Breaking News

ಅಕ್ಕಳಿಗೆ ಕಿರುಕುಳ ನೀಡುತ್ತಿರುವುದನ್ನು ಪ್ರಶ್ನಿಸಿದ ಸಹೋದರನನ್ನು ಸುಟ್ಟು ಹಾಕಿದ ಹಂತಕರು!

ಬಾಪಟ್ಲಾ, ಆಂಧ್ರಪ್ರದೇಶ: 10ನೇ ತರಗತಿ ಓದುತ್ತಿದ್ದ ಬಾಲಕನೊಬ್ಬನ ಮೇಲೆ ಯುವಕನೊಬ್ಬ ಪೆಟ್ರೋಲ್ ಸುರಿದು ಸಜೀವ ದಹನ ಮಾಡಿರುವ ಘಟನೆ ಬಾಪಟ್ಲಾ ಜಿಲ್ಲೆಯ ಚೆರುಕುಪಲ್ಲಿ ತಾಲೂಕಿನ ರಾಜೋಲು ಎಂಬಲ್ಲಿ ಶುಕ್ರವಾರ ಬೆಳಗ್ಗೆ ನಡೆದಿತ್ತು. ಈ ಘಟನೆ ಕುರಿತು ಕೆಲವೊಂದು ವಿಷಯಗಳನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಚೆರುಕುಪಲ್ಲಿ ತಾಲೂಕಿನ ಉಪ್ಪಳ ಅಮರನಾಥ್ (14) ಅವರ ತಂದೆ ಬಾಲ್ಯದಲ್ಲಿಯೇ ತೀರಿಕೊಂಡಿದ್ದು, ತಾಯಿ, ಸಹೋದರಿ, ತಾತನೊಂದಿಗೆ ವಾಸವಾಗಿದ್ದಾರೆ. ರಾಜೋಲು ಪಂಚಾಯಿತಿ ರೆಡ್ಲಪಾಲೇನಿ ನಿವಾಸಿ ಪಾಮು ವೆಂಕಟೇಶ್ವರ ರೆಡ್ಡಿ ಅಮರನಾಥ್​ …

Read More »

ಮಕ್ಕಳ ಅನುಕೂಲಕ್ಕೆ ಪಠ್ಯ ಬದಲಾಯಿಸಿದರೆ ತಪ್ಪೇನು? ಗೀತಾ ಶಿವರಾಜ್​ಕುಮಾರ್

ಮೈಸೂರು: ರಾಜ್ಯ ಸರ್ಕಾರವು ಪಠ್ಯ ಪರಿಷ್ಕರಣೆಗೆ ಮುಂದಾಗಿದ್ದು, ಮಕ್ಕಳ ಅನುಕೂಲಕ್ಕೆ ತಕ್ಕಂತೆ ಪಠ್ಯ ಬದಲಾಯಿಸಿದರೆ ಅದರಲ್ಲಿ ತಪ್ಪೇನು? ಎಂದು ಕಾಂಗ್ರೆಸ್​ ನಾಯಕಿ ಗೀತಾ ಶಿವರಾಜ್​ಕುಮಾರ್​​ ಹೇಳಿದರು. ಈ ಮೂಲಕ ಸರ್ಕಾರದ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡರು. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕದಲ್ಲಿ ಒಳ್ಳೆಯ ವಿಚಾರಗಳು ಮಾತ್ರ ಇರಬೇಕು. ಈ ಕಾರಣಕ್ಕಾಗಿ ಪಠ್ಯಪುಸ್ತಕ ಬದಲಾವಣೆ ಆದರೆ ಒಳ್ಳೆಯದು ಎಂದರು. ಒಂದೊಂದು ಸರ್ಕಾರ ಒಂದೊಂದು ರೀತಿಯಲ್ಲಿ ಪಠ್ಯ ಬದಲಾವಣೆ ಮಾಡುವ ಕ್ರಮದಿಂದ ಮಕ್ಕಳಲ್ಲಿ ಗೊಂದಲ …

Read More »

ಕಾರು – ಕಂಟೇನರ್ ಮಧ್ಯೆ ಭೀಕರ ಅಪಘಾತ: ಇಬ್ಬರು ಸೇವಕರು ಸಾವು, ಕಾಡಸಿದ್ದೇಶ್ವರ ಸ್ವಾಮೀಜಿಗೆ ಗಾಯ

ಬೆಳಗಾವಿ: ಕಾರು, ಕಂಟೇನರ್‌ಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಸ್ವಾಮೀಜಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.   ಬೆಳಗಾವಿ ತಾಲೂಕಿನ ಶಿವಾಪುರ ಗ್ರಾಮದ ಮುಪ್ಪಿನ ಕಾಡಸಿದ್ದೇಶ್ವರ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ವಾಮೀಜಿ ಸೇವಕರಾದ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ದೇವಲವಾಡಿ ಗ್ರಾಮದ ನಿವಾಸಿ ಪಾಂಡುರಂಗ ಜಾಧವ್ …

Read More »

*ಶ್ರೀ ಜಡಿಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ*

ಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಶ್ರೀ ಜಡಿಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ …

Read More »

ಮಹಾರಾಷ್ಟ್ರದ ಶಾಲೆಯ ದಾಖಲೆ ಮರಾಠಿಯಲ್ಲಿದ್ದರೂ ಕನ್ನಡದಲ್ಲಿಯೇ ವಿವರಗಳನ್ನು ತುಂಬಿದ್ದಲ್ಲದೇ ” ಕರ್ನಾಟಕ ರಾಜ್ಯ”ಎಂದೂ ಬರೆದ ಮನದಾಳದ ಇಚ್ಛೆಯನ್ನು ಪ್ರಕಟಿಸಿದ ಗುಗವಾಡ ಶಾಲಾ ಮುಖ್ಯಾಧ್ಯಾಪಕರು!

ಮಹಾರಾಷ್ಟ್ರದ ಶಾಲೆಯ ದಾಖಲೆ ಮರಾಠಿಯಲ್ಲಿದ್ದರೂ ಕನ್ನಡದಲ್ಲಿಯೇ ವಿವರಗಳನ್ನು ತುಂಬಿದ್ದಲ್ಲದೇ ” ಕರ್ನಾಟಕ ರಾಜ್ಯ”ಎಂದೂ ಬರೆದ ಮನದಾಳದ ಇಚ್ಛೆಯನ್ನು ಪ್ರಕಟಿಸಿದ ಗುಗವಾಡ ಶಾಲಾ ಮುಖ್ಯಾಧ್ಯಾಪಕರು! ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಗುಗವಾಡ ಗ್ರಾಮದ ಈ ಶಾಲೆಯ ಮುಖ್ಯಾಧ್ಯಾಪಕರು ನೀಡಿದ ಟಿಸಿ( ವರ್ಗಾವಣೆ ಪ್ರಮಾಣಪತ್ರ)ಈಗ ವೈರಲ್ ಆಗಿದೆ. ಅಚ್ಚ ಕನ್ನಡ ಪ್ರದೇಶಗಳಾದ ಜತ್ತ ತಾಲೂಕಿನ 44 ಹಳ್ಳಿಗಳ ಪೈಕಿ ಗುಗವಾಡ ಗ್ರಾಮವೂ ಒಂದಾಗಿದೆ.ಇಲ್ಲಿಯ ಶಾಲೆಯ ಮುಖ್ಯಾಧ್ಯಾಪಕರು ರಾಹುಲ್ ಚೌಗುಲೆ ಎಂಬವರಿಗೆ ನೀಡಿದ …

Read More »

ಮಂಡ್ಯ ರೈತರಿಗೆ ಸಿಹಿ ಸುದ್ದಿ! ಮೈಶುಗರ್ ಕಾರ್ಖಾನೆ ಮರು ಕಾರ್ಯಾರಂಭ

ಮಂಡ್ಯ : ರಾಜ್ಯದಲ್ಲಿ ಸಕ್ಕರೆನಾಡು ಎಂದರೆ ಮೊದಲು ನೆನಪಾಗುವುದೇ ಮಂಡ್ಯ ಜಿಲ್ಲೆ. ಈ ಭಾಗದ ಜನರು ಉತ್ತಮ ನೀರಾವರಿ ವ್ಯವಸ್ಥೆ ಇರುವುದರಿಂದ ಅತಿ ಹೆಚ್ಚು ಕಬ್ಬು ಬೆಳೆಯುತ್ತಾರೆ. ಹೀಗಾಗಿ ಜಿಲ್ಲೆಯಲ್ಲಿ ಮೈಶುಗರ್​ ಕಾರ್ಖಾನೆ ದೊಡ್ಡ ಮಟ್ಟದಲ್ಲಿ ರೈತರಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸುತ್ತಿತ್ತು. ಕಾರಣಾಂತರಗಳಿಂದ ರಾಜ್ಯ ಸರ್ಕಾರದ ಏಕೈಕ ಸಕ್ಕರೆ ಕಾರ್ಖಾನೆ ಮುಚ್ಚಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದೀಗ ಮುಚ್ಚಿದ ಮೈಶುಗರ್ ಕಾರ್ಖಾನೆ ಬಾಯ್ಲರ್‌ಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಸಾಂಕೇತಿಕವಾಗಿ ಸಕ್ಕರೆ ಸಚಿವ …

Read More »

ರೈಲು ದುರಂತ ಸಂತ್ರಸ್ತರಿಗೆ ₹10 ಕೋಟಿ ಕೊಡುವೆ, ಸ್ವೀಕರಿಸಿ; ಜೈಲಿನಿಂದಲೇ ಸರ್ಕಾರಕ್ಕೆ ಪತ್ರ ಬರೆದ ಸುಕೇಶ್ ಚಂದ್ರಶೇಖರ್‌!

ನವದೆಹಲಿ: ಭಾರತೀಯ ರೈಲ್ವೆ ಇತಿಹಾಸದಲ್ಲೇ ಅತಿದೊಡ್ಡ ಅಪಘಾತಗಳಲ್ಲಿ ಒಂದಾದ ಒಡಿಶಾ ರೈಲು ದುರಂತದ ಸಂತ್ರಸ್ತರಿಗೆ ನೆರವಾಗಲು ಬಹುಕೋಟಿ ರೂಪಾಯಿ ವಂಚಿಸಿದ ಗಂಭೀರ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ ಮುಂದೆ ಬಂದಿದ್ದಾನೆ. ದುರಂತದಲ್ಲಿ ಮೃತಪಟ್ಟವರ ಮಕ್ಕಳು ಭವಿಷ್ಯಕ್ಕಾಗಿ ದೇಣಿಗೆಯಾಗಿ 10 ಕೋಟಿ ರೂಪಾಯಿ ನೀಡಲು ಬಯಸಿದ್ದು, ಸ್ವೀಕರಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಜೈಲಿನಿಂದಲೇ ಶುಕ್ರವಾರ ಪತ್ರ ಬರೆದಿದ್ದಾನೆ. ಜೂನ್​ 2ರಂದು ಒಡಿಶಾದ ಬಾಲಸೋರ್​ ಜಿಲ್ಲೆಯಲ್ಲಿ ಮೂರು ರೈಲುಗಳ ಅಪಘಾತದಲ್ಲಿ …

Read More »

3 ತಿಂಗಳಲ್ಲಿ ಬೆಂಗಳೂರನ್ನು ಟ್ರಾಫಿಕ್‌ ಮುಕ್ತ ಸಿಟಿ ಮಾಡಿ- ಅಧಿಕಾರಿಗಳಿಗೆ ಗೃಹ ಸಚಿವ ಜಿ.ಪರಮೇಶ್ವರ್ ಗಡುವು

ಬೆಂಗಳೂರು : ಬೆಂಗಳೂರು ನಗರ ಸಂಚಾರ ದಟ್ಟಣೆಯಿಂದ ವಿಶ್ವಮಟ್ಟದಲ್ಲಿ‌ ಅಪಖ್ಯಾತಿಗೆ ಒಳಗಾಗಿದೆ. ಹೀಗಾಗಿ ನಗರ ಸಂಚಾರ ದಟ್ಟಣೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಟ್ರಾಫಿಕ್‌ಮುಕ್ತ ನಗರ ಮಾಡಲು ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜಿ.ಪರಮೇಶ್ವರ್, ಎಸಿಪಿ ಮೇಲ್ಮಟ್ಟ ಪೊಲೀಸ್​ ಅಧಿಕಾರಿಗಳೊಂದಿಗೆ ಇಂದು ನಗರ ಪೊಲೀಸ್ ಇಲಾಖೆಯ ಕಾರ್ಯಗಳ ಬಗ್ಗೆ ಸಭೆ …

Read More »

ಸರ್ಕಾರ ಮದ್ಯದ ದರ ಹೆಚ್ಚಳ ಮಾಡಿಲ್ಲ.: ಆರ್.ಬಿ.ತಿಮ್ಮಾಪೂರ್

ಬೆಂಗಳೂರು: ಸರ್ಕಾರ ಮದ್ಯದ ದರ ಹೆಚ್ಚಳ ಮಾಡಿಲ್ಲ. ಯಾವುದೇ ಅಧಿಕೃತ ಆದೇಶವೂ ಆಗಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮದ್ಯದ ದರ ಹೆಚ್ಚಳ ಮಾಡುವ ಬಗ್ಗೆ ಯಾವುದೇ ಪ್ರಸ್ತಾವನೆ ನಮ್ಮ ಮುಂದೆ ಬಂದಿಲ್ಲ. ಮದ್ಯದ ದರ ಹೆಚ್ಚಳ ಮಾಡಿದರೆ ಮಾಹಿತಿ ನೀಡುತ್ತೇನೆ ಎಂದರು. ಅಬಕಾರಿ ಇಲಾಖೆಯಿಂದ ಯಾವುದೇ ದರ ಏರಿಕೆ ಮಾಡಿಲ್ಲ. ನನಗೆ ಮಾಹಿತಿಯೂ ಇಲ್ಲ. ದರ ಏರಿಕೆ ಇದುವರೆಗೂ …

Read More »

ಒಣಗುತ್ತಿರುವ ಭತ್ತದ ಸಸಿ: ಸಂಕಷ್ಟದಲ್ಲಿ ಬೆಳಗಾವಿ ಅನ್ನದಾತರು

ಬೆಳಗಾವಿ: ಈ ಬಾರಿ ಮಳೆರಾಯ ಮುನಿಸಿಕೊಂಡಂತೆ ಕಾಣಿಸುತ್ತಿದೆ. ಜೂನ್‌ ಮೂರನೇ ವಾರ ಬಂದರೂ ಮಳೆಯಾಗದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭತ್ತ ಬೆಳೆದ ರೈತರು ನಷ್ಟದ ಭೀತಿ ಎದುರಿಸುತ್ತಿದ್ದಾರೆ. ಹೌದು. ಬೆಳಗಾವಿ ಸುತ್ತಮುತ್ತಲಿನ ರೈತರು ಅಧಿಕವಾಗಿ ಭತ್ತವನ್ನೆ ಬೆಳೆಯುತ್ತಾರೆ. ಉತ್ತಮ ಮುಂಗಾರು ಮಳೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಇಲ್ಲಿನ ವಡಗಾವಿ, ಅನಗೋಳ ಮತ್ತು ತಾಲೂಕಿನ ಯಳ್ಳೂರು ಸೇರಿ ಸುತ್ತಮುತ್ತಲಿನ ಗ್ರಾಮಗಳ ರೈತರು ಮೇ ತಿಂಗಳ 3 ಮತ್ತು 4ನೇ ವಾರದಲ್ಲೇ ಭತ್ತದ ಒಣ …

Read More »