Breaking News

10,000 ಕ್ಕೂ ಹೆಚ್ಚು ಮಸೀದಿಗಳಿಗೆ ಧ್ವನಿವರ್ಧಕ ಪರವಾನಗಿ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯಾದ್ಯಂತ 10,889 ಮಸೀದಿಗಳಲ್ಲಿ ಇಸ್ಲಾಮಿಕ್ ಕರೆಯಾದ ಅಜಾನ್ ಕೂಗಲು ಧ್ವನಿ ವರ್ಧಕ ಬಳಕೆಗೆ ಪರವಾನಗಿ ನೀಡಿದೆ. ರಾಜ್ಯ ಸರ್ಕಾರವು ಧ್ವನಿವರ್ಧಕ ಬಳಕೆ ಕುರಿತಂತೆ ಅರ್ಜಿಗಳನ್ನು ಪರಿಶೀಲನೆ ಪೂರ್ಣಗೊಳಿಸಿದ್ದು, ಎರಡು ವರ್ಷಗಳ ಅವಧಿಗೆ ಧ್ವನಿವರ್ಧಳ ಬಳಕೆಗೆ 450 ರೂ. ಶುಲ್ಕ ವಿಧಿಸಲಾಗಿದೆ. ರಾಜ್ಯದಲ್ಲಿ 10,889 ಕ್ಕೂ ಹೆಚ್ಚು ಮಸೀದಿಗಳು ಸೇರಿದಂತೆ ಮಂದೀರ, ಚರ್ಚ್ ಗಳ 17,850 ಧ್ವನಿವರ್ಧಕಗಳ ಬಳಕೆಗೆ ಪರವಾನಗಿ ನೀಡಿದೆ. ಬೆಂಗಳೂರು : ರಾಜ್ಯ …

Read More »

ಗಂಧದ ಗುಡಿ ‘ ಮುಂದಿನ ಪೀಳಿಗೆಗೆ ದಂತಕತೆಯಾಗಲಿದೆ:C.M.

ಬೆಂಗಳೂರು: ಅಪ್ಪು ಅವರಂತೆ ಈ ಸಿನೆಮಾ ಮುಂದಿನ ಪೀಳಿಗೆಗೆ ಒಂದು ದಂತಕಥೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಅವರು ಪುನೀತ್ ರಾಜ್ ಕುಮಾರ್ ಅವರ ‘ ಗಂಧದ ಗುಡಿ ‘ ಚಿತ್ರ ಬಿಡುಗಡೆಯ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.   ಕನ್ನಡ ನಾಡು ಮತ್ತು ಗಂಧದ ಗುಡಿಯನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಅಂತಹ ವಿಚಾರ ದೊಂದಿಗೆ, ಕಾಡು, ನಿಸರ್ಗ, ಪ್ರಾಣಿಗಳನ್ನು ಇಟ್ಟುಕೊಂಡು ಅಪ್ಪು ಮಾಡಿದ …

Read More »

ಒಂಬತ್ತು ಜಿಲ್ಲಾಧಿಕಾರಿಗಳ ವರ್ಗಾವಣೆ

ಬೆಂಗಳೂರು : ಮೈಸೂರು, ದಕ್ಷಿಣ ಕನ್ನಡ, ಚಿತ್ರದುರ್ಗ ಒಳಗೊಂಡಂತೆ ಒಂಬತ್ತು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ 21 ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಟಿ.ಕೆ. ಅನಿಲ್‌ಕುಮಾರ್-ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ, ಭೂಮಿ). ಎನ್.ವಿ. ಪ್ರಸಾದ್-ಕಾರ್ಯದರ್ಶಿ, ಕಾರ್ಮಿಕ ಇಲಾಖೆ. ಎನ್. ಜಯರಾಮ್-ಕಾರ್ಯದರ್ಶಿ, ಕಂದಾಯ ಇಲಾಖೆ. ಬಗಾದಿ ಗೌತಮ್- ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ. ಪಿ.ಐ. ಶ್ರೀವಿದ್ಯಾ- ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಇ-ಆಡಳಿತ. ಡಿ.ಎಸ್. ರಮೇಶ್-ಜಿಲ್ಲಾಧಿಕಾರಿ, ಚಾಮರಾಜನಗರ. ಎಚ್.ಎನ್. ಗೋಪಾಲಕೃಷ್ಣ- ಜಿಲ್ಲಾಧಿಕಾರಿ, …

Read More »

ಬಡ ಪೋಷಕರ ಜೇಬಿಗೆ ಸರ್ಕಾರದ ಕತ್ತರಿ: ಸಿದ್ದರಾಮಯ್ಯ

ಬೆಂಗಳೂರು: ಕಮಿಷನ್‌ ಹೆಸರಿನಲ್ಲಿ ರಾಜ್ಯದ ಖಜಾನೆ ಲೂಟಿ ಮಾಡಿದ ಬಿಜೆಪಿ ಸರ್ಕಾರ, ಈಗ ದೇಣಿಗೆ ನೆಪದಲ್ಲಿ ಬಡ ಮಕ್ಕಳ ಪೋಷಕರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳ ಪೋಷಕರಿಂದ ಶಾಲಾಭಿವೃದ್ಧಿಗೆ ದೇಣಿಗೆ ಸಂಗ್ರಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿರುವ ಕುರಿತು ಟ್ವಿಟರ್‌ನಲ್ಲಿ ಶುಕ್ರವಾರ ಪ್ರತಿಕ್ರಿಯಿಸಿರುವ ಅವರು, ‘ಸರ್ಕಾರಿ ಶಾಲೆಯ ಬಡ ಮಕ್ಕಳ ಮೇಲೆ ಬಿಜೆಪಿ ಸರ್ಕಾರದ ಭ್ರಷ್ಟ …

Read More »

ಕಾರ್ಮಿಕ ಕಾರ್ಡ ಬಸ್‍ಪಾಸ್‍ಗಾಗಿವಿತರಣೆ ವಿಳಂಬ ,ಕಾರ್ಮಿಕ ಇಲಾಖೆಗೆ ಮುತ್ತಿಗೆ ಹಾಕಿದ ಕಾರ್ಮಿಕರು

ಕಾರ್ಮಿಕ ಕಾರ್ಡ ವಿತರಣೆ ಮಾಡಲು ವಿಳಂಬ ಹಾಗೂ ಕಾರ್ಮಿಕ ಕಾರ್ಡ ಇದ್ದವರಿಗೆ ಸರ್ಕಾರದ ಸೌಲಭ್ಯಗಳು ದೊರಕದ ಹಿನ್ನೆಲೆ ಬೆಳಗಾವಿಯಲ್ಲಿ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಹೌದು ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಕಟ್ಟಡ ಕಾರ್ಮಿಕರು ಶುಕ್ರವಾರ ಬೆಳಗಾವಿಯ ಕಾರ್ಮಿಕ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕಾರ್ಮಿಕರ ಕಾರ್ಡಗಾಗಿ ಅರ್ಜಿ ಹಾಕಿದ್ರೂ ಬೇಗನೇ ಕಾರ್ಡಗಳು ಸಿಗುತ್ತಿಲ್ಲ. ಇನ್ನು ಕಾರ್ಡಗಳು ಇದ್ದವರಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ಮುಟ್ಟುತ್ತಿಲ್ಲ. ಶಿಕ್ಷಣ ಸೌಲಭ್ಯ, …

Read More »

H.I.V.ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ 2019ರಲ್ಲಿ ಜಾರಿಗೆ ಬಂದರು ಅದರ ಉಪಯೋಗ ಆಗುತ್ತಿಲ್ಲ: ನಿಶಾ ಗುರೂರ

2017ರ ಎಚ್‍ಐವಿ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ 2019ರಲ್ಲಿ ಜಾರಿಗೆ ಬಂದರು ಅದರ ಉಪಯೋಗ ಆಗುತ್ತಿಲ್ಲ. ಆ ಕಾಯ್ದೆ ಇದೆ ಎಂಬುದೆಯೇ ಜನರಿಗೆ ಗೊತ್ತಿಲ್ಲ. ಹಾಗಾಗಿ ಅದರ ಪ್ರಚಾರಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಗಮ ಸಂಸ್ಥೆಯ ವ್ಯವಸ್ಥಾಪಕಿ ನಿಶಾ ಗುರೂರ ಒತ್ತಾಯಿಸಿದ್ದಾರೆ. ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿಶಾ ಗುರೂರ ಎಚ್‍ಐವಿ ಪೀಡಿತರನ್ನು ಸರ್ಕಾರಗಳು ಕಡೆಗಣಿಸುತ್ತಿದೆ. ಎಚ್‍ಐವಿ ರೋಗಿಗೆ ತೆಗೆದುಕೊಳ್ಳುವ ಮಾತ್ರೆ ಉತ್ತಮ ಗುಣಮಟ್ಟದ …

Read More »

ಹುಕ್ಕೇರಿ ಪಂಚಮಸಾಲಿ ಸಮಾವೇಶ ವಿಜಯಾನಂದ ಕಾಶಪ್ಪನವರ ಹಾಗೂ ಪೃಥ್ವಿ ಕತ್ತಿ ವಾಗ್ವಾದ

ಮುಂದಿನ ಬಾರಿ ಹುಕ್ಕೇರಿ ಮತ ಕ್ಷೇತ್ರದಲ್ಲಿ ಪಂಚಮಸಾಲಿಗಳನ್ನೆ ಗೆಲ್ಲಿಸಿ ಎಂದು ಕರೆ ನೀಡಿದ ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‍ಗೆ ಮಾಜಿ ಸಂಸದ ರಮೇಶ ಕತ್ತಿ ಪುತ್ರ ಪೃಥ್ವಿ ಕತ್ತಿ ಕೇಳಗೆ ಬಾ ಎಂದು ಸವಾಲು ಹಾಕಿರುವ ಘಟನೆ ನಡೆದಿದೆ. ಹೌದು ಹುಕ್ಕೇರಿ ಪಟ್ಟಣದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ ವೇದಿಕೆ …

Read More »

ಪೊಲೀಸ್ ಸಂಸ್ಮರಣಾ ದಿನಾಚರಣೆ ಅಂಗವಾಗಿ ಹುತಾತ್ಮ ಪೊಲೀಸರಿಗೆ C.M.ಬೊಮ್ಮಾಯಿ ಪುಷ್ಪನಮನ

ಪೊಲೀಸ್ ಸಂಸ್ಮರಣಾ ದಿನಾಚರಣೆ ಅಂಗವಾಗಿ ಹುತಾತ್ಮ ಪೊಲೀಸರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಪುಷ್ಪನಮನ ಸಲ್ಲಿಸಿದರು. ಅಕ್ಟೋಬರ್ 21 ಪೊಲೀಸ್ ಹುತಾತ್ಮ ದಿನ ಹಿನ್ನೆಲೆ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ನಗರ ಮೀಸಲು ಪಡೆ ಕೇಂದ್ರ ಸ್ಥಾನದಲ್ಲಿ ಹುತಾತ್ಮರಾದ ಪೊಲೀಸರಿಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹುತಾತ್ಮ ಪೊಲೀಸರಿಗೆ ಪುಷ್ಪ ಗುಚ್ಚ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಪೊಲೀಸ್ ಮಹಾ …

Read More »

ಕೆಂಪೇಗೌಡರ 108 ಅಡಿ ಭವ್ಯ ಪ್ರತಿಮೆ ಕನ್ನಡಿಗರ ಸ್ವಾಭಿಮಾನ ಪ್ರಗತಿಯ ಪ್ರತೀಕ: C.M ಬೊಮ್ಮಾಯಿ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಾವರಣಗೊಳ್ಳಲಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಭವ್ಯ ಪ್ರತಿಮೆ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಲಿದೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ವತಿಯಿಂದ ವಿಧಾನಸೌಧದ ಬೃಹತ್ ಮೆಟ್ಟಿಲುಗಳು ಬಳಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರಗತಿಯ ಪ್ರತಿಮೆ–Sಣಚಿಣue oಜಿ Pಡಿosಠಿeಡಿiಣಥಿ ಅನಾವರಣದ ಪ್ರಯುಕ್ತ ನಾಡಿನಾದ್ಯಂತ ಪವಿತ್ರ ಮೃತ್ತಿಕೆ …

Read More »

K.P.T.C.L. ಪರೀಕ್ಷಾ ಅಕ್ರಮ ಪ್ರಕರಣ ಮತ್ತೆ 6 ಆರೋಪಿಗಳನ್ನು ಬಂಧಿಸುವಲ್ಲಿ ಗೋಕಾಕ ಪೊಲೀಸರು ಯಶಸ್ವಿ

ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಮತ್ತೆ 6 ಆರೋಪಿಗಳನ್ನು ಬಂಧಿಸುವಲ್ಲಿ ಗೋಕಾಕ ಪೊಲೀಸರು ಯಶಸ್ವಿಯಾಗಿದ್ದಾರೆ. ಈವರೆಗೆ ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ಸಂಖ್ಯೆ 29ಕ್ಕೆ ಏರಿದೆ. ಗೋಕಾಕ ತಾಲೂಕಿನ ಬಗರನಾಳದ ಈರಣ್ಣ ಮಲ್ಲಪ್ಪ ಬಂಕಾಪುರ (26), ಶಿವಾನಂದ ರಾಮಪ್ಪ ಕಾಮೋಜಿ(22), ರಾಮದುರ್ಗ ತಾಲೂಕಿನ ಬಟಕುರ್ಕಿಯ ಆದಿಲ್‍ಶಾ ಸಿಕಂದರ ತಾಸೇವಾಲೆ (23), ಮೂಡಲಗಿ ತಾಲೂಕಿನ ಖಾನಟ್ಟಿಯ ಮಹಾಂತೇಶ ಹಣಮಂತ ಹೊಸುಪ್ಪಾರ (22), ನಾಗನೂರಿನ ಮಹಾಲಿಂಗಪ್ಪ ಭೀಮಪ್ಪ ಕುರಿ (30) …

Read More »