ಬೆಂಗಳೂರು: ಸರ್ಕಾರ ಮಾಡುವ ಕೆಲಸವನ್ನು ಹಿರಿಯ ನಟಿ ಲೀಲಾವತಿ ಅವರು ಮಾಡಿದ್ದಾರೆ. ಆಸ್ಪತ್ರೆಗೆ ಬೇಕಾದ ಸೌಕರ್ಯಗಳು, ಸೌಲಭ್ಯಗಳು, ಸಿಬ್ಬಂದಿಗಳನ್ನು ಒದಗಿಸುವ ಪ್ರಾಮಾಣಿಕ ಕೆಲಸ ಸರ್ಕಾರದಿಂದ ಮಾಡುತ್ತೇವೆ. ಆಸ್ಪತ್ರೆಯ ಉದ್ಘಾಟನೆಗೆ ಬರದಿದ್ದರೆ ನಮ್ಮ ಹುದ್ದೆಯ ಘನತೆಗೆ ಚ್ಯುತಿ ಬರುತ್ತಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಸೋಲದೇವನಹಳ್ಳಿ ಗ್ರಾಮದಲ್ಲಿ ಹಿರಿಯ ನಟಿ ಲೀಲಾವಲಿ ಅವರು ನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಈ ಭಾಗದಲ್ಲಿ ಪಶುವೈದ್ಯಕೀಯ ಆಸ್ಪತ್ರೆ ಆಗಬೇಕಾಗಿದೆ …
Read More »ಸಂಚಾರ ಪೊಲೀಸರಿಗೆ ಪ್ರತಿದಿನ 40 ಪ್ರಕರಣ ದಾಖಲು ಟಾರ್ಗೆಟ್?
ಬೆಂಗಳೂರು: ದಂಡ ಸಂಗ್ರಹ ನಮ್ಮ ಉದ್ದೇಶವಲ್ಲ. ಸಂಚಾರ ನಿಯಮ ಬಗ್ಗೆ ವಾಹನ ಸವಾರರಿಗೆ ಜಾಗೃತಿ ಮೂಡಿಸುವುದೇ ಮೊದಲ ಆದ್ಯತೆ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಮಧ್ಯೆ ಪೂರ್ವ ವಿಭಾಗದ ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ವೊಬ್ಬರು ತಮ್ಮ ಅಧೀನ ಸಿಬ್ಬಂದಿಗೆ ಪ್ರತಿ ದಿನ 40 ಪ್ರಕರಣ ದಾಖಲಿಸಬೇಕು ಎಂದು ಆದೇಶ ನೀಡಿರುವ ಪತ್ರವೊಂದು ವೈರಲ್ ಆಗಿದೆ. ನಿತ್ಯ ಕನಿಷ್ಠ 40 ಪ್ರಕರಣ ದಾಖಲಿಸಿಕೊಳ್ಳಬೇಕು. ನಿಗದಿತ ಸಂಖ್ಯೆಯಲ್ಲಿ ಕೇಸ್ ದಾಖಲಿಸದಿದ್ದರೆ ಕರ್ತವ್ಯ …
Read More »ಮಾಲ್ ನಲ್ಲಿ ಸಿನಿಮಾ ಪ್ರಚಾರ: ಜನಸಂದಣಿಯಲ್ಲಿ ಖ್ಯಾತ ನಟಿಯರಿಗೆ ದೈಹಿಕ ಕಿರುಕುಳ
ಕೇರಳ: ಪತ್ರಕರ್ತೆಯೊಬ್ಬರಿಗೆ ನಟನೊಬ್ಬ ಅಸಭ್ಯವಾಗಿ ನಿಂದಿಸಿದ ಪ್ರಕರಣ ಸುದ್ದಿಯಲ್ಲಿರುವಾಗಲೇ ಮಲಯಾಳಂ ಸಿನಿಮಾರಂಗದಲ್ಲಿ ಮತ್ತೊಂದು ಘಟನೆ ನಡೆದಿದೆ. ಸಿನಿತಾರೆಯರು ತಮ್ಮ ಚಿತ್ರದ ಪ್ರಮೋಷನ್ ಗಾಗಿ ಮಾಲ್, ಥಿಯೇಟರ್ ಗೆ ಹೋಗುವಾಗ, ಅಭಿಮಾನಿಗಳು, ಫೋಟೋ ತೆಗೆದುಕೊಳ್ಳಲು ಮುಗಿಬೀಳುತ್ತಾರೆ. ಮಂಗಳವಾರ ಕೇರಳದ ಕೋಜಿಕೋಡ್ ಮಾಲ್ ವೊಂದರಲ್ಲಿ “ಸ್ಯಾಟರ್ ಡೇ ನೈಟ್” ಎನ್ನುವ ಸಿನಿಮಾ ಪ್ರಚಾರದಲ್ಲಿ ಖ್ಯಾತ ನಟ, ನಟಿಯರು ಭಾಗಿಯಾಗಿದ್ದರು. ಮೆಚ್ಚಿನ ಕಲಾವಿದರನ್ನು ನೋಡಲು ಅಭಿಮಾನಿಗಳು, ಪ್ರೇಕ್ಷಕರು ಮುಗಿಬಿದ್ದಿದ್ದು, ಅವರನ್ನು ನಿಯಂತ್ರಣ ಮಾಡಲು ಪೊಲೀಸರು …
Read More »ಜೇಮ್ಸ್, ಲಕ್ಕಿಮ್ಯಾನ್ ವೀಕ್ಷಿಸದೇ ಇದ್ದ ಅಶ್ವಿನಿ ಪುನೀತ್ ರಾಜ್‌ಕುಮಾರ್‌ರಿಂದ ಕೊನೆಗೂ ಸಿನಿಮಾ ವೀಕ್ಷಣೆ
ಪುನೀತ್ ರಾಜ್‌ಕುಮಾರ್ ಅಗಲಿಕೆಯ ನಂತರದ ಕೆಲ ದಿನಗಳ ಕಾಲ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೆಚ್ಚಾಗಿ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ತಾ ಇರಲಿಲ್ಲ. ರಾಜ್ಯ ಸರ್ಕಾರ ಏರ್ಪಡಿಸಿದ್ದ ಅಪ್ಪು ನಮನ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಅಶ್ವಿನಿ ಪುನೀತ್ ರಾಜ್‌ಕುಮಾರ್ ದುಃಖ ತಡೆಯಲಾರದೇ ಕಾರ್ಯಕ್ರಮದ ಮಧ್ಯದಲ್ಲಿಯೇ ಹೊರನಡೆದಿದ್ದದರು. ಹೀಗೆ ಅಪ್ಪು ಅಗಲಿಕೆಯ ನೋವಿನಲ್ಲಿದ್ದ ಅಶ್ವಿನಿ ಅವರಿಗೆ ಫೆಬ್ರವರಿ ತಿಂಗಳಿನಲ್ಲಿ ತಮ್ಮ ತಂದೆ ಭಾಗಮನೆ ರೇವನಾಥ್ ನಿಧನ ಮತ್ತಷ್ಟು ನೋವನ್ನು ಉಂಟು ಮಾಡಿತ್ತು. ಪುನೀತ್ …
Read More »ಹೃದಯ ವೈಫಲ್ಯ ಪತ್ತೆಗೆ ಹೊಸ ತಂತ್ರಜ್ಞಾನ: 8 ನಿಮಿಷ ಸಾಕು !
ಲಂಡನ್ : ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ವಿನೂತನ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಮಾನವನ ಹೃದಯ ವೈಫಲ್ಯವನ್ನು ತ್ವರಿತವಾಗಿ ಪತ್ತೆ ಮಾಡುತ್ತದೆ. ಸಾಂಪ್ರದಾಯಿಕ ಎಂಆರ್‌ಐ ಮೂಲಕ ಹೃದ್ರೋಗವನ್ನು ಪತ್ತೆಹಚ್ಚಲು 20 ನಿಮಿಷಗಳನ್ನು ತೆಗೆದುಕೊಂಡರೆ, ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಇತ್ತೀಚಿನ ತಂತ್ರಜ್ಞಾವು ಈ ಪ್ರಕ್ರಿಯೆಯನ್ನು ಕೇವಲ 8 ನಿಮಿಷಗಳಲ್ಲಿ ಪೂರ್ಣಗೊಳಿಸುತ್ತದೆ ಎಂದು ಸಂಶೋಧಕ ಹೊಸಮಾದಿನ್ ಅಸಾದಿ ಬಹಿರಂಗಪಡಿಸಿದ್ದಾರೆ. ಎಂಆರ್‌ಐ ತಂತ್ರಜ್ಞಾನವನ್ನು ಬಳಸಿಕೊಂಡು ನಾವು ಹೃದಯ ರಕ್ತದ ಹರಿವಿನ 4-ಆಯಾಮದ (4-D) ಚಿತ್ರಗಳನ್ನು ಅಭಿವೃದ್ಧಿಪಡಿಸಿದ್ದೇವೆ. ‘ಫೋರ್ಡಿ …
Read More »ಟ್ರಿಪ್ ಹೋದಾಗ ನದಿಗಿಳಿದು ಕೊಚ್ಚಿಹೋದ ಮೂವರು ವಿದ್ಯಾರ್ಥಿನಿಯರು
ಆಂಧ್ರಪ್ರದೇಶ: ಖುಷಿಯ ಕ್ಷಣಗಳನ್ನು ಕಳೆಯಲಿ ಎಂದು ಶಿಕ್ಷಕರು ಮಕ್ಕಳನ್ನು ವಿಹಾರಕ್ಕೆ ಕರೆದುಕೊಂಡು ಹೋದರೆ ಅದು ದುರಂತದಲ್ಲಿ ಕೊನೆಯಾಗಿದೆ. ವಿಹಾರಕ್ಕೆ ಹೋಗಿದ್ದ ವೇಳೆ ನದಿಗೆ ಇಳಿದಿದ್ದ ಮೂವರು ವಿದ್ಯಾರ್ಥಿನಿಯರು ನೀರು ಪಾಲಾದ ದುರ್ಘಟನೆ ಇಂದು ನಡೆದಿದೆ. ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ವೇಟಪಾಲೆಂನ ಖಾಸಗಿ ಶಾಲೆಯ 10 ನೇ ತರಗತಿ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಸಕಿಲೇರು ನದಿಗೆ ವಿಹಾರಕ್ಕೆ ತೆರಳಿದ್ದರು. ಈ ವೇಳೆ, ಮಕ್ಕಳು ನೀರಿನಲ್ಲಿ ಆಟವಾಡಿದ್ದಾರೆ. ಅದರಲ್ಲಿ ಮೂವರು ವಿದ್ಯಾರ್ಥಿನಿಯರು ನೀರಿನ ರಭಸಕ್ಕೆ ಕೊಚ್ಚಿ …
Read More »ಕಾರಲ್ಲಿ ಅತ್ಯಾಚಾರ, ವಿಷ ಕುಡಿದು ಆತ್ಮಹತ್ಯೆ ಯತ್ನ.. ಇದು ಲವ್, ಸೆಕ್ಸ್, ದೋಖಾ ಸ್ಟೋರಿ
ಠಾಣೆ (ಮಹಾರಾಷ್ಟ್ರ): ಇಲ್ಲಿನ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವತಿಯ ಜೀವನದಲ್ಲಿ ಲವ್ ಸೆಕ್ಸ್ ದೋಖಾ ಹಿಂದಿ ಚಲನಚಿತ್ರದ ರೀತಿಯಲ್ಲಿ ಘಟನೆಗಳು ಘಟಿಸಿದ್ದು ಅಚ್ಚರಿಯಾದರೂ ನಿಜ. ಈ ಯುವತಿಯು ಒಬ್ಬಾತನ ಪ್ರೀತಿಯ ಬಲೆಗೆ ಬಿದ್ದಿದ್ದಳು. ಪ್ರೀತಿಯ ನಾಟಕವಾಡುತ್ತಲೇ ಆತ ಅನೇಕ ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದ. ಆದರೆ, ಇದೆಲ್ಲ ಸಾಕು ನಾವಿನ್ನು ಲಗ್ನವಾಗೋಣ ಎಂದಾಗ ಮಾತ್ರ ಆತ ತನ್ನ ಅಸಲಿ ಬಣ್ಣ ತೋರಿಸಲಾರಂಭಿಸಿದ್ದ. ಹೀಗಾಗಿ ಯುವತಿಯು ಬೇರೆ ದಾರಿ ಕಾಣದೇ ಆನ್ಲೈನ್ ಮೂಲಕ ವಿಷ …
Read More »ಪೇ ಸಿಎಂ ಮಾದರಿ ಪೇ ಮೇಯರ್ ಸದ್ದು: ವಾಣಿಜ್ಯ ನಗರಿಯ ಗೋಡೆಗಳ ಮೇಲೆ ರಾರಾಜಿಸುತ್ತಿವೆ ಪೋಸ್ಟರ್
ಹುಬ್ಬಳ್ಳಿ: ದೇಶಾದ್ಯಂತ ಪೇ ಸಿಎಂ ಪೋಸ್ಟರ್ಗಳು ಸಾಕಷ್ಟು ಸುದ್ದಿ ಮಾಡಿದ್ದವು. ಅದೇ ಮಾದರಿಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಈಗ ಪೇ ಮೇಯರ್ ಪೋಸ್ಟರ್ ಅಭಿಯಾನ ಜೋರಾಗಿದೆ. ಪೇ ಸಿಎಂ ಚರ್ಚೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ ಪೇ ಮೇಯರ್ ಅಭಿಯಾನದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಆದರೆ ಈಗ ಅಭಿಯಾನ ಪೋಸ್ಟರ್ ರೂಪ ಪಡೆದುಕೊಂಡಿದ್ದು, ನಗರದ ಪ್ರಮುಖ ಬೀದಿಗಳು ಹಾಗೂ ಗೋಡೆಗಳ ಮೇಲೆ ಪೋಸ್ಟರ್ ಹಚ್ಚುವ ಮೂಲಕ ಅಭಿಯಾನ ನಡೆಸುತ್ತಿದ್ದಾರೆ. ರಾಷ್ಟ್ರಪತಿಗಳ …
Read More »ತವಗ ಗ್ರಾಮ ಪಂಚಾಯಿತಿಗೆ ಗಾಂಧಿ ಪುರಸ್ಕಾರ
ಗೋಕಾಕ: ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 2021-22ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನ ತವಗ ಗ್ರಾಮ ಪಂಚಾಯಿತಿ ಭಾಜನವಾಗಿದೆ. ಸಂಪೂರ್ಣ ಸ್ವಚ್ಛತೆ, ಹೆಚ್ಚು ಶೌಚಾಲಯ ನಿರ್ಮಿಸಿದ್ದನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ 5 ಲಕ್ಷ ನಗದು, ಅಭಿನಂದನಾ ಪತ್ರವನ್ನೊಳಗೊಂಡಿದೆ. ಕನಸಗೇರಿ, ಕೈತನಾಳ, ಕೈ- ಹೊಸೂರ ಗ್ರಾಮಗಳನ್ನು ಒಳಗೊಂಡ ತವಗ ಗ್ರಾಮ ಪಂಚಾಯಿತಿ ಒಟ್ಟು 23 ಸದಸ್ಯರನ್ನು ಹೊಂದಿದೆ. ಒಟ್ಟು 11,500 ಕ್ಕಿಂತ ಹೆಚ್ಚಿನ ಜನಸಂಖ್ಯೆ ಈ ಪಂಚಾಯಿತಿ ವ್ಯಾಪ್ತಿಯಲ್ಲಿದೆ. …
Read More »ನೋಡ ನೋಡುತ್ತಿದ್ದಂತೆ ಹೃದಯಾಘಾತದಿಂದ ಸಾವನ್ನಪ್ಪಿದ ಕುಸ್ತಿಪಟು: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಧಾರವಾಡ(ಹುಬ್ಬಳ್ಳಿ): ಹೃದಯಾಘಾತದಿಂದ ಯುವ ಕುಸ್ತಿಪಟು ಮೃತಪಟ್ಟಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ವಾಕಿಂಗ್ ಮಾಡಿ ಮನೆಗೆ ವಾಪಸ್ ತೆರಳುತ್ತಿದ್ದಾಗ ಹೃದಯಾಘಾತವಾಗಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ಪೈಲ್ವಾನ್ ಸಂಗಪ್ಪ ಬಳಿಗೇರ್ (28) ಮೃತ ಕುಸ್ತಿಪಟು. ಮೂಲತಃ ಬೆಳಗಾವಿ ಜಿಲ್ಲೆಯವರಾದರೂ ಧಾರವಾಡದಲ್ಲಿ ನೆಲೆಸಿದ್ದರು. ಇಂದು ಬೆಳಗಿನ ಜಾವ ಧಾರವಾಡದ ಮದಿಹಾಳದ ಬಳಿ ಸ್ನೇಹಿತನ ಜೊತೆಗೆ ವಾಕಿಂಗ್ಗೆ ತೆರಳಿ ಮನೆಗೆ ಹೋಗುವಾಗ ದುರ್ಘಟನೆ ಸಂಭವಿಸಿದೆ. ಹೃದಯಾಘಾತವಾಗುತ್ತಿದ್ದಂತೆ ನೆಲಕ್ಕೆ …
Read More »