಿದ್ದ ಕಳ್ಳಿ

ಅಥಣಿ: ಸಿನಿಮೀಯ ಮಾದರಿಯಲ್ಲಿ ಸರ್ಕಾರಿ ಆಸ್ಪತ್ರೆಯಿಂದ ನವಜಾತ ಶಿಶು ಕಳ್ಳತನ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಆದರೆ, ಎರಡೂವರೆ ಗಂಟೆಯಲ್ಲಿ ಮಗುವನ್ನು ಬೆಳಗಾವಿ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ನಿನ್ನೆಯಷ್ಟೇ ಜನಿಸಿದ್ದ ನವಜಾತ ಗಂಡು ಮಗು ಪತ್ತೆ ಹಚ್ಚಿ ತಾಯಿಗೆ ಹಸ್ತಾಂತರಿಸುವಲ್ಲಿ ಅಥಣಿ ಮತ್ತು ಕಾಗವಾಡ ಪೊಲೀಸರು ಯಶಸ್ವಿಯಾಗಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಇಂದು ಬೆಳಗಿನ ಜಾವ 10.15 ಕ್ಕೆ ಸರ್ಕಾರಿ ಆಸ್ಪತ್ರೆಗೆ ನರ್ಸ್ …

Read More »