ಇಂದು ( ಅಕ್ಟೋಬರ್ 21 ) ತಿಂಗಳಿನ ಮೂರನೇ ಶುಕ್ರವಾರ. ಕಳೆದೆರಡು ಶುಕ್ರವಾರಗಳು ಬಿಡುಗಡೆಗೊಂಡ ಯಾವುದೇ ಚಿತ್ರಗಳು ಕೂಡ ಸೆಪ್ಟೆಂಬರ್ ತಿಂಗಳ ಅಂತಿಮ ದಿನದಂದು ಬಿಡುಗಡೆಗೊಂಡ ಕಾಂತಾರ ಚಿತ್ರವನ್ನು ಮಣಿಸುವಲ್ಲಿ ಯಶಸ್ವಿಯಾಗಿಲ್ಲ. ತೆಲುಗಿನಲ್ಲಿ ಚಿರಂಜೀವಿ ಹಾಗೂ ನಾಗಾರ್ಜುನ ರೀತಿಯ ದೊಡ್ಡ ದೊಡ್ಡ ನಟರ ಚಿತ್ರಗಳನ್ನೂ ಸಹ ಮಣಿಸಿದ ಕಾಂತಾರ ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಗುಡ್ ಬೈ ಚಿತ್ರಕ್ಕೂ ಸಹ ಮಣ್ಣು ಮುಕ್ಕಿಸಿತ್ತು. ಹೀಗೆ ದೇಶಾದ್ಯಂತ …
Read More »ಮೈಸೂರು ಭಾಗದ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ
ಮೈಸೂರು: ವಿಧಾನಸಭಾ ಚುವಾಣೆಗೆ ಬಿಜೆಪಿ ಜನಸಂಕಲ್ಪ ಯಾತ್ರೆ ಮೂಲಕ ಮತದಾರರನ್ನು ಸೆಳೆಯುತ್ತಿದ್ದರೆ. ಇತ್ತ ಕಾಂಗ್ರೆಸ್ ಕೂಡ ಭಾರತ್ ಜೋಡೋ ಯಾತ್ರೆ ಮೂಲಕ ಸಂಚಲನ ಮೂಡಿಸುತ್ತಿದೆ. ಇದೀಗ ಜೆಡಿಎಸ್ ಪಂಚರತ್ನ ಯಾತ್ರೆಗೆ ಸಿದ್ಧತೆ ನಡೆಸಲಾಗಿದೆ. ಹೀಗಾಗಿ ಕೆಲ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ.ಜೆಡಿಎಸ್ ತೊರೆಯಲು ಮುಂದಾಗಿದ್ದ ಹಿರಿಯ ಶಾಸಕ ಜಿ.ಟಿ ದೇವೇಗೌಡರನ್ನು ಮನವೊಲಿಕೆ ಮಾಡುವಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಯಶಸ್ವಿಯಾಗಿದ್ದು, ಈ ಮೂಲಕ ಹಳೆ ಮೈಸೂರು …
Read More »ಮತ್ತೆ ಕರ್ನಾಟಕ ಯಾತ್ರೆ: ಎಡೆದೊರೆ ನಾಡಿಗೆ ರಾಹುಲ್ ಗಾಂಧಿಗೆ ಅದ್ದೂರಿ ಸ್ವಾಗತ
ರಾಯಚೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯನ್ನು ತಾಲೂಕಿನ ತುಂಗಭದ್ರಾ ಸೇತುವೆ ಬಳಿ ವಿಜೃಂಭಣೆಯಿಂದ ಬರ ಮಾಡಿಕೊಳ್ಳಲಾಯಿತು. ಪಾದಯಾತ್ರೆ ಸ್ವಾಗತಕ್ಕೆ ಜಿಲ್ಲಾ ಕಾಂಗ್ರೆಸ್ ಭರದ ಸಿದ್ದತೆ ಮಾಡಿಕೊಂಡಿತ್ತು. ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಜನ ತಾಲೂಕಿನ ತುಂಗಭದ್ರಾ ಸೇತುವೆ ಬಳಿ ಪಕ್ಷದ ಮುಖಂಡರು ಕಾರ್ಯಕರ್ತರು ರಾಹುಲ್ ಗಾಂಧಿಗಾಗಿ ಬೆಳಗಿನ ಜಾವದಿಂದಲೇ ಕಾದು ಕುಳಿತಿದ್ದರು. ಬೆಳಗ್ಗೆ 7.30 ಶುರುವಾಗಬೇಕಾದ ಯಾತ್ರೆ 8.30 ದಾಟಿದರೂ …
Read More »ಲೋಕಾಯುಕ್ತ ಪೊಲೀಸರ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಿಡಿಓಗಳು.
ಬಾಗಲಕೋಟೆ: ಪಿಡಿಒಗಳು ಲಂಚಸ್ವೀಕರಿಸುತ್ತಿದ್ದಾಗ ತಾಲೂಕಿನ ರಾಂಪುರ ಹಾಗೂ ಬೇವಿನಮಟ್ಟಿ ಗ್ರಾಮ ಪಂಚಾಯ್ತಿಗಳಲ್ಲಿ ಲೋಕಾಯುಕ್ತರ ಬಲೆ ಬಿದ್ದಿದ್ದಾರೆ. ಬೇವಿನಮಟ್ಟಿ ಪಿಡಿಒ ಚಂದ್ರಕಾಂತ್ ತಿಮ್ಮಾಪುರ ಮತ್ತು ರಾಂಪುರ ಪಿಡಿಒ ಮುದಕಪ್ಪ ತೇಜಿ ಎಂಬುವವರ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಪಿಡಿಓಗಳು ಎನ್.ಎ ಪ್ಲಾಟ್ ಎಂಟ್ರಿ ಮಾಡಿಕೊಡಲು ಎರಡೂವರೆ ಲಕ್ಷ ಲಂಚ ಕೇಳಿದ್ದರು. ಈ ಇಬ್ಬರು ಪಿಡಿಓಗಳು ಸ್ನೇಹಿತರಾಗಿದ್ದು, ಹೊನ್ನಾಕಟ್ಟಿ ಗ್ರಾಮದ ವಾಸು ಜಾಧವ್ ಎಂಬುವರಿಗೆ 1 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು. …
Read More »ಒಂದು ಮತದ ಅಂತರದಲ್ಲಿ ಸೋತ ಅಭ್ಯರ್ಥಿ; ಮರು ಎಣಿಕೆಗಾಗಿ ಕೋರ್ಟ್ ಮೊರೆ ಹೋದಾಗ ಮುಖಭಂಗ
ಚಿಕ್ಕೋಡಿ : ಕಳೆದ ಒಂದೂವರೆ ವರ್ಷದ ಹಿಂದೆ ನಡೆದಿದ್ದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪರಾಭವಗೊಂಡು ಮರು ಮತ ಎಣಿಕೆಗೆ ಕೋರ್ಟ್ ಮೆಟ್ಟಿಲೇರಿದ್ದ ಅಭ್ಯರ್ಥಿಗೆ ಮುಖಭಂಗವಾದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯತಿಯ 2020 ರ ಡಿಸೆಂಬರ್ 30 ರಂದು ನಡೆದಿದ್ದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಮತ ಎಣಿಕೆ ಸರಿಯಾಗಿಲ್ಲ ಎಂದು ಆರೋಪಿಸಿ ಪರಾಜಿತ ಅಭ್ಯರ್ಥಿಯಾದ ರಾವಸಾಹೇಬ್ ಪಾಟೀಲ್ , ಸಂಕೇಶ್ವರದ ಜೆ.ಎಂ.ಎಫ್.ಸಿ ಕೋರ್ಟ್ ಮೊರೆ ಹೋಗಿದ್ದರು. …
Read More »ಪತಿಯನ್ನು ಕೊಂದು ಮೃತದೇಹವನ್ನ ತುಂಡು-ತುಂಡು ಮಾಡಿ ಮನೆಯಲ್ಲಿ ಹೂತಿಟ್ಟಿದ್ದ ಪತ್ನಿ
ಕುಡುಕ ಗಂಡನನ್ನ ತಾನೇ ಕೊಂದು ಮೃತದೇಹವನ್ನ ತುಂಡು ತುಂಡಾಗಿ ಕತ್ತರಿಸಿ ಮನೆಯ ಹಿಂಬಾಗ ಗುಂಡಿ ತೆಗೆದು ಹೂತಿದ್ದ ಪಾತಕಿ ಪತ್ನಿಯ ಸ್ಫೋಟಕ ರಹಸ್ಯ ಬಯಲಾಗಿದೆ.ಹಾಸನ: ಗಂಡ ಮೃತಪಟ್ಟಾಗ ಮಾನವೀಯತೆ ಮರೆತು ಮೃತದೇಹವನ್ನ ತುಂಡು ತುಂಡಾಗಿ ಕತ್ತರಿಸಿದ್ದಾಳೆ. ಬಳಿಕ ಗುಂಡಿ ತೆಗೆದು ಮನೆಯಿಂದ ಹೂತಿದ್ದಾಳೆ. ಈ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಖಿನ ನೇರಲಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಪೊಲೀಸ್ ತನಿಖೆ ವೇಳೆ ಮಹಿಳೆ ಬಾಯ್ಬಿಟ್ಟಿದ್ದಾಳೆ. ಪತ್ನಿಯೇ ಪತಿಯನ್ನ ಬರ್ಬರವಾಗಿ ಕೊಂದಿದ್ದಾಳೆ. ಅಲ್ಲದೇ …
Read More »ಹೊಸದುರ್ಗ: ಏಪ್ರಿಲ್‌ನಲ್ಲಿ ಚುನಾವಣೆ ನಡೆಯುತ್ತೆ, ಹಿಂದೆ ಮಾಡಿದ ತಪ್ಪು ಮಾಡ್ಬೇಡಿ- ಸಿದ್ದರಾಮಯ್ಯ
ಚಿತ್ರದುರ್ಗ, ಅಕ್ಟೋಬರ್ 20 : 2023ರ ವಿಧಾನಸಭಾ ಚುನಾವಣೆ ಏಪ್ರಿಲ್ ತಿಂಗಳಲ್ಲಿ ನಡೆಯಲಿದೆ. ಹಿಂದೆ ಮಾಡಿದ ತಪ್ಪಗಳನ್ನು ಮತ್ತೆ ಮಾಡಬೇಡಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಕಾರ್ಯಕರ್ತರಿಗೆ ಹೇಳಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮಾಜಿ ಶಾಸಕ ಬಿಜಿ ಗೋವಿಂದಪ್ಪ ಅವರ 68ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶುಭಕೋರಿ ಮಾತನಾಡಿದರು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಗ್ಯಾಸ್, ಪೆಟ್ರೋಲಿಯಂ, ಬೆಲೆ …
Read More »ಯಾತ್ರೆಯಲ್ಲಿ ಮಂತ್ರಾಲಯ ರಾಯರ ದರ್ಶನ ಪಡೆದ ರಾಹುಲ್‌ಗಾಂಧಿ
ರಾಯಚೂರು: ಭಾರತ್ ಜೋಡೊ ಪಾದಯಾತ್ರೆ ಆರಂಭಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸುಕ್ಷೇತ್ರ ಮಂತ್ರಾಲಯಕ್ಕೆ ಗುರುವಾರ ತಲುಪಿದ್ದು, ಶ್ರೀರಾಘವೇಂದ್ರಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ಮೂಲ ವೃಂದಾವನ ದರ್ಶನ ಪಡೆದು ‘ಪೂಜ್ಯಾಯ ರಾಘವೇಂದ್ರಾಯ..’ ಮಂತ್ರ ಉಚ್ಛರಿಸಿದ್ದು ವಿಶೇಷವಾಗಿತ್ತು. ಯಮ್ಮಿಗನೂರು ಮಾರ್ಗದಿಂದ ಸುಕ್ಷೇತ್ರಕ್ಕೆ ಸಂಜೆ ತಲುಪಿದ ರಾಹುಲ್‌ಗಾಂಧಿ ಅವರು ಮೊದಲು ಅತಿಥಿಗೃಹಕ್ಕೆ ಹೋಗಿ ಮಠದ ಸಂಪ್ರದಾಯದಂತೆ ಬಿಳಿಪಂಚೆ ಹಾಗೂ ಶಲ್ಯ ಧರಿಸಿ ಮಠದ ಕಡೆಗೆ ಬಂದರು. ಮಠದ ಆಡಳಿತಾಧಿಕಾರಿಗಳು ಹೂಮಾಲೆ …
Read More »ಮೀಸಲಾತಿ ಹೆಚ್ಚಳಕ್ಕೆ ಸುಗ್ರಿವಾಜ್ಞೆ | ಸಚಿವ ಸಂಪುಟ ತೀರ್ಮಾನ
ಬೆಂಗಳೂರು: ಪರಿಶಿಷ್ಟ ಜಾತಿ (ಎಸ್.ಸಿ) ಮತ್ತು ಪಂಗಡಗಳ (ಎಸ್.ಟಿ) ಮೀಸಲಾತಿ ಪ್ರಮಾಣವನ್ನು ಶೇ 6 ರಷ್ಟು ಹೆಚ್ಚಿಸುವ ನಿರ್ಧಾರವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸಂಪುಟದ ನಿರ್ಧಾರವನ್ನು ರಾಜ್ಯಪಾಲರ ಅಂಕಿತಕ್ಕಾಗಿ ಶುಕ್ರವಾರ ಕಳುಹಿಸಲಾಗುವುದು. ಅವರ ಒಪ್ಪಿಗೆ ಸಿಕ್ಕಿದ ಬಳಿಕ ಕಾನೂನು ಜಾರಿ ಆಗಲಿದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ‘ನಮ್ಮ …
Read More »ನ. 1ರಂದು ಪುನೀತ್‌ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರದಾನ:C.M. ಬೊಮ್ಮಾಯಿ
ಬೆಂಗಳೂರು: ‘ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ನ. 1ರಂದು ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ಬಗ್ಗೆ ಪುನೀತ್ ರಾಜ್‌ಕುಮಾರ್ ಕುಟುಂಬದ ಸದಸ್ಯರು ಮತ್ತು ಸಂಪುಟ ಸಹೋದ್ಯೋಗಿಗಳ ಜೊತೆ ಗುರುವಾರ ಚರ್ಚಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ, ‘ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅಂದು ಸಂಜೆ 4 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ’ ಎಂದರು. ‘ಈವರೆಗೆ ಎಂಟು ಜನರಿಗೆ …
Read More »
Laxmi News 24×7