Breaking News

ಪೊಲೀಸ್ ಕಮಿಷನರ್ ಮೊಬೈಲ್ ಸಂಖ್ಯೆ ಬಳಸಿ ನಕಲಿ ಕರೆ ಮಾಡಿ ಬೆದರಿಕೆ: ಕಿರಾತಕನ ಬಂಧನ

ಸಾಮಾನ್ಯವಾಗಿ ಯಾವುದೋ ಅನಾಮಧೇಯ ಕರೆ ಮಾಡಿ, ಹೊಸ ನಂಬರ್ ನಿಂದ ಕರೆ ಮಾಡಿ ಬೆದರಿಕೆ ಹಾಕಿರುವ ಪ್ರಕರಣಗಳನ್ನು ಕೇಳಿದ್ದೇವೆ. ಹೊಸ ತಂತ್ರಜ್ಞಾನ ಬಳಸಿ ಧ್ವನಿ ಬದಲಾಯಿಸಿ ಮಾತನಾಡುವುದು ಕೂಡ ನೋಡಿದ್ದೇವೆ. ಆದರೆ ಮೈಸೂರಿನಲ್ಲೊಬ್ಬ ಕಿರಾತಕ, ಪೊಲೀಸ್ ಕಮಿಷನರ್ ಮೊಬೈಲ್ ಸಂಖ್ಯೆಯನ್ನೇ ಬಳಸಿ ನಕಲಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತವಾದ ಪೊಲೀಸರು, ಕಿರಾತಕನ ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ. ನಾಗರಿಕರ ರಕ್ಷಣೆಗೆ ತಾವು ಸದಾ ಸಿದ್ಧ ಎಂದು …

Read More »

ಕಾರು ಅಡ್ದಗಟ್ಟಿ ಲಕ್ಷಾಂತರ ರೂಪಾಯಿ ಹಣದೊಂದಿಗೆ ಕಾರಿನ ಸಮೇತ ಪರಾರಿಯಾದ ದುಷ್ಕರ್ಮಿಗಳು

ಬೆಳಗಾವಿ: ಕಾರು ಅಡ್ಡಗಟ್ಟಿ ನಿಲ್ಲಿಸಿ ಪಿಸ್ತೂಲ್ ತೋರಿಸಿ 75 ಲಕ್ಷ ಹಣದೊಂದಿಗೆ ಕಾರಿನ ಸಮೇತ ದರೋಡೆಕೋರರ ಗ್ಯಾಂಗ್ ಪರಾರಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹಾರಾಷ್ಟ್ರದ ಕೊಲ್ಲಾಪುರದಿಂದ ಕೇರಳಕ್ಕೆ ಹೊರಟಿದ್ದ ಇನೋವಾ ಕಾರನ್ನು ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳ ತಂಡ, ಬಳಿಕ ಕಾರು ಅಡ್ಡಗಟ್ಟಿ ನಿಲ್ಲಿಸಿದೆ. ಪಿಸ್ತೂಲು ತೋರಿಸಿ ಕಾರಿನಲ್ಲಿದ್ದವರನ್ನು ಕೆಳಗಿಳಿಸಿ ಕಾರಿನಲ್ಲಿದ್ದ 75 ಲಕ್ಷ ಹಣದ ಸಮೇತ ಎಸ್ಕೇಪ್ ಆಗಿದೆ. …

Read More »

ಶಾಲಾ ಬಸ್‌ ಪಲ್ಟಿ: ಅಪಾಯದಿಂದ ಮಕ್ಕಳು ಪಾರು

ಮೂಡಲಗಿ: ತಾಲ್ಲೂಕಿನ ಪಟಗುಂದ ಗ್ರಾಮ ಬಳಿಯಲ್ಲಿ ಶಾಲಾ ಬಸ್‌ ಪಲ್ಟಿಯಾಗಿದ್ದು ಬಸ್‌ನಲ್ಲಿದ್ದ 30ಕ್ಕೂ ಅಧಿಕ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಕೆಲವು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಶುಕ್ರವಾರ ಬೆಳಿಗ್ಗೆ ಜರುಗಿದೆ. ಗಾಯಗೊಂಡಿರುವ ಮಕ್ಕಳಿಗೆ ಮೂಡಲಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅವರ ಮನೆಗಳಿಗೆ ತಲುಪಿಸಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಇಲ್ಲಿಯ ಸಿ.ಎನ್.ಮುಗಳಖೋಡ ಶಾಲೆಯ ಬಸ್‌ ಮಕ್ಕಳನ್ನು ಕರೆದುಕೊಂಡು ಶಾಲೆಗೆ …

Read More »

ಕಾಂಗ್ರೆಸ್ ಶಾಸಕರು ಸ್ವಾಭಿಮಾನಿಗಳು: ಶಾಸಕ ಲಕ್ಷ್ಮಣ ಸವದಿ

ಕಾಗವಾಡ: ‘ಕಾಂಗ್ರೆಸ್ ಶಾಸಕರು ಮಾರಾಟಕ್ಕಿಲ್ಲ. ಅವರು ಸ್ವಾಭಿಮಾನಿಗಳು. ₹ 50 ಕೋಟಿ ಅಲ್ಲ, ₹ 100 ಕೋಟಿ ಕೊಟ್ಟರೂ ನಮ್ಮ ಶಾಸಕರು ಯಾರೂ ಮಾರಾಟಕ್ಕಿಲ್ಲ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಬಿಜೆಪಿಯವರು ಕಾಂಗ್ರೆಸ್‌ ಶಾಸಕರಿಗೆ ತಲಾ ₹ 50 ಕೋಟಿ ಆಮಿಷ ಒಡ್ಡಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿಯವರು ಹೀಗೆ ಹೇಳಿದ್ದಾರೆಂದರೆ ಅವರ ಬಳಿ ಬಲವಾದ ಸಾಕ್ಷ್ಯ ಇರಬಹುದು. ಅದಕ್ಕೆ …

Read More »

JOB ALERT : ‘KPTCL’ ನಲ್ಲಿ ‘ಪವರ್ ಮ್ಯಾನ್’ ಸೇರಿ 2975 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನ.20 ಲಾಸ್ಟ್ ಡೇಟ್!

ಬೆಂಗಳೂರು: ಕರ್ನಾಟಕ ಪವರ್ ಟ್ರಾನ್ಸ್ ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ಅಂದರೆ ಕೆಪಿಟಿಸಿಎಲ್ ನಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಮೇಲೆ ಉದ್ಯೋಗಕ್ಕೆ ಅರ್ಜಿ ಕರೆಯಲಾಗಿದೆ. ಬರೋಬ್ಬರಿ 2975 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ನೀವು ಎಸ್ ಎಸ್ ಎಲ್ ಸಿ ಪಾಸ್ ಆಗಿದ್ದರೇ ತಪ್ಪದೇ ಅರ್ಜಿ ಸಲ್ಲಿಸಿ.   ಈ ಕುರಿತಂತೆ ಕೆಪಿಟಿಸಿಎಲ್ ನಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 411 ಕಿರಿಯ ಸ್ಟೇಷನ್ ಪರಿಚಾರಕ ಮತ್ತು 81 …

Read More »

ಅಭಿಷೇಕ್‌ ಬಚ್ಚನ್‌ – ಐಶ್ವರ್ಯಾ ರೈ ಮದುವೆ ಕುರಿತು ಮಾತನಾಡಿದ್ದ ಸಲ್ಮಾನ್‌ ಹಳೆ ವಿಡಿಯೋ ವೈರಲ್

ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾಗಿರುವ ಐಶ್ವರ್ಯಾ ರೈ, ಈ ಹಿಂದೆ ಸಲ್ಮಾನ್ ಖಾನ್ ಅವರೊಂದಿಗೆ ಪ್ರಣಯ ಸಂಬಂಧದಲ್ಲಿದ್ದರು ಎಂದು ಹೇಳಲಾಗುತ್ತಿತ್ತು. ಐಶ್ವರ್ಯಾ ಮತ್ತು ಸಲ್ಮಾನ್ ತಮ್ಮ ಸಂಬಂಧವನ್ನು 2002 ರಲ್ಲಿ ಕೊನೆಗೊಳಿಸಿದರು ಎಂಬ ಮಾತುಗಳಿವೆ. ಇಬ್ಬರೂ ತಮ್ಮ ಡೇಟಿಂಗ್ ಜೀವನದ ಬಗ್ಗೆ ಎಂದಿಗೂ ಬಹಿರಂಗವಾಗಿ ಮಾತನಾಡದಿದ್ದರೂ, ಸಲ್ಮಾನ್ ಒಮ್ಮೆ ʼ ಆಪ್ ಕಿ ಅದಾಲತ್‌ʼ ನಲ್ಲಿ ಅಭಿಷೇಕ್ ಜೊತೆ ಐಶ್ವರ್ಯಾ ಅವರ ಮದುವೆಯ ಬಗ್ಗೆ ಮಾತನಾಡಿದ್ದು, ಈ ಹಳೆ ವಿಡಿಯೋ …

Read More »

ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ

ಬೆಳಗಾವಿ: ದೇಶದಲ್ಲಿ ಮಾನವ ಕಳ್ಳ ಸಾಗಾಣಿಕೆ ಮತ್ತು ಜೀತ ಪದ್ಧತಿಯಂತಹ ಅನಿಷ್ಠ ಪದ್ಧತಿಗಳಿಗೆ ಬಡತನ, ಅನಕ್ಷರತೆ, ನಿರುದ್ಯೋಗ ಕಾರಣವಾಗಿದೆ. ಜೀತ ಪದ್ಧತಿ ಎಲ್ಲಿದೆ ಎಂಬುದನ್ನು ಗುರುತಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ನಿರ್ಮೂಲನೆ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಪಿ. ಮುರಳಿಮೋಹನ್‌ ರೆಡ್ಡಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಸ್ಪಂದನ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸುವರ್ಣ ವಿಧಾನಸೌಧದಲ್ಲಿ ಮಾನವ ಕಳ್ಳ …

Read More »

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

ಬೆಳಗಾವಿ: ಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಬೆಳಗಾವಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಆಪರೇಷನ್ ಕಮಲ ಮಾಡುವ ಪರಿಸ್ಥಿತಿ ಅಥವಾ ಅನಿವಾರ್ಯತೆ ಇಲ್ಲ. ಕಾಂಗ್ರೆಸ್‌ದವರೇ ಅತಂತ್ರದಲ್ಲಿದ್ದಾರೆ. ನನ್ನನ್ನು ಮುಟ್ಟಿದರೆ ಕರ್ನಾಟಕದ ಜನರು ಸುಮ್ಮನೆ ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ತಮ್ಮ ಪಕ್ಷದವರನ್ನು ಉದ್ದೇಶಿಸಿಯೇ ಹೇಳಿದ್ದಾರೆ. ಅವರು ಹೇಳಿರುವದು ಬಿಜೆಪಿಯವರಿಗೆ ಅಲ್ಲ. ಉಪಚುನಾವಣೆ ಫಲಿತಾಂಶದ ನಂತರ ಮುಖ್ಯಮಂತ್ರಿ …

Read More »

ಬೆಳಗಾವಿಯ ವಡ್ಡರವಾಡಿಯಲ್ಲಿ ಬಟ್ಟೆ ಹರಿದು ಮಹಿಳೆ ಮೇಲೆ ಹಲ್ಲೆ

ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಥಳಿಸಿದ್ದ ಘಟನೆ ಮಾಸುವ ಮುನ್ನವೇ ಅಂತದ್ದೇ ಮತ್ತೊಂದು ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ವಡ್ಡರವಾಡಿಯಲ್ಲಿ ವೇಶ್ಯಾವಾಟಿಕೆ ಆರೋಪದಲ್ಲಿ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ಹಲ್ಲೆ ನಡೆಸಿ, ಸಾರ್ವಜನಿಕವಾಗಿ ಆಕೆಯ ಬಟ್ಟೆ ಹರಿದು ಹಾಕಲಾಗಿದೆ. ಪಕ್ಕದ ಮನೆಯವರೇ ಮಹಿಳೆ ಮೇಲೆ ಹಲ್ಲೆ ನಡೆಸಿ ಈ ರೀತಿ ಅಮಾನವೀಯವಾಗಿ ವರ್ತಿಸಿದ್ದಾರೆ. ವಡ್ಡರವಾಡಿ ಮನೆಯಲ್ಲಿ ತಾಯಿ-ಮಗಳು ಸೇರಿ ನಾಲ್ವರು ಮನೆಯೊಂದರಲ್ಲಿ ವಾಸವಾಗಿದ್ದಾರೆ. ಪಕ್ಕದ ಮನೆಯ …

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಗೋಕಾಕ ತಾಲ್ಲೂಕಿನ ಗಡ್ಡಿಹೋಳಿ ಗ್ರಾಮದ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮೀ …

Read More »