ಬೆಳಗಾವಿ: ‘ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯದ ಐದು ಸ್ಥಳಗಳಲ್ಲಿ ಮೆಗಾ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ವಿಧಾನ ಪರಿಷತ್‌ನಲ್ಲಿ ಗುರುವಾರ 2022-23ನೇ ಸಾಲಿನ ಪೂರಕ ಅಂದಾಜಿನ ಎರಡನೇ ಕಂತಿನ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ‘ಪ್ರಥಮ ಬಾರಿ ಮೆಗಾ ಹಾಸ್ಟೆಲ್ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ. ಮಂಗಳೂರು, ಧಾರವಾಡ, ಮೈಸೂರು, ಕಲಬುರಗಿ ಮತ್ತು ಬೆಂಗಳೂರಿನಲ್ಲಿ ಈ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುವುದು’ ಎಂದು ತಿಳಿಸಿದರು. ‘ಅಗತ್ಯವಿದ್ದರೆ ಇತರ ಶೈಕ್ಷಣಿಕ ಕೇಂದ್ರಗಳಲ್ಲಿ ಮೆಗಾ …
Read More »ಮೀಸಲಾತಿ | ರಂಗನ ಮಂಗ ಮಾಡಲು ಹೊರಟಿದ್ದಾರೆ” H.D.K
ತುಮಕೂರು: ಒಕ್ಕಲಿಗ, ಲಿಂಗಾಯತ ಸಮುದಾಯದ ಮೀಸಲಾತಿ ಸಂಬಂಧ ಪ್ರವರ್ಗ ಬದಲಾವಣೆ ಮಾಡುವ ಮೂಲಕ ‘ರಂಗನ ಮಂಗ ಮಾಡಲು’ ಬಿಜೆಪಿಯವರು ಹೊರಟಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಶುಕ್ರವಾರ ವ್ಯಂಗ್ಯವಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪ್ರವರ್ಗ ಬದಲಾವಣೆ ಮಾಡಿರುವುದರಿಂದ ಎರಡೂ ಸಮುದಾಯಗಳಿಗೂ ಯಾವುದೇ ಪ್ರಯೋಜನವಿಲ್ಲ. ಇದರಿಂದ ಮೀಸಲಾತಿ ಪ್ರಮಾಣದಲ್ಲಿ ಯಾವುದೇ ಹೆಚ್ಚಳ ಆಗುವುದಿಲ್ಲ. ಪ್ರವರ್ಗ ಬದಲಾವಣೆ ಮಾಡಿರುವುದೇ ಸಾಧನೆ. ಈವರೆಗೆ ಮೂಗಿಗೆ ತಪ್ಪ ಹಚ್ಚುತ್ತಿದ್ದವರು, ಈಗ ಹಣೆಗೆ ಹಚ್ಚಿದ್ದಾರೆ. …
Read More »ಐಪಿಎಸ್ ಅಧಿಕಾರಿ ಆರ್. ದಿಲೀಪ್ ನಿಧನ
ಬೆಂಗಳೂರು: ರಾಜ್ಯದ ಐಪಿಎಸ್ ಅಧಿಕಾರಿ ಆರ್. ದಿಲೀಪ್ (53) ಅವರು ಅನಾರೋಗ್ಯದಿಂದಾಗಿ ನಗರದ ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು. ಸಿಐಡಿ ಆರ್ಥಿಕ ವಿಭಾಗದ ಡಿಐಜಿಪಿ ಆಗಿ ಕೆಲಸ ಮಾಡುತ್ತಿದ್ದ ಇವರು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಬಿಇ ಪದವೀಧರರಾಗಿದ್ದ ದಿಲೀಪ್ ಅವರು 2005ರಲ್ಲಿ ಪೊಲೀಸ್ ಸೇವೆಗೆ ಸೇರಿದ್ದರು. ಧಾರವಾಡ, ಉತ್ತರ ಕನ್ನಡ ಹಾಗೂ ಹಲವು ಜಿಲ್ಲೆಗಳ ಎಸ್ಪಿ ಆಗಿದ್ದರು. ಹುಬ್ಬಳ್ಳಿ-ಧಾರವಾಡ ಕಮಿಷನರ್ ಆಗಿಯೂ ಕೆಲಸ ಮಾಡಿದ್ದರು
Read More »ಪ್ರಧಾನಿ ಮೋದಿ ಹೋಲುತ್ತಿದೆ ಕೊಚ್ಚಿನ್ ಕಾರ್ನಿವಲ್ ನಲ್ಲಿ ಸುಡಲು ಸಿದ್ಧವಾದ ಪ್ರತಿಕೃತಿ: ಬಿಜೆಪಿ ಆಕ್ರೋಶ
ಕೊಚ್ಚಿ: ಕೊಚ್ಚಿನ್ ಕಾರ್ನೀವಲ್ ಗಾಗಿ ನಿರ್ಮಿಸಲಾದ ಪ್ರತಿಕೃತಿ ಮುಖ ಪ್ರಧಾನಿ ನರೇಂದ್ರ ಮೋದಿ ಅವರ ಮುಖವನ್ನು ಹೋಲುತ್ತದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಬಿಜೆಪಿ ಎರ್ನಾಕುಲಂ ಜಿಲ್ಲಾಧ್ಯಕ್ಷ ಕೆ.ಎಸ್. ಶೈಜು, ಪ್ರತಿಕೃತಿ ಮುಖ ಮತ್ತು ವೇಷಭೂಷಣ ಮೋದಿಯನ್ನು ಹೋಲುತ್ತದೆ ಮತ್ತು ಅದು ದೇಶದ ಪ್ರಧಾನಿಯನ್ನು ಅವಮಾನಿಸುವ ಯತ್ನ. ಕೊಚ್ಚಿನ್ ಕಾರ್ನಿವಲ್‌ಗೆ ಅಡ್ಡಿಪಡಿಸಲು ಇದನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ ಪ್ರತಿಭಟನೆಯ ನಂತರ ಪ್ರತಿಕೃತಿ ರೂಪ ಬದಲಾಯಿಸಲಾಗುವುದು ಎಂದು ಸಂಘಟಕರು ತಿಳಿಸಿದರು. …
Read More »ಅಮಿತ್ ಶಾ ಕಾರ್ಯಕ್ರಮದಿಂದ ದೂರ ಉಳಿದ BSY
ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿನಿಂದ ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದು, ಈಗಾಗಲೇ ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ಆಗಮಿಸಿದ್ದಾರೆ. ಆದರೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಮಿತ್ ಶಾ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತಬೇಟೆಗಾಗಿ ರಾಜ್ಯ ಬಿಜೆಪಿ ಆಯೋಜಿಸಿರುವ ಅಮಿತ್ ಶಾ ಅವರ ಬೃಹತ್ ಸಮಾವೇಶ ಕಾರ್ಯಕ್ರಮಕ್ಕೆ ಹಿರಿಯ ನಾಯಕ, ಮಾಜಿ ಸಿಎಂ ಯಡಿಯೂರಪ್ಪ ಗೈರಾಗುತ್ತಿದ್ದಾರೆ. ಇಂದು ಮಂಡ್ಯ …
Read More »ಕಳಸಾ-ಬಂಡೂರಿ ಕನಸು ಕೊನೆಗೂ ನನಸು!
ನವದೆಹಲಿ: ಮಹದಾಯಿ ನದಿಯಿಂದ ಮಲಪ್ರಭಾ ನದಿಗೆ ನೀರು ತಿರುಗಿಸುವ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಕಳಸಾ-ಬಂಡೂರಿ ಕಾಲುವೆ ನಿರ್ಮಾಣ ಯೋಜನೆಗೆ ಕೇಂದ್ರ ಜಲಶಕ್ತಿ ಸಚಿವಾಲಯ ಕೊನೆಗೂ ಅನುಮೋದನೆ ನೀಡಿದೆ. ಈ ಮೂಲಕ ಕಳೆದೊಂದು ದಶಕದಿಂದ ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಕಳಸಾ-ಬಂಡೂರಿ ಯೋಜನೆ ಜಾರಿಯಾಗುವುದು ಖಚಿತವಾಗಿದೆ. ಕೇಂದ್ರ ಜಲ ಆಯೋಗವು ರಾಜ್ಯದ ಪರಿಷ್ಕೃತ ಸಮಗ್ರ ಯೋಜನಾ ವರದಿ(ಡಿಪಿಆರ್)ಗೆ ಒಪ್ಪಿಗೆ ಸೂಚಿಸಿರುವುದರನ್ನು ಪರಿಗಣಿಸಿದ ಜಲಶಕ್ತಿ ಸಚಿವಾಲಯ, ಅನುಮತಿ ನೀಡಿರುವ ನೋಟಿಫಿಕೇಷನ್ ಹೊರಡಿಸಿದೆ. ರಾಜ್ಯ ಸರ್ಕಾರದ …
Read More »ಕಾಂಗ್ರೆಸ್ – ಜೆಡಿಎಸ್ ಭ್ರಷ್ಟಾಚಾರದ ಪಾರ್ಟಿ
ಮಂಡ್ಯ : ಕಾಂಗ್ರೆಸ್ ಹಾಗೂ ಜೆಡಿಎಸ್ ಭ್ರಷ್ಟಾಚಾರದಿಂದ ಕೂಡಿದ ಪಾರ್ಟಿ ಹಾಗೂ ಕುಟುಂಬ ರಾಜಕಾರಣ ಮಾಡುವ ಪಾರ್ಟಿ ಎಂದು ಬಿಜೆಪಿ ಚಾಣಕ್ಯ ಅಮಿತ್ ಶಾ ಗುಡುಗಿದ್ದಾರೆ. ಮಂಡ್ಯದಲ್ಲಿ ನಡೆಯುತ್ತಿರುವ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಅಮಿತ್ ಶಾ ಭಾಷಣ ಮಾಡಿದ್ದಾರೆ. ಜೆಡಿಎಸ್ ಯಾವಾಗಲೂ ಹೇಗೆ ಒಂದು ಕುಟುಂಬವನ್ನು ಅಭಿವೃದ್ದಿ ಮಾಡಬೇಕು ಎಂದು ಯೋಚಿಸುತ್ತೆ, ಕಾಂಗ್ರೆಸ್ ಭ್ರಷ್ಟಾಚಾರ ಮಾಡುತ್ತದೆ ಎಂದು ಕಿಡಿಕಾರಿದ್ದಾರೆ. ಡಬನ್ ಎಂಜಿನ್ ಸರ್ಕಾರ ಯಶಸ್ವಿಯಾಗಿ ಆಡಳಿತ ನಡೆಸಲಿದೆ. 2018 ರಲ್ಲಿ …
Read More »ಬಿಜೆಪಿಯವರು ಜನರಿಗೆ ಚಾಕೊಲೇಟ್ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ:
ಅಮಿತ್ ಶಾ ಮಂಡ್ಯಕ್ಕೆ ಬಂದಿದ್ದಾರೆ. ಡಬಲ್ ಎಂಜಿನ್ ಸರ್ಕಾರ ರೈತರಿಗೆ ಡಬಲ್ ಬೆಲೆ ಕೊಡುತ್ತೇವೆ ಎನ್ನುವುದನ್ನು ಬಹಿರಂಗವಾಗಿ ಹೇಳಬೇಕು. ಬಿಜೆಪಿಯವರು ಜನರಿಗೆ ಚಾಕೊಲೇಟ್ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಕೇವಲ ಕಣ್ಣು ಒರೆಸುವುದರಿಂದ ಉಪಯೋಗವಿಲ್ಲ. ಜನರ ಸಮಸ್ಯೆ ಬಗೆಹರಿಸುವ ಕಾರ್ಯವನ್ನು ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನೀರಿನ ಬೆಲೆ 23, 24 ಇದೆ. ಹಾಲಿನ ಬೆಲೆ 27,28 ಇದೆ. …
Read More »ತಾಯಿಯನ್ನು ಕಳೆದುಕೊಳ್ಳುವುದಕ್ಕಿಂತ ದೊಡ್ಡ ನಷ್ಟ ಇನ್ನೊಂದಿಲ್ಲ
ನವದೆಹಲಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ಮೋದಿ ಶುಕ್ರವಾರ (ಡಿಸೆಂಬರ್ 30) ನಸುಕಿನ ವೇಳೆ ಅಹಮದಾಬಾದ್ ಮೆಹ್ತಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಹೀರಾಬೆನ್ ಮೋದಿ ಅವರ ನಿಧನಕ್ಕೆ ನೇಪಾಳ ಪ್ರಧಾನಿ ಪುಷ್ಪ ಕಮಾಲ್ ದಹಾಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಹೀರಾಬೆನ್ ಮೋದಿ ಅವರ ನಿಧನದ ಸುದ್ದಿ ತಿಳಿದು ತುಂಬಾ ದುಃಖವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಪ್ರೀತಿಯ ತಾಯಿಯ ನಿಧನಕ್ಕೆ ಹೃದಯಾಂತರಾಳದ ಸಂತಾಪ …
Read More »ಮೋದಿ ಎಷ್ಟು ಸಲ ಬೇಕಾದರೂ ರಾಜ್ಯಕ್ಕೆ ಬರಲಿ, ರಾಜ್ಯದಲ್ಲಿ ಗೆಲ್ಲಲು ಸಾಧ್ಯವಿಲ್ಲ: ಸಿದ್ದರಾಮಯ್ಯ
ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಎಷ್ಟು ಬಾರಿ ಬೇಕಾದರೂ ರಾಜ್ಯಕ್ಕೆ ಬಂದರೂ ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜಾದೂ ನಡೆಯಲ್ಲ. ಮೋದಿ ಎಷ್ಟು ಬಾರಿ ಬಂದರೂ ಬಿಜೆಪಿ ಗೆಲ್ಲಲ್ಲ ಎಂದರು. ಅಮಿತ್ ಶಾ ಬಂದಾಕ್ಷಣ ರಾಜ್ಯದಲ್ಲಿ ಬಿಜೆಪಿ ಗೆಲ್ಲುತ್ತದೆಯೆಂದು ಹೇಳಲು ಆಗುತ್ತದೆಯೇ. …
Read More »