ಚಿತ್ರದುರ್ಗ: ರಾಜ್ಯದಲ್ಲಿ ಆಗಾಗ ಕೇಳಿ ಬರುತ್ತಿರುವ ಐಟಿ ಸದ್ದು ಮತ್ತೊಮ್ಮೆ ಮೊಳಗಿದೆ. ಅರ್ಥಾತ್, ರಾಜ್ಯದ ಮಾಜಿ ಸಚಿವರೊಬ್ಬರ ಆಪ್ತನ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಐಟಿ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಪಾಡಿಗಟ್ಟೆ ಗ್ರಾಮದಲ್ಲಿನ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪಾಡಿಗಟ್ಟೆ ಸುರೇಶ್ ಮತ್ತು ಆತನ ಸಹೋದರ, ಗುತ್ತಿಗೆದಾರನೂ ಆಗಿರುವ ತಿಪ್ಪೇಸ್ವಾಮಿ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು …
Read More »ಬಿಜೆಪಿ ಉತ್ತರ ಕರ್ನಾಟಕ ಗೆದ್ದಾಯಿತೆ? : ಸಿದ್ದರಾಮಯ್ಯ ಪ್ರಶ್ನೆ
ತುಮಕೂರು: ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಹಳೆ ಮೈಸೂರು ಪ್ರದೇಶವನ್ನು ಕೇಂದ್ರೀಕರಿಸಿರುವ ಬಿಜೆಪಿಯವರು, ಉತ್ತರ ಕರ್ನಾಟಕದ ಎಲ್ಲಾ ಪ್ರದೇಶಗಳನ್ನು ಗೆದ್ದಾಯಿತೆ? ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು. ತುರುವೇಕೆರೆಯಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಹಳೆ ಮೈಸೂರು ಪ್ರದೇಶಗಳನ್ನು ಗೆಲ್ಲುತ್ತೇವೆ ಎಂದು ಬೀಗುತ್ತಿದ್ದಾರೆ. ಇಲ್ಲಿನ ಜನರು ಬಿಜೆಪಿ ಮಾತಿಗೆ ಮಣೆ ಹಾಕುವುದಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾರೇ …
Read More »ಜ.11ರಿಂದ ಕಾಂಗ್ರೆಸ್ ‘ಪ್ರಜಾಧ್ವನಿ’ ಬಸ್ ಯಾತ್ರೆ
ಬೆಳಗಾವಿ: ‘ಜನರಿಗೆ ಉತ್ತಮ ಆಡಳಿತ ಒದಗಿಸುವಲ್ಲಿ ವಿಫಲವಾದ ಉಭಯ ಸರ್ಕಾರಗಳ ವಿರುದ್ಧ ಆಂದೋಲನ ಮಾದರಿಯಲ್ಲಿ ‘ಪ್ರಜಾಧ್ವನಿ’ ಬಸ್ ಯಾತ್ರೆ ಹಮ್ಮಿಕೊಂಡಿದ್ದೇವೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಸವರಾಜ ರಾಯರೆಡ್ಡಿ ಹೇಳಿದರು. ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜ.11ರಂದು ಇಲ್ಲಿನ ವೀರಸೌಧದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಯಾತ್ರೆಗೆ ಚಾಲನೆ ನೀಡಲಾಗುವುದು. ಅಂದು ಬೆಳಿಗ್ಗೆ ಚಿಕ್ಕೋಡಿ ಮತ್ತು ಮಧ್ಯಾಹ್ನ ಬೆಳಗಾವಿಯ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಆವರಣದಲ್ಲಿ ಸಾರ್ವಜನಿಕ ಸಭೆ ನಡೆಸಲಾಗುವುದು. ಜ.27ರವರೆಗೆ ನಡೆಯಲಿರುವ …
Read More »ಕೆಪಿಟಿಸಿಎಲ್ ಅಕ್ರಮ: ಮತ್ತೆ ಮೂವರ ಬಂಧನ
ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ, ಪೊಲೀಸರು ಬುಧವಾರ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈವರೆಗೆ ಬಂಧಿತರಾದವರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ. ಗೋಕಾಕ ತಾಲ್ಲೂಕಿನ ಮಲ್ಲಾಪುರ ಪಿ.ಜಿ. ಗ್ರಾಮದ ಅಣ್ಣಪ್ಪ ಕೆಂಪಣ್ಣ ಮಾರವಾಡಿ(31), ಶಿವಾಪುರದ ಜಾನ್‌ರಾಬರ್ಟ್ ಯಶವಂತ ಬಂಗೆನ್ನವರ(26), ಮೂಡಲಗಿ ತಾಲ್ಲೂಕಿನ ರಾಜಾಪುರದ ಚಿದಾನಂದ ಚಿನ್ನಪ್ಪ ಮಾಡಲಗಿ(27) ಬಂಧಿತರು. ‘ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಚಿಪ್ ಬಳಸಿ, ಮೂವರು ಆರೋಪಿಗಳು ಪರೀಕ್ಷೆ ಬರೆದಿದ್ದರು. ಅವರಿಂದ ಅಕ್ರಮಕ್ಕೆ …
Read More »ಮಧ್ಯ, ಕಿತ್ತೂರು ಕರ್ನಾಟಕ ಗೆಲುವಿಗೆ ಕಾರ್ಯತಂತ್ರ
ಬೆಂಗಳೂರು: ರಾಜ್ಯದಲ್ಲಿ ಸ್ವಂತ ಶಕ್ತಿಯ ಮೇಲೆ ಅಧಿಕಾರ ಹಿಡಿಯಲು ಹಳೇ ಮೈಸೂರು ಒಳಗೊಂಡ ಮಧ್ಯ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಮಧ್ಯ ಕರ್ನಾಟಕ ಭಾಗದಲ್ಲಿ ಒಕ್ಕಲಿಗ ನಾಯಕರಿಗೆ ಕಿತ್ತೂರು ಕರ್ನಾಟಕ ಭಾಗದಲ್ಲಿ ಲಿಂಗಾಯಿತ ನಾಯಕರಿಗೆ ಹೆಚ್ಚು ಸ್ಥಾನ ಗೆಲ್ಲುವ ಗುರಿ ನೀಡಿದ್ದು, ತತ್‌ಕ್ಷಣದಿಂದ ಕಾರ್ಯಪ್ರವೃತ್ತರಾಗಲು ಸೂಚಿಸಲಾಗಿದೆ. ಮಧ್ಯ ಕರ್ನಾಟಕ ಭಾಗದಲ್ಲಿ ಒಕ್ಕಲಿಗ ನಾಯಕರಿಗೆ ಕಿತ್ತೂರು ಕರ್ನಾಟಕ ಭಾಗದಲ್ಲಿ …
Read More »2.95 ಲಕ್ಷ ಜನ್-ಧನ್ ಖಾತೆ ಸ್ತಬ್ಧ:
ಮಂಗಳೂರು: ಬಹುನಿರೀಕ್ಷಿತ ಪ್ರಧಾನಮಂತ್ರಿ ಜನ್-ಧನ್ ಯೋಜನೆ (ಪಿಎಂಜೆಡಿವೈ)ಯಲ್ಲಿ ಕರಾವಳಿಯಲ್ಲಿ ತೆರೆದ ಖಾತೆಗಳ ಪೈಕಿ 2.95 ಲಕ್ಷ ಖಾತೆಗಳು ಸ್ತಬ್ಧವಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ 5,18,496 ಖಾತೆ ಗಳಲ್ಲಿ 2,08,602 ಹಾಗೂ ಉಡುಪಿ ಜಿಲ್ಲೆಯ 2,64,704ರಲ್ಲಿ 86,487 ಬಳಕೆ ಯಾಗದೇ ನಿಷ್ಕ್ರಿಯವಾಗಿವೆ. ಈ ಖಾತೆ ಆರಂಭಿಸಿ 18 ತಿಂಗಳ ವರೆಗೆ ಬಳಸದಿದ್ದರೆ ಅದು ನಿಷ್ಕ್ರಿಯವಾಗುತ್ತದೆ. ಬಹುತೇಕರು ಖಾತೆ ತೆರೆದ ಬಳಿಕ ಸಕ್ರಿಯಗೊಳಿಸಿಲ್ಲ. ಅಲ್ಲದೆ ಸರಕಾರದ ವಿವಿಧ ಯೋಜನೆಗಳ ಹಣ ಪಡೆಯಲು ಬಹುತೇಕರು ಪ್ರತ್ಯೇಕ …
Read More »ಆರೋಗ್ಯ ಕವಚಕ್ಕೆ ಹುಸಿ ಕರೆಯೇ ಸವಾಲು: ಅರ್ಧಕ್ಕರ್ಧ ನಿರುಪಯೋಗಿ
ಬೆಂಗಳೂರು: ಸುಮ್ಮನೆ ಫೋನ್ ಮಾಡಿ ಉಪದ್ರವ ನೀಡುವುದು, ಹುಸಿ ಮತ್ತು ಸೈಲೆಂಟ್ ಕರೆಗಳು, ಮಕ್ಕಳು ಆಟ ಆಡುತ್ತ ಮಾಡುವ ಫೋನ್ ಕರೆಗಳು…! -ಇವು ‘ಆರೋಗ್ಯ ಕವಚ- 108′ ಕಾಲ್‌ಸೆಂಟರ್‌ಗೆ ಬರುವ ಕರೆಗಳು. ತುರ್ತು ಆರೋಗ್ಯ ಸೇವೆಗಾಗಿ ರಾಜ್ಯದ ನಾನಾ ಭಾಗಗಳಿಂದ ‘108′ ಆಯಂಬುಲೆನ್ಸ್ ಗೆ ನಿತ್ಯವೂ ಬರುವ ಕರೆಗಳಲ್ಲಿ ಇಂತಹ ಅನುಪಯುಕ್ತ ಕರೆಗಳ ಕಿರಿಕಿರಿ ತಲೆನೋವಾಗಿದೆ. ಪ್ರತಿದಿನ ಬರುವ ನೂರಾರು ಕರೆಗಳ ಪೈಕಿ ಅರ್ಧಕ್ಕರ್ಧ ಕರೆಗಳು ತುರ್ತು ಅಲ್ಲದ ಅಥವಾ ನಿರುಪ ಯೋಗಿ …
Read More »ಕರ್ನಾಟಕದ ಒಬ್ಬರು ಸೇರಿ ಐವರಲ್ಲಿ ಎಕ್ಸ್‌ಬಿಬಿ.1.5 ತಳಿ ದೃಢ
ಹೊಸದಿಲ್ಲಿ: ಅಮೆರಿಕದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿರುವ ಕೊರೊನಾ ರೂಪಾಂತರಿ ಎಕ್ಸ್‌ಬಿಬಿ.1.5 ತಳಿಯು ಭಾರತದ 5 ಮಂದಿಯಲ್ಲಿ ದೃಢಪಟ್ಟಿದ್ದು, ಈ ಪೈಕಿ ಕರ್ನಾಟಕದ ಒಬ್ಬ ವ್ಯಕ್ತಿಯೂ ಸೇರಿದ್ದಾರೆ ಎಂದು ಇಂಡಿಯನ್ ಸಾರ್ಸ್ ಕೋವ್-2 ಜಿನೋಮಿಕ್ಸ್ ಕನ್ಸೋರ್ಟಿಯಮ್ ತಿಳಿಸಿದೆ. ಸೋಂಕು ದೃಢಪಟ್ಟಿರುವ ಐವರಲ್ಲಿ ಮೂವರು ಗುಜರಾತ್ ಮೂಲದವರಾಗಿದ್ದು, ಕರ್ನಾಟಕ ಹಾಗೂ ರಾಜಸ್ಥಾನದ ತಲಾ ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಎಕ್ಸ್‌ಬಿಬಿ.1.5 ತಳಿಯು ಒಮಿಕ್ರಾನ್ ರೂಪಾಂತರಿಯ ಉಪ ತಳಿಗಳಾದ ಬಿಎ.2.10.1 ಹಾಗೂ ಬಿಎ.2.75 …
Read More »ಮಹದಾಯಿ ನಮಗೆ ತಾಯಿಯಷ್ಟೇ ಮುಖ್ಯ. ರಾಜಿ ಮಾಡಿಕೊಳ್ಳಲ್ಲ: ಗೋವಾ ಸಿಎಂ
ಪಣಜಿ: ಮಹದಾಯಿ ನಮಗೆ ತಾಯಿಯಷ್ಟೇ ಮುಖ್ಯ. ಗೋವಾದ ಅಸ್ಮಿತೆಯನ್ನು ಕಾಪಾಡಲು ಮತ್ತು ಅದನ್ನು ಎಲ್ಲಾ ರೀತಿಯಲ್ಲೂ ರಕ್ಷಿಸಲು, ದೇಶದ ಪರಿಣಿತ ಕಾನೂನು ತಜ್ಞರು ಮತ್ತು ಪರಿಸರವಾದಿಗಳ ಸಹಾಯದಿಂದ ಸುಪ್ರೀಂ ಕೋರ್ಟ್ನಲ್ಲಿ ಗೋವಾದ ಪರವನ್ನು ಬಲವಾಗಿ ಮಂಡಿಸಲಾಗುವುದು. ಇನ್ನೆರಡು ಮೂರು ದಿನಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ರಾಜ್ಯದ ನಿಯೋಗ ಭೇಟಿ ಮಾಡಲಿದೆ. ಮಹದಾಯಿ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ತಮ್ಮ ನಿಲುವನ್ನು …
Read More »ಆರೋಗ್ಯದಲ್ಲಿ ಏರುಪೇರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು
ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮಂಗಳವಾರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ರಾಹುಲ್ ಹಾಗೂ ಪ್ರಿಯಾಂಕಾ ಯಾತ್ರೆ ಮೊಟಕುಗೊಳಿಸಿ ದೆಹಲಿಗೆ ಮರಳಿದ್ದಾರೆ ಎನ್ನಲಾಗಿದೆ. ಬುಧವಾರ ಮುಂಜಾನೆ ಸೋನಿಯಾ ಗಾಂಧಿ ಅವರನ್ನು ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಪುತ್ರಿ ಪ್ರಿಯಾಂಕಾ ಗಾಂಧಿ ಜೊತೆಗಿದ್ದಾರೆ ಎನ್ನಲಾಗಿದೆ.
Read More »
Laxmi News 24×7