ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ ದೇಶದ ಜಿಡಿಪಿಗೆ ಹೆಚ್ಚುವರಿಯಾಗಿ ಸುಮಾರು 18,000-22,000 ಕೋಟಿ ರೂ.ಗಳ ಕೊಡುಗೆ ನೀಡಲಿದೆ ಮತ್ತು ಪಂದ್ಯಾವಳಿಯು ದೇಶದ ಜಿಡಿಪಿಗೆ ಸುಮಾರು 7,000-8,000 ಕೋಟಿ ರೂ. ಗಳಷ್ಟು ಮೌಲ್ಯವರ್ಧನೆ ಮಾಡಲಿದೆ ಎಂದು ಬ್ಯಾಂಕ್ ಆಫ್ ಬರೋಡಾದ ಇಬ್ಬರು ಅರ್ಥಶಾಸ್ತ್ರಜ್ಞರ ವರದಿ ತಿಳಿಸಿದೆ. ವಿಶ್ವಕಪ್ನಿಂದ ಹಣದುಬ್ಬರದ ಮೇಲಾಗುವ ಪರಿಣಾಮ ತೀರಾ ಅತ್ಯಲ್ಪ ಎಂದು ವರದಿ ತಿಳಿಸಿದೆ. ಜಿಡಿಪಿಯ ಮೇಲಾಗುವ ಪರಿಣಾಮದ ದೃಷ್ಟಿಯಿಂದ ನೋಡಿದರೆ ವಿಶ್ವಕಪ್ನಿಂದ ಅಂದಾಜು 18,000-22,000 ಕೋಟಿ …
Read More »ಕೆ.ಭಕ್ತವತ್ಸಲ ಆಯೋಗದ ಮೂರು ಶಿಫಾರಸಿಗೆ ಸಂಪುಟ ಸಭೆ ಅಸ್ತು: ಸಚಿವ ಹೆಚ್.ಕೆ.ಪಾಟೀಲ್
ಬೆಂಗಳೂರು : ಹಿಂದುಳಿದ ವರ್ಗಗಳಿಗೆ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ಜಸ್ಟೀಸ್ ಡಾ.ಕೆ.ಭಕ್ತವತ್ಸಲ ಆಯೋಗವನ್ನು ರಚಿಸಲಾಗಿತ್ತು. ಈ ಆಯೋಗ ಸಲ್ಲಿಸಿರುವ ವರದಿಯಲ್ಲಿನ ಐದು ಶಿಫಾರಸುಗಳ ಪೈಕಿ ಮೂರು ಶಿಫಾರಸುಗಳನ್ನು ಸಚಿವ ಸಂಪುಟ ಸಭೆ ಅಂಗೀಕಾರ ಮಾಡಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡುತ್ತಾ, ಮುಂಬರುವ ಸ್ಥಳೀಯ ನಗರ ಮತ್ತು ಗ್ರಾಮೀಣ ಸಂಸ್ಥೆಗಳಲ್ಲಿ …
Read More »ಕನಸು ನನಸಾಯಿತು’: ವಿರಾಟ್ ಕೊಹ್ಲಿ ಭೇಟಿ ಮಾಡಿದ ವಿಶೇಷಚೇತನ ಅಭಿಮಾನಿಯ ಹರ್ಷೋದ್ಘಾರ
ಚೆನ್ನೈ: ಪ್ರಸ್ತುತ ಕ್ರಿಕೆಟ್ ಕಿಂಗ್ ಎಂದೇ ಖ್ಯಾತಿಯಾಗಿರುವ ವಿರಾಟ್ ಕೊಹ್ಲಿಗೆ ಅಪರಿಮಿತ ಅಭಿಮಾನಿ ಬಳಗವಿದೆ. ಚೇಸ್ ಮಾಸ್ಟರ್ ಅಂದ್ರೆ ಹಿರಿ- ಕಿರಿಯರೆಲ್ಲರಿಗೂ ಇಷ್ಟವೇ. ತಮಿಳುನಾಡಿನ ವಿಶೇಷಚೇತನ ಅಭಿಮಾನಿಯೊಬ್ಬ ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿದ್ದು, ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ಇಂದು (ಅಕ್ಟೋಬರ್ 5) ಭೇಟಿಯಾಗಿ, ‘ಕನಸು ನನಸಾಯಿತು’ ಎಂದು ಉದ್ಗರಿಸಿದ್ದಾರೆ. ಚೆನ್ನೈನ ವೆಲಚೇರಿ ಮೂಲದ 19 ವರ್ಷದ ಶ್ರೀನಿವಾಸ್ ವಿಶೇಷಚೇತನರಾಗಿದ್ದಾರೆ. ಕಾಲಿನ ಊನತೆ ಹೊಂದಿರುವ ಶ್ರೀನಿವಾಸ್ಗೆ ಚಿತ್ರಕಲೆ ಒಲಿದಿದೆ. ಚೆಪಾಕ್ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ …
Read More »ಬೆಂಗಳೂರಿನಲ್ಲಿ ತಂಗುದಾಣವೇ ಕಳ್ಳತನ
ಬೆಂಗಳೂರು: ಪೊಲೀಸ್ ಕಮೀಷನರ್ ಕಚೇರಿಯ ಅನತಿ ದೂರದಲ್ಲಿರುವ ಬಸ್ ತಂಗುದಾಣವೇ ಕಳ್ಳತನವಾಗಿದೆ, ದಯವಿಟ್ಟು ಪತ್ತೆ ಮಾಡಿ ಎಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರೂಪದಲ್ಲಿ ಅಪರೂಪವೆಂಬಂತೆ ಬಸ್ ಶೆಲ್ಟರ್ನ್ನೇ ಖದೀಮರು ಕಳ್ಳತನ ಮಾಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಂಗುದಾಣ ನಿರ್ಮಾಣ ಮಾಡಿದ್ದ ಖಾಸಗಿ ಸಂಸ್ಥೆಯ ಉಪಾಧ್ಯಕ್ಷ ಎನ್ ರವಿ ರೆಡ್ಡಿ ಎಂಬುವರು ಈ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಿಬಿಎಂಪಿ ಅನುಮತಿ ಪಡೆದು ತಮ್ಮ ಕಂಪನಿಯ ಕನ್ನಿಂಗ್ಹ್ಯಾಮ್ …
Read More »ಕಾನೂನುಬಾಹಿರ ಗಣಿಗಾರಿಕೆಗೆ ಅವಕಾಶವಿಲ್ಲ,: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕಾನೂನುಬಾಹಿರ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ. ಕೆಂಪು ಕಲ್ಲು ಹಾಗೂ ಮಣ್ಣಿನ ವಿಚಾರದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಕೂಡದು ಎಂದು ಮುಖ್ಯಮಂತ್ರಿಗಳು ಸೂಚಿಸಿದರು. ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಮರಳು, ಕೆಂಪುಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿದ ಸಿಎಂ, ರಾಜ್ಯ ಪರಿಸರ ಪ್ರಭಾವ ಮೌಲ್ಯ ಮಾಪನ ಪ್ರಾಧಿಕಾರ ಅನುಮತಿ ನೀಡಿದ ಬಳಿಕವೇ ಮರಳು ಬ್ಲಾಕ್ಗಳಿಗೆ ಅನುಮತಿ ಪತ್ರ ದೊರೆಯುತ್ತದೆ. ತಿಂಗಳಿಗೊಮ್ಮೆ ಪ್ರಾಧಿಕಾರದ ಸಭೆ ನಡೆಯುವುದರಿಂದ ವಿಳಂಬವಾಗುತ್ತಿದೆ. ಈ ಪ್ರಕ್ರಿಯೆಗೆ ವೇಗ ನೀಡಬೇಕೆಂದು ಪ್ರಾಧಿಕಾರದ ಆಯುಕ್ತರಿಗೆ …
Read More »ಪ್ರಯಾಣಿಕರನ್ನು ‘ಪಲ್ಲಕ್ಕಿ’ಯಲ್ಲಿ ಹೊತ್ತು ತಿರುಗಲಿದೆ ಕೆಎಸ್ಆರ್ಟಿಸಿ
ಬೆಂಗಳೂರು: ಪ್ರಯಾಣಿಕರನ್ನು ಅಂಬಾರಿಯಲ್ಲಿ ಹೊತ್ತು ರಾಜ್ಯದ ರಸ್ತೆಗಳಲ್ಲಿ ಸಂಚರಿಸಿದ್ದ ಕೆಎಸ್ಆರ್ಟಿಸಿ ಇದೀಗ ಪಲ್ಲಕ್ಕಿ ಮೂಲಕ ಪ್ರಯಾಣಿಕರನ್ನು ಹೊತ್ತು ಸಂಚರಿಸಲು ಸಿದ್ಧವಾಗಿದೆ. ‘ಸಂತೋಷವು ಪ್ರಯಾಣಿಸುತ್ತಿದೆ’ ಎನ್ನುವ ಟ್ಯಾಗ್ ಲೈನ್ನೊಂದಿಗೆ ಸಾರಿಗೆ ನಿಗಮದ ಪಲ್ಲಕ್ಕಿ ರಸ್ತೆಗಿಳಿಯಲು ಸಜ್ಜಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಸ್ಲೀಪರ್ ಬಸ್ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅದರಲ್ಲೂ ಹವಾನಿಯಂತ್ರಣ ರಹಿತ ಬಸ್ಗಳಿಗೆ ಪ್ರಯಾಣಿಕರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಅಂಬಾರಿ ಹೆಸರಿನಲ್ಲಿ ನಾನ್ ಎಸಿ ಸ್ಲೀಪರ್ ಸೇವೆ ಒದಗಿಸುತ್ತಿದ್ದ ಕೆಸ್ಆರ್ಟಿಸಿ ಇದೀಗ …
Read More »ಖ್ಯಾತ ಟೈಲರ್ ಉದ್ಯಮಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ಮಾಜಿ ಕೆಲಸಗಾರ
ಕಲಬುರಗಿ : ಬಿಸಿಲೂರು ಕಲಬುರಗಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಖ್ಯಾತ ಟೈಲರ್ ಉದ್ಯಮಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಮಕ್ತಂಪುರ ಬಡಾವಣೆಯಲ್ಲಿ ನಡೆದಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸುರೇಶ್ ಹಂಚಿ (44) ಮೃತ ವ್ಯಕ್ತಿ. ಸೂಪರ್ ಮಾರ್ಕೆಟ್ ಪ್ರದೇಶದ ಪುಠಾಣಿ ಗಲ್ಲಿಯಲ್ಲಿ ಬಿಎಸ್ ಟೈಲರ್ ಹೆಸರಿನ ಅಂಗಡಿ ಹೊಂದಿದ್ದಾರೆ. ಟೈಲರಿಂಗ್ ವೃತ್ತಿಯಲ್ಲಿ ಹೆಸರು ಮಾಡಿದ್ದ …
Read More »ಖಾನಾಪುರ ತಾಲೂಕಿನ ಗಣೆಬೈಲ್ ಟೋಲ್ ಬಂದ್ ಮಾಡಿ ಪ್ರತಿಭಟಿಸಿದ ರೈತರು
ಬೆಳಗಾವಿ : ರಾಷ್ಟ್ರೀಯ ಹೆದ್ದಾರಿ ರಸ್ತೆ ಪೂರ್ಣಗೊಳ್ಳುವ ಮುನ್ನ ಟೋಲ್ ವಸೂಲಿ ಮಾಡುವುದನ್ನು ವಿರೋಧಿಸಿ ಇಂದು ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿ ತಡೆದ ರೈತರು, ಆಕ್ರೋಶ ವ್ಯಕ್ತಪಡಿಸಿದರು. ಖಾನಾಪುರ ತಾಲೂಕಿನ ಗಣೆಬೈಲ್ ಟೋಲ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಖಾನಾಪುರ ತಾಲೂಕಿನ ರೈತರಿಗೆ ಟೋಲ್ ವಿನಾಯಿತಿ ನೀಡಬೇಕು. ರಸ್ತೆಗಾಗಿ ಜಮೀನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಈವರೆಗೆ ನೂರಾರು ರೈತರಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ. ತಕ್ಷಣ ಎಲ್ಲರಿಗೂ ಪರಿಹಾರ ನೀಡಬೇಕೆಂದು ಆಗ್ರಹಿಸಿ …
Read More »ಬಸ್ತವಾಡ ಗ್ರಾಮ ಪಂಚಾಯತಿಯಿಗೆ ಗಾಂಧಿ ಗ್ರಾಮ ಪುರಸ್ಕಾರ
ಬೆಂಗಳೂರಿನ ಬ್ಯಾಂಕ್ವೇಟ ಹಾಲ್ ನಲ್ಲಿ ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಂದ ಬೆಳಗಾವಿ ತಾಲೂಕಿನ ಬಸ್ತವಾಡ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಧಾನ ಮಾಡಲಾಯಿತು 2022-23 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಬೆಳಗಾವಿ ಜಿಲ್ಲೆ ಬೆಳಗಾವಿ ತಾಲೂಕಿನ ಬಸ್ತವಾಡ ಗ್ರಾಮ ಪಂಚಾಯತಿಯು ಆಯ್ಕೆ ಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಬ್ಯಾಂಕ್ವೇಟ ಹಾಲ್ ನಲ್ಲಿ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು, ಉಪ ಮುಖ್ಯ ಮಂತ್ರಿಗಳಾದ ಡಿ.ಕೆ. ಶಿವಕುಮಾರವರು …
Read More »ಸಾವಯವ ಕೃಷಿ ಯುವ ಸಲಹೆಗಾರನಿಗೆ ₹5 ಲಕ್ಷ ಮೌಲ್ಯದ ಕಾರು ಗಿಫ್ಟ್ ನೀಡಿದ ರೈತ
ಹಾವೇರಿ: ರಟ್ಟಿಹಳ್ಳಿ ತಾಲೂಕಿನ ಚಿಕ್ಕಕಬ್ಬಾರ ಗ್ರಾಮದ ಶೇಖರಗೌಡ ಪಾಟೀಲ್ ಎಂಬ ರೈತರೊಬ್ಬರು, ತಮಗೆ ಸಾವಯುವ ಬೇಸಾಯದ ಬಗ್ಗೆ ಸಲಹೆ ಸಹಕಾರ ನೀಡಿದ ಯುವ ಸಲಹೆಗಾರ ಗಂಗಯ್ಯ ಕುಲಕರ್ಣಿ ಎಂಬುವವರಿಗೆ ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಶೇಖರಗೌಡ ಪಾಟೀಲ್ 20 ವರ್ಷಗಳ ಹಿಂದೆ ಆಧುನಿಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಅಧಿಕ ಕ್ರೀಮಿನಾಶಕ, ಅಧಿಕ ರಸಾಯನಿಕ ಗೊಬ್ಬರ ಕಳೆನಾಶಕ ಸೇರಿದಂತೆ ವಿವಿಧ ರಸಾಯನಿಕಗಳ ಬಳಕೆಯಿಂದ ಜಮೀನು ಫಲವತ್ತತೆ ಕಳೆದುಕೊಳ್ಳಲಾರಂಭಿಸಿತು. …
Read More »
Laxmi News 24×7