Breaking News

ಭಾರತದ ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲಿ ವಿಂಡೀಸ್​ ತಂಡ 6 ವಿಕೆಟ್​ಗಳ ಗೆಲುವು

ಬಾರ್ಬಡೋಸ್​: ತವರಿನಲ್ಲಿ ನಡೆಯುವ ಏಕದಿನ ಕ್ರಿಕೆಟ್ ವಿಶ್ವಕಪ್​ಗೆ ಇನ್ನೂ ಪ್ರಯೋಗ ನಡೆಸುತ್ತಿರುವ ಭಾರತ ತಂಡ, ವೆಸ್ಟ್ ಇಂಡೀಸ್​ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದೆ. ನಾಯಕ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿಗೆ ವಿಶ್ರಾಂತಿ ನೀಡಿದ ಪಂದ್ಯದಲ್ಲಿ ಭಾರತದ ಕಳಪೆ ಬ್ಯಾಟಿಂಗ್​ನಿಂದಾಗಿ ವಿಂಡೀಸ್​ 6 ವಿಕೆಟ್​ಗಳ ಗೆಲುವು ಸಾಧಿಸಿತು. ಈ ಮೂಲಕ ಭಾರತದ ವಿರುದ್ಧ 2019ರ ಬಳಿಕ ಮೊದಲ, ತವರಿನಲ್ಲಿ 6 ವರ್ಷಗಳ ನಂತರ ಪ್ರಥಮ ಗೆಲುವು ದಾಖಲಿಸಿದೆ. ಮೊದಲು …

Read More »

ನ್ನಭಾಗ್ಯದಡಿ ಈವರೆಗೆ 3.29 ಕೋಟಿ ಫಲಾನುಭವಿಗಳಿಗೆ ಹಣ ಜಮೆ:C.M.

ಬೆಂಗಳೂರು : ಕಾಂಗ್ರೆಸ್‌ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊರತೆ ಹಿನ್ನೆಲೆಯಲ್ಲಿ ಫಲಾನುಭವಿಗಳ ಖಾತೆಗೆ ನಗದು ಜಮಾವಣೆ ಪ್ರಕ್ರಿಯೆ ಆರಂಭವಾಗಿ ತಿಂಗಳಾಗುತ್ತಿದೆ. ಇನ್ನೂ ಸುಮಾರು 1 ಕೋಟಿಗೂ ಹೆಚ್ಚು ಫಲಾನುಭವಿಗಳ ಖಾತೆಗೆ ನಗದು ಜಮೆ ಬಾಕಿ ಉಳಿದುಕೊಂಡಿದೆ. ಅನ್ನಭಾಗ್ಯ ಯೋಜನೆಯಡಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ಕೆ.ಜಿ ಅಕ್ಕಿ ವಿತರಿಸಲು ಯೋಜಿಸಿತ್ತು.‌ ರಾಜ್ಯದ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ ಪಡಿತರದಾರರಿಗೆ ಐದು ಕೆ.ಜಿ ಉಚಿತ ಅಕ್ಕಿ ನೀಡಲು ನಿರ್ಧರಿಸಿತ್ತು. ಆದರೆ, …

Read More »

ಅಬ್ಬರದ ಮಳೆಗೆ 130 ಮನೆಗಳಿಗೆ ಹಾನಿ

ಹಾವೇರಿ: ಜಿಲ್ಲೆಯಲ್ಲಿ ಕಳೆದ ಏಳು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಶನಿವಾರ ಮಳೆರಾಯ ಸ್ವಲ್ಪ ಬಿಡುವು ನೀಡಿದ್ದಾನೆ. ಈ ಮಧ್ಯೆ ಕಳೆದು ಏಳು ದಿನಗಳಲ್ಲಿ ಸರಾಸರಿ ವಾಡಿಕೆ ಮಳೆ 33.4 ಮಿಮೀ ಮಳೆಯಾಗಬೇಕಿತ್ತು. ಆದರೆ, ಸುಮಾರು 108 ಮಿಮೀ ಮಳೆಯಾಗಿದೆ. ಒಟ್ಟಾರೆಯಾಗಿ ಮೇ, ಜೂನ್, ಜುಲೈ ತಿಂಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ ಸುಮಾರು 1130 ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ 989 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು 14 ಮನೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಹಾವೇರಿ ನಗರದಲ್ಲಿ ಎರಡು …

Read More »

ಮಗು ನಾಪತ್ತೆ ಪ್ರಕರಣ: ಕಟ್ಟಿದ ಗೋಣಿಚೀಲದಲ್ಲಿ ಶವ ಪತ್ತೆ

ಎರ್ನಾಕುಲಂ: ಆಲುವಾದಲ್ಲಿ ನಾಪತ್ತೆಯಾಗಿದ್ದ ಆರು ವರ್ಷದ ಬಾಲಕಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಲುವಾ ಮಾರುಕಟ್ಟೆ ಬಳಿ ದೊರೆತ ಕಟ್ಟಿದ ಗೋಣಿಚೀಲ ವೊಂದರಲ್ಲಿ ಬಾಲಕಿಯ ಮೃತ ದೇಹ ಪತ್ತೆಯಾಗಿದೆ. ಬಾಲಕಿಯನ್ನು ಅಪಹರಿಸಿದ್ದ ಬಿಹಾರ ಮೂಲದ ಅಸ್ಫಾಕ್ ಆಲಂ ಎಂಬಾತ ಸಿಕ್ಕಿಬಿದ್ದಿದ್ದು, ಬಾಲಕಿಗಾಗಿ ವ್ಯಾಪಕ ಶೋಧ ನಡೆಸಿದಾಗ ಶವ ಪತ್ತೆಯಾಗಿದೆ. 21 ಗಂಟೆ ಶೋಧ ಕಾರ್ಯಾಚರಣೆ: ಮಗುವನ್ನು ಜಾಕೀರ್​ಗೆ ಒಪ್ಪಿಸಿರುವುದಾಗಿ ಆರೋಪಿ ಅಸ್ಫಾಕ್ ಆಲಂ ಬೆಳಗ್ಗೆ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಆಲುವಾ ಮೇಲ್ಸೇತುವೆಯ ಕೆಳಗೆ ನಿನ್ನೆ …

Read More »

ಭಾರತದಲ್ಲಿವೆ 3 ಸಾವಿರಕ್ಕೂ ಹೆಚ್ಚು ಹುಲಿಗಳು.. ಮೊದಲ ಸ್ಥಾನದಲ್ಲಿ ಮಧ್ಯಪ್ರದೇಶ , ಕರ್ನಾಟಕಕ್ಕೆ ಎರಡನೇ ಸ್ಥಾನದ ಪಟ್ಟ!

ನವದೆಹಲಿ: ಕೇಂದ್ರ ಸರ್ಕಾರ ಶನಿವಾರ ಹುಲಿ ಗಣತಿ ಅಂಕಿ – ಅಂಶ ಬಿಡುಗಡೆ ಮಾಡಿದೆ. ಮಧ್ಯಪ್ರದೇಶವು ಹುಲಿ ಸಂಖ್ಯೆಯ ವಿಷಯದಲ್ಲಿ ಸರ್ವೋಚ್ಚ ಆಳ್ವಿಕೆಯನ್ನು ಮುಂದುವರೆಸಿದೆ. 785 ಹುಲಿಗಳೊಂದಿಗೆ ದೇಶದ ಅಗ್ರ ರಾಜ್ಯವಾಗಿ ಮುಂದುವರೆದಿದೆ. ಭಾರತದಲ್ಲಿವೆ 3 ಸಾವಿರಕ್ಕೂ ಹೆಚ್ಚು ಹುಲಿಗಳುಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಹುಲಿ ಗಣತಿ 2022 ರ ರಾಜ್ಯವಾರು ಅಂಕಿ- ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ಅಂಕಿ – ಅಂಶಗಳ ಪ್ರಕಾರ, ಭಾರತದಲ್ಲಿ 3167 ಹುಲಿಗಳಿವೆ. 563 ಹುಲಿಗಳನ್ನು …

Read More »

ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಸಚಿವ ಸತೀಶ್ ಜಾರಕಿಹೊಳಿ: ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳ ಬಗ್ಗೆ ಚರ್ಚೆ

ದೆಹಲಿ: ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಬುಧವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ. ಶಿರಾಡಿಘಾಟ್​ನಲ್ಲಿ ಸುರಂಗ ನಿರ್ಮಾಣ ಸೇರಿದಂತೆ 20 ವಿಷಯಗಳ ಬಗ್ಗೆ ಅವರೊಂದಿಗೆ ಚರ್ಚೆ ಮಾಡಿದ್ದಾರೆ. ನಿತಿನ್ ಗಡ್ಕರಿ ಜೊತೆಗಿನ ಸಭೆ ಬಳಿಕ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಈ ಕುರಿತಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಒಪ್ಪಂದಕ್ಕೆ ಬಂದಿದ್ದೇವೆ ಎಂದು ತಿಳಿಸಿದರು. …

Read More »

ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿರುವ ಟಿಬಿ ಜಯಚಂದ್ರಗೆ ಪ್ರಾಣ ಬೆದರಿಕೆ ಕರೆ

ಬೆಂಗಳೂರು : ಸಿರಾ ಕ್ಷೇತ್ರದಶಾಸಕ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿರುವ ಟಿಬಿ ಜಯಚಂದ್ರಗೆ ಪ್ರಾಣ ಬೆದರಿಕೆ ಕರೆ ಬಂದಿದೆ ಎಂದು ಸಂಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿಂದೆ ಸಚಿವರಾಗಿದ್ದ ಅವಧಿಯಲ್ಲಿ ಟಿಬಿ ಜಯಚಂದ್ರ ನೈಸ್‌ ಸಂಸ್ಥೆಯ ಹಗರಣಗಳಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಿದ್ದರು. ಅಲ್ಲದೇ ಆ ವರದಿಯನ್ವಯ ನೈಸ್‌ ಸಂಸ್ಥೆಯ ಮೇಲೆ ಕ್ರಮ ಜಾರಿಗೊಳಿಸುವಂತೆ ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಆಗ್ರಹಿಸಿದ್ದರು. ಅಂದಿನಿಂದಲೂ ಜಯಚಂದ್ರರಿಗೆ ಸತತವಾಗಿ ಬೇರೆ …

Read More »

ಮೊಹರಂ ನಿಮಿತ್ಯ ಹಾಕಿದ ಕೆಂಡದಲ್ಲಿ‌ ವ್ಯಕ್ತಿಯೊರ್ವಕಂಬಳಿ‌ ಹಾಸಿ‌ ಕುಳಿತ

ವಿಜಯಪುರ…  ವಿಜಯಪುರ ಜಿಲ್ಲೆಯಲ್ಲಿ ಮೊಹರಂ ಸಂಭ್ರಮ ಕಳೆಗಟ್ಟಿದೆ. ಮೊಹರಂ ನಿಮಿತ್ಯ ಹಾಕಿದ ಕೆಂಡದಲ್ಲಿ‌ ವ್ಯಕ್ತಿಯೊರ್ವ ಕಂಬಳಿ‌ ಹಾಸಿ‌ ಕುಳಿತ ಘಟನೆ ವಿಜಯಪುರ ‌ಜಿಲ್ಲೆ‌‌ ಮುದ್ದೇಬಿಹಾಳ ತಾಲೂಕಿನ ಅಮರಗೋಳ‌‌ ಗ್ರಾಮದಲ್ಲಿ ನಡೆದಿದೆ. ಇಂದು‌ ನಸುಕಿನ ಜನ ಜಾವ ಗ್ರಾಮದ ಅಲಾಯಿ‌‌ ದೇವರ ಎದುರುಗೆ ಹಾಕಿದ‌‌‌ ನಿಗಿ‌ನಿಗಿ‌ ಕೆಂಡದ ಮೇಲೆ ಯಲ್ಲಾಲಿಂಗ ಹಿರೇಹಾಳ ಎನ್ನುವವರು ನೀಗಿ ನೀಗಿ ಕೆಂಡದ ಮೇಲೆ ಕೆಲ ಕ್ಷಣ ಕಂಬಳಿ ಹಾಸಿ ಭಕ್ತಿ ಸಮರ್ಪನೆ ಮಾಡಿದರು. ಬಳಿಕ ಬರಿಗೈಯ್ಯಲ್ಲಿ …

Read More »

ಅವರಖೋಡ ಗ್ರಾಮದ ಗ್ರಾಮ‌ ಒನ್ ಕೇಂದ್ರವನ್ನು ಅಧಿಕಾರಿಗಳು ಸೀಜ್ ಮಾಡಿದ್ದು, ಸಂಬಂಧಿಸಿದ ವ್ಯಕ್ತಿಯ ವಿರುದ್ಧ ದೂರು ಕೂಡ ದಾಖಲಿಸಲಾಗಿದೆ

ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ನೋಂದಣಿಗೆ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದ ಅಥಣಿ ತಾಲ್ಲೂಕಿನ ಅವರಖೋಡ ಗ್ರಾಮದ ಗ್ರಾಮ‌ ಒನ್ ಕೇಂದ್ರವನ್ನು ಅಧಿಕಾರಿಗಳು ಸೀಜ್ ಮಾಡಿದ್ದು, ಸಂಬಂಧಿಸಿದ ವ್ಯಕ್ತಿಯ ವಿರುದ್ಧ ದೂರು ಕೂಡ ದಾಖಲಿಸಲಾಗಿದೆ

Read More »

ಅಂತರ್ಜಲ ಮರುಪೂರಣ ಆಗಬೇಕಾದ್ರೆ ಅದಕ್ಕೆ ಕೆರೆಗಳು ಬೇಕೇ ಬೇಕು

ಧಾರವಾಡ: ಅಂತರ್ಜಲ ಮರುಪೂರಣ ಆಗಬೇಕಾದ್ರೆ ಅದಕ್ಕೆ ಕೆರೆಗಳು ಬೇಕೇ ಬೇಕು. ಪ್ರತಿ ಮಳೆಗಾಲ ಬಂದಾಗ ಕೆರೆಗಳು ತನ್ನೆಲ್ಲ ಜಾಗ ಆಕ್ರಮಿಸಿ ಮೈತುಂಬ ತುಂಬಿಕೊಳ್ಳಬೇಕು. ಅಷ್ಟೇ ತುಂಬಿ ತುಳುಕಿ ಕೋಡಿ ಹರಿಯಬೇಕು. ಹೀಗೆ ಮೈದುಂಬಿ ಕೋಡಿ ಹರಿಯುತ್ತಿರೋ ಈ ಕೆರೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಅಂಚಿನಲ್ಲಿದೆ. ಸುತ್ತಲೂ ಹಸಿರ ಸಿರಿಯ ಗುಡ್ಡದ ನಡುವೆ ವಿಶಾಲವಾದ ಕೆರೆ. ಈ ಕೆರೆಯ ಎರಡು ಕಡೆಯಲ್ಲಿ ಕೋಡಿ ಹರಿಯುತ್ತೆ. ಪ್ರತಿ ಸಲ ಮಳೆಗಾಲ ಬಂದಾಗ …

Read More »