ಮೈಸೂರು: ನಾಡಹಬ್ಬ ದಸರಾದ ಪ್ರಧಾನ ಕವಿಗೋಷ್ಠಿಯ ಆಹ್ವಾನ ಪತ್ರಿಕೆಯಲ್ಲಿ ನಿಧನರಾದವರ ಹೆಸರನ್ನು ಪ್ರಕಟಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಡವಟ್ಟು ಮಾಡಿಕೊಂಡಿದೆ. ಪ್ರಧಾನ ಕವಿಗೋಷ್ಟಿಯಲ್ಲಿ ರಾಜಕೀಯ ಮುಖಂಡರು ಭಾಗವಹಿಸಲಿದ್ದು, ನಿಧನರಾದ ಆಕಾಶವಾಣಿ ನಿಲಯ ನಿರ್ದೇಶಕ ಜಿ.ಕೆ ರವೀಂದ್ರ ಕುಮಾರ್ ಅವರ ಹೆಸರು ಆಹ್ವಾನ ಪತ್ರಿಕೆಯಲ್ಲಿದೆ. ಅಕ್ಟೋಬರ್ 3 ರಂದು ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಸೆನೆಟ್ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಕವಿಗೋಷ್ಠಿ ನಡೆಯಲಿದೆ. ಒಟ್ಟು 37 ಮಂದಿ ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. …
Read More »ಬಾಗಲಕೋಟೆ: ಸಚಿವ ಮುರುಗೇಶ ನಿರಾಣಿ ಮನೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ
ಬಾಗಲಕೋಟೆ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಮುಧೋಳದಲ್ಲಿ ಸಚಿವ ಮುರುಗೇಶ ನಿರಾಣಿಯವರ ನಿವಾಸಕ್ಕೆ ಭೇಟಿ ನೀಡುವ ಮೂಲಕ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ. ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಜನ್ಮ ದಿನ ಕಾರ್ಯಕ್ರಮಕ್ಕೆ ಬಂದಿದ್ದ ಅವರು ನಿರಾಣಿ ಅವರ ನಿವಾಸದ ಬಳಿ ಇರುವ ಹೆಲಿಪ್ಯಾಡ್ ನಲ್ಲಿ ಇಳಿದಿದ್ದರು. ಕಾರ್ಯಕ್ರಮಕ್ಕೆ ತೆರಳುವ ಮುನ್ನ ನಿರಾಣಿ ಮನೆಗೆ ಹೋದರು. ಇದಕ್ಕೂ ಮುನ್ನ ಜಮಖಂಡಿಯಲ್ಲಿ ನಡೆದ ಸಿದ್ದು ನ್ಯಾಮಗೌಡರ …
Read More »ಅಜ್ಜನ ಜೊತೆ ಈಜು ಕಲಿಯಲು ಹೋಗಿದ್ದ ಬಾಲಕ ಬಾವಿಯಲ್ಲಿ ಮುಳುಗಿ ಸಾವು
ಬೆಳಗಾವಿ : ಅಜ್ಜನ ಜೊತೆ ಈಜು ಕಲಿಯಲು ಹೋಗಿದ್ದ ಬಾಲಕ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪೇಟೆಬಸವಣ್ಣ ಓಣಿಯ ಸಿದ್ಧಾರೂಢ ಮಂಜುನಾಥ ಗಾಣಗಿ (8) ಮೃತ ಬಾಲಕ. ಇಂದು ಬೆಳಗಿನ ಜಾವ ಅಜ್ಜನ ಜೊತೆಗೆ ಈಜು ಕಲಿಯಲು ಸಿದ್ಧಾರೂಢ ಹೋಗಿದ್ದನು. ಈ ವೇಳೆ, ಬೆನ್ನಿಗೆ ಪ್ಲಾಸ್ಟಿಕ್ ಡಬ್ಬಿ ಕಟ್ಟಿಕೊಂಡು ಬಾಲಕ ನೀರಿಗೆ ಇಳಿದಿದ್ದನು. ಆದರೆ, ಬಾವಿಯಲ್ಲಿ ಈಜುವಾಗಲೇ ಡಬ್ಬಿ ಕಳಚಿದ್ದರಿಂದ …
Read More »ಯುವ ದಸರಾ 2022: ನೋಡುಗರ ಗಮನ ಸೆಳೆದ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ
ಶಿವಮೊಗ್ಗ: ಯುವ ದಸರಾ ಹಿನ್ನೆಲೆ ನಗರದ ಕುವೆಂಪು ರಂಗಮಂದಿರದಲ್ಲಿ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ 134ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಯನ್ನು ಐದು ವಿಭಾಗದಲ್ಲಿ ವಿಂಗಡಿಸಲಾಗಿತ್ತು. ಯುವಕರು ತಮ್ಮ ಕಟ್ಟು ಮಸ್ತಾದ ದೇಹ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದರು. ಸ್ಪರ್ಧೆಯ ತೀರ್ಪುಗಾರರಾಗಿ ರಾಜ್ಯ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಸದಸ್ಯರು ಭಾಗವಹಿಸಿದ್ದರು.
Read More »ಹಾವೇರಿಯಲ್ಲಿ ನವರಾತ್ರಿ ವೈಭವ..ಒಂಬತ್ತು ದಿನಗಳಲ್ಲಿಯೂ ವಿಶೇಷಾಲಂಕಾರ
ದೇಶದೆಲ್ಲೆಡೆ ಶರನ್ನವರಾತ್ರಿಯ ಸಂಭ್ರಮ ಆರಂಭವಾಗಿದೆ. ನವರಾತ್ರಿ ಬಂದರೆ ಸಾಕು ಹಾವೇರಿಯ ನವದುರ್ಗೆಯರ ದೇವಸ್ಥಾನದಲ್ಲಿ ಸಂಭ್ರಮ ಮನೆ ಮಾಡುತ್ತೆ. ದೇವಸ್ಥಾನಕ್ಕೆ ದೇವಸ್ಥಾನವೇ ಪುಷ್ಪಾಲಂಕಾರದಲ್ಲಿ ಕಂಗೊಳಿಸುತ್ತದೆ. ಈ ದೇವಸ್ಥಾನದ ಒಂದೇ ಗರ್ಭಗುಡಿಯಲ್ಲಿ ಒಂಬತ್ತು ದುರ್ಗೆಯರು ಸ್ಥಾಪನೆಯಾಗಿರುವುದು ವಿಶೇಷ. ನವರಾತ್ರಿಯ ಈ ದಿನಗಳಲ್ಲಿ ನಿತ್ಯ ಒಂದೊಂದು ದುರ್ಗಾ ಮಾತೆಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ಮೊದಲ ದಿನ ಶೈಲಪುತ್ರಿ, ಎರಡನೇಯ ದಿನ ಬ್ರಹ್ಮಚಾರಿಣೀ, ಮೂರನೇಯ ದಿನ ಚಂದ್ರಘಂಟಾ, ನಾಲ್ಕನೇಯ ದಿನ ಕೂಷ್ಮಾಂಡಾ, ಐದನೇಯ …
Read More »ಹಿಂದೂ-ಮುಸ್ಲಿಂರನ್ನು ಬೇರೆ ಮಾಡೋ ಕೆಲಸ ಎಸ್ ಡಿಪಿಐ- ಪಿಎಫ್ಐ ಮಾಡುತ್ತಿದ್ದವು: ಈಶ್ವರಪ್ಪ
ಶಿವಮೊಗ್ಗ: ರಾಷ್ಟ್ರದ್ರೋಹಿ ಚಟುವಟಿಕೆ ಮಾಡಿದ ಪಿಎಫ್ ಐ ಮತ್ತು ಎಸ್ ಡಿಪಿಐ ನಾಯಕರ ಬಂಧನ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ನಾನು ಸ್ವಾಗತಿಸುತ್ತೇನೆ ಎಂದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು. ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಹಿಂದೂ – ಮುಸ್ಲಿಂ- ಕ್ರೈಸ್ತರು ಒಟ್ಟಾಗಿ ಬಾಳಲು. ಎಸ್ ಡಿಪಿಐ ಮತ್ತು ಪಿಎಫ್ಐ ಹಿಂದೂ-ಮುಸ್ಲಿಂರನ್ನು ಬೇರೆ ಬೇರೆ ಮಾಡು ಕೆಲಸ ಮಾಡುತ್ತಿದ್ದರು. ಗೋಹತ್ಯೆ ಜೊತೆಗೆ ಹಿಂದೂ ಸಂಸ್ಕೃತಿಗೆ ಅವಮಾನ ಮಾಡುವ ಕೆಲಸ ಮಾಡುತ್ತಿದ್ದರು. …
Read More »ಕಂದಾಯ ಭವನದ ಮೇಲೆ ಉಪಲೋಕಾಯುಕ್ತರ ದಿಢೀರ್ ದಾಳಿ
ಬೆಂಗಳೂರು: ಸಾರ್ವಜನಿಕರ ದೂರು ಹಿನ್ನೆಲೆಯಲ್ಲಿ ಕಂದಾಯ ಭವನದ ಮೇಲೆ ಉಪಲೋಕಾಯುಕ್ತರು ದಿಢೀರ್ ದಾಳಿ ನಡೆಸಿರುವ ಘಟನೆ ನಡೆದಿದೆ. ಉಪಲೋಕಾಯುಕ್ತ ನ್ಯಾ.ಫಣೀಂದ್ರ ನೇತೃತ್ವದಲ್ಲಿ ಅಧಿಕಾರಿಗಳು ಕಂದಾಯ ಭವನದ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಸಾರ್ವಜನಿಕರಿಂದ ವ್ಯಾಪಕವಾಗಿ ದೂರು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಕಂದಾಯ ಭವನದ ವಿರುದ್ಧ ಹಲವಾರು ದೂರುಗಳು ಬಂದಿದ್ದವು. ಈ ನಿಟ್ಟಿನಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ
Read More »ಲೋಕಾಯುಕ್ತ ಇದ್ದಿದ್ರೆ ಸಿದ್ದರಾಮಯ್ಯ ಜೈಲಿಗೆ ಹೋಗ್ತಿದ್ರು: BJP ರಾಜ್ಯಾಧ್ಯಕ್ಷರ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು
ಬಾಗಲಕೋಟೆ: ಲೋಕಾಯುಕ್ತ ಇದ್ದಿದ್ರೆ ಸಿದ್ದರಾಮಯ್ಯ ಜೈಲಿಗೆ ಹೋಗ್ತಿದ್ರು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಹೇಳಿಕೆಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಟೀಲ್ ಒಬ್ಬ ವಿದೂಷಕ, ಅವರಿಗೆ ಮೆಚ್ಯೂರಿಟಿ ಇಲ್ಲ ಎಂದು ಕಿಡಿಕಾರಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ನಾವು 40% ಕಮಿಷನ್ ಆರೋಪ ಮಾಡಿದ ಮೇಲೆ ಬಿಜೆಪಿಯವರು ಈಗ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರ ಹೋಗಿ ಎಷ್ಟು …
Read More »ರೈತರೇ ಗಮನಿಸಿ : ಜಾನುವಾರುಗಳಿಗೆ ಚರ್ಮಗಂಟು ರೋಗ ಉಲ್ಬಣ : ಪಶುಪಾಲನಾ ಇಲಾಖೆ ಎಚ್ಚರಿಕೆ
ಬೆಳಗಾವಿ : ಜಾನುವಾರುಗಳಲ್ಲಿ ಚರ್ಮಗಂಟು ರೋಗ (ಲಂಪಿ ಸ್ಕನ್ ಡಿಸೀಜ್)ಸಾಂಕ್ರಾಮಿಕ ಕಾಯಿಲೆ ಕಂಡು ಬಂದಿದ್ದು, ಇದು ಕ್ಯಾಪ್ರಿಸಾಕ್ಸ್ ಎಂಬ ವೈರಾಣುವಿನಿಂದ ಬರುತ್ತದೆ. ದನ, ಎಮ್ಮೆಗಳಲ್ಲಿ ಅದರಲ್ಲೂ ಮಿಶ್ರತಳಿ ರಾಸುಗಳಲ್ಲಿ, ಕರುಗಳಲ್ಲಿ ಅತಿ ಹೆಚ್ಚಾಗಿ ಹಾಗೂ ತೀಕ್ಷಣವಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗವು ಮುಖ್ಯವಾಗಿ ದನಗಳಿಗೆ ಕಚ್ಚುವ ಕೀಟಗಳಿಂದ(ಸೊಳ್ಳೆ,ನೊಣ,ಉಣ್ಣೆ ಇತ್ತಯಾದಿ) ಬಹುಬೇಗ ಹರಡುತ್ತದೆ. ಮಳೆಗಾಲದಲ್ಲಿ ಮತ್ತು ನಂತರದ ದಿನಗಳಲ್ಲಿ ಹೆಚ್ಚಾಗಿ ಈ ರೋಗವು ಪಸರಿಸುತ್ತದೆ. ಚರ್ಮಗಂಟು ರೋಗದ ಲಕ್ಷಣಗಳು: ಅತಿಯಾದ ಜ್ವರ (೧೦೫-೧೮೦ಈ)ಕಣ್ಣುಗಳಿಂದ …
Read More »ಮುರುಘಾಶ್ರೀಗಳಿಗೆ ಮತ್ತೊಂದು ಶಾಕ್ : ಸೆ.29 ಕ್ಕೆ ಮಠದ ಪೀಠತ್ಯಾಗ ಚರ್ಚೆಗೆ ಮಹತ್ವದ ಸಭೆ
ಚಿತ್ರದುರ್ಗ : ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾಶ್ರೀಳಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಸೆ. 29 ರಂದು ಮುರುಘಾ ಶರಣರ ಪೀಠತ್ಯಾಗದ ಚರ್ಚೆಗೆ ವೀರಶೈವ ಸಮಾಜದ ಮುಖಂಡರು ಸಭೆ ಕರೆಯಲಾಗಿದೆ. ಮುರುಘಾ ಶ್ರೀಗಳು ಪೀಠತ್ಯಾಗ ಮಾಡದೇ ಇರುವುದರಿಂದ ಶ್ರೀಮಠದ ದೈನಂದಿನ ಧಾರ್ಮಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳ ನಿರ್ವಹಣೆ ಸವಾಲು ಎದುರಾಗಿದ್ದು, ಈ ಕುರಿತು ಚರ್ಚಿಸಲು ಸೆ.29 ರಂದು ವೀರಶೈವ ಸಮಾಜದ ಮುಖಂಡರ …
Read More »