Breaking News

ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದ ಅಥಣಿ-ಕೊಟ್ಟಲಗಿ ನೂರಾರು ವಿದ್ಯಾರ್ಥಿಗಳು

ಅಥಣಿ ಉತ್ತಮ ರಸ್ತೆ ನಿರ್ಮಿಸಿ ಮತ್ತು ಸೂಕ್ತ ಬಸ್ಸಿನ ವ್ಯವಸ್ಥೆ ಕಲ್ಪಿಸಿ ಎಂದು ಆಗ್ರಹಿಸಿ ರಾಮತೀರ್ಥ ಗ್ರಾಮದ ನೂರಾರು ವಿದ್ಯಾರ್ಥಿಗಳು ಅಥಣಿ-ಕೊಟ್ಟಲಗಿ ರಾಜ್ಯ ಹೆದ್ದಾರಿಯ ರಾಮತೀರ್ಥ ಕ್ರಾಸ್ ಬಳಿ ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಸ್ಥಳೀಯ ಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ರಾಮತೀರ್ಥ ಕ್ರಾಸ್ ನಿಂದ ರಾಮತೀರ್ಥ ಗ್ರಾಮಕ್ಕೆ ಬಸ್ಸು ಬರುವುದಿಲ್ಲ, ಪ್ರಯಾಣಿಕರನ್ನು ಹಾಗೆಯೇ ಕ್ರಾಸಿನಲ್ಲಿ ಇಳಿಸಿ ಹೋಗುತ್ತಾರೆ, ಕೇಳಿದರೆ ರಸ್ತೆ ಸರಿಯಿಲ್ಲ ಅದಕ್ಕೆ ಬಸ್ಸು …

Read More »

ಬ್ಯಾಂಕಾಕ್ ದೇಶದಲ್ಲಿ ಬೆಳಗಾವಿಯ ಕೀರ್ತಿಯನ್ನು ಈ ನೃತ್ಯಗಾರರು ಹೆಚ್ಚಿಸಿದ್ದಾರೆ.

ಬ್ಯಾಂಕಾಕ್ ದೇಶದಲ್ಲಿ ನಡೆದ ಅಂತರಾಷ್ಟ್ರೀಯ ನೃತ್ಯ ಚಾಂಪಿಯನ್‍ಶಿಪ್ IIGF  2022ರಲ್ಲಿ ಬೆಳಗಾವಿಯ ಎಮ್ ಸ್ಟೈಲ್ ಡ್ಯಾನ್ಸ ಮತ್ತು ಜುಂಬಾ ಫಿಟ್‍ನೆಸ್ ಅಕಾಡೆಮಿ ನೃತ್ಯಗಾರರು ಒಳ್ಳೆಯ ಪ್ರದರ್ಶನ ನೀಡುವ ಮೂಲಕ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 265 ಸ್ಪರ್ಧಿಗಳಲ್ಲಿ ಅಗ್ರ 20ನೇ ಸ್ಥಾನಕ್ಕೆ ಬೆಳಗಾವಿಯ ಎಮ್ ಸ್ಟೈಲ್ ಡ್ಯಾನ್ಸ ಮತ್ತು ಜುಂಬಾ ಫಿಟ್‍ನೆಸ್ ಅಕಾಡೆಮಿ ನೃತ್ಯಗಾರರು ಅರ್ಹತೆ ಪಡೆದಿದ್ದಾರೆ. ಅಗ್ರ 20ರ 2ನೇ ಸುತ್ತಿನಲ್ಲಿ ಬ್ಯಾಂಕಾಕ್‍ನ ಪಟ್ಟಾಯದಲ್ಲಿ ಬೆಳ್ಳಿ ಮತ್ತು …

Read More »

ಶಿರಹಟ್ಟಿಯಲ್ಲಿ ಜನ ಸಂಕಲ್ಪ ಯಾತ್ರೆ ಉದ್ಘಾಟಿಸಿದ ಎಂ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಜನ ಸಂಕಲ್ಪ ಯಾತ್ರೆ ಉದ್ಘಾಟಿಸಿದರು. ರಾಜ್ಯಾಧ್ಯಂತ ಜನ ಸಂಕಲ್ಪ ಯಾತ್ರೆ ಮೂಲಕ ಮುಂಬರುವ ಚುನಾವಣೆಗೆ ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿರುವ ಬಿಜೆಪಿ ಮಂಗಳವಾರ ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಜನ ಸಂಕಲ್ಪ ಯಾತ್ರೆ ಹಮ್ಮಿಕೊಂಡಿತ್ತು. ಈ ವೇಳೆ ಸಮಾವೇಶಕ್ಕೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದರು.

Read More »

ನಗರದಲ್ಲಿ ಇಂದು ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಅನಿಲ ಬೆನಕೆ

ಬೆಳಗಾವಿ: ನಗರದಲ್ಲಿ ಇಂದು ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಅನಿಲ ಬೆನಕೆ ಅವರು ತಮ್ಮ ಅಭಿವೃದ್ಧಿ ಪರ್ವ ಮತ್ತೆ ಮುಂದುವರೆಸಿದ್ದಾರೆ, ನಗರದಲ್ಲಿ ಇಂದು ಕೊನವಾಲ್ ಗಲ್ಲಿಯಲ್ಲಿ 36 ಲಕ್ಷ ವೆಚ್ಚದಲ್ಲಿ ಪವರ್ಸ್ ಮತ್ತು ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ, ರೇಡಿಯೋ ಕಾಂಪ್ಲೆಕ್ಸ್ ಬಳಿ ಚರಂಡಿ ಕಾಮಗಾರಗೆ 21 ಲಕ್ಷ, ರಾಮಲಿಂಗ ಖಿಂಡಗಲ್ಲಿಯಲ್ಲಿ ರಸ್ತೆ ಕಾಮಗಾರಿಗೆ 31 ಲಕ್ಷ, ಅನ್ಸುರಕರ್ ಗಲ್ಲಿಯಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ 16 ಲಕ್ಷ, ಹಾಗೂ …

Read More »

ಶಿರಗುಪ್ಪಿಯಲ್ಲಿ ಪುರುಷ ಹಾಗೂ ಮಹಿಳಾ ಕಬ್ಬಡ್ಡಿ ತಂಡಗಳಿಂದ ಕಬ್ಬಡಿ ಸ್ಪರ್ಧೆ

ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಕೆಎಲ್‍ಇ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯ ಕ್ರೀಡಾಂಗಣದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ಎಂಟು ತಾಲೂಕಗಳಿಂದ ಪುರುಷ ಹಾಗೂ ಮಹಿಳಾ ಕಬ್ಬಡ್ಡಿ ತಂಡಗಳಿಂದ ಕಬ್ಬಡಿ ಸ್ಪರ್ಧೆಗಳು ಜರುಗಿದವು. ಮಂಗಳವಾರ ಬೆಳಗೆ ಮಾಜಿ ವಿಧಾನ ಪರಿಷತ್ತಿನ ಸದಸ್ಯ ಪರಿಷತ್ ಮಹಾಂತೇಶ್ ಕವಟಿಗಿಮಠ್ ಇವರು ಹಾಗೂ ಇತರ ಗಣ್ಯರಿಂದ ಬಲೂನ್‍ಗಳ ಹಾರಿಸುವ ಮುಖಾಂತರ ಕಬ್ಬಡಿ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಮಾಜಿ ವಿಧಾನ ಪರಿಷತ್ತಿನ ಸದಸ್ಯ ಹಾಗೂ ಕೆಎಲ್‍ಇ …

Read More »

ಶ್ರೀ ಶಿವಶರಣ ಮೇದಾರ ಕೇತೇಶ್ವರರ ಜಯಂತಿ ಆಚರಣೆ

 ಸರ್ಕಾರ ವತಿಯಿಂದ ಜಯಂತಿ ಆಚರಿಸುವಂತೆ ಮನವಿ. 12ನೇ ಶತಮಾನದಲ್ಲಿ ಬಸವಾದಿ ಶರಣರಲ್ಲಿ ಒಬ್ಬರಾದ ಕಾಯಕಯೋಗಿ ಶ್ರೀ ಶಿವಶರಣ ಮೇದಾರ ಕೇತೇಶ್ವರ ಜಯಂತಿಯನ್ನು ಬೆಳಗಾವಿ ನಗರದಲ್ಲಿ ಆಚರಿಸಲಾಯಿತು. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಬಳಗದಲ್ಲಿದ್ದ ಶ್ರೀ ಮೇದಾರ ಕೇತೇಶ್ವರ ಅವರ 892 ನೇ ಜಯಂತಿಯನ್ನು ಬೆಳಗಾವಿ ನಗರದ ಮೇದಾರ ಓಣಿಯಲ್ಲಿ ಆಚರಣೆ ಮಾಡಲಾಯಿತು.ಶ್ರೀ ಕೇತಯ್ಯ ಮೇದಾರ ಸಮಾಜದ ಅಧ್ಯಕ್ಷರಾದ ಪ್ರಕಾಶ ನೇಸರಿಕರ ಅವರು ಕೇತೇಶ್ವರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಟ …

Read More »

ಲೈಂಗಿಕ ದೌರ್ಜನ್ಯ: ಶಿವಮೂರ್ತಿ ಶರಣರ ನ್ಯಾಯಾಂಗ ಬಂಧನ ವಿಸ್ತರಣೆ

ಚಿತ್ರದುರ್ಗ: ಪ್ರೌಢಶಾಲೆಯ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ನ್ಯಾಯಾಂಗ ಬಂಧನದ ಅವಧಿಯನ್ನು ಜಿಲ್ಲಾ ನ್ಯಾಯಾಲಯ ನ.14 ರವರೆಗೆ ವಿಸ್ತರಿಸಿದೆ. ನ್ಯಾಯಾಂಗ ಬಂಧನದ ಅವಧಿ ಮುಕ್ತಾಯ ಆಗಿದ್ದರಿಂದ ಶಿವಮೂರ್ತಿ ಮುರುಘಾ ಶರಣರು, ಹಾಸ್ಟಲ್ ವಾರ್ಡನ್ ಹಾಗೂ ಪರಮಶಿವಯ್ಯ ಅವರನ್ನು ಎರಡನೇ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಮಂಗಳವಾರ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ.ಕೆ.ಕೋಮಲಾ ಅವರು ನ್ಯಾಯಾಂಗ ಬಂಧನದ ಅವಧಿಯನ್ನು …

Read More »

ಲಂಚ ಕೇಳಿದರೆ ಲೋಕಾಯುಕ್ತಕ್ಕೆ ದೂರು ನೀಡಿ

ಚಿಕ್ಕಬಳ್ಳಾಪುರ: ಸಾರ್ವಜನಿಕರು ಯಾವುದೇ ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಳ್ಳಲು ಆಡಳಿತ ವರ್ಗಕ್ಕೆ ಲಂಚ ಕೊಡಬಾರದು. ಅಧಿಕಾರಿ ಅಥವಾ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟರೆ ಜಿಲ್ಲಾ ಲೋಕಾಯುಕ್ತ ಕಚೇರಿ ಸಂಪರ್ಕಿಸಿ ದೂರು ಸಲ್ಲಿಸಿ ಎಂದು ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ತಿಳಿಸಿದರು.   ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಾರ್ವಜನಿಕ ದೂರು ಅರ್ಜಿಗಳ ಸ್ವೀಕಾರ, ಅಹವಾಲುಗಳ ವಿಲೇವಾರಿ ಮತ್ತು ವಿಚಾರಣೆ ಸಭೆಗೂ ಮುನ್ನ ಅವರು ಮಾತನಾಡಿದರು. ಆಡಳಿತ ವರ್ಗದ ಯಾರೊಬ್ಬರೂ ಲಂಚ …

Read More »

ಹೊಸದಾಗಿ `BPL’ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಬಿಗ್ ಶಾಕ್ :

ಬೆಂಗಳೂರು: ರಾಜ್ಯದಲ್ಲಿ ವಿವಿಧ ಕಾರಣಗಳಿಂದಾಗಿ ಈಗಾಗಲೇ ಲಕ್ಷಾಂತರ ಕಾರ್ಡ್ ಗಳನ್ನು ಸರ್ಕಾರ ರದ್ದುಗೊಳಿಸಿದೆ. ಈ ನಡುವೆಯೂ ಹೊಸ ಬಿಪಿಎಲ್ ಕಾರ್ಡ್ ಗಳಿಗಾಗಿ ( BPL Ration Card ) ಅರ್ಜಿ ಸಲ್ಲಿಸುತ್ತಿರೋರ ಸಂಖ್ಯೆ ಏನೂ ಕಡಿಮೆ ಆಗಿಲ್ಲ. ಆದ್ರೇ ಹೊಸ ಕಾರ್ಡ್ ಗೆ ಅರ್ಜಿ ( New Ration Card Application ) ಸಲ್ಲಿಸಿ, ಆದ್ರೇ ಕಾರ್ಡ್ ಬಂತೋ ಇಲ್ಲವೋ, ಬರುತ್ತೋ ಇಲ್ಲವೇ ಎಂಬುದನ್ನು ಮಾತ್ರ ಕೇಳ ಬೇಡಿ ಎಂಬುದಾಗಿ …

Read More »

ತನ್ನ ಪರ ಘೋಷಣೆ ಕೂಗಿದವರ ವಿರುದ್ಧವೇ ಸಿದ್ದರಾಮಯ್ಯ ಗರಂ!

ಹುಬ್ಬಳ್ಳಿ: ತನ್ನ ಪರ ಘೋಷಣೆ ಕೂಗಿದವರ ವಿರುದ್ಧವೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಸಿದ್ದರಾಮಯ್ಯ ಅವರು ಮಂಗಳವಾರ ಬೆಳಗ್ಗೆ ನಗರದ ಹೊಟೇಲ್‌ವೊಂದಕ್ಕೆ ಆಗಮಿಸಿದ್ದರು. ಈ ವೇಳೆ ನೂರಾರು ಕಾರ್ಯಕರ್ತರೊಂದಿಗೆ ಆಗಮಿಸಿದ ಕಾಂಗ್ರೆಸ್ ಸ್ಥಳೀಯ ಮುಖಂಡ ಗಿರೀಶ ಗದಿಗೆಪ್ಪಗೌಡರ ಅವರು ‘ಮುಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಜಯವಾಗಲಿ’ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಗದಿಗೆಪ್ಪಗೌಡರ ಜತೆ ಬಂದವರು ‘ಹೌದೋ ಹುಲಿಯಾ’ ಎಂದು ಪ್ರತಿಕ್ರಿಯಿಸಿದರು. ಈ ಸಂಗತಿ ಸಿದ್ದರಾಮಯ್ಯ ಅವರನ್ನು ಕೆರಳಿಸಿತು. …

Read More »