ಬೆಳಗಾವಿ: ಮಕ್ಕಳ ಕಳವಿಗೆ ಯತ್ನಿಸಿದವನೊಬ್ಬ ಸಾರ್ವಜನಿಕರ ಕೈಗೆ ಸಿಕ್ಕಿಹಾಕಿಕೊಂಡು ಏಟು ಬೀಳುತ್ತಿದ್ದಂತೆ ತಪ್ಪಿಸಿಕೊಂಡು ಪರಾರಿಯಾದ ಪ್ರಕರಣವೊಂದು ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಮಕ್ಕಳ ಕಳ್ಳರು ಕಾಣಿಸಿಕೊಂಡಿದ್ದು, ಜನತೆಯಲ್ಲಿ ಆತಂಕ ಮೂಡಿದೆ. ಸೋಮವಾರ ಮಧ್ಯಾಹ್ನ ವೇಳೆ ಪಟ್ಟಣದ ಪಿಂಜಾರ ಗಲ್ಲಿಯಲ್ಲಿ ಮಕ್ಕಳ ಕಳ್ಳನೋರ್ವ ಚಿಕ್ಕ ಬಾಲಕನನ್ನು ಕಳ್ಳತನ ಮಾಡಿ ಕರೆದೊಯ್ಯುವಾಗ ಗಲ್ಲಿಯ ಜನತೆಯಿಂದ ಧರ್ಮದೇಟು ತಿಂದು ಪರಾರಿಯಾದ ಘಟನೆ ನಡೆದಿದೆ. ಸ್ವಯಂ ಸತೀಶ ಅರವಳ್ಳಿ ಎಂಬ ನಾಲ್ಕು ವರ್ಷದ ಬಾಲಕನು …
Read More »ಹುಟ್ಟೂರು ಬೆಲ್ಲದ ಬಾಗೇವಾಡಿಯಲ್ಲಿ ಸಂಜೆ ಉಮೇಶ್ ಕತ್ತಿ ಅಂತ್ಯಸಂಸ್ಕಾರ
ಹುಟ್ಟೂರು ಬೆಲ್ಲದ ಬಾಗೇವಾಡಿಯಲ್ಲಿ ಸಂಜೆ ಉಮೇಶ್ ಕತ್ತಿ ಅಂತ್ಯಸಂಸ್ಕಾರ ಬೆಂಗಳೂರು: ಕಳೆದ ರಾತ್ರಿ ಬೆಂಗಳೂರಿನಲ್ಲಿ ನಿಧನರಾದ ಸಚಿವ ಉಮೇಶ್ ಕತ್ತಿ ಅವರ ಮೃತದೇಹದ ಅಂತಿಮ ಸಂಸ್ಕಾರ ಇಂದು ಸಂಜೆ ಬೆಳಗಾವಿಯ ಬೆಲ್ಲದ ಬಾಗೇವಾಡಿಯಲ್ಲಿ ನೆರವೇರಲಿದೆ. ಬೆಳಗಾವಿಯ ಶಿವಬಸವ ನಗರದಲ್ಲಿರುವ ಸಚಿವರ ಸ್ವಗೃಹ ಮತ್ತು ಬೆಳಗ್ಗೆ 10.30ಕ್ಕೆ ಸಂಕೇಶ್ವರದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯಲ್ಲಿ ಪಾರ್ಥಿವ ಶರೀರದ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಮಧ್ಯಾಹ್ನ 12ಕ್ಕೆ ಸ್ವಗ್ರಾಮ ಬೆಲ್ಲದ ಬಾಗೇವಾಡಿಗೆ ಮೃತದೇಹವನ್ನು ರವಾನಿಸಲಿದ್ದು, …
Read More »ಶರಣಬಸವ ವಿವಿಯಿಂದ ಮಂಜಮ್ಮ ಜೋಗತಿ ಸೇರಿ ಐವರು ಗಣ್ಯರಿಗೆ ಗೌರವ ಡಾಕ್ಟರೇಟ್
ಕಲಬುರಗಿ: ನಗರದ ಪ್ರತಿಷ್ಠಿತ ಶರಣಬಸವ ವಿಶ್ವವಿದ್ಯಾಲಯದಿಂದ ಮಂಜಮ್ಮ ಜೋಗತಿ ಸೇರಿ ಐವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ ಎಂದು ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಶರಣಬಸವಪ್ಪ ಅಪ್ಪ ತಿಳಿಸಿದರು. ಹಿರಿಯ ವಿಜ್ಞಾನಿಗಳಾದ ಡಾ.ಕಿರಣ್ ಕುಮಾರ್, ಡಾ.ಸತೀಶ್ ರೆಡ್ಡಿ, ಸಾಮಾಜಿಕ ಕಾರ್ಯಕರ್ತೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಪದ್ಮಶ್ರೀ ಡಾ ಮಂಜಮ್ಮ ಜೋಗತಿ, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕದ ಹರಿಹರದ ಶಿವಯೋಗಾಶ್ರಮದ ಶರಣಬಸವಲಿಂಗ ಶಿವಯೋಗಿಗಳಿಗೆ ಮತ್ತು ಹೈದರಾಬಾದ್ …
Read More »ಸ್ತಬ್ಧವಾಯ್ತು ‘ಉತ್ತರ’ದ ಧ್ವನಿ: ಉತ್ತರ ಕರ್ನಾಟಕದ ಜನಪರ ಧ್ವನಿಯೂ ನಿಂತುಹೋಗಿದೆ.
ಬೆಂಗಳೂರು: ರಾಜ್ಯ ಕಂಡ ಅಪರೂಪದ ರಾಜಕಾರಣಿ, ಜನತಾ ಪರಿವಾರ ಮೂಲದ ಹಿರಿಯ ಮುತ್ಸದ್ಧಿ ಉಮೇಶ್ ಕತ್ತಿ (61) ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕದ ಜನಪರ ಧ್ವನಿಯೂ ನಿಂತುಹೋಗಿದೆ. 1961ರ ಮಾರ್ಚ್ 14 ರಂದು ಬೆಳಗಾವಿ ಜಿಲ್ಲೆ ಹುಕ್ಕೇರಿಯ ಬೆಲ್ಲದ ಬಾಗೇವಾಡಿಯಲ್ಲಿ ಉಮೇಶ್ ಕತ್ತಿ ಜನಿಸಿದರು. ತಂದೆ ವಿಶ್ವನಾಥ್ ಕತ್ತಿ ಅವರ ಅಕಾಲಿಕ ನಿಧನದಿಂದ ಹುಕ್ಕೇರಿ ವಿಧಾನಸಭಾ ಕ್ಷೇತ್ರ ಖಾಲಿಯಾಗಿತ್ತು. 1985ರಲ್ಲಿ ಉಮೇಶ್ ಕತ್ತಿ, ಜನತಾ ಪಕ್ಷದಿಂದ ಶಾಸಕರಾಗಿ …
Read More »ಸಚಿವ ಉಮೇಶ್ ಕತ್ತಿ(61) ಹೃದಯಾಘಾತದಿಂದ ನಿಧನ
ಬೆಂಗಳೂರು(ಸೆ.06): ಸಚಿವ ಉಮೇಶ್ ಕತ್ತಿ(61) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು(ಮಂಗಳವಾರ) ರಾತ್ರಿ ನಗರದ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಉಮೇಶ್ ಕತ್ತಿ ಅವರಿಗೆ ಹೃದಯಾಘಾತವಾಗಿದ್ದರಿಂದ ತಕ್ಷಣ ಅವರನ್ನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಉಮೇಶ್ ಕತ್ತಿ ನಿಧನರಾಗಿದ್ದಾರೆ.
Read More »BIG BREAKING ಸಚಿವ ಉಮೇಶ್ ಕತ್ತಿಗೆ ಹಾರ್ಟ್ ಅಟ್ಟ್ಯಾಕ್
ಸಚಿವ ಉಮೇಶ್ ಕತ್ತಿಗೆ ಹಾರ್ಟ್ ಅಟ್ಟ್ಯಾಕ್ ರಾತ್ರಿ 10ಗಂಟೆಗೆ ಬೆಂಗಳೂರಿನ ಡಾಲರ್ಸ್ ಕಾಲನಿಯ ನಿವಾಸದಲ್ಲಿ ತಕ್ಷಣ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಹೆಚ್ಚಿನ ಮಾಹಿತಿಗೆ ಬಾಕಿ
Read More »ತ್ಯಾಗರ್ತಿ: ಒಂದೇಕಡೆ ಗಣಪತಿ ಪ್ರತಿಷ್ಠಾಪನೆ
ತ್ಯಾಗರ್ತಿ: ಸರ್ವಧರ್ಮಿಯರನ್ನು ಹೊಂದಿರುವ ತ್ಯಾಗರ್ತಿ ಗ್ರಾಮ ಸುಮಾರು 5,000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಧಾರ್ಮಿಕ ಹಬ್ಬಗಳನ್ನು ಸಾರ್ವಜನಿಕವಾಗಿ ಸಂಘಟಿಸಿ ಮಾದರಿಯಾಗಿದೆ. ಕೆಲವು ವರ್ಷಗಳ ಹಿಂದೆ ಗ್ರಾಮದಲ್ಲಿ ಅಂಬೇಡ್ಕರ್ ಸಂಘ, ಮುಕ್ಕುಪ್ಪೆ ಸರ್ಕಲ್, ಕಾಗೋಡು ತಿಮ್ಮಪ್ಪ ವೃತ್ತ, ಬನ್ನಿಕಟ್ಟೆ, ಮಾರಿಕಾಂಬಾ ತವರು ಮನೆ ಹಾಗೂ ಮಾರಿಕಾಂಬಾ ದೇವಸ್ಥಾನ ಹೀಗೆ ಬೇರೆ ಬೇರೆ ಸ್ಥಳಗಳಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಗ್ರಾಮದ ಹಿರಿಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಚರ್ಚಿಸಿ ಎಲ್ಲರೂ ಸೇರಿ ಸಾರ್ವಜನಿಕ ಹಿಂದೂ ಮಹಾಸಭಾ …
Read More »ಮಳೆ ನಿರ್ವಹಣೆಗೆ 300 ಕೋಟಿ ರೂ.ಗಳನ್ನು ಒದಗಿಸಲಾಗುವುದು:C.M. ಬೊಮ್ಮಾಯಿ
ಇಡೀ ರಾಜ್ಯದಲ್ಲಿ ಮಳೆ ನಿರ್ವಹಣೆಗೆ 300 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಂಗಳೂರಿನಲ್ಲಿ 90 ವರ್ಷ ಆಗದಿರುವ ಮಳೆಯಾಗಿದೆ. ಇಡೀ ಬೆಂಗಳೂರು ಮುಳುಗಿಲ್ಲ. ಆ ರೀತಿ ಬಿಂಬಿಸುವ ಅವಶ್ಯಕತೆ ಇಲ್ಲ. ಬೆಂಗಳೂರಿನಲ್ಲಿ 8 ವಲಯಗಳಿವೆ. ಅವುಗಳಲ್ಲಿ 2 ವಲಯಗಳಲ್ಲಿ ತೊಂದರೆಯಾಗಿದೆ. ಅದರಲ್ಲಿ ಬೊಮ್ಮನಹಳ್ಳಿ ವಲಯ ಸಂಪೂರ್ಣ ನಿಯಂತ್ರಣದಲ್ಲಿದೆ. ಮತ್ತೊಂದು ವಲಯದಲ್ಲಿ 69 ಕೆರೆಗಳಿದ್ದು, …
Read More »ರಾಜ್ಯ ಸರ್ಕಾರಿ ನೌಕರರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವೆ.: ಸಿಎಂ ಘೋಷಣೆ
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವೆ. ಅಕ್ಟೋಬರ್ನಲ್ಲಿ ನೂತನ ವೇತನ ಆಯೋಗ ರಚಿಸುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ದಿನ ಉದ್ಘಾಟಿಸಿದ ಬಳಿಕ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ, ವೇತನ ಪರಿಷ್ಕರಣೆಗೆ ಸಂಬಂಧಿಸಿದ ಶಿಫಾರಸು ಹಾಗೂ ವರದಿ ಸಲ್ಲಿಸಲು ಈ ಆಯೋಗ ರಚಿಸಲಿದ್ದು, ನೌಕರರ ಇನ್ನುಳಿದ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು. …
Read More »ಹಾಸನ ವಿಧಾನಸಭಾ ಟಿಕೆಟ್ ಫೈಟ್: ಜೆಡಿಎಸ್ ಸಭೆಯಲ್ಲಿ ಗದ್ದಲ, ರೇವಣ್ಣ ಗರಂ
ಹಾಸನ: ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಯುವ ಮುಖಂಡ ಎಚ್.ಎಸ್.ಸ್ವರೂಪ್ ಅವರಿಗೆ ಜೆಡಿಎಸ್ ಟಿಕೆಟ್ ನೀಡುವಂತೆ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಅವರಿಗೆ ಸೋಮವಾರ ಪಕ್ಷದ ಕಾರ್ಯಕರ್ತರು ಒತ್ತಾಯಿಸಿದಾಗ, ಜೆಡಿಎಸ್ ಕಾರ್ಯಕರ್ತರ ಸಭೆ ಗದ್ದಲಕ್ಕೆ ತಿರುಗಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಎಚ್.ಡಿ.ರೇವಣ್ಣ ಅವರು ನಿರಂತರವಾಗಿ ಸ್ವರೂಪ್ ಪರ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರನ್ನು ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡರು. ಅಲ್ಲದೆ ಅವರಿಗೆ ಸಭಾಂಗಣದಿಂದ ಹೊರಗೆ ಹೋಗುವಂತೆ ಸೂಚಿಸಿದರು. ಎಚ್.ಡಿ.ರೇವಣ್ಣ ಹೇಳಿಕೆಯಿಂದ ಮತ್ತಷ್ಟು ಆಕ್ರೋಶಗೊಂಡ ಕಾರ್ಯಕರ್ತರು ಸ್ವರೂಪ್ …
Read More »