Breaking News

ಪಿಡಿಒ ವರ್ಗಾವಣೆ ಕರಡು ಪಟ್ಟಿಗಳು ಮುಖ್ಯಮಂತ್ರಿ ಅವರ ಅನುಮೋದನೆಗೂ ಮುನ್ನವೇ ಸೋರಿಕೆಯಾಗಿವೆ.

ಬೆಂಗಳೂರು: ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಲ್ಲಿಸಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವರ್ಗಾವಣೆ ಕರಡು ಪಟ್ಟಿಗಳು ಮುಖ್ಯಮಂತ್ರಿ ಅವರ ಅನುಮೋದನೆಗೂ ಮುನ್ನವೇ ಸೋರಿಕೆಯಾಗಿವೆ.   ಇಲಾಖೆಯ ಹಿರಿಯ ಅಧಿಕಾರಿಗಳ ಸಾಮಾಜಿಕ ಜಾಲತಾಣಗಳಲ್ಲಿ ಪಿಡಿಒ ವರ್ಗಾವಣೆಯ ಕರಡು ಪಟ್ಟಿಗಳನ್ನು ಹಂಚಿಕೊಳ್ಳಲಾಗಿದೆ. 223 ಪಿಡಿಒಗಳ ವರ್ಗಾವಣೆ ಪ್ರಸ್ತಾವಕ್ಕೆ ಅನುಮೋದನೆ ಕೋರಿ ಸಚಿವರು ಸಲ್ಲಿಸಿದ್ದ ಪಟ್ಟಿ ಆಗಸ್ಟ್ 21 ರಂದು ಸೋರಿಕೆಯಾಗಿತ್ತು. …

Read More »

ಆಟೋದಲ್ಲಿಯೇ ಪ್ರಾಣ ಬಿಟ್ಟ ವ್ಯಕ್ತಿ: ಸಾವಿನ ಸುತ್ತ ಹಲವು ಅನುಮಾನ

ಅನುಮಾನಸ್ಪದ ರೀತಿಯಲ್ಲಿ ಆಟೋದಲ್ಲಿ ವ್ಯಕ್ತಿಯ ಶವವೊಂದು ಪತ್ತೆಯಾಗಿರುವ ಘಟನೆ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಗಾಂಧಿ ಎಂಬುವರು ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಅಲ್ಲದೇ, ಹಳೆಯ ಆಟೋದಲ್ಲಿ ವ್ಯಕ್ತಿಯ ಶವ ಸಿಕ್ಕಿದೆ. ಆದ್ರೇ, ಇದು ಕೊಲೆಯೋ ಅಥವಾ ಸಹಜ ಸಾವೋ ಎನ್ನುವುದು ಪೊಲೀಸ ತನಿಖೆ ಬಳಿಕ ತಿಳಿದು ಬರಬೇಕಿದೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Read More »

ಸುಡಾನ್ ಸಂಘರ್ಷ: 20 ಲಕ್ಷ ಮಕ್ಕಳು ಸ್ಥಳಾಂತರ, ಆಹಾರ ಕ್ಷಾಮ ಹೆಚ್ಚಳ

ಜಿನೀವಾ : ಸುಡಾನ್‌ನಲ್ಲಿ ನಡೆಯುತ್ತಿರುವ ಭೀಕರ ಸಂಘರ್ಷದಿಂದಾಗಿ 20 ಲಕ್ಷಕ್ಕೂ ಅಧಿಕ ಮಕ್ಕಳು ತಮ್ಮ ಮನೆಗಳಿಂದ ಬಲವಂತವಾಗಿ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ. “ಹಿಂಸಾಚಾರದಿಂದ ದೇಶದ ವಿನಾಶ ಮುಂದುವರೆದಿದ್ದು, 1.7 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಸುಡಾನ್ ಗಡಿ ದಾಟಿ ಹೋಗಲು ಕಾಯುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ ಮತ್ತು ಮತ್ತು 470,000 ಕ್ಕೂ ಹೆಚ್ಚು ಮಕ್ಕಳು ಈಗಾಗಲೇ ನೆರೆಯ ದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ ” ಎಂದು ಯುನಿಸೆಫ್​ ಗುರುವಾರ ಪ್ರಕಟಿಸಿದ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. …

Read More »

ಕಲಿಸಿದ ಗುರುವಿಗೆ ಮಕ್ಕಳು ಹಾಗೂ ಶಿಕ್ಷಕರಿಂದ ಗುರುವಂದನಾ ಕಾರ್ಯಕ್ರಮದ ಜೊತೆಗೆ ಬಿಳ್ಕೊಡುವ ಸಮಾರಂಭ

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸವಸುದ್ದಿ ಗ್ರಾಮದ ಬಡಿಗೇರ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವಎಸ್ ಎಸ್ ಹಣಿಗೆರಿ ಶಿಕ್ಷಕಿಯ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು. ೧೫ ವರ್ಷಗಳ ಸೇವೆ ಸಲ್ಲಿಸಿದ ನನಗೆ ಸಮಯ ಹೇಗೆ ಮುಕ್ತಾಯವಾಯಿತು ಗೊತ್ತಿಲ್ಲ ನನ್ನನ ಈ ಶಾಲೆಯ ಪಾಲಕರು ಶಿಕ್ಷಕಿಯನ್ನಾಗಿ ನೋಡದೆ ತಮ್ಮ ಮನೆಯ ಮಗಳಂತೆ ಕಂಡಿದ್ದಾರೆ ಎಂದು ಎಸ್ ಎಸ್ ಹಣಿಕೆರಿ ಶಿಕ್ಷಕಿ ಭಾವುಕರಾಗಿ ಹೇಳಿದರು . …

Read More »

ನರ್ತಕಿ ಚಿತ್ರಮಂದಿರದ ಎದುರು ಪ್ರೇಕ್ಷಕರೊಂದಿಗೆ ಟೋಬಿ ತಂಡದ ಸಂಭ್ರಮ

ಸಿನಿಮಾ ಹೀರೋ ಅಂದ್ರೆ ಆರಡಿ ಹೈಟ್​, ಕಟ್ಟುಮಸ್ತಾದ ಮೈಕಟ್ಟು, ಹಾಡುಗಳಿಗೆ ಮಸ್ತ್‌ ಡ್ಯಾನ್ಸ್‌, ಸಾಹಸ ದೃಶ್ಯಗಳಲ್ಲಿ ಜಬರ್‌ದಸ್ತ್‌ ಫೈಟ್​​, ಖಡಕ್‌ ಡೈಲಾಗ್‌ ಹೊಡೆಯಲೇಬೇಕು… ಹೀಗೆ ನಾನಾ ತೆರನಾದ ಸೂತ್ರಗಳು ಇನ್ನೂ ಸಿನಿಮಾರಂಗದಲ್ಲಿ ಚಾಲ್ತಿಯಲ್ಲಿವೆಯೇನೋ?. ಆದ್ರೆ, ಇವೆಲ್ಲಕ್ಕಿಂತಲೂ ಹೆಚ್ಚಾಗಿ ಒಂದೊಳ್ಳೆ ಕಥೆಯೇ ಹೀರೋ ಎಂದು ಚೊಚ್ಚಲ ಚಿತ್ರದಲ್ಲೇ ಪ್ರೂವ್ ಮಾಡಿದ ನಟ ರಾಜ್ ಬಿ. ಶೆಟ್ಟಿ. ‘ಗರುಡ ಗಮನ ವೃಷಭವಾಹನ’ ಚಿತ್ರದ ಬಳಿಕ ಟೋಬಿ ಅವತಾರದಲ್ಲಿ ವರಮಹಾಲಕ್ಷ್ಮಿ ಹಬ್ಬದಂದೇ ರಾಜ್ ಬಿ.ಶೆಟ್ಟಿ …

Read More »

ಬೆಳಗಾವಿ ಮಹಾನಗರ ಪಾಲಿಕೆ ಉಪ ಆಯುಕ್ತರಾಗಿ ರೇಷ್ಮಾ ತಾಳಿಕೋಟಿ

ಬೆಳಗಾವಿ ಮಹಾನಗರ ಪಾಲಿಕೆ ಉಪ ಆಯುಕ್ತರಾಗಿ ರೇಷ್ಮಾ ತಾಳಿಕೋಟಿ ಅವರನ್ನು ನೇಮಕಮಾಡಲಾಗಿದೆ ಬೆಳಗಾವಿ ಮಲಪ್ರಭಾ ಹಾಗೂ ಘಟಪ್ರಭಾ ಯೋಜನೆಗಳ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕಾಡಾ)ದ ಉಪ ಆಡಳಿತಾಧಿಕಾರಿಯಾಗಿದ್ದ ರೇಷ್ಮಾ ತಾಳಿಕೋಟಿ ಅವರನ್ನು ಬೆಳಗಾವಿ ಮಹಾನಗರ ಪಾಲಿಕೆಯ ಉಪ ಆಯುಕ್ತರನ್ನಾಗಿ ಸರ್ಕಾರ ನೇಮಕಗೊಳಿಸಿ ಆದೇಶ ಮಾಡಿದೆ ‌ ಈ ಹಿಂದೆ ರೇಷ್ಮಾ ತಾಳಿಕೋಟಿ ಅವರು ಭೂಸ್ವಾಧೀನ ಇಲಾಖೆ ಹಾಗೂ ಖಾನಾಪೂರದ ತಹಶೀಲ್ದಾರ್ ರಾಗಿ ಸೇವೆ ಸಲ್ಲಿಸಿದ್ದಾರೆ ಸದ್ಯಕ್ಕೆ ಬೆಳಗಾವಿ ಮಹಾನಗರ …

Read More »

ಕುಡಿತದ ಚಟಕ್ಕೆ‌ ಬಿದ್ದ ಮಗನಿಗೆ ತಂದೆಯೇ ಮಾರ್ಗದರ್ಶನ ಮಾಡಿ ಕೊಲೆ

ಸರಾಯಿ ಕುಡಿಯುವುದನ್ನು ಬಿಡುವಂತೆ ಮನೆಯವರು ಬುದ್ಧಿವಾದ ಹೇಳಿದರೂ ಕುಡಿತದ ಚಟಕ್ಕೆ‌ ಬಿದ್ದ ಮಗನಿಗೆ ತಂದೆಯೇ ಮಾರ್ಗದರ್ಶನ ಮಾಡಿ ಕೊಲೆ ಮಾಡಿಸಿದ ಘಟನೆ ಗೋಕಾಕ ತಾಲೂಕಿನ ಕುಟರನಟ್ಟಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬೈಲಹೊಂಗಲ ಪಟ್ಟಣದ ಶಿವಾನಂದ ಭಾರತಿ ನಗರದ ಸಂಗಮೇಶ ಮಾರುತಿ ತಿಗಡಿ (39) ಕೊಲೆಯಾದ ದುರ್ದೈವಿ. ಮಹೇಶ ಜೊತೆಗೆ ಉಳ್ಳಾಗಡ್ಡಿ ವ್ಯಾಪಾರ ಮಾಡುತ್ತಿದ್ದ ಯರಗಟ್ಟಿ ತಾಲೂಕಿನ ಮಂಜುನಾಥ ಶೇಖಪ್ಪ ಹೊಂಗಲ (43), ಕೊಲೆ ಮಾಡಲು ಸಹಾಯ ಮಾಡಿದ ಯರಗಟ್ಟಿ ತಾಲೂಕಿನ …

Read More »

ಪಕ್ಷಕ್ಕೆ ಬಂದವರಿಗೆ ಸ್ವಾಗತ, ಆದರೆ ನಮ್ಮಲ್ಲಿನ ನಿಷ್ಠಾವಂತರಿಗೆ ತೊಂದರೆ ಆಗಬಾರದು : ಸಹಕಾರ ಸಚಿವ ಕೆ ಎನ್ ರಾಜಣ್ಣ

ಬಾಗಲಕೋಟೆ : ಕಾಂಗ್ರೆಸ್​ ಪಕ್ಷಕ್ಕೆ ಬರುವವರಿಗೆ ಸ್ವಾಗತ. ಆದರೆ ಸೇರ್ಪಡೆಯನ್ನು ಪಕ್ಷ ತೀರ್ಮಾನಿಸುತ್ತೆ‌ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ತಿಳಿಸಿದ್ದಾರೆ. ನಗರದಲ್ಲಿಂದು ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕಾರಣ ನಿಂತ ನೀರಲ್ಲ, ಬಹಳ ಫಾಸ್ಟ್ ಚೇಂಜಿಂಗ್ ರಾಜಕಾರಣದಲ್ಲಿರುವುದು. ಚುನಾವಣೆ ಸಂದರ್ಭದಲ್ಲಿ ತಮ್ಮ ಭವಿಷ್ಯ ಕಟ್ಟಿಕೊಳ್ಳೋಕೆ ‌ಪಕ್ಷಾಂತರ ನಡೆಯುತ್ತೆ ಎಂದು, ಆಯನೂರ ಮಂಜುನಾಥ, ಸೋಮಶೇಖರ್ ಬಂದಿದ್ದಾರೆ ಅಂತ ಕೆಲವರು ಹೇಳ್ತಿದ್ದಾರೆ. ಈ ಪಕ್ಷದಿಂದ ಆ ಪಕ್ಷಕ್ಕೆ …

Read More »

ಲ್ಯಾಂಡರ್ ಸೆರೆಹಿಡಿದ ಚಂದ್ರನ ಚಿತ್ರಗಳ ವಿಡಿಯೋ ಬಿಡುಗಡೆಗೊಳಿಸಿದ ಇಸ್ರೋ-ನೋಡಿ

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದಿರುವ ಚಂದ್ರಯಾನ-3ರ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ಹೊಸ ಮಾಹಿತಿ ನೀಡಿದೆ. ವಿಕ್ರಮ ಲ್ಯಾಂಡರ್​ ಚಂದ್ರನನ್ನು ಸ್ಪರ್ಶಿಸುವ ಮುಂಚೆ ಸೆರೆಹಿಡಿದ ಅಂತಿಮ ಕ್ಷಣಗಳ ಚಿತ್ರಗಳ ವಿಡಿಯೋವನ್ನು ಇಸ್ರೋ ಹಂಚಿಕೊಂಡಿದೆ.     ”ಚಂದ್ರಯಾನ -3 ಮಿಷನ್‌ನ ಎಲ್ಲ ಚಟುವಟಿಕೆಗಳು ಸರಿಯಾಗಿ ಸಾಗುತ್ತಿವೆ” ಎಂದು ಇಸ್ರೋ ಟ್ವೀಟ್​ ಮಾಡಿದೆ. ಲ್ಯಾಂಡರ್ ಮಾಡ್ಯೂಲ್ ಉಪಕರಣಗಳಾದ ಎಲ್​ಐಎಸ್‌ಎ (ILSA), ರಂಭಾ (RAMBHA) ಮತ್ತು ಚೇಸ್ಟ್ …

Read More »

ಹುಬ್ಬಳ್ಳಿ ಅಂಕೋಲಾ ರೈಲು ಯೋಜನೆ ಪ್ರಶ್ನಿಸಿ ಪರಿಸರವಾದಿಗಳು ಸಲ್ಲಿಸಿದ್ದ ಅರ್ಜಿ ವಿಲೇವಾರಿ

ಬೆಂಗಳೂರು: ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅಭಿಪ್ರಾಯದಂತೆ ಹುಬ್ಬಳ್ಳಿ – ಅಂಕೋಲಾ ರೈಲು ಮಾರ್ಗದ ಕುರಿತು ಪರಿಷ್ಕೃತ ಯೋಜನೆಯನ್ನು ಸಲ್ಲಿಸುವುದಾಗಿ ನೈಋತ್ಯ ರೈಲ್ವೆ ವಲಯ ಸಲ್ಲಿಸಿದ ಪ್ರಮಾಣ ಪರಿಗಣಿಸಿರುವ ಹೈಕೋರ್ಟ್, ಹುಬ್ಬಳ್ಳಿ – ಅಂಕೋಲಾ ನಡುವಿನ ಬ್ರಾಡ್ ಗೇಜ್ ರೈಲು ಮಾರ್ಗ ಯೋಜನೆಗೆ ಮುಂದಾಗಿದ್ದ ಕ್ರಮವನ್ನು ಪ್ರಶ್ನಿಸಿ ಪರಿಸರವಾದಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದೆ.   ಹುಬ್ಬಳ್ಳಿ- ಅಂಕೋಲಾ ನಡುವೆ 164.44 ಕಿ.ಮೀ ಉದ್ದದ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಇದಾಗಿದೆ. ಈ …

Read More »