ಸುವರ್ಣವಿಧಾನಸೌಧ: ಸೇಂದಿವನ ಜಾಗದಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಲು ಸರ್ಕಾರ ತೀರ್ಮಾನಿಸಿದೆ. ಕಾಫಿ ತೋಟ ಒತ್ತುವರಿ ಸಕ್ರಮಕ್ಕಾಗಿ ನಿಯಮಾವಳಿ ರೂಪಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಬಿಜೆಪಿ ಸರ್ಕಾರ ಬಂದ ನಂತರ ಪ್ರಮುಖವಾಗಿ ಮಲೆನಾಡು, ಕರಾವಳಿ ಭಾಗದ ರೈತರ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿದೆ. ಕಾಫಿ ತೋಟ ಒತ್ತುವರಿ ಸಕ್ರಮ ಮಾಡಿ ಗುತ್ತಿಗೆಗೆ ನೀಡಲು ತೀರ್ಮಾನಿಸಿ ನಿಯಮಾವಳಿ …
Read More »ಮಜೂರು ಗ್ರಾಪಂ ವ್ಯಾಪ್ತಿಯ ಐಎಸ್‌ಆರ್‌ಎಲ್‌ನಿಂದ ತೆರಿಗೆ ವಸೂಲಿಗೆ ಕ್ರಮ
ಸುವರ್ಣ ವಿಧಾನಸೌಧ: ಉಡುಪಿ ಜಿಲ್ಲೆ ಕಾಪು ತಾಲೂಕಿನ ಮಜೂರು ಗ್ರಾಪಂ ವ್ಯಾಪ್ತಿಯ ಪಾದೂರು ಗ್ರಾಮದಲ್ಲಿನ ಐಎಸ್‌ಆರ್‌ಎಲ್ ಸಂಸ್ಥೆಯಿಂದ ಗ್ರಾಪಂಗೆ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಸಂಸ್ಥೆಯವರೊಂದಿಗೆ ಚರ್ಚಿಸಿ ತೆರಿಗೆ ಮೊತ್ತ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಸಚಿವ ಮುರುಗೇಶ ನಿರಾಣಿ ಹೇಳಿದರು. ವಿಧಾನಪರಿಷತ್‌ನಲ್ಲಿ ಬಿಜೆಪಿಯ ಕೆ. ಪ್ರತಾಪಸಿಂಹ ನಾಯಕ್ ವಿಷಯ ಪ್ರಸ್ತಾಪಿಸಿ, ಐಎಸ್‌ಪಿಆರ್‌ಎಲ್ ಸಂಸ್ಥೆ ಪಾದೂರು ಗ್ರಾಮದಲ್ಲಿ ಮೊದಲ ಹಂತದಲ್ಲಿ 180 ಎಕರೆಯಲ್ಲಿ ಕೈಗಾರಿಕೆ …
Read More »ಚರ್ಮಗಂಟು ರೋಗದ ಹಾವಳಿ 21 ಸಾವಿರ ಹಸು ಬಲಿ
ಬೆಂಗಳೂರು: ರಾಜ್ಯದಲ್ಲಿ ಚರ್ಮಗಂಟು ರೋಗವನ್ನು ಹತೋಟಿಗೆ ತರಲಾಗುತ್ತಿದ್ದರೂ ಸುಮಾರು 21,305 ಜಾನುವಾರುಗಳು ಬಲಿಯಾಗಿರುವುದು ಆತಂಕ ಸೃಷ್ಟಿಸಿದೆ. ರಾಜ್ಯದ ಸುಮಾರು 230 ತಾಲೂಕುಗಳ 15,977 ಗ್ರಾಮಗಳಲ್ಲಿ ಈವರೆಗೆ 2,37,194 ರಾಸುಗಳಿಗೆ ಚರ್ಮಗಂಟು ರೋಗ ಬಾಧಿಸಿದ್ದು, ಈ ಪೈಕಿ 1.64 ಲಕ್ಷ ರಾಸುಗಳು ಚೇತರಿಕೆಯಾಗಿವೆ. ಇನ್ನುಳಿದ ರಾಸುಗಳಿಗೆ ಸರಕಾರದಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಸಿಬಂದಿ ಇಲ್ಲದೆ ಲಸಿಕೆ ತಲುಪುತ್ತಿಲ್ಲ ಎಂಬ ಸಂಗತಿ “ಉದಯವಾಣಿ’ ನಡೆಸಿದ ಜಿಲ್ಲಾವಾರು ಮಾಹಿತಿ ಸಂಗ್ರಹದಿಂದ ಬೆಳಕಿಗೆ ಬಂದಿದೆ. …
Read More »ಹಳೆ ಪಿಂಚಣಿ ಪದ್ಧತಿಗೆ ಆಗ್ರಹ; ಹೊಸ ಪಿಂಚಣಿ ವ್ಯವಸ್ಥೆಗೆ ಕಾಂಗ್ರೆಸ್, ಜೆಡಿಎಸ್ ವಿರೋಧ
ಬೆಳಗಾವಿ: ನೂತನ ಪಿಂಚಣಿ ಯೋಜನೆ ರದ್ದತಿಗಾಗಿ ನಡೆಯುತ್ತಿರುವ ಹೋರಾಟ ವಿಧಾನಸಭೆಯಲ್ಲಿ ಮಂಗಳವಾರ ಪ್ರತಿಧ್ವನಿಸಿ ಕೆಲಕಾಲ ವಾತಾವರಣವನ್ನು ಕಾವೇರಿಸಿತು. ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಚರ್ಚೆಗೆ ಅವಕಾಶ ಕಲ್ಪಿಸಬೇಕು ಹಾಗೂ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಪಟ್ಟು ಹಿಡಿದರು. ಸಾವಿರಾರು ಮಂದಿ ನೌಕರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದರಿಂದ ಆಡಳಿತ ವ್ಯವಸ್ಥೆಯೂ ಕುಸಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿಯವರು ಧರಣಿ ನಿರತರ ಜತೆ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದರು. ಈ ವೇಳೆ …
Read More »ವಿಕಲಚೇತನರ ಗೌರವ ಧನ, ಕಾರ್ಯಕರ್ತರ ಹುದ್ದೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ
ರಾಜ್ಯದ ಎಂಆರ್ ಡಬ್ಯೂ, ವಿಆರ್ ಡಬ್ಯೂ, ಯುಆರ್ ಡಬ್ಯೂ ವಿಕಲಚೇತನರ ಗೌರವ ಧನ, ಕಾರ್ಯಕರ್ತರ ಹುದ್ದೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಮಂಗಳವಾರ ನವ ಕರ್ನಾಟಕ ವಿಕಲಚೇತನ ಕಾರ್ಯಕರ್ತರ ಸಂಘ ಸುವರ್ಣ ವಿಧಾನಸೌಧದ ಬಸ್ತವಾಡದ ಬಳಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಒತ್ತಾಯಿಸಿದರು. ಮಹಾರಾಷ್ಟ್ರದ ಮಾದರಿಯಲ್ಲಿ ವಿಕಲಚೇತನರಿಗಾಗಿ ವಿಶೇಷ ಸಚಿವಾಲಯ ಘೋಷಣೆ ಮಾಡಬೇಕು. ಕಳೆದ ನಾಲ್ಕೈದು ವರ್ಷಗಳಿಂದ ರಾಜ್ಯದ ಹೊಸ ತಾಪಂ. ಗಳಿಗೆ ಎಂಆರ್ ಡಬ್ಯೂಗಳನ್ನು ಹುದ್ದೆ ಗಳನ್ನು ನೇಮಕ ಮಾಡಿಕೊಂಡಿರುವುದಿಲ್ಲ. ಹೊಸ ನೇಮಕಾತಿ …
Read More »ಗಡಿ ವಿಷಯಕ್ಕೆ ಉತ್ತರ ನೀಡಿದ ಬೊಮ್ಮಾಯಿ
ಗಡಿ ವಿಷಯವಾಗಿ ಕೇಂದ್ರ ಗೃಹ ಮಂತ್ರಿಗಳು ಕರೆದ ಸಭೆಗೆ ನಾನು ಹಾಜರಾಗಿದ್ದೆನೆ, ಸಭೆಯಲ್ಲಿ ಗೃಹಸಚಿವರು ಎರಡು ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥಿತ ಕುರಿತು ಸಭೆಯಲ್ಲಿ ಚರ್ಚೆಯಾಗಿದೆ ಹೋರತು ಬೇರೆ ಯಾವುದೇ ವಿಚಾರ ಚರ್ಚೆಯಾಗಿಲ್ಲಾ ಎಂದು ಸಭೆಗೆ ತಿಳಿಸಿದರು. ಮದ್ಯ ಪ್ರವೇಶಿಸಿದ ಎಚ್ ಕೆ ಪಾಟೀಲ ಅಮಿಶ್ ಷಾ ರವರು ನೀಡಿದ ಸಲಹೆ ಮುಖ್ಯಮಂತ್ರಿ ತಗೆದುಕೊಂಡು ಬಂದಿದ್ದಾರೆ, ಆದರೆ ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿರುವಾಗ ಮೂವರು ಸಚಿವರ ಸಮಿತಿ ಮಾಡುವದರ ಅರ್ಥ ನಮ್ಮ …
Read More »ದಾಖಲೆ ಬರೆದ ಬ್ಯಾಡಗಿ ಮೆಣಸಿನಕಾಯಿ ದರ: ಕ್ವಿಂಟಾಲ್ ಗೆ 55 ಸಾವಿರಕ್ಕೂ ಅಧಿಕ ಬೆಲೆ
ಹಾವೇರಿ: ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ದರ ದಾಖಲೆ ಬರೆದಿದೆ. ಸೋಮವಾರದ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಡಬ್ಬಿ ತಳಿ ದರ 52,569 ರೂಪಾಯಿ ಹಿಂದಿಕ್ಕಿದ ಕಡ್ಡಿ ಮೆಣಸಿನಕಾಯಿ 55,589 ರೂ.ಗೆ ಮಾರಾಟವಾಗಿ ದಾಖಲೆ ಬರೆದಿದೆ. ಮೆಣಸಿನಕಾಯಿ ಆವಕದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಮೂರು ತಳಿಯ ಮೆಣಸಿನ ಕಾಯಿಗೆ ಉತ್ತಮ ಧಾರಣೆ ದೊರೆತಿದೆ. ಅಂತರರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮಾರುಕಟ್ಟೆಗೆ ಮೆಣಸಿನಕಾಯಿ ಇತ್ತೀಚಿನ ತಿಂಗಳುಗಳಲ್ಲಿ ಆವಕ ಕಡಿಮೆಯಾಗಿತ್ತು. …
Read More »ಈಶ್ವರಪ್ಪಾ ಮತ್ತು ರಮೇಶ ಜಾರಕಿಹೋಳಿಯವರ ಅಸಮಾಧಾನದ ಬಗ್ಗೆ ದೆಹಲಿ ವರಿಷ್ಟರ ಗಮನಕ್ಕೆ ತಂದಿದ್ದೆನೆ .:C.M. ಬೊಮ್ಮಾಯಿ
ಭಾರತೀಯ ಜನತಾ ಪಕ್ಷದ ಕೆ ಎಸ್ ಈಶ್ವರಪ್ಪಾ ಮತ್ತು ರಮೇಶ ಜಾರಕಿಹೋಳಿಯವರ ಅಸಮಾಧಾನದ ಬಗ್ಗೆ ದೆಹಲಿ ವರಿಷ್ಟರ ಗಮನಕ್ಕೆ ತಂದಿದ್ದೆನೆ . ಅವರು ಸಕಾರಾತ್ಮಕ ಸ್ಪಂದಿಸಿದ್ದಾರೆ, ವಯಕ್ತಿಕ ವಿಚಾರಗಳನ್ನು ಹೇಳಕ್ಕಾಗಲ್ಲಾ ಅವರ ಜೊತೆ ಮಾತನಾಡುತ್ತೆನೆ ಎಂದರು.
Read More »ಭಯೋತ್ಪಾದಕರಿಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ
ಭಯೋತ್ಪಾದಕರಿಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ವಿಜಯಪುರ ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆಯನ್ನು ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಗಾಂಧಿಚೌಕ್ ವರೆಗೂ ಮಂಗಳವಾರ ಪ್ರತಿಭಟನಾ ರ್‍ಯಾಲಿ ನಡೆಸೊ ಮೂಲಕ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ಅಲ್ಲದೇ, ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Read More »ಸ್ಮಶಾನದ ಬಾವಿಯಲ್ಲಿ ಮಗುವಿನ ಶವ ಪತ್ತೆ
ಅಪರಿಚಿತ ಶಿಶುವಿನ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಸ್ಮಶಾನದ ಬಾವಿಯಲ್ಲಿ ಮಗು ಎಸೆದು ಹೋಗಿರುವ ಘಟನೆ ವಿಜಯಪುರ ನಗರದ ದೇವಗಿರಿ ಸ್ಮಶಾನದ ಬಾವಿಯಲ್ಲಿ ನಡೆದಿದೆ. ಸ್ಮಶಾನದ ಬಾವಿ ಮೋಟರ್ ಸ್ಟಾರ್ಟ್ ಮಾಡಲು ಹೋದಾಗ ಅಂದಾಜು 8 ರಿಂದ 9 ತಿಂಗಳ ಶಿಶುವಿನ ಶವ ಪತ್ತೆಯಾಗಿದೆ. ಸ್ಥಳಕ್ಕೆ ಆದರ್ಶ ನಗರ ಪಿ.ಎಸ್.ಐ. ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಿಸಿಕೊಂಡು ಮಗುವಿನ ಪೋಷಕರ …
Read More »