Breaking News

ರಾಜ್ಯದಲ್ಲಿ ಬಿಜೆಪಿ – ಜೆಡಿಎಸ್ ಇಬ್ಬರ ಸ್ಥಿತಿ ಹೇಳಲು ಹೆಸರಿಲ್ಲದಂತಾಗುತ್ತೆ.:ಈಶ್ವರ್ ಖಂಡ್ರೆ

ಚಿಕ್ಕಮಗಳೂರು : ರಾಜ್ಯದಲ್ಲಿ ಬಿಜೆಪಿ – ಜೆಡಿಎಸ್ ಇಬ್ಬರ ಸ್ಥಿತಿ ಹೇಳಲು ಹೆಸರಿಲ್ಲದಂತಾಗುತ್ತೆ. ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಸಿಗೆ ಯಾವುದೇ ನಷ್ಟವಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು. ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ – ಜೆಡಿಎಸ್ ಹೊಟ್ಟೆಕಿಚ್ಚಿನಿಂದ ಕೈ-ಕೈ ಹಿಸುಕಿಕೊಳ್ತಿವೆ. ಅವರಿಗೆ ತಮ್ಮ ಅಸ್ತಿತ್ವವೇ ಹೋಗುತ್ತೆ, ಕಾಂಗ್ರೆಸ್ ಮುಂದೆ ನಾವು ಏನು ಇರಲ್ಲ ಅನ್ನಿಸಿದೆ. ಯಾವುದೇ ಕೆಲಸ ಇಲ್ಲದ ಕಾರಣ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. …

Read More »

ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ಇದೇ ಅಕ್ಟೋಬರ್ 8 ರಂದು ಉದ್ಘಾಟನೆಯಾಗಲಿದೆ

ರಾಬಿನ್ಸ್​ವಿಲ್ಲೆ (ನ್ಯೂಜೆರ್ಸಿ): ಆಧುನಿಕ ಯುಗದಲ್ಲಿ ಭಾರತದ ಹೊರಗೆ ನಿರ್ಮಿಸಲಾದ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವು ಅಕ್ಟೋಬರ್ 8 ರಂದು ನ್ಯೂಜೆರ್ಸಿಯಲ್ಲಿ ಉದ್ಘಾಟನೆಯಾಗಲಿದೆ. ನ್ಯೂಯಾರ್ಕ್​ ಟೈಮ್ಸ್ ಸ್ಕ್ವೇರ್​ನ ದಕ್ಷಿಣಕ್ಕೆ ಸುಮಾರು 60 ಮೈಲಿ (90 ಕಿ.ಮೀ) ಅಥವಾ ವಾಷಿಂಗ್ಟನ್ ಡಿಸಿಯಿಂದ ಉತ್ತರಕ್ಕೆ ಸುಮಾರು 180 ಮೈಲಿ (289 ಕಿ.ಮೀ) ದೂರದಲ್ಲಿ, ನ್ಯೂಜೆರ್ಸಿಯ ಪುಟ್ಟ ರಾಬಿನ್ಸ್​ವಿಲ್ಲೆ ಟೌನ್​ಶಿಪ್​ನಲ್ಲಿ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವಾಗಿರುವ ಬಿಎಪಿಎಸ್ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯ ನಿರ್ಮಾಣವಾಗಿದೆ. 2011 ರಿಂದ 2023 …

Read More »

ಸದ್ಯದಲ್ಲೇ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸುತ್ತೇನೆ : B.S.Y.

ಬೆಂಗಳೂರು : ಜೆಡಿಎಸ್ ಪಕ್ಷವು ಎನ್​​ಡಿಎ ಮೈತ್ರಿಕೂಟ ಸೇರುವ ಮೂಲಕ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಾಗಿದ್ದು, ಉಭಯ ಪಕ್ಷಗಳು ಒಟ್ಟಾಗಿ ಹೋಗಬೇಕಿದೆ. ಹಾಗಾಗಿ ಸದ್ಯದಲ್ಲೇ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸುತ್ತೇನೆ ಎಂದು ರಾಜ್ಯ ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಡಾಲರ್ಸ್ ಕಾಲೋನಿ ನಿವಾಸ ಧವಳಗಿರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಮಾಜಿ ಸಿಎಂ ಹೆಚ್ ಡಿ …

Read More »

10 ವರ್ಷದಲ್ಲಿ ಮೋದಿ‌ ದೇಶವನ್ನು ದಿವಾಳಿ ಮಾಡಿದ್ದಾರೆ: ಸಚಿವ ಸಂತೋಷ್ ಲಾಡ್

ಧಾರವಾಡ : ಕಾವೇರಿ ನೀರು ತಮಿಳುನಾಡಿಗೆ ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್​ ಪ್ರತಿಕ್ರಿಯಿಸಿದ್ದು, ಸಿಎಂ ಅವರಿಗೆ ಎಲ್ಲವೂ ಮಾಹಿತಿ ಇದೆ. ನಾವು ತಡೆ ಹಿಡಿಯಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಆದರೆ, ಸುಪ್ರೀಂ ಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು ಎಂದು ಸಚಿವ ಲಾಡ್ ಹೇಳಿದರು. ಈ‌ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಷ್ಟು ನೀರು ಬಿಡಬೇಕು ಎಂಬುದರ ಬಗ್ಗೆ ಸರ್ಕಾರ ನಿರ್ಣಯ ತೆಗೆದುಕೊಳ್ಳುತ್ತೆ. ಬಂದ್ ವೇಳೆ ಶಾಂತಿಯುತವಾಗಿ ಪ್ರತಿಭಟನೆ …

Read More »

ಚಂದಗಡದಲ್ಲಿ ಜೊಡೋ ಜಾಗೃತಿ ಕಾರ್ಯಕ್ರಮ ಆಯೋಜನೆ

ಗಣೇಶೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿಯ ಚಂದಗಡದಲ್ಲಿ ಶ್ರೀ ಗಣೇಶ ಯುವಕ ಮಂಡಲ ವತಿಯಿಂದ ಜೂಡೋ ಜಾಗೃತಿ ಕಾರ್ಯಕ್ರಮ”ವನ್ನು ಆಯೋಜಿಸಲಾಗಿತು ಕುಂದಾನಗರಿಯ ಚಂದಗಡ ದಲ್ಲಿ ಜೂಡೋ ತರಬೇತುದಾರರಾದ ರೋಹಿಣಿ ಪಾಟೀಲ್ ಅವರು ಜೂಡೋ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದರು , ಇನ್ನೂ ಈ ಕಾರ್ಯಕ್ರಮದಲ್ಲಿ ಕಾಮನ್ವೆಲ್ತ್ ಚಾಂಪಿಯನ್ಶಿಪ್ ಚಿನ್ನದ ಪದಕ ವಿಜೇತೆ ಪೂಜಾ ಶಹಾಪುರಕರ್, ರಾಷ್ಟ್ರೀಯ ಪದಕ ವಿಜೇತೆ ಪಾರ್ವತಿ ಅಂಬಲಿ, ಪೂಜಾ ಗಾವಡೆ, ಸಾಯಿಶ್ವರಿ ಕೆ, ಸಂಜನಾ ಶೇಟ್, ಸಹನಾ, ಶ್ವೇತಾ ಅಲಕನೂರ, …

Read More »

ಜೆಡಿಎಸ್ ಪಕ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿದ ಬೆನ್ನಲ್ಲೇ ನಿಖಿಲ್ ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ.

ಬೆಂಗಳೂರು : ಜೆಡಿಎಸ್ ಪಕ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿದ ಬೆನ್ನಲ್ಲೇ ನಿಖಿಲ್ ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ. ನಗರದ ಡಾಲರ್ಸ್ ಕಾಲೋನಿ ನಿವಾಸಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ, ಯಡಿಯೂರಪ್ಪ ಅವರಿಗೆ ಹೂಗುಚ್ಛ ನೀಡಿ, ಶಾಲು ಹೊದಿಸಿ ಗೌರವಿಸಿದರು. ಆರ್.ಆರ್ ನಗರ ಶಾಸಕ ಮುನಿರತ್ನ ನಿಖಿಲ್ ಗೆ ಸಾಥ್ ನೀಡಿದರು. ಯಡಿಯೂರಪ್ಪ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್, ಎನ್‌ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಬೆಂಬಲ ನೀಡಿದೆ. ಬಿಜೆಪಿ-ಜೆಡಿಎಸ್ …

Read More »

ಬರಡು ಭೂಮಿಯಲ್ಲಿ ರೈತನೊರ್ವ ಪೇರು ಬೆಳೆದು ಉತ್ತಮಲಾಭ

ಈ ಜಿಲ್ಲೆ ಬರಪೀಡಿತ ಜಿಲ್ಲೆ ಅಂತಲೇ ಹಣೆ ಪಟ್ಟಿ ಕಟ್ಟಿ ಕೊಂಡಿದೆ, ಈ ಜಿಲ್ಲೆಯ ರೈತರು ಕೆಲವೊಮ್ಮೆ ಅತೀವೃಷ್ಠಿಗೆ ತುತ್ತಾದರೂ ಇನ್ನೂ ಕೆಲವೊಮ್ಮೆ ಅನಾವೃಷ್ಟೀಗೆ ತುತ್ತಾಗುತ್ತಾರೆ, ಶಾಶ್ವತ ಬರ ಪೀಡಿತ ಜಿಲ್ಲೆ ಅಂತಾನೇ ಹಣೆ ಪಟ್ಟಿ ಕಟ್ಟಿಕೊಂಡ ಜಿಲ್ಲೆಯಲ್ಲಿ ರೈತರನೊರ್ವ ಬರಡು ಭೂಮಿಯಲ್ಲಿ ಕಾಲುವೆ ನೀರನ್ನು ಬಳಸಿ ಉತ್ತಮ ಪೇರು ಬೆಳೆದು ಒಳ್ಳೆಯ ಲಾಭ ಗಳಿಸುವದರ ಜೊತೆಗೆ ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ… …

Read More »

ಬುಡಾ ಮತ್ತು ಪಾಲಿಕೆ ವಿರುದ್ದ ಪ್ರತಿಭಟನೆ ನಡೆಸಿದ ಬಸವನ ಕುಡಚಿಯ ದೇವರಾಜ ಅರಸ ಕಾಲೋನಿಯ ನಿವಾಸಿಗಳು

ಮೂಲಭೂತ ಸೌಕರ್ಯಕ್ಕಾಗಿ ಬಸವನ ಕುಡಚಿಯ ದೇವರಾಜ ಅರಸ ಕಾಲೋನಿಯ ನಿವಾಸಿಗಳು ಮಹಾನಗರ ಪಾಲಿಕೆಯ ನಿರ್ಲಕ್ಷ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು ಬೆಳೆಗಾವಿಯ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಬಸವನ ಕುಡಚಿಯ ದೇವರಾಜ ಅರಸ ಕಾಲೋನಿಯ ನಿವಾಸಿಗಳು ಬುಡಾ ಮತ್ತು ಪಾಲಿಕೆ ವಿರುದ್ದ ಪ್ರತಿಭಟನೆ ನಡೆಸಿದರು , ಮಹಾನಗರ ಪಾಲಿಕೆಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು 1982 ರಲ್ಲಿ ಬಸವನಕುಡಚಿ ದೇವರಾಜ ಅರಸ ಕಾಲೋನಿ ಬುಡಾದಿಂದ ನಿರ್ಮಾಣವಾಗಿದೆ, 40 ವರ್ಷಗಳಿಂದ ದೇವರಾಜ ಅರಸ …

Read More »

ಏಕದಂತನಿಗೆ ಭಕ್ತರು ಸಂಭ್ರಮದಿಂದ ವಿಸರ್ಜನೆ

ವಿಜಯಪುರ.. ಕಳೆದ ಐದು ದಿನಗಳಿಂದ ಮನಮನೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಐದನೇ ದಿನದ ಗಣೇಶನ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಮನೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಕೂರಿಸಿ, ಪೂಜಿಸಿದ ಏಕದಂತನಿಗೆ ಭಕ್ತರು ಸಂಭ್ರಮದಿಂದ ವಿಸರ್ಜನೆ ಮಾಡಿದರು. ವಿಜಯಪುರ ನಗರದ ತಾಜ್ ಬೌಡಿ ಸೇರಿದಂತೆ ಮಹಾನಗರ ಪಾಲಿಕೆ ನಿರ್ಮಿಸಿದ್ದ ಕೃತಕ ಹೊಂಡಗಳಲ್ಲಿ ವಿಸರ್ಜಿಸಿದರು. ಹಲವೆಡೆ ಡಿಜೆ ಸೌಂಡ್ ಗೆ ಯುವಕ ಯುವತಿಯರು ಸಖತ್ ಸ್ಟೆಪ್ ಹಾಕಿ ಗಣಪತಿ ಬಪ್ಪಾ ಮೋರಯಾ…’ ಎನ್ನುವ ಜೈಕಾರ ಹಾಕಿದರು. ಮೆರವಣಿಗೆ ಮೂಲಕ ಗಣೇಶನನ್ನು ವಿಸರ್ಜನಾ …

Read More »

ಬೆಳಗಾವಿ ನಗರದಲ್ಲಿ ಗಣೇಶ ಚತುರ್ಥಿ ನಿಮಿತ್ಯ ವಿವಿಧ ಗಣೇಶ ಮಂಡಲಗಳಲ್ಲಿ ಮಹಾಪ್ರಸಾದ ಆಯೋಜನೆ

ಬೆಳಗಾವಿ ನಗರದಲ್ಲಿ ಗಣೇಶ ಚತುರ್ಥಿ ನಿಮಿತ್ಯ ವಿವಿಧ ಗಣೇಶ ಮಂಡಲಗಳಲ್ಲಿ ಮಹಾಪ್ರಸಾದ ಆಯೋಜನೆ ಮಾಡಲಾಗಿತ್ತು . ಅದೇ ರೀತಿ ನೆಹರು ನಗರ ,ಶೆಟ್ಟಿಗಲ್ಲಿ , ಕುಲಕರ್ಣಿ ಗಲ್ಲಿ , ಶಿವಾಜಿನಗರದ ಸಾರ್ವಜನಿಕ ಗಣೇಶ ಮಂಡಲಗಳಲ್ಲಿ ಮಹಾಗಣಪನ ಪೂಜೆ ಜೊತೆಗೆ ಸತ್ಯ ನಾರಾಯಣ ,ವರದಶಂಕರ ಪೂಜೆ ಸೇರಿದಂತೆ ಗಣ ಹೋಮ ನೆರವೇರಿಸಲಾಯಿತ್ತು ತದ ನಂತರ ಬಂದಂತಹ ಭಕ್ತಾದಿಗಳಿಗೆ ಮಹಾಪ್ರಸಾದ ನೇರವೇರಿಸಲಾಯಿತು ಈ ಸಂದರ್ಭದಲ್ಲಿ ವಿವಿಧ ಬಡಾವಣೆಯ ಮಹಿಳೆಯರು ನಾಗರಿಕರು ಮಹಾಗಣಪನ ಪೂಜೆಯಲ್ಲಿ …

Read More »