Breaking News

ಸೂರ್ಯನನ್ನು ಅಧ್ಯಯನ ಮಾಡುವ ಆದಿತ್ಯ ಎಲ್ 1 ಗಗನನೌಕೆಯನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಉಡಾವಣೆ

ತಿರುವನಂತಪುರಂ (ಕೇರಳ) : ಚಂದ್ರಯಾನ-3 ಬಾಹ್ಯಾಕಾಶ ಯೋಜನೆಯ ಲ್ಯಾಂಡರ್ ‘ವಿಕ್ರಮ್’ ಈಗಾಗಲೇ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್​ ಆಗಿದ್ದು, ವೈಜ್ಞಾನಿಕ ಸಂಶೋಧನೆಗಳ ಕೆಲಸ ಪ್ರಾರಂಭಿಸಿದೆ. ಇದರ ಬೆನ್ನಲ್ಲೇ ಇಸ್ರೋ ವಿಜ್ಞಾನಿಗಳು ತಮ್ಮ ಮುಂದಿನ ಗಮನವನ್ನು ಸೂರ್ಯನತ್ತ ಕೇಂದ್ರೀಕರಿಸಿದ್ದು, ದೇಶದ ಮೊದಲ ಸೌರ ಮಿಷನ್ ಆದಿತ್ಯ ಎಲ್ 1 ಉಡಾವಣೆಗೆ ಸಿದ್ಧವಾಗಿದೆ. ಈ ನೌಕೆಯನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಉಡಾವಣೆ ಮಾಡಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) …

Read More »

ಎಸ್‌.ಟಿ.ಸೋಮಶೇಖರ್​ ‘ಘರ್​ ವಾಪಸಿ’ ನಿಶ್ಚಿತ? ಕುತೂಹಲ ಹುಟ್ಟಿಸಿದ ಡಿಕೆಶಿ ಮಾತು!

ಬೆಂಗಳೂರು: ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಹೆಮ್ಮಿಗೆಪುರದಲ್ಲಿ ಶನಿವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಕಾಂಗ್ರೆಸ್​​ಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರಾ? ಎಂಬ ಬಲವಾದ ಅನುಮಾನ ಮೂಡಿಸಿದೆ. ಡಿಸಿಎಂ ಮಾತನಾಡುತ್ತಾ, “ನನ್ನದು ಮತ್ತು ಎಸ್.ಟಿ. ಸೋಮಶೇಖರ್ ಅವರದು 35 ವರ್ಷಗಳ ಸ್ನೇಹ. ಅವರನ್ನು ನೀರು, ಗೊಬ್ಬರ ಹಾಕಿ ರಾಜಕೀಯವಾಗಿ ಬೆಳೆಸಿದ್ದೇವೆ, ಹಣ್ಣು ಬಿಟ್ಟಿದೆ. ಅದನ್ನು ಬೇರೆಯವರು ಕಿತ್ಕೊಂಡು ತಿನ್ನೋದಕ್ಕೆ ಬಿಡಬಾರದು ಅನ್ನೋದು ನನ್ನ ಭಾವನೆ” ಎಂದು …

Read More »

ಇಂದು ನಿಷ್ಠೆ ಎನ್ನುವುದು ಯಾವುದೇ ಪಕ್ಷದಲ್ಲೂ ಉಳಿದಿಲ್ಲ.: H.D.K.

ಹಾಸನ: “ಇಂದು ನಿಷ್ಠೆ ಎನ್ನುವುದು ಯಾವುದೇ ಪಕ್ಷದಲ್ಲೂ ಉಳಿದಿಲ್ಲ. ಕೇವಲ ತಕ್ಷಣಕ್ಕೆ ಸಿಗುವ ಅಧಿಕಾರಕ್ಕೆ ಮರುಳಾಗುತ್ತಾರೆ” ಎಂದು ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. “1999ರಲ್ಲಿ ಆಪರೇಷನ್​ ಹಸ್ತ ಮಾಡಿದ್ದ ಎಸ್​.ಎಂ.ಕೃಷ್ಣ ನಮ್ಮಿಂದ ಐವರನ್ನು, ಬಿಜೆಪಿಯಿಂದ 8-10 ಜನರನ್ನು ಕರೆದುಕೊಂಡು ಹೋಗಿದ್ದರು. ನಂತರ ಅವರ ಸ್ಥಿತಿ ಎಲ್ಲಿಗೆ ಬಂತು?. ಬಿಜೆಪಿಯವರು ಆಪರೇಷನ್ ಕಮಲ ಮಾಡಿ 40 ಸೀಟ್​ಗೆ ತೃಪ್ತಿಪಟ್ಟರು. 2013-2014ರಲ್ಲಿ ಸಿದ್ದರಾಮಯ್ಯ ಆಪರೇಷನ್ ಆಟವಾಡಿ 2018ರಲ್ಲಿ 78ಕ್ಕೆ ಬಂದು ನಿಂತಿದ್ದರು. ಹೀಗಾಗಿ, ಇತ್ತೀಚೆಗೆ ನಿಷ್ಠೆ ಎಂಬುದು …

Read More »

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ಶತ ದಿನಗಳ ಸಂಭ್ರಮ

ಬೆಂಗಳೂರು: ಪ್ರಚಂಡ ಬಹುಮತದೊಂದಿಗೆ ಅಧಿಕಾರ ಹಿಡಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ಶತ ದಿನಗಳ ಸಂಭ್ರಮ. ನೂರು ದಿನಗಳಲ್ಲಿ ಪಂಚ ಗ್ಯಾರಂಟಿಗಳ ಅನುಷ್ಠಾನ ಕೇಂದ್ರೀಕರಿಸಿ ಕಾಂಗ್ರೆಸ್ ಸರ್ಕಾರ ಕರ್ನಾಟಕ ಮಾದರಿ ಅಭಿವೃದ್ಧಿ ಆಡಳಿತ ನೀಡಲು ಕಸರತ್ತು ನಡೆಸುತ್ತಿದೆ.   ಸಿಎಂ ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರ ರಾಜ್ಯದ ಚುಕ್ಕಾಣಿ ಹಿಡಿದು ನೂರು ದಿನಗಳನ್ನು ಪೂರೈಸುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಬಹುಮತ ಗಳಿಸಿ ಕರುನಾಡ ಅಧಿಕಾರ ಹಿಡಿದ ಕಾಂಗ್ರೆಸ್ …

Read More »

ಚಂದ್ರಯಾನ -3 ಯಶಸ್ವಿಯಾದ ಹಿನ್ನಲೆ ಯಾದಗಿರಿಯ ಇಬ್ಬರು ದಂಪತಿಗಳು ತಮ್ಮ ಮಕ್ಕಳಿಗೆ ವಿಕ್ರಮ್ ಮತ್ತು ಪ್ರಜ್ಞಾನ್ ಎಂದು ನಾಮಕರಣ

ಯಾದಗಿರಿ : ಭಾರತದ ಬಹುನಿರೀಕ್ಷಿತ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿದೆ. ವಿಕ್ರಮ್ ಲ್ಯಾಂಡರ್​ ಚಂದ್ರ ಮೇಲ್ಮೈ ಮೇಲೆ ಸಾಫ್ಟ್​ ಲ್ಯಾಂಡಿಂಗ್ ಮಾಡಿದೆ. ವಿಕ್ರಮ್ ಲ್ಯಾಂಡರ್​ ಚಂದ್ರನ ಮೇಲೆ ಇಳಿದ ಕೆಲವೇ ಗಂಟೆಗಳಲ್ಲಿ, ಲ್ಯಾಂಡರ್​ನಿಂದ ಪ್ರಜ್ಞಾನ್​ ರೋವರ್​ ಹೊರಬಂದಿದೆ. ಸದ್ಯ ವಿಕ್ರಮ್​ ಲ್ಯಾಂಡರ್​ ಮತ್ತು ಪ್ರಗ್ಯಾನ್​ ರೋವರ್​ ಚಂದ್ರನ ಅನ್ವೇಷಣೆಯನ್ನು ಪ್ರಾರಂಭಿಸಿದೆ. ಈ ಸಂಬಂಧ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಈ ಐತಿಹಾಸಿಕ ಚಂದ್ರಯಾನದ ಸವಿನೆನಪಿಗಾಗಿ ಇಬ್ಬರು ಪೋಷಕರು ತಮ್ಮ ನವಜಾತ …

Read More »

ಬೆಳಗಾವಿ ಸಸ್ಯ ಸಂತೆ: ಗಮನ ಸೆಳೆದ ದುಬಾರಿ ಮಿಯಾಜಾಕಿ ಮಾವಿನ ಸಸಿ

ಬೆಳಗಾವಿ : ತೋಟಗಾರಿಕೆ ಬೆಳೆ ಬೆಳೆಯುವ ರೈತರು ಹಾಗೂ ಮನೆ ಮುಂದೆ ಮತ್ತು ಟೆರಸ್ ಮೇಲೆ ಕೈತೋಟ ನಿರ್ಮಾಣ ಮಾಡುವ ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಗಾವಿಯಲ್ಲಿ ನಿನ್ನೆಯಿಂದ ಮೂರು ದಿನ ಆಯೋಜಿಸಿರುವ ಸಸ್ಯ ಸಂತೆಗೆ ಚಾಲನೆ ಸಿಕ್ಕಿದ್ದು, ತರಹೇವಾರಿ‌ ಸಸಿಗಳು ಎಲ್ಲರನ್ನೂ ಕೈ ಬೀಸಿ ಕರೆಯುತ್ತಿವೆ. ಹೌದು, ಬೆಳಗಾವಿ ನಗರದ ಕ್ಲಬ್ ರಸ್ತೆಯಲ್ಲಿರುವ ಹ್ಯೂಮ್ ಪಾರ್ಕ್​ನಲ್ಲಿ ತೋಟಗಾರಿಕಾ ಇಲಾಖೆಯಿಂದ ಆಯೋಜಿಸಿರುವ ಸಸ್ಯ ಸಂತೆ, ತೋಟಗಾರಿಕಾ ಅಭಿಯಾನ ಮತ್ತು ತಾಳೆ ಬೆಳೆ ಸಸಿ ವಿತರಣೆ …

Read More »

ದೂದ್​ ಪೇಡಾ ದಿಗಂತ್ ನಟನೆಯ ‘ಪೌಡರ್​’ ಸಿನಿಮಾದ ಮುಹೂರ್ತ ಸಮಾರಂಭ, ಕಿಚ್ಚ ಸುದೀಪ್​ ಸಾಥ್​

ದೂದ್​ ಪೇಡಾ ದಿಗಂತ್ ನಟನೆಯ ‘ಪೌಡರ್​’ ಸಿನಿಮಾದ ಮುಹೂರ್ತ ಸಮಾರಂಭವು ನಿನ್ನೆ ವರಮಹಾಲಕ್ಷ್ಮಿ ಹಬ್ಬದಂದು ನೆರವೇರಿತು. ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥೆಯ ಚಿತ್ರಗಳ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿರುವ ನಟ ದೂದ್​ ಪೇಡಾ ದಿಗಂತ್​. ಫಿಟ್ನೆಸ್​ ಹೀರೋ ಅಂತಲೇ ಕರೆಸಿಕೊಂಡಿರುವ ಈ ಹ್ಯಾಂಡ್ಸಮ್​ ಹಂಕ್​ ಹೊಸ ಸಿನಿಮಾದೊಂದಿಗೆ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಚಿತ್ರಕ್ಕೆ ‘ಪೌಡರ್​’ ಎಂದು ವಿಭಿನ್ನವಾಗಿ ಟೈಟಲ್​ ಇಡಲಾಗಿದೆ. ಈ ಸಿನಿಮಾದ ಮುಹೂರ್ತ ಸಮಾರಂಭವು ನಿನ್ನೆ ವರಮಹಾಲಕ್ಷ್ಮಿ …

Read More »

ಮೋದಿ ಸ್ವಾಗತಕ್ಕೆ ಸಿಎಂ, ಡಿಸಿಎಂ, ರಾಜ್ಯಪಾಲರು ಯಾಕೆ ಬರಲಿಲ್ಲ?: ಕಾರಣ ತಿಳಿಸಿದ ಪ್ರಧಾನಿ

ಬೆಂಗಳೂರು: ರಾಜ್ಯಕ್ಕೆ ಪ್ರಧಾನಿ ಭೇಟಿ ವೇಳೆ ಶಿಷ್ಟಾಚಾರದ ಪ್ರಕಾರ ರಾಜ್ಯದ ಪ್ರಥಮ ಪ್ರಜೆಯಾದ ರಾಜ್ಯಪಾಲರು, ಮುಖ್ಯಮಂತ್ರಿಗಳು ಅಥವಾ ಹಿರಿಯ ಸಚಿವರು ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತ ಮಾಡಬೇಕು. ಆದರೆ, ಇಂದು ಹೆಚ್​ಎಎಲ್ ನಲ್ಲಿ ಅಂತಹ ಸ್ವಾಗತ ಕಾಣಲಿಲ್ಲ. ಕೇವಲ ಅಧಿಕಾರಿಗಳು ಮಾತ್ರ ಹಾಜರಿದ್ದರು. ಈ ಕುರಿತಂತೆ ಸ್ವತಃ ಪ್ರಧಾನಿ ಮೋದಿ ಸ್ಪಷ್ಟನೆ ನೀಡಿದ್ದಾರೆ. ಪ್ರಧಾನಿ ಆಗಮನದ ಸಂದರ್ಭದಲ್ಲಿ ಕಾರ್ಯಕ್ರಮದ ವಿಷಯವಾಗಿ ಎಂದು ಪಿಎಂ ಕಚೇರಿಯಿಂದ ಮಾಹಿತಿ ಬಂದ ಕಾರಣದಿಂದಾಗಿಯೇ ರಾಜ್ಯ ಸರ್ಕಾರ …

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ

  ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಗೋಕಾಕ ತಾಲೂಕಿನ ಉಪ್ಪಾರಹಟ್ಟಿ ಗ್ರಾಮದಲ್ಲಿ ಶ್ರೀ ಹನುಮಂತೆಶ್ವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ …

Read More »

ದೇವಸ್ಥಾನದ ಹುಂಡಿಗೆ 100 ಕೋಟಿ ರೂಪಾಯಿ ಮೊತ್ತದ ಚೆಕ್!ಖಾತೆಯಲ್ಲಿದ್ದಿದ್ದು?

ವಿಶಾಖಪಟ್ಟಣಂ (ಆಂಧ್ರಪ್ರದೇಶ): ವಿಶಾಖಪಟ್ಟಣದ ಸುಪ್ರಸಿದ್ಧ ಸಿಂಹಾಚಲಂನ ವರಮಹಾಲಕ್ಷ್ಮೀ ನರಸಿಂಹ ದೇವಸ್ಥಾನದ ಹುಂಡಿಯಲ್ಲಿ ಭಕ್ತರೊಬ್ಬರು ಹಾಕಿರುವ 100 ಕೋಟಿ ರೂ. ಮೊತ್ತದ ಚೆಕ್ ಸಿಕ್ಕಿದೆ. ತಿಂಗಳಲ್ಲಿ ಎರಡು ಬಾರಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಯುತ್ತದೆ. ನಿನ್ನೆಯೂ (ಗುರುವಾರ) ಹುಂಡಿ ಎಣಿಕೆ ಕಾರ್ಯ ನಡೆದಿದೆ. ಈ ವೇಳೆ ಚೆಕ್ ಸಿಕ್ಕಿದ್ದು ಹುಬ್ಬೇರಿಸಿತ್ತು. ಇಷ್ಟು ದೊಡ್ಡ ಮೊತ್ತದ ಚೆಕ್​ ನೋಡಿ ದೇವಸ್ಥಾನದ ಸಿಬ್ಬಂದಿ ಅರೆಕ್ಷಣ ಹೌಹಾರಿದ್ದಾರೆ. ಚೆಕ್​ ಅನ್ನು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗೆ (ಇಒ) …

Read More »