Breaking News

ಅಂಚೆ ಕಚೇರಿಯಲ್ಲಿ ಬಂದಿದೆ ಭರ್ಜರಿ ಲಾಭ ತರುವ ಹೊಸ ಸ್ಕೀಮ್ : ಯಾವುದದು.?

ಅಂಚೆ ಕಛೇರಿಯ ಮೂಲಕ ನಿಮ್ಮ ಹಣವನ್ನು ಸುರಕ್ಷಿತವಾಗಿರಿಸಲು ಉತ್ತಮ ಮಾರ್ಗವಾಗಿದೆ. ಇಲ್ಲಿ ಹಲವಾರು ರೀತಿಯ ಸಣ್ಣ ಉಳಿತಾಯ ಯೋಜನೆಗಳು ಮತ್ತು FD ಗಳನ್ನು ಹೊಂದಿದೆ. ಮುಖ್ಯವಾಗಿ ಎಸ್‌ಬಿಐಗಿಂತ ಹೆಚ್ಚಿನ ಬಡ್ಡಿಯನ್ನು ನೀಡುವ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ಅಂತಹ ಒಂದು ಯೋಜನೆ ಇದೆ. ಇಲ್ಲಿ ಹೂಡಿಕೆದಾರರು ಈ ಯೋಜನೆಯಲ್ಲಿ 1 ವರ್ಷ, 2 ವರ್ಷ, 3 ವರ್ಷ ಮತ್ತು 5 ವರ್ಷಗಳವರೆಗೆ ಹಣವನ್ನು ಠೇವಣಿ ಮಾಡಬಹುದು. ಪೋಸ್ಟ್ ಆಫೀಸ್ …

Read More »

ಮುಜರಾಯಿ ಇಲಾಖೆಗೆ ʻಖಾಸಗಿ ದೇವಾಲಯಗಳʼ ಸೇರ್ಪಡೆ ಇಲ್ಲ : ರಾಮಲಿಂಗ ರೆಡ್ಡಿ

ಬೆಂಗಳೂರು : ರಾಜ್ಯ ಸರ್ಕಾರವು ಮುಜರಾಯಿ ಇಲಾಖೆಗೆ ಯಾವುದೇ ಖಾಸಗಿ ದೇವಾಲಯಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಸಚಿವ ರಾಮಲಿಂಗ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಹಿಂದೂ ಸಂಘಟನೆಗಳಿಗೆ ಮಾಹಿತಿ ಕೊರತೆಯಿಂದ ತಪ್ಪು ತಿಳುವಳಿಕೆ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಖಾಸಗಿ ದೇವಾಲಯಗಳನ್ನು ಯಾವುದೇ ಕಾರಣಕ್ಕೂ ತೆಗೆದುಕೊಳ್ಳುವುದಿಲ್ಲ. ನಮ್ಮ ಸರ್ಕಾರ ಬಂದ ಮೇಲಂತೂ ಒಂದೂ ತೊಗೊಂಡಿಲ್ಲ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಖಾಸಗಿ ದೇವಾಲಯಗಳನ್ನು ಮುಜರಾಯಿ ವ್ಯಾಪ್ತಿಗೆ ತರುವ ಉದ್ದೇಶದಿಂದ …

Read More »

ಕನ್ನಡಿಗರಿಂದ 4 ಲಕ್ಷ ಕೋಟಿ ತೆರಿಗೆ, ಕೇಂದ್ರದಿಂದ ಕೇವಲ 50 ಸಾವಿರ ಕೋಟಿ ಮಾತ್ರ ವಾಪಸ್ : ಸಿಎಂ

ಹುಬ್ಬಳ್ಳಿ:, ರಾಜ್ಯದ ಜನರು 4 ಲಕ್ಷ ಕೋಟಿ ತೆರಿಗೆ ಪಾವತಿಸುತ್ತಿದ್ದರೂ ಕರ್ನಾಟಕಕ್ಕೆ ಕೇಂದ್ರದಿಂದ ಕೇವಲ 50,000 ಕೋಟಿ ರೂ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್ಡಿಆರ್‌ಎಫ್) ಕೇಂದ್ರ ಸರ್ಕಾರದ ಹಣವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ನಮ್ಮ ರಾಜ್ಯದಿಂದ 4 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ. ಅದರಲ್ಲಿ ನಾವು 37,000 ಕೋಟಿ ರೂ.ಗಳ ತೆರಿಗೆ ಪಾಲನ್ನು ಪಡೆಯುತ್ತಿದ್ದೇವೆ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗೆ 13,000 ಕೋಟಿ ರೂ. ಇದು …

Read More »

ಹಗಲು ಹೊತ್ತಿನಲ್ಲಿ ಬೈಕ್​ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರ ಬಂಧನ

ಹಾವೇರಿ : ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ ಬೈಕ್‌ಗಳನ್ನು ಹಗಲು ಹೊತ್ತಿನಲ್ಲಿ ಹೊಂಚು ಹಾಕಿ ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನು ಹಾವೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹಾವೇರಿ ತಾಲೂಕು ಹೊಸರಿತ್ತಿ ಗ್ರಾಮದ ಸಚಿನ್ ಸಂಕ್ಲಿಪುರ (24) ಮತ್ತು ಉಡಚಪ್ಪ ದಿಪಾಳಿ (25) ಎಂದು ಗುರುತಿಸಲಾಗಿದೆ. ಸುಮಾರು 4,65,000 ಲಕ್ಷ ಮೌಲ್ಯದ 13 ಬೈಕ್​ಗಳ ಜಪ್ತಿ ಮಾಡಿ, ವಶಕ್ಕೆ ಪಡೆಯಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ ಬೈಕ್‌ಗಳನ್ನು ಟಾರ್ಗೆಟ್ ಮಾಡಿಕೊಂಡು ಬಸ್ ನಿಲ್ದಾಣ, ಹೋಟೆಲ್, ಹಾಗೂ …

Read More »

ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು, ಆಂತರಿಕ ರಕ್ತಸ್ರಾವದಿಂದ ಮಗು ಸಾವು

ಬೆಂಗಳೂರು: ಕಾರು ಹರಿದ ಪರಿಣಾಮ ಮಗು ಮೃತಪಟ್ಟಿರುವ ಘಟನೆ ಕಸುವಿನಹಳ್ಳಿಯ ಸಮೃದ್ಧಿ ಅಪಾರ್ಟ್ಮೆಂಟ್ ಮುಂಭಾಗ ನಡೆದಿದೆ. ನೇಪಾಳ ಮೂಲದ ಜೋಗ್ ಜುತಾರ್ ಹಾಗೂ ಅನಿತಾ ದಂಪತಿಯ ಅರ್ಬಿನಾ (3) ಮೃತ ಮಗು. ಡಿಸೆಂಬರ್ 9ರಂದು ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಬೆಳ್ಳಂದೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಮೃದ್ಧಿ ಅಪಾರ್ಟ್ಮೆಂಟ್​ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಗುವನ್ನು ಗಮನಿಸದ ಅದೇ ಅಪಾರ್ಟ್ಮೆಂಟ್ ನಿವಾಸಿಯೊಬ್ಬರು ಕಾರು ಹರಿಸಿಕೊಂಡು ಹೋಗಿದ್ದರು. ಕಾರು …

Read More »

ಪತ್ನಿಯ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಪತಿ ಬಂಧನ

ರಾಯಚೂರು: ಪತ್ನಿಯ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದ ಪತಿಯನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನಿಖಿಲ್.ಬಿ.ತಿಳಿಸಿದರು. ಸೋನಿ ಕೊಲೆಯಾದ ಮಹಿಳೆ. ಅವಿನಾಶ್ ಹಂತಕ. ಎಸ್​ಪಿ​ ನಿಖಿಲ್.ಬಿ. ಮಾತನಾಡಿ, “ರಾಯಚೂರಿನ ಪಶ್ಚಿಮ​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಡಿ.13ರಂದು ಕೊಲೆ ನಡೆದಿತ್ತು. ಅವಿನಾಶ್​ ಎಂಬಾತ ತನ್ನ ಪತ್ನಿ ಸೋನಿ ಅವರನ್ನು ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ. ಇವರು ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಒಂದು ತಿಂಗಳ ಮಗು ಇದೆ. ಮಗು …

Read More »

ಹಿಂದೂ ರಾಷ್ಟ್ರ ಎನ್ನುವುದು ಬಿಜೆಪಿಯ ಸ್ಲೋಗನ್ ಇಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ದಲಿತರು ಹೀಗೆ ಅನೇಕ ಜಾತಿ, ಜನಾಂಗದವರಿದ್ದಾರೆ:C.M.

ಗದಗ: ಭಾರತ ಕೇವಲ ಹಿಂದೂಗಳ ದೇಶ ಮಾತ್ರವಲ್ಲ. ಇಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ದಲಿತರು ಹೀಗೆ ಅನೇಕ ಜಾತಿ, ಜನಾಂಗದವರಿದ್ದಾರೆ. ಇದು ಬಹುತ್ವದ ದೇಶ. ಹಿಂದೂ ರಾಷ್ಟ್ರ ಎನ್ನುವುದು ಬಿಜೆಪಿಯ ಸ್ಲೋಗನ್ ಅಷ್ಟೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿಂದು ಸರಕಾರಿ ಬಾಲಕಿಯರ ಬಾಲಮಂದಿರ ಉದ್ಘಾಟಿಸಿದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 1950ರಲ್ಲಿ ಜನಸಂಘ ಸ್ಥಾಪನೆಯಾಯಿತು. ಅಂದಿನಿಂದ ಇಂದಿನವರೆಗೆ ಭಾರತವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಹೇಳುತ್ತಾ ಬಂದಿದ್ದಾರೆ. ಭಾರತ …

Read More »

ನಿರುದ್ಯೋಗ ಇದೆ ಅಂತ ಹೇಳಿ ನಾನು ಯಾರನ್ನೋ ಎಂಪಿಯನ್ನೋ, ಎಂಎಲ್‌ಎಯನ್ನೋ ಹೋಗಿ ಕೊಲೆ ಮಾಡ್ತೀನಿ ಅಂದ್ರೆ ಆಗುತ್ತಾ ಎಂದ: ಜೋಶಿ

ಹುಬ್ಬಳ್ಳಿ: ನಿರುದ್ಯೋಗ ಇದೆ ಅಂತ ಹೇಳಿ ನಾನು ಯಾರನ್ನೋ ಎಂಪಿಯನ್ನೋ, ಎಂಎಲ್‌ಎಯನ್ನೋ ಹೋಗಿ ಕೊಲೆ ಮಾಡ್ತೀನಿ ಅಂದ್ರೆ ಆಗುತ್ತಾ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಪ್ರಶ್ನಿಸಿದ್ದಾರೆ. ಸಂಸತ್‌ನಲ್ಲಿ ಭದ್ರತಾ ಲೋಪ ವಿಚಾರದಲ್ಲಿ ನಿರುದ್ಯೋಗವೂ (Unemployment) ಕಾರಣ ಎಂಬ ರಾಹುಲ್ ಗಾಂಧಿ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ನಿರುದ್ಯೋಗ ಇದೆ ಅಂತ ಹೇಳಿ ನಾನು ಯಾರನ್ನೋ ಎಂಪಿಯನ್ನೋ, ಎಂಎಲ್‌ಎಯನ್ನೋ ಹೋಗಿ ಕೊಲೆ ಮಾಡ್ತೀನಿ ಅಂದ್ರೆ ಆಗುತ್ತಾ? …

Read More »

ವಂಟಮೂರಿ ದೌರ್ಜನ್ಯ ನಡೆಸಿದ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿದೆ.

ಬೆಳಗಾವಿ: ತಾಲೂಕಿನ ವಂಟಮೂರಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿ, ಹಲ್ಲೆಗೈದ ಅಮಾನವೀಯ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿ ಆದೇಶಿಸಿದೆ. ಈ ಬಗ್ಗೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ಸಿಐಡಿ ಡಿಜಿಪಿ ಅವರಿಗೆ ಪತ್ರ ಬರೆದಿದ್ದು, ಸಿಐಡಿ ಅಧಿಕಾರಿಗಳು ಕೈಗೊಳ್ಳುವ ತನಿಖೆಗೆ ಬೆಳಗಾವಿ ನಗರ ಪೊಲೀಸ್‌ ಆಯುಕ್ತರು ಮಾಹಿತಿ ನೀಡುವಂತೆ ನಿರ್ದೇಶನ ನೀಡಿದ್ದಾರೆ. ಮಹಿಳೆಯ ಮೇಲಿನ ಅಮಾನವೀಯ ಕೃತ್ಯಕ್ಕೆ ಇಡೀ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಹೈಕೋರ್ಟ್‌ ಕೂಡ ಸ್ವಯಂಪ್ರೇರಿತ ಪ್ರಕರಣ …

Read More »

ಶಿರಸಿ: ಶಾಲ್ಮಲಾ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಸಾವು

ಶಿರಸಿ: ರಜೆಯ ದಿನ ಕಳೆಯಲು ತೆರಳಿದ್ದ ಒಂದೇ ಕುಟುಂಬದ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶಾಲ್ಮಲಾ ನದಿಯಲ್ಲಿ ಇಂದು ನಡೆದಿದೆ. ಇತ್ತೀಚೆಗೆ ಶಿರಸಿಯ ಬಂಡಲದಲ್ಲಿ ಸಂಭವಿಸಿದ್ದ ಬಸ್​ ಮತ್ತು ಕಾರು ನಡುವಿನ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಜರುಗಿದೆ.‌ ಶಿರಸಿಯ ಭೈರುಂಭೆ ಸಮೀಪ ಶಾಲ್ಮಲಾ ನದಿಯಲ್ಲಿ ಘಟನೆ ಸಂಭವಿಸಿದೆ.‌ ಮೃತರೆಲ್ಲರೂ ಶಿರಸಿ ನಗರದವರು. ರಾಮನಬೈಲಿನ ಮೌಲಾನಾ ಅಹಮ್ಮದ್ …

Read More »