ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲಾಸ್ಪತ್ರೆ ಸರ್ಜನ್ ಓರ್ವರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಕ್ರಿಮ್ಸ್)ಯ ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ್ ಕುಡ್ತಲಕರ್ ಲೋಕಾಯುಕ್ತ ಬಲೆಗೆ ಬಿದ್ದವರು. ಆಸ್ಪತ್ರೆಯ ಹಾಸಿಗೆಗೆ ಬೆಡ್ ಶೀಟ್ ಪೂರೈಸಿದ್ದಕ್ಕೆ ಬಿಲ್ ಮೊತ್ತ 3.5 ಲಕ್ಷ ಹಣ ಪಾವತಿಸಲು 75 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಗುತ್ತಿಗೆದಾರ ಮೊಹಸೀನ್ ಖಾನ್ ಅವರಿಂದ …
Read More »ಮಗ ಆತ್ಮಹತ್ಯೆಗೆ ಶರಣಾದ ಸುದ್ದಿ ಕೇಳಿ ಹೃದಯಾಘಾತದಿಂದ ಸಾವನ್ನಪ್ಪಿದ ತಂದೆ
ಮಗ ಆತ್ಮಹತ್ಯೆಗೆ ಶರಣಾದ ಸುದ್ದಿ ಕೇಳಿ ಆಘಾತಗೊಂಡ ತಂದೆ ಕೂಡ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮೆಹಬೂಬ್ ಆತ್ಮಹತ್ಯೆಗೆ ಶರಣಾದ ೨೨ ವರ್ಷದ ಮಗ. ಜಮೀನಿನ ದಾರಿ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳವಾಗಿ ಹಿರಿಯರು ನ್ಯಾಯಪಂಚಾಯಿತಿ ಮಾಡಿ ಬಗೆಹರಿಸಿದ್ದರು. ಆದರೆ ಕೆಲವರು ಯುವಕನ ವಿರುದ್ಧ ಜಾತಿ ನಿಂದನೆ ಮಾಡಿ ಜೈಲಿಗೆ ಕಳುಹಿಸುವುದಾಗಿ ಹೆದರಿಸಿದ್ದಾರೆ. ಇದರಿಂದ ಹೆದರಿದ ಯುವಕ …
Read More »*ಯುವತಿಯರ ಫೋಟೋ ಕ್ಲಿಕ್ಕಿಸಿ ಅಸಭ್ಯವಾಗಿ ಕಾಣುವಂತೆ ಪೋಸ್ಟ್ ಮಾಡುತ್ತಿದ್ದ ಆರೋಪಿ ಅರೆಸ್ಟ್
ಯುವತಿಯರ, ಮಹಿಳೆಯರ ಫೋಟೋ ಕ್ಲಿಕ್ಕಿಸಿ, ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ಅಸಭ್ಯವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬನಶಂಕರಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಂಧಿತನನ್ನು ಕೆ.ಆರ್.ಪುರಂ ನ ಗುರುದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಹೋಟೆಲ್ ಮ್ಯಾನೇಜ್ಮೆಂಟ್ ನಲ್ಲಿ ಪದವಿ ಮುಗಿಸಿ ಕೆಲಸಕ್ಕಾಗಿ ಯತ್ನಿಸುತ್ತಿದ್ದ.ಇತ್ತೀಚೆಗೆ ಕಂಡ ಕಂಡ ಹುಡುಗಿಯರ ಫೋಟೋ ಕ್ಲಿಕ್ಕಿಸಿ ಅದನ್ನು ಅಸಭ್ಯವಾಗಿ ಎಡಿಟ್ ಮಾಡಿ ಇನ್ ಸ್ಟಾ …
Read More »ಕಾಲೇಜು ಪ್ರಾಂಶುಪಾಲ ಹೃದಯಾಘಾತದಿಂದ ಸಾವು
ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಾಲೇಜು ಉಪ ಪ್ರಾಂಶುಪಾಲ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಗುರುಬಸವಯ್ಯ ಸಾಲಿಮಠ (೫೧) ಹೃದಯಾಘಾತಕ್ಕೆ ಬಲಿಯಾದವರು. ಕಲಬುರಗಿಯ ಕೊಹಿನೂರ್ ಕಾಲೇಜಿನ ಉಪ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಲಬುರಗಿ ನಗರದ ಬಿದ್ದಾಪುರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.ಬೆಳಿಗ್ಗೆ ವಾಕಿಂಗ್ ಮುಗಿಸಿ ಮನೆಗೆ ಬಂದವರು ಸ್ವಲ್ಪ ನೀರು ಕುಡಿದಿದ್ದಾರೆ. ನೀರು ಕುಡಿಯುತ್ತಿದ್ದಂತೆಯೇ ವಾಂತಿಯಾಗಿದೆ. ಹಠಾತ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
Read More »ಅಝಮ್ ನಗರ ಸರ್ಕಾರಿ ಉರ್ದು ಶಾಲೆಗೆ “ನಗರದ ಅತ್ಯುತ್ತಮ ಶಾಲೆ” ಪುರಸ್ಕಾರ
ಅಝಮ್ ನಗರ ಸರ್ಕಾರಿ ಉರ್ದು ಶಾಲೆಗೆ “ನಗರದ ಅತ್ಯುತ್ತಮ ಶಾಲೆ” ಪುರಸ್ಕಾರ ಬೆಳಗಾವಿ ನಗರದಲ್ಲಿರುವ ಅಝಮ್ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ.11 ಇತ್ತೀಚೆಗೆ ಶಿಕ್ಷಣ ಇಲಾಖೆಯಿಂದ “ನಗರದ ಅತ್ಯುತ್ತಮ ಶಾಲೆ” ಎಂಬ ಪ್ರಶಸ್ತಿ ಪಡೆಯುವ ಮೂಲಕ ಹೆಮ್ಮೆಪಡುವಂತಹ ಸಾಧನೆ ಮಾಡಿದೆ. ಶಾಲೆಯ ಸರ್ವತೋಮುಖ ಅಭಿವೃದ್ಧಿಯು ಪ್ರಶಂಸನೀಯವಾಗಿದ್ದು, ಈ ಸಾಧನೆಗೆ ಶಿಕ್ಷಣ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಳಗಾವಿಯ ಉತ್ತರ ಶಾಸಕರಾದ ಆಸೀಫ್ …
Read More »ಲೋಂಡಾದ ವಾಟರಾ ಬಳಿ ಟ್ರಕ್ ಪಲ್ಟಿ
ಲೋಂಡಾದ ವಾಟರಾ ಬಳಿ ಟ್ರಕ್ ಪಲ್ಟಿ: ಜಾನುವಾರುಗಳನ್ನು ರಕ್ಷಿಸಿದ ಪೊಲೀಸರು ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯ ಲೋಂಡಾ ರೇಲ್ವೆ ಗೇಟ್ ಬಳಿ, ಗೋವಾಕ್ಕೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಟ್ರಕ್‌ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 11 ಜಾನುವಾರುಗಳು ಸಿಕ್ಕಿಹಾಕಿಕೊಂಡಿದ್ದವು. ಸ್ಥಳಕ್ಕೆ ತಕ್ಷಣವೇ ಲೋಂಡಾ ಪೊಲೀಸ್ ಪಡೆ ಧಾವಿಸಿ, ಜೆಸಿಪಿ ಯಂತ್ರದ ಸಹಾಯದಿಂದ ಎಲ್ಲ ಜಾನುವಾರುಗಳನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಣೆ ಮಾಡಿದ್ದಾರೆ. ಈ ಅಪಘಾತದ ಕುರಿತು ಲೋಂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ …
Read More »ಸಂತ ಮೀರಾ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ
ಸಂತ ಮೀರಾ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ ಅನಗೋಳದ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ ಶ್ರೀನಿವಾಸ್ ಜನಕಲ್ಯಾಣ ಸಂಸ್ಥೆ ಕಾರ್ಯದರ್ಶಿ ಸುಧೀರ್ ಗಾಡ್ಗೀಳರಿಂದ ಚಾಲನೆ ಅತಿಥಿಗಳಿಂದ ಭಾಷಣ ವಿದ್ಯಾರ್ಥಿಗಳ ಶಿಕ್ಷಕರ ಸನ್ಮಾನ ಅನಗೋಳದಲ್ಲಿರುವ ಸಂತ ಮೀರಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಗುರುಪೂರ್ಣಿಮೆ ಹಬ್ಬವನ್ನು ಅದ್ಧೂರಿಯಾಗಿ ಮತ್ತು ಭಕ್ತಿಭಾವದಿಂದ ಶಾಲೆಯ ಮಾಧವ ಸಭಾಂಗಣದಲ್ಲಿ ಈ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಶ್ರೀನಿವಾಸ, ಜನಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಸುಧೀರ್ ಗಾಡಗಿಳ್, …
Read More »ಪಡಿತರ ಅಕ್ಕಿ ಕಳ್ಳಸಾಗಾಟಕ್ಕೆ ಅಧಿಕಾರಿಗಳ ಕೃಪಾ ಕಟಾಕ್ಷ?
ಪಡಿತರ ಅಕ್ಕಿ ಕಳ್ಳಸಾಗಾಟಕ್ಕೆ ಅಧಿಕಾರಿಗಳ ಕೃಪಾ ಕಟಾಕ್ಷ? ಬಾಗಲಕೋಟೆಯಲ್ಲಿ ಮತ್ತೇ ಅಕ್ರಮ ಪಡಿತರ ಅಕ್ಕಿ ದಂಧೆ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಮತ್ತೇ ಅಕ್ರಮ ಪಡಿತರ ಅಕ್ಕಿ ದಂಧೆ ಬಯಲಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಾರ್ಯವೈಖರಿ ಜನರಲ್ಲಿ ಶಂಕೆ ಮೂಡಿದೆ. ಗಡಿಪಾರಾದ ಆರೋಪಿ ರಾಘವೇಂದ್ರ ತೇಲಿ, ಈಗ ಮತ್ತೆ ಅಕ್ಕಿ ಅಕ್ರಮವಾಗಿ ದಂಧೆಯಲ್ಲಿ ಸಕ್ರಿಯನಾಗಿದ್ದಾನೆ. ರಿಜಿಸ್ಟ್ರೇಶನ್ ಇಲ್ಲದ ಲಾರಿ ಹಾಗೂ ಮಿನಿ ಟ್ರಕ್‌ನಲ್ಲಿ ಚೀಲ ಬದಲಿಸಿ ಚಿಕ್ಕೋಡಿ ಮಾರ್ಗವಾಗಿ …
Read More »ಭಾರಿ ಮಳೆಗೆ ಬಾಗಲಕೋಟೆಯಲ್ಲಿ ಹೆಚ್ಚಿದ ಪ್ರವಾಹ ಭೀತಿ !!!
ಭಾರಿ ಮಳೆಗೆ ಬಾಗಲಕೋಟೆಯಲ್ಲಿ ಹೆಚ್ಚಿದ ಪ್ರವಾಹ ಭೀತಿ !!! ಮಹಾರಾಷ್ಟ್ರ ಹಾಗೂ ಪಶ್ಚಿಮ ಘಟ್ಟಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ನೆರೆ ಭೀತಿ ಹೆಚ್ಚುತ್ತಿದೆ. ಕೃಷ್ಣಾ ನದಿಗೆ ಈಗ 1 ಲಕ್ಷ 7 ಸಾವಿರ ಕ್ಯೂಸೆಕ್ಸ್ ನೀರು ಹರಿದುಬರುತ್ತಿದ್ದು, ಆಲಮಟ್ಟಿಯ ಹಿನ್ನೀರು ಮಟ್ಟ ದಿನದಿಂದ ದಿನಕ್ಕೆ ಏರುತ್ತಿದೆ. ಹಿಪ್ಪರಗಿ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುತ್ತಿದೆ. ಘಟಪ್ರಭಾ ನದಿಗೂ ಈಗ 15 ಸಾವಿರ ಕ್ಯೂಸೆಕ್ಸ್ ನೀರು …
Read More »ಎತ್ತುಗಳನ್ನು ಜಿಗಿಸಿ ಕರಿ ಹರಿದು ಕಾರಹುಣ್ಣಿಮೆ ಆಚರಣೆ… ಹುಕ್ಕೇರಿಯಲ್ಲಿ ಕಾರಹುಣ್ಣಿಮೆ ಸಡಗರ
ಎತ್ತುಗಳನ್ನು ಜಿಗಿಸಿ ಕರಿ ಹರಿದು ಕಾರಹುಣ್ಣಿಮೆ ಆಚರಣೆ… ಹುಕ್ಕೇರಿಯಲ್ಲಿ ಕಾರಹುಣ್ಣಿಮೆ ಸಡಗರ ಎತ್ತುಗಳ ಮೂಲಕ ಕರಿ ಹರಿಯುವ ಮೂಲಕ ಹುಕ್ಕೇರಿ ನಗರದಲ್ಲಿ ಕಾರ ಹುಣ್ಣಿಮೆಯನ್ನು ಆಚರಿಸಲಾಯಿತು. ಹುಕ್ಕೇರಿ ಪಟ್ಟಣದ ಹಳ್ಳದಕೇರಿ ಭಾಗದ ದುರದುಂಡಿ ನಾಯಿಕ ಇವರ ಮನೆಯಲ್ಲಿ ಎತ್ತಿಗೆ ಪೂಜೆ ಸಲ್ಲಿಸುವ ಮೂಲಕ ಕರಿ ಹಾಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಣ್ಣದಿಂದ ಅಲಂಕರಿಸಿದ ಎತ್ತುಗಳನ್ನು ರೈತರು ಗ್ರಾಮದ ವಿವಿಧ ಓಣಿಗಳಲ್ಲಿ ಓಡಿಸಿ ಮುಖ್ಯ ಬೀದಿಯಲ್ಲಿ ಬೃಹತ್ ಆಕಾರದ ಮುಳ್ಳು ,ಕಂಟಿ …
Read More »
Laxmi News 24×7