ರಮೇಶ ಜಾರಕಿಹೊಳಿ ಅವರು ಜೆಡಿಎಸ್ ಪಕ್ಷಕ್ಕೆ ಹೋಗುವುದಿಲ್ಲ ಅವರ ಭವಿಷ್ಯ ಇಲ್ಲೇ ಇದೆ ಅವರು ಆದಷ್ಟು ಬೇಗ ಮಂತ್ರಿಯಾಗುತ್ತಾರೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಬಿಟ್ಟರೆ ಜೆಡಿಎಸ್ ನಲ್ಲಿ ಏನು ಇದೆ ಸಚಿವ ಸಂಪುಟ ವಿಸ್ತರಣೆ ಆದರೆ ಮೊದಲು ಹೆಸರು ಜಾರಕಿಹೊಳಿ ಅವರದ್ದು ಇದೆ ಎಂದರು.
Read More »ಡಿಸೆಂಬರ್ 19 ರಿಂದ ಹತ್ತು ದಿನಗಳ ಕಾಲ ವಿಧಾನಮಂಡಳ ಚಳಿಗಾಲ ಅಧಿವೇಶನ
ಡಿಸೆಂಬರ್ 19 ರಿಂದ ಹತ್ತು ದಿನಗಳ ಕಾಲ ವಿಧಾನಮಂಡಳ ಚಳಿಗಾಲ ಅಧಿವೇಶನ ನಡೆಯಲಿದ್ದು, ಈ ಸಂದರ್ಭದಲ್ಲಿ ವಸತಿ, ಊಟೋಪಾಹಾರ, ಸಾರಿಗೆ, ವೈದ್ಯಕೀಯ ಸೇರಿದಂತೆ ಎಲ್ಲ ಬಗೆಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ನ.23) ನಡೆದ ವಿವಿಧ ಸಮಿತಿಗಳ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಧಿವೇಶನಕ್ಕೆ ಆಗಮಿಸುವ ಸಚಿವರು, …
Read More »6,000 ಉದ್ಯೋಗಗಳ ಕಡಿತಕ್ಕೆ ಮುಂದಾದ ಎಚ್ಪಿ
ನವದೆಹಲಿ: ಪರ್ಸನಲ್ ಕಂಪ್ಯೂಟರ್ಗಳಿಗೆ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ 6,000 ಉದ್ಯೋಗಗಳ ಕಡಿತಕ್ಕೆ ಹೆವ್ಲೆಟ್ ಪ್ಯಾಕರ್ಡ್(ಎಚ್ಪಿ) ಕಂಪನಿ ಮುಂದಾಗಿದೆ. ಪ್ರಸ್ತುತ ಕಂಪನಿಯಲ್ಲಿ ಸುಮಾರು 61,000 ಉದ್ಯೋಗಿಗಳಿದ್ದು, ಮಾರುಕಟ್ಟೆ ಕುಸಿತದ ಹಿನ್ನೆಲೆಯಲ್ಲಿ 2025ರ ಆರ್ಥಿಕ ವರ್ಷ ಮುಗಿಯುವವರೆಗೆ ಶೇ.10ರಷ್ಟು ಉದ್ಯೋಗ ಕಡಿತ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. ಉದ್ಯೋಗ ಕಡಿತದ ಜತೆಗೆ ತಂತ್ರಜ್ಞಾನ ವೆಚ್ಚವನ್ನು ಕೂಡ ಕಡಿತಗೊಳಿಸಲಾಗುವುದು. ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಎಚ್ಪಿ ಸಿಇಒ …
Read More »ಬಾಲಿವುಡ್ ಹಿರಿಯ ನಟ ವಿಕ್ರಮ್ ಗೋಖಲೆ ವಿಧಿವಶ
ಪುಣೆ: ಕೆಲವು ದಿನಗಳ ಹಿಂದೆ ಪುಣೆಯ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ಹಿರಿಯ ನಟ ವಿಕ್ರಮ್ ಗೋಖಲೆ ಇನ್ನಿಲ್ಲ. ವರದಿಗಳ ಪ್ರಕಾರ, ನಟ ಕಳೆದ 15 ದಿನಗಳಿಂದ ಆಸ್ಪತ್ರೆಯಲ್ಲಿದ್ದರು ಮತ್ತು ಅವರ ಸ್ಥಿತಿ ಗಂಭೀರವಾಗಿತ್ತು. ಇಂತಹ ಅವರು ಇದೀಗ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಚಲನಚಿತ್ರ ಮತ್ತು ರಂಗಭೂಮಿಯಲ್ಲಿ ಕುಟುಕುವಿಕೆಗೆ ಹೆಸರುವಾಸಿಯಾದ ಹಿರಿಯ ನಟ ಪುಣೆಯ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈ ಹಿಂದೆ, ದಿ …
Read More »ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕಿಡ್ನಾಪ್….?
ಬೆಂಗಳೂರು: ಬ್ರೇಕಿಂಗ್ ಆಂಡ್ ಶಾಕಿಂಗ್ ನ್ಯೂಸ್ ಏನಪ್ಪಾ ಅಂದ್ರೆ ಫೇಮಸ್ ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್ ಅವರ ಕಿಡ್ನಾಪ್ ಆಗಿದೆ.ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ.ಯಾರಪ್ಪ ಕಿಡ್ನಾಪ್ ಮಾಡಿದ್ದು,ಯಾಕೆ ಮಾಡಿದ್ದು,ಅಜನೀಶ್ ಲೋಕನಾಥ್ ಪರಿಸ್ಥಿತಿ ಈಗ ಹೇಗಿದೆ ಅನ್ನೋ ಪ್ರಶ್ನೆಗಳನ್ನ ಫ್ಯಾನ್ಸ್ ತುಂಬಾ ಟೆನ್ಶನ್ನಲ್ಲಿ ಕೇಳುತ್ತಿದ್ದಾರೆ. ಅಯ್ಯೋ..ಅಯ್ಯೋ..ಇದು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಪ್ರಮೋಷನ್ಗಾಗಿ ಮಾಡಿರೋ ತಂತ್ರ.ಸೋ ಪ್ಲಾನ್ ಇದೀಗ ಸಿಕ್ಕಾಪಟ್ಟೆ ವರ್ಕೌಟ್ ಆಗಿದ್ದು …
Read More »33 ಸಾವಿರ ಸ್ತ್ರೀ ಶಕ್ತಿ ಸಂಘಗಳಿಗೆ 5 ಲಕ್ಷ ರೂ. ಆರ್ಥಿಕ ಸಹಾಯ : ಸಿಎಂ
ಹಾಸನ: ಸ್ತ್ರೀ ಸಾಮರ್ಥ್ಯ ಯೋಜನೆಯಡಿ 33 ಸಾವಿರ ಸ್ತ್ರೀ ಶಕ್ತಿ ಸಂಘಗಳಿಗೆ 5 ಲಕ್ಷ ರೂ. ಆರ್ಥಿಕ ಸಹಾಯ, ತರಬೇತಿ ನೀಡಿ, ಸಂಘದಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ 5 ಲಕ್ಷ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಅವರು ನಿನ್ನೆ ಬೇಲೂರು ತಾಲ್ಲೂಕಿನ ಚಿಲ್ಕೂರು ಶ್ರೀ ಮಠ ಪುಷ್ಪಗಿರಿ ಕ್ಷೇತ್ರದಲ್ಲಿ ಲಕ್ಷ ದೀಪೋತ್ಸವ ಹಾಗೂ ಗುರು ಕರಿಬಸವೇಶ್ವರ ಅಜ್ಜಯ್ಯನವರ ಪಲ್ಲಕ್ಕಿ …
Read More »ಗಂಡನ ಪಲ್ಲಂಗದಾಟಕ್ಕೆ ಬೇಸತ್ತು ನೇಣಿಗೆ ಶರಣಾದ ಬೆಂಗಳೂರಿನ ಟೆಕ್ಕಿ
ಬೆಂಗಳೂರು : ಗಂಡನ ಪಲ್ಲಂಗದಾಟಕ್ಕೆ ಬೇಸತ್ತು ಪತ್ನಿ ನೇಣಿಗೆ ಶರಣಾದ ಘಟನೆ ಬೆಂಗಳೂರಿನಲ್ಲಿ( Bangalore ) ನಡೆದಿದೆ. ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ತನ್ನ ಗಂಡನ ವರ್ತನೆಗೆ ಬಹಳ ಮನನೊಂದಿದ್ದರು ಎನ್ನಲಾಗಿದೆ. ಹೆಂಡತಿಯ ಕಣ್ಣು ತಪ್ಪಿಸಿ ಗಂಡ ಬೇರೆ ಹೆಣ್ಣಿನ ಸಹವಾಸ ಮಾಡುತ್ತಿದ್ದನು ಎನ್ನಲಾಗಿದೆ. ಇದರಿಂದ ಮನನೊಂದು ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Read More »ರಾಜ್ಯದ ನೌಕರರು, ಕುಟುಂಬದ ಸದಸ್ಯರಿಗೆ ಭರ್ಜರಿ ಗುಡ್ ನ್ಯೂಸ್ : ಶೀಘ್ರವೇ ‘ಕ್ಯಾಶ್ ಲೆಸ್ ಚಿಕಿತ್ಸೆ’ ಯೋಜನೆ ಜಾರಿ
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ರಾಜ್ಯದ ನೌಕರರು ಕುಟುಂಬದ ಸದಸ್ಯರಿಗೆ ಜನವರಿಯಿಂದ ಕ್ಯಾಶ್ ಲೆಸ್ ಚಿಕಿತ್ಸೆ ಯೋಜನೆ ಜಾರಿಯಾಗಲಿದೆ. ನೌಕರರಿಗೆ ಹಾಗೂ ಅವರ ಕುಟುಂಬದವರಿಗೆ ಇನ್ನೂ ಮುಂದೆ ರಾಜ್ಯದ ಆಸ್ಪತ್ರೆಗಳಲ್ಲಿ ನಗದು ರಹಿತ ವೈದ್ಯಕೀಯ ಸೇವೆ ಸಿಗಲಿದೆ. ಮಾರಣಾಂತಿಕ ಕಾಯಿಲೆಗಳು ಸೇರಿ 1,226 ಆರೋಗ್ಯ ಸಮಸ್ಯೆಗಳಿಗೆ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಒಳಗೊಂಡಂತೆ ಸಂಪೂರ್ಣ ನಗದು ರಹಿತ ಚಿಕಿತ್ಸೆ ಸಿಗುವ ಕರ್ನಾಟಕ ರಾಜ್ಯ …
Read More »ಇಂದಿನಿಂದ ನಂದಿನಿ ಹಾಲು, ಮೊಸರು ದರ ಲೀಟರ್ ಗೆ 2 ರೂ. ಹೆಚ್ಚಳ
ಬೆಂಗಳೂರು: ಇಂದಿನಿಂದ ನಂದಿನಿ ಹಾಲು, ಮೊಸರು ದರ ಲೀಟರ್ ಗೆ ಎರಡು ರೂಪಾಯಿ ಹೆಚ್ಚಳವಾಗಿದೆ. ಕೆಎಂಎಫ್ ನಿರ್ದೇಶಕರ ಜೊತೆಗೆ ಸಭೆ ನಡೆಸಿದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು 2 ರೂ. ಹೆಚ್ಚಳದ ಬಗ್ಗೆ ಮಾಹಿತಿ ನೀಡಿ, ಪ್ರತಿ ಲೀಟರ್ ನಂದಿನಿ ಹಾಲು ಮತ್ತು ಮೊಸರಿನ ದರ ಎರಡು ರೂಪಾಯಿ ಹೆಚ್ಚಳವಾಗಲಿದೆ. ಹೆಚ್ಚುವರಿ ಹಣವನ್ನು ಹಾಲು ಉತ್ಪಾದಕರಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ವಿವಿಧ ಹಾಲುಗಳ ದರ ಏರಿಕೆ ವಿವರ ನಂದಿನಿ ಟೋನ್ಡ್ ಹಾಲು …
Read More »ಟಿಕೆಟ್ ಆಕಾಂಕ್ಷಿಗಳಿಗೆ ಪ್ರಮಾಣ ವಚನ ಬೋಧಿಸಿ ಅಚ್ಚರಿ ಮೂಡಿಸಿದ ಸಿಎಂ
ದಾವಣಗೆರೆ: ಹರಿಹರದಲ್ಲಿ ಬುಧವಾರ ಮಧ್ಯಾಹ್ನ ನಡೆದ ಬಿಜೆಪಿ ಜನ ಜನಸಂಕಲ್ಪ ಯಾತ್ರೆಯ ವೇದಿಕೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದ ಎಲ್ಲ ಟಿಕೆಟ್ ಆಕಾಂಕ್ಷಿಗಳನ್ನು ನಿಲ್ಲಿಸಿ, ಟಿಕೆಟ್ ಯಾರಿಗೆ ಕೊಟ್ಟರೂ ಪಕ್ಷದ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡುವ ಪ್ರಮಾಣ ವಚನ ಬೋಧಿಸಿ ಅಚ್ಚರಿ ಮೂಡಿಸಿದರು. ಕಾರ್ಯಕ್ರಮದ ವೇದಿಕೆಗೆ ಗಣ್ಯರು ಬರುತ್ತಿದ್ದಂತೆ ಕಾರ್ಯಕರ್ತರ ಗುಂಪುಗಳು ತಮ್ಮ ಮುಖಂಡರ ಫೋಟೋ, ಬಾವುಟ ಹಿಡಿದು ಕೇಕೆ ಹಾಕುತ್ತಿದ್ದರು. ಇದನ್ನು ಕಂಡ ಮುಖ್ಯಮಂತ್ರಿ ಬೊಮ್ಮಾಯಿ, ಎಲ್ಲ …
Read More »