Breaking News

ತುಂಗಭದ್ರಾ ತೀರದ ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ: ಸಿಬ್ಬಂದಿ ಮೇಲೆಯೇ ಹಲ್ಲೆ – ದೂರು ದಾಖಲು

ರಾಯಚೂರು : ಜಿಲ್ಲೆಯ ಮಾನವಿ ತಾಲೂಕಿನ ಚಿಕಲಪರ್ವಿ ಗ್ರಾಮ ಸೇರಿದಂತೆ ವಿವಿಧೆಡೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಟಿಪ್ಪರ್ ಹಾಗೂ ಜೆಸಿಬಿ ಜಪ್ತಿ ಮಾಡಿಕೊಂಡಿದ್ದಾರೆ. ಈ ವೇಳೆ ಆರು ಜನರ ತಂಡವೊಂದು ರಕ್ಷಣಾ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದು, ಅಧಿಕಾರಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮಾಜಿ ಸೈನಿಕ ಹಾಗೂ ಖನಿಜಾ ರಕ್ಷಣಾ ಪಡೆಯ ಸಿಬ್ಬಂದಿ ನೀಲಪ್ಪ ಹಲ್ಲೆಗೊಳಗಾದವರು. ಕಬ್ಬಿಣದ ರಾಡ್​​ನಿಂದ ಹಲ್ಲೆ ಮಾಡಲಾಗಿದ್ದು, …

Read More »

ಬೆಂಗಳೂರಲ್ಲಿ ಮಹಿಳೆ ಮೇಲೆ ಹಲ್ಲೆ ಆರೋಪ: ಕ್ಯಾಬ್ ಚಾಲಕ ಪೊಲೀಸ್​ ವಶಕ್ಕೆ

ಬೆಂಗಳೂರು: ಮಹಿಳೆಗೆ ನಿಂದಿಸಿ ಹಲ್ಲೆ ಮಾಡಿದ ಆರೋಪದ ಮೇಲೆ ಕ್ಯಾಬ್ ಚಾಲಕನನ್ನು ಬೆಳ್ಳಂದೂರು ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪತ್ನಿಯ ಮೇಲೆ ಹಲ್ಲೆ ಮಾಡಿರುವುದಾಗಿ ಮಹಿಳೆಯ ಪತಿ ನೀಡಿದ ದೂರಿನ ಆಧಾರದ ಮೇಲೆ ಕ್ಯಾಬ್ ಚಾಲಕ ಬಸವರಾಜ್​ ಎಂಬಾತನನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬೆಳ್ಳಂದೂರಿ‌ನ ಬೋಗನಹಳ್ಳಿಯ ಅಪಾರ್ಟ್​​ಮೆಂಟ್​​​ನಲ್ಲಿ ಮಹಿಳೆಯ ಕುಟುಂಬ ವಾಸವಾಗಿದೆ. ಮಗನ ಚಿಕಿತ್ಸೆ ಸಲುವಾಗಿ ಬುಧವಾರ ಬೋಗನಹಳ್ಳಿಯಿಂದ ಮಣಿಪಾಲ್ ಆಸ್ಪತ್ರೆಗೆ ತೆರಳಲು ಮಹಿಳೆಯು ಕ್ಯಾಬ್ ಬುಕ್ …

Read More »

ಮನೆ ಬಾಡಿಗೆ ಹಣ ಕೇಳಿದ್ದಕ್ಕೆ ಮಹಿಳೆಗೆ ಚಾಕು‌ವಿನಿಂದ ಇರಿದ ಬಾಡಿಗೆದಾರ..

ಬೆಂಗಳೂರು: ಬಾಡಿಗೆ ಹಣ ಕೇಳಿದ್ದಕ್ಕೆ ಮಹಿಳೆ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮುನೇಶ್ವರ ನಗರದ ನಿವಾಸಿ ಶ್ರೀದೇವಿ ತೀವ್ರ ಹಲ್ಲೆಗೊಳಗಾಗಿದ್ದು, ಈಕೆ ನೀಡಿದ ದೂರಿನ ಮೇರೆಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನಜೀರ್, ಈತನ ಪುತ್ರ ಸದ್ದಾಂ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ‌. ಮುನೇಶ್ವರ ನಗರದಲ್ಲಿ‌ ಕಳೆದ 16 ವರ್ಷಗಳಿಂದ ಶ್ರೀದೇವಿ ವಾಸವಾಗಿದ್ದಳು.‌ ಈಕೆ ಉಳಿದುಕೊಂಡಿದ್ದ ಕಟ್ಟಡದಲ್ಲಿ ನಜೀರ್ ವಾಸವಾಗಿದ್ದ. …

Read More »

ಹೊಸಪೇಟೆ ಎಸ್ಟಿ ಕಾಲೇಜು ಹಾಸ್ಟೆಲ್​ನಲ್ಲಿ ಚಿಕನ್​ ಊಟ ಮಾಡಿದ್ದ ವಿದ್ಯಾರ್ಥಿನಿಯರು ಅಸ್ವಸ್ಥ

ವಿಜಯನಗರ: ಹೊಸಪೇಟೆ ಎಸ್ಟಿ ಕಾಲೇಜು ಹಾಸ್ಟೆಲ್​ನಲ್ಲಿ ನಿನ್ನೆ ರಾತ್ರಿ ಚಿಕನ್​ ಊಟ ಮಾಡಿದ್ದ ವಿದ್ಯಾರ್ಥಿನಿಯರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಘಟನೆ ಕುರಿತು ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್ ಮಾಹಿತಿ ನೀಡಿದ್ದಾರೆ. “ಜಂಬುನಾಥ ರಸ್ತೆಯಲ್ಲಿರೋ ಬಾಲಕಿಯರ ಮೆಟ್ರಿಕ್ ಎಸ್ಟಿ ಹಾಸ್ಟೆಲ್​ನಲ್ಲಿ ಒಟ್ಟು 148 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ 17 ಸಸ್ಯಹಾರಿ ಮಕ್ಕಳಿದ್ದು, ಇವರನ್ನು ಬಿಟ್ಟು ಉಳಿದ ಮಕ್ಕಳೆಲ್ಲಾ ನಿನ್ನೆ ರಾತ್ರಿ 7.30 ರಿಂದ 8 ಗಂಟೆ ಒಳ ಸಮಯದಲ್ಲಿ ಚಿಕನ್ ಊಟ …

Read More »

ಗುತ್ತಿಗೆದಾರರನ್ನು ಮಾಧ್ಯಮದವರೆದುರು ಯಾರು ಕಳಿಸುತ್ತಿದ್ದಾರೆ ಅಂತ ಗೊತ್ತಿದೆ : ಡಿಕೆಶಿ

ಬೆಂಗಳೂರು: ಗುತ್ತಿಗೆದಾರರನ್ನು ಮಾಧ್ಯಮದವರ ಮುಂದೆ ಯಾರು ಕಳಿಸುತ್ತಿದ್ದಾರೆ ಅಂತ ಗೊತ್ತಿದೆ. ನನಗೆ ಎಲ್ಲವೂ ಗೊತ್ತಿದೆ ಎಂದು ಡಿಸಿಎಂ ಡಿ‌.ಕೆ. ಶಿವಕುಮಾರ್ ಟೀಕಿಸಿದ್ದಾರೆ. ಇಂದು ಸದಾಶಿವನಗರದಲ್ಲಿರುವ ನಿವಾಸದ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಗುತ್ತಿಗೆದಾರರು ವಿರೋಧ ಪಕ್ಷದ ನಾಯಕರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದರು. ಕಾನೂನು ಪ್ರಕಾರ ತನಿಖೆ ಮಾಡಬೇಕು ಅಂತ ಹೇಳಿದ್ದೇವೆ. ಕೆಂಪಣ್ಣ ದೂರು ಕೊಟ್ಟಿದ್ದಾರೆ, ಅವರಿಗೆ ನ್ಯಾಯ ಒದಗಿಸಬೇಕು. ಕೆಲಸಕ್ಕೆ ನ್ಯಾಯ ಒದಗಿಸಬೇಕು, ಜನರಿಗೂ ನ್ಯಾಯ ಸಿಗಬೇಕು ಎಂದು …

Read More »

ಸ್ಮಾರ್ಟ್ ಸಿಟಿ‌ ಮೊದಲ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆ ಸ್ಥಾನ ಪಡೆದಿದ್ದರೂ ಸಹ ಯಾವುದೇ ಬೆಳವಣಿಗೆ ಆಗಿಲ್ಲ,

ಬೆಳಗಾವಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ಮಾರ್ಟ್ ಸಿಟಿ‌ ಮೊದಲ ಪಟ್ಟಿಯಲ್ಲೇ ಬೆಳಗಾವಿ ಜಿಲ್ಲೆ ಸ್ಥಾನ ಪಡೆದಿದ್ದರಿಂದ ಕುಂದಾನಗರಿ ಜನ ಸಂಭ್ರಮಿಸಿದ್ದರು. ಆದರೆ ಸ್ಮಾರ್ಟ್ ಸಿಟಿ ಯೋಜನೆಯಿಂದ ಯಾವುದೇ ಉಪಯೋಗ ಆಗಿಲ್ಲವೆಂದು ಜನ ಆರೋಪಿಸುತ್ತಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆ ಅಂದಾಕ್ಷಣ ಬೆಳಗಾವಿ ಜನ ನಮ್ಮ ಕುಂದಾನಗರಿ ಸ್ಮಾರ್ಟ್ ಸಿಟಿ ಆಗುತ್ತದೆ, ನಮಗೆಲ್ಲಾ ಒಳ್ಳೆಯ ಸೌಲಭ್ಯಗಳು ಸಿಗುತ್ತವೆ ಅಂದುಕೊಂಡಿದ್ದರು. ಆದರೆ ತಮ್ಮ ನಂಬಿಕೆಗಳು ಮಾತ್ರ ಹುಸಿಯಾಗಿವೆ. ನಗರದ ಧರ್ಮವೀರ ಸಂಭಾಜಿ ವೃತ್ತದಲ್ಲಿ …

Read More »

ಎಲ್ಲ ಗ್ರಾಮಗಳಿಗೆ ಸ್ಮಶಾನ ಭೂಮಿ ಮತ್ತು ಒತ್ತುವರಿಯಾದ ಸರ್ಕಾರ ಭೂಮಿಯನ್ನು ತೆರವುಗೊಳಿಸಿರುವ ಬಗ್ಗೆ ವಿವರಣೆ ನೀಡಲು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಬೆಂಗಳೂರು : ರಾಜ್ಯದಲ್ಲಿ ಜನವಸತಿ ಇರುವ ಎಲ್ಲ ಗ್ರಾಮಗಳಿಗೆ ಗೌರವಯುತ ಮತ್ತು ಸಾಂಪ್ರದಾಯಿಕವಾಗಿ ಶವ ಸಂಸ್ಕಾರ ಮಾಡಲು ಸ್ಮಶಾನ ಭೂಮಿ ಒದಗಿಸಲು ಹಾಗೂ ಒತ್ತುವರಿಯಾದ ಸರ್ಕಾರಿ ಜಮೀನುಗಳನ್ನು ತೆರವುಗೊಳಿಸಲು ಕೈಗೊಂಡಿರುವ ಕ್ರಮಗಳ ವಿರುದ್ಧ ಅರ್ಜಿದಾರರು ಎತ್ತಿರುವ ಆಕ್ಷೇಪಗಳಿಗೆ ಎರಡು ವಾರಗಳಲ್ಲಿ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.   ರಾಜ್ಯದಲ್ಲಿ ಸ್ಮಶಾನವಿಲ್ಲದ ಗ್ರಾಮ ಮತ್ತು ಪಟ್ಟಣಗಳಿಗೆ ಅಗತ್ಯ ಜಮೀನು ಒದಗಿಸಲು ಹೈಕೋರ್ಟ್ ಹೊರಡಿಸಿರುವ ಆದೇಶವನ್ನು ಸರ್ಕಾರ ಪಾಲಿಸಿಲ್ಲ ಎಂದು …

Read More »

ರಾಜ್ಯದಲ್ಲಿ ನಮ್ಮ ಕ್ಲಿನಿಕ್​ಗಳನ್ನು ಇನ್ನಷ್ಟು ಜನಸ್ನೇಹಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ

ಬೆಂಗಳೂರು: ಜನಸಾಮಾನ್ಯರಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಪ್ರಾರಂಭಿಸಲಾಗಿರುವ ನಮ್ಮ ಕ್ಲಿನಿಕ್​​ಗಳಿಗೆ ಆರೋಗ್ಯ ಸಚಿವರು ಜನಸ್ನೇಹಿ ಸ್ಪರ್ಶ ನೀಡಿದ್ದು, ಕ್ಲಿನಿಕ್​​ಗಳ ಸಮಯ ಬದಲಾವಣೆ ಮಾಡಿ ಸಂಜೆ ವೇಳೆಯೂ ಚಿಕಿತ್ಸೆ ಲಭಿಸುವಂತೆ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇರುವ ಕ್ಲಿನಿಕ್​​ಗಳ ಪೈಕಿ ಶೇಕಡಾ 25ರಷ್ಟು ನಮ್ಮ ಕ್ಲಿನಿಕ್​ಗಳ ಸಮಯ ಬದಲಾವಣೆ ಮಾಡಲು ಆರೋಗ್ಯ ಸಚಿವರು ಆದೇಶಿಸಿದ್ದಾರೆ. ಸಂಜೆ 4.30ಕ್ಕೆ ಬಾಗಿಲು ಮುಚ್ಚುತ್ತಿದ್ದ ನಮ್ಮ ಕ್ಲಿನಿಕ್​ಗಳು ಇನ್ನು ಮುಂದೆ ರಾತ್ರಿ 8 ಗಂಟೆಯ ತನಕ …

Read More »

ಹುಬ್ಬಳ್ಳಿ – ಧಾರವಾಡ ಮೊಟ್ಟ ಮೊದಲ ಮಹಿಳಾ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ

ಹುಬ್ಬಳ್ಳಿ/ಬೆಂಗಳೂರು: ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮುಂದುವರೆಸಿದೆ. ಹುಬ್ಬಳ್ಳಿ ಧಾರವಾಡ ನೂತ‌ನ ಪೊಲೀಸ್ ಆಯುಕ್ತರನ್ನಾಗಿ ಮಹಿಳಾ ಐಪಿಎಸ್ ಅಧಿಕಾರಿ ರೇಣುಕಾ ಸುಕುಮಾರ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮಿಷನರೇಟ್​ನ ಮೊಟ್ಟ ಮೊದಲ ಮಹಿಳಾ ಕಮಿಷನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಭಾರಿ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂತೋಷ ಬಾಬು ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ರೇಣುಕಾ ಸುಕುಮಾರ ಅವರು 2011ರ ಐಪಿಎಸ್ …

Read More »

ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ವಾರಾಹಿ ಯಾತ್ರೆಯ ಮೂರನೇ ಹಂತ ಇಂದಿನಿಂದ ವಿಶಾಖಪಟ್ಟಣದಲ್ಲಿ ಆರಂಭವಾಗಲಿದೆ.

  ವಿಶಾಖಪಟ್ಟಣಂ, ಆಂಧ್ರಪ್ರದೇಶ: ನಟ ರಾಜಕಾರಣಿ ಪವನ್​ ಕಲ್ಯಾಣ್​ ಅವರಿಂದ ನಡೆಯುತ್ತಿರುವ ವಾರಾಹಿ ಯಾತ್ರೆ ಮುಂದುವರಿಯಲಿದೆ.ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ಮೂರನೇ ಹಂತದ ವಾರಾಹಿ ಯಾತ್ರೆಗೆ ಇಂದಿನಿಂದ ಚಾಲನೆ ದೊರೆಯಲಿದೆ. ವಿಶಾಖಪಟ್ಟಣದಲ್ಲಿ ಆರಂಭವಾಗಲಿರುವ ಈ ಯಾತ್ರೆ ಇದೇ ತಿಂಗಳ 19ರವರೆಗೆ ಮುಂದುವರಿಯಲಿದೆ. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನದಂದು ತಮ್ಮ ಈ ವಾರಾಹಿ ಯಾತ್ರೆಯನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಇಂದು ಮಧ್ಯಾಹ್ನ ಪವನ್ ಕಲ್ಯಾಣ್ ನಗರವನ್ನು ತಲುಪಲಿದ್ದು, …

Read More »