Breaking News

ಬೆಳಗಾವಿಯಲ್ಲಿ ಭೀಕರ ಹತ್ಯೆ ನಡೆದಿದೆ. ಪತ್ನಿಯ ಎದುರೇ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳ ಕೊಲೆ

ಬೆಳಗಾವಿ: ಪತ್ನಿಯ ಕಣ್ಣೆದುರೇ ಪತಿಯ ಮೇಲೆ‌ ಮಚ್ಚು, ಲಾಂಗುಗಳಿಂದ ಮನಬಂದಂತೆ ಹಲ್ಲೆ ಮಾಡಿ ಕೊಲೆ ಮಾಡಿರುವ ದುಷ್ಕರ್ಮಿಗಳು ಬಳಿಕ ಸ್ಥಳದಿಂದ ಪರಾರಿಯಾದ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಟ್ಟಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ಶಂಕರ್ ಸಿದ್ದಪ್ಪ ಜಗಮುತ್ತಿ (25) ಕೊಲೆಯಾದ ವ್ಯಕ್ತಿ. ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯನ್ನು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಭೈರನಟ್ಟಿ ಗ್ರಾಮದ ಶ್ರೀಧರ(22) ಬಂಧಿತ ಆರೋಪಿ. ಅಮಾವಾಸ್ಯೆ ಹಿನ್ನೆಲೆ ವಡೇರಟ್ಟಿ ಗ್ರಾಮದ …

Read More »

ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆ ಹೆಸರಿನಲ್ಲಿ ನಕಲಿ APP

ಕರ್ನಾಟಕ ಸರಕಾರದ ಉಚಿತ ಯೋಜನೆಗಳಾದ ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮೀ ಯೋಜನೆ ಬಗ್ಗೆ ಸಾರ್ವಜನಿಕ ಜಾಲತಾಣ ಗಳಲ್ಲಿ ನಕಲಿ ಅಪ್ಲಿಕೇಷನ್‌ ಗಳು ಕಾರ್ಯಾಚರಿಸುತ್ತಿದ್ದು, ಈ ಬಗ್ಗೆ ಜಾಗೃತೆ ವಹಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.   ಈ ರೀತಿಯ ನಕಲಿ ಅಪ್ಲಿಕೇಷನ್‌ಗಳನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಾರದು ಮತ್ತು ಸೈಬರ್ ಕಳ್ಳರು ಮೆಸೇಜ್ ಮೂಲಕ ಹಾಗೂ ವಾಟ್ಸಾಪ್ ಮೂಲಕ ಈ ಬಗ್ಗೆ …

Read More »

ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಿರುವವರಿಗೆ ಗುಡ್ ನ್ಯೂಸ್ : ಶೀಘ್ರವೇ ಹಕ್ಕುಪತ್ರ ವಿತರಣೆ ಸಚಿವ ಈಶ್ವರ್‌ ಖಂಡ್ರೆ

ಮೈಸೂರು: ಕಂದಾಯ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಅರಣ್ಯ ಮತ್ತು ಕಂದಾಯ ಭೂಮಿಯ ಜಂಟಿ ಸಮೀಕ್ಷೆ ನಡೆಸುವ ಮೂಲಕ ಕಾನೂನು ವ್ಯಾಪ್ತಿಯಲ್ಲಿ ಹಕ್ಕುಪತ್ರದ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ.   ಶಾಸಕ ಅನಿಲ್ ಚಿಕ್ಕಮಾದು ಪಾಲ್ಗೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು ಜನರ ಅಹವಾಲಿಗೆ ಸ್ಪಂದಿಸಿದರು. ಡಿ.ಬಿ.ಕುಪ್ಪೆ ವ್ಯಾಪ್ತಿಯಲ್ಲಿ 12 ಕುಟುಂಬಗಳು ಅರಣ್ಯ ವಾಸಿಗಳು ಎಂಬ ಬಗ್ಗೆ …

Read More »

ಶಕ್ತಿ ಯೋಜನೆಗೆ ಭಾರಿ ಸ್ಪಂದನೆ ಸ್ಮಾರ್ಟ್ ಕಾರ್ಡ್ ವಿತರಿಸಲು ಕೆಎಸ್​ಆರ್​ಟಿಸಿ ಚಿಂತನೆ

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಭಾರಿ ಸ್ಪಂದನೆ ದೊರೆಯುತ್ತಿದ್ದು, ಈ ನಿಟ್ಟಿನಲ್ಲಿ ನಾಲ್ಕು ನಿಗಮದ ಬಸ್​​ಗಳಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚುತ್ತಿದೆ. ಮಹಿಳೆಯರ ಉಚಿತ ಪ್ರಯಾಣದ ವೇಳೆ ಪ್ರತಿ ಬಾರಿಯ ಕಿರಿಕಿರಿ ತಪ್ಪಿಸುವ ಸಲುವಾಗಿ ಟ್ಯಾಪ್ ಆಯಂಡ್ ಟ್ರಾವೆಲ್ ತಂತ್ರಜ್ಞಾನದ ಸ್ಮಾರ್ಟ್ ಕಾರ್ಡ್ ನೀಡಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಿಂತಿಸಿದೆ. ಸದ್ಯ ಬಸ್​ಗಳಲ್ಲಿ ಮಹಿಳೆಯರು ಆಧಾರ್ ಕಾರ್ಡ್ ಮತ್ತು ಇತರೆ ದಾಖಲೆಗಳನ್ನು ತೋರಿಸಿ ಉಚಿತವಾಗಿ ಸಂಚರಿಸುತ್ತಿದ್ದಾರೆ. ಆದ್ರೆ …

Read More »

ಸಂತೋಷ್ ಲಾಡ್ ಅವರನ್ನು ಸನ್ಮಾನಿಸಿ ಗೌರವಿಸಿದ ಧಾರವಾಡ ಯುವ ಕಾಂಗ್ರೆಸ್ ಕಾರ್ಯಕರ್ತರು

ಧಾರವಾಡ : ಯುವ ಕಾಂಗ್ರೆಸ್ ಕಾರ್ಯಕರ್ತರು ಧಾರವಾಡ ನಗರದಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಶಹರ ಅಧ್ಯಕ್ಷ ವಿನಯ ಬಾಬರ, ಕಾಂಗ್ರೆಸ್ ಕಾರ್ಯಕರ್ತರಾದ ಈಶ್ವರ ಹಂಚಿನಾಳ, ಕೃಷ್ಣಾ, ಶಿವು, ಮೈಲಾರ ಸೇರಿದಂತೆ ಹಲವರು ಇದ್ದರು.

Read More »

ಅಂತರಾಷ್ಟ್ರೀಯ ಐರನ್-ಮ್ಯಾನ್ ಸ್ಪರ್ಧೆಯಲ್ಲಿ ವಿಜೇತರಾದ ಸಿಪಿಐ ಶ್ರೀಶೈಲ ಬ್ಯಾಕೋಡ್ ಅವರಿಗೆ ಸತೀಶ್ ಜಾರಕಿಹೊಳಿ ಅವರು ಸತ್ಕರಿಸಿ ಅಭಿನಂದಿಸಿದರು.

ಗೋಕಾಕ: ಖಜಕಿಸ್ತಾನದಲ್ಲಿ ನಡೆದ ಅಂತರಾಷ್ಟ್ರೀಯ ಐರನ್-ಮ್ಯಾನ್ ಸ್ಪರ್ಧೆಯಲ್ಲಿ ವಿಜೇತರಾದ ಸಿಪಿಐ ಶ್ರೀಶೈಲ ಬ್ಯಾಕೋಡ್ ಅವರಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸತ್ಕರಿಸಿ ಅಭಿನಂದಿಸಿದರು. ಅಂತರಾಷ್ಟ್ರೀಯ ಐರನ್ ಮ್ಯಾನ್ ಸ್ಪರ್ಧೆಯಲ್ಲಿ ಭಾಗವಹಿಸಿ 3.8 ಕಿ.ಮೀ ಈಜು, 180 ಕಿ. ಮೀ ಸೈಕ್ಲಿಂಗ್‍ ಹಾಗೂ 42 ಕೀ.ಮೀ. ಓಟವನ್ನು ​​​ 14 ಗಂಟೆ 30 ನಿಮಿಷದಲ್ಲಿ ಪೂರ್ತಿಗೊಳಿಸಿ ಅಂತರರಾಷ್ಟ್ರೀಯ ಐರನ್ ಮ್ಯಾನ್ ಆಗಿ ಹೊರಹೊಮ್ಮಿದ್ದ ಸಿಪಿಐ ಶ್ರೀಶೈಲ ಬ್ಯಾಕೋಡ ಅವರನ್ನು ಲೋಕೋಪಯೋಗಿ …

Read More »

ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ:

ಬೆಳಗಾವಿಯ ಸೇಂಟ್ ಕ್ಸೇವಿಯರ್ ಶಾಲೆ ಬಳಿಯ ಸೈನಿಕ ಆಸ್ಪತ್ರೆ ಕ್ಯಾಂಪ್ ಕಡೆಗೆ ಹೋಗುವ ರಸ್ತೆ ಕೆಸರಿನಿಂದ ಕೂಡಿದೆ, ಪಾದಚಾರಿಗಳು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡುವಂತೆ ವಹಿಸುವಂತೆ ಸಾಮಾಜಿಕ ಕಾರ್ಯಕರ್ತ ಸಂತೋಷ ದಾರೆಕರ್ ಮನವಿ ಮಾಡಿದ್ದಾರೆ. ಸೇಂಟ್ ಕ್ಸೇವಿಯರ್ ಶಾಲೆ ಬಳಿಯ ಮಿಲಿಟರಿ ಆಸ್ಪತ್ರೆ ಕ್ಯಾಂಪ್ ಕಡೆಗೆ ಹೋಗುವ ರಸ್ತೆಯನ್ನು ಪ್ರಸ್ತುತ ಪೈಪ್ಲೈನ್ ಹಾಕಲು ರಸ್ತೆಯ ಉದ್ದಕ್ಕೂ ಅಗೆಯಲಾಗುತ್ತಿದೆ. ಹಾಗಾಗಿ ಈ ಸ್ಥಳದಲ್ಲಿ ಭಾರೀ ಯಂತ್ರೋಪಕರಣಗಳಿವೆ. ರಸ್ತೆ …

Read More »

ದೂಧ್ ಸಾಗರ ನೋಡಲು ಹೋದ ಪ್ರವಾಸಿಗರಿಗೆ ಬಸ್ಕಿ ಹೊಡೆಸಿದ ಗೋವಾ ಪೊಲೀಸ

ಬೆಳಗಾವಿ: ದೂಧ್ ಸಾಗರ ನೋಡಲು ಹೋದ ಪ್ರವಾಸಿಗರಿಗೆ ಬಸ್ಕಿ ಹೊಡೆಸಿದ ಘಟನೆ ನಡೆದಿದ್ದು ಗೋವಾ ಪೊಲೀಸರ ವರ್ತನೆ ಖಂಡಿಸಿ ರೈಲ್ವೆ ಹಳಿಯ ಮೇಲೆ ಕುಳಿತು ಪ್ರವಾಸಿಗರ ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ- ಗೋವಾ ಗಡಿಭಾಗದಲ್ಲಿರುವ ದೂಧ್ ಸಾಗರ ಜಲಪಾತ ಘಟನೆ ನಡೆದಿದ್ದು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನಲೆಯಲ್ಲಿ ದೂದ್ ಸಾಗರ ನೋಡಲು ಜನಸಾಗರವೇ ಆಗಮಿಸಿದೆ. ಪ್ರವಾಸಿಗರು ಬರುತ್ತಿದ್ದಂತೆ ದೂಧ್ ಸಾಗರ ಪ್ರವೇಶಕ್ಕೆ ನಿಷೇಧವನ್ನು ಗೋವಾದ ಪೊಲೀಸರು ಹೇರಿದ್ದಾರೆ.ದೂದಸಾಗರದಲ್ಲಿ ಆಳವಾದ …

Read More »

ಮಹಾರಾಷ್ಟ್ರ ರಾಜ್ಯ ಸಾಂಗ್ಲಿ ಜಿಲ್ಲೆ ಜತ್ ಪಟ್ಟಣದಲ್ಲಿ ಬೃಹತ್ ಹೋರಾಟ

ಮುಂಗಾರು ಮಳೆ ವಿಫಲ ಹಿನ್ನಲೆ, ಕುಡಿಯೋ ನೀರು ಜಾನುವಾರುಗಳ ಮೇವಿಗಾಗಿ ಪ್ರತಿಭಟನೆ ನಡೆಸಿರುವ ಘಟನೆ ಮಹಾರಾಷ್ಟ್ರ ರಾಜ್ಯ ಸಾಂಗ್ಲಿ ಜಿಲ್ಲೆ ಜತ್ ಪಟ್ಟಣದಲ್ಲಿ ಬೃಹತ್ ಹೋರಾಟ ನಡೆಸಲಾಯಿತು. ಜತ್ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಕ್ರಮ್ ದಾದಾ ಸಾವಂತ್ ನೇತೃತ್ವದಲ್ಲಿ ಹೋರಾಟ ನಡೆಯಿತು. ಮಹಾರಾಷ್ಟ್ರ ಸರ್ಕಾರ ಕುಡಿಯೋ ನೀರು ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು. ಕರ್ನಾಟಕದ ಗಡಿ ಭಾಗದ ಗ್ರಾಮಗಳಿಗೆ ಮಹಾರಾಷ್ಟ್ರ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಎಂದು ಆರೋಪಿಸಿದರು. …

Read More »

ಪ್ರತಿಪಕ್ಷ ನಾಯಕನ ಆಯ್ಕೆ ವಿಚಾರ ಅದು ನಮ್ಮ ಪಕ್ಷಕ್ಕೆ ಬಿಟ್ಟಿದ್ದು: ಬೊಮ್ಮಾಯಿ

ಹಾವೇರಿ: ಬಿಸಿಯೂಟ ಕಾರ್ಯಕರ್ತೆಯರು ಕೈ ಬಳೆ ಹಾಕುವಂತಿಲ್ಲಾ ಎಂಬ ಮಾರ್ಗಸೂಚಿಯನ್ನು ಸರ್ಕಾರ ಹೊರಡಿಸಿದೆ ಎಂಬ ವದಂತಿ ಹಬ್ಬುತ್ತಿದೆ. ಈ ವಿಚಾರ ಕುರಿತಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಜಿಲ್ಲೆಯ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಮಾಡಲು ಬೇರೆ ಕೆಲಸ ಇಲ್ವಾ? ಎಂದು ಪ್ರಶ್ನಿಸಿದ್ದಾರೆ. ನಾನು ಸರ್ಕಾರಕ್ಕೆ ಪ್ರಶ್ನೆ ಕೇಳ್ತಿನಿ, ಈ ಹಿಂದೆ ಎಲ್ಲರೂ ಬಳೆ ಹಾಕಿಕೊಂಡು ಕೆಲಸ ಮಾಡಿದಾರೆ. ಅಂದು ಯಾವ ತೊಂದರೆ ಆಗಿಲ್ಲಾ. ಸರ್ಕಾರಕ್ಕೆ ಮಾಡಲು ಬೇರೆ …

Read More »