Breaking News

ರಾಮ ಮಂದಿರ ಪ್ರಾರಂಭ ಮಾಡಿದವರೇ ನಾವು : ಸಂತೋಷ ಲಾಡ್

ಹುಬ್ಬಳ್ಳಿ, ಜನವರಿ 06: ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾರಂಭ ಮಾಡಿದವರೇ ನಾವೇ. ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲ ಹಾಕಿದವರೇ ನಮ್ಮ ನಾಯಕರಾದ ರಾಜೀವ ಗಾಂಧಿ ಅಡಿಗಲ್ಲು ಹಾಕಿದವರು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು. ಈ ಕುರಿತು ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿನ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನಾವು ಕೂಡ ರಾಮ ಭಕ್ತರಿದ್ದೇವೆ ಅವರ ಅಷ್ಟೇ ಅಲ್ಲಾ ಎನ್ನುವ …

Read More »

ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು

ಬೆಂಗಳೂರು ಜನವರಿ 6: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರಾಗಿದ್ದು ವೈದ್ಯರ ತಂಡ ಅವರ ನಿವಾಸಕ್ಕೆ ಆಗಮಿಸಿರುವುದು ತಿಳಿದು ಬಂದಿದೆ. ಡಿಕೆ ಶಿವಕುಮಾರ್‌ ಅವರಿಗೆ ವೈರಲ್ ಫಿವರ್ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಅವರು ರಾತ್ರಿಯಿಂದ ಬಳಲುತ್ತಿದ್ದು ಬೆಳಿಗ್ಗೆ ಅವರ ನಿವಾಸಕ್ಕೆ ವೈದ್ಯರ ತಂಡ ಬಂದು ಅವರ ಆರೋಗ್ಯ ತಪಾಸಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಶಾಸಕ ಹಾಗೂ ವೈದ್ಯರೂ ಆಗಿರುವ ಕುಣಿಗಲ್ ರಂಗನಾಥ್ ಜೊತೆಗೆ ಆಗಮಿಸಿದ ವೈದ್ಯರು …

Read More »

ನಂಜುಂಡನಿಗೆ ತುಲಾಭಾರ ಸೇವೆ ಸಲ್ಲಿಸಿ ಹರಕೆ ತೀರಿಸಿದ ಬಿ.ವೈ.ವಿಜಯೇಂದ್ರ

ನಂಜನಗೂಡು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಇಂದು ನಂಜನಗೂಡಿನ ನಂಜುಂಡೇಶ್ವರನ ದೇವಾಲಯದಲ್ಲಿ ತುಲಾಭಾರ ಸೇವೆ ಸಲ್ಲಿಸಿ ಹರಕೆ ತೀರಿಸಿದ್ದಾರೆ. ತಮ್ಮ ತೂಕದಷ್ಟು ಬೆಲ್ಲ ದೇವಾಲಯಕ್ಕೆ ನೀಡಿ ಹರಕೆ ತೀರಿಸಿದ್ದಾರೆ. ಚಾಮರಾಜನಗರ ಹಾಗೂ ಮೈಸೂರಿನಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಬಿ.ವೈ.ವಿಜಯೇಂದ್ರ ನಂಜನಗೂಡು ನಂಜುಂಡೇಶ್ವರನ ದೇವಾಲಯಕ್ಕೆ ಭೇಟಿ ನೀಡಿ ತುಲಾಭಾರ ಸೇವೆ ಸಲ್ಲಿಸಿ ಹರಕೆ ತೀರಿಸಿದ್ದಾರೆ.

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

ರಾಮದುರ್ಗ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲೂಕಿನ ಎಂ ಚಂದರಗಿ ಗ್ರಾಮದಲ್ಲಿ ಶ್ರೀ ಕೆಂಪಯ್ಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ …

Read More »

ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ

 ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಂಭವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ರಾಜ್ಯದ ಪ್ರಮುಖ ಜಲಾಶಯಗಳಾದ ಆಲಮಟ್ಟಿ, ಕೆಆರ್​ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ 12 ಜಲಾಶಯಗಳ ನೀರಿನ ಪ್ರಮಾಣ (Karnataka Dam Water Level) ಜನವರಿ 06 ರಂದು ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟು ಇದೆ …

Read More »

ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್​ ಬೆದರಿಕೆ

ಬೆಂಗಳೂರು, ಜನವರಿ 06: ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ( Visvesvaraya Museum ) ಇ-ಮೇಲ್​ ಮೂಲಕಬಾಂಬ್ ಬೆದರಿಕೆ( Bomb threat ) ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ( Cubbon Park Police Station ) ಇ-ಮೇಲೆ ಬೆದರಿಕೆ ಸಂದೇಶ ಕಳಿಸಿದ್ದ ಕಿಡಿಗೇಡಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ.   ಶುಕ್ರವಾರ (ಜ.06) ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಇ-ಮೇಲ್​ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಮ್ಯೂಸಿಯಂನಲ್ಲಿ ಹಲವು ಸ್ಪೋಟಕಗಳನ್ನ ಬಚ್ಚಿಡಲಾಗಿದೆ, ಬೆಳಗ್ಗೆ ಎಲ್ಲವೂ ಸ್ಪೋಟಗೊಳ್ಳುತ್ತವೆ ಎಂದು’Morgue999lol’ ಎಂಬ ಐಡಿ …

Read More »

ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೊಪ್ಪಳ ಯುವಕ;

ಕೊಪ್ಪಳ, ಜ.04: ಭವ್ಯ ರಾಮ ಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಉಳದಿವೆ (Ayodhya Ram Mandir). ರಾಮ ಮಂದಿರವನ್ನು ನೋಡಬೇಕು. ರಾಮನ (Lord Rama) ದರ್ಶನ ಪಡೆಯಬೇಕು ಅನ್ನೋದು ಕೋಟ್ಯಂತರ ಜನರ ಆಶಯವಾಗಿದೆ. ಆದರೆ ರಾಮ ಮಂದಿರ ನಿರ್ಮಾಣ ಕಾರ್ಯ ಸಿಗೋದು ಅದೃಷ್ಟದ ವಿಷಯವೇ. ಇಂತಹದೊಂದು ಅದೃಷ್ಟ ಕೊಪ್ಪಳ ಜಿಲ್ಲೆಯ ಓರ್ವ ಶಿಲ್ಪಿಗೆ ದೊರೆತಿದೆ. ಇದು ಕೊಪ್ಪಳ ಜಿಲ್ಲೆಯ ಜನರ ಸಂತಸಕ್ಕೆ ಕಾರಣವಾಗಿದೆ. ಕೊಪ್ಪಳ ತಾಲೂಕಿನ ಕಾತರಕಿ ಗುಡ್ಲಾನೂರ ಗ್ರಾಮದ ಇಪ್ಪತ್ತಾರು ವರ್ಷದ …

Read More »

ಐತಿಹಾಸಿಕ ಅಂಜನಾದ್ರಿ ದೇವಸ್ಥಾನದ ಹುಂಡಿ ಎಣಿಕೆ ದಿನಕ್ಕೆ ಒಂದು ಲಕ್ಷದಂತೆ ಸರಾಸರಿ ಕಾಣಿಕೆ ಸಂಗ್ರಹವಾಗಿದೆ. ನಗದು ಜೊತೆಗೆ 2 ವಿದೇಶಿ ನೋಟು, 3 ವಿದೇಶಿ ನಾಣ್ಯ ಸಿಕ್ಕಿವೆ.

ಕೊಪ್ಪಳ, ಜ.05: ಜಿಲ್ಲೆಯ ಗಂಗಾವತಿ(Gangavathi) ತಾಲೂಕಿನಲ್ಲಿರುವ ಐತಿಹಾಸಿಕ ಅಂಜನಾದ್ರಿ(Anjanadri) ಆಂಜನೇಯ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಗಿದ್ದು, ಕೇವಲ 22 ದಿನಗಳಲ್ಲಿ ಬರೊಬ್ಬರಿ 27 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ. ಹನುಮಮಾಲಾ ವಿಸರ್ಜನೆ ಹಿನ್ನೆಲೆ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಅದರಂತೆ ದೇವಸ್ಥಾನದಲ್ಲಿದಿನಕ್ಕೆ ಒಂದು ಲಕ್ಷದಂತೆಸರಾಸರಿ ಕಾಣಿಕೆ ಸಂಗ್ರಹವಾಗಿದೆ. ನಗದು ಜೊತೆಗೆ 2 ವಿದೇಶಿ ನೋಟು, 3 ವಿದೇಶಿ ನಾಣ್ಯ ಸಿಕ್ಕಿವೆ. ಇನ್ನು ತಹಶೀಲ್ದಾರ್​​​ ವಿಶ್ವನಾಥ್​​​ ಮುರಡಿ ನೇತೃತ್ವದಲ್ಲಿ ಪೊಲೀಸ್​​ ಬಂದೋಬಸ್ತ್​​​ ಸೇರಿದಂತೆ ಸಿಸಿ …

Read More »

ಹುಬ್ಬಳ್ಳಿ: ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ, ನಾಲ್ವರ ಸಾವು

ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಬೆಳ್ಳಿಗಟ್ಟಿ ಕ್ರಾಸ್ ಬಳಿಯ ಬೆಂಗಳೂರು – ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರು ಮತ್ತು ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿದೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹುಬ್ಬಳ್ಳಿ, ಜನವರಿ 06: ಧಾರವಾಡ (Dharwad ) ಜಿಲ್ಲೆ ಕುಂದಗೋಳ ( Kundagol ) ತಾಲೂಕಿನ ಬೆಳ್ಳಿಗಟ್ಟಿ ಕ್ರಾಸ್ ಬಳಿಯ ಬೆಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು (ಜ.06) ಬೆಳ್ಳಂ ಬೆಳಿಗ್ಗೆ ಎರಡು ಕಾರು ಮತ್ತು ಲಾರಿ ನಡುವೆ ಸರಣಿಅಪಘಾತ( Accident ) ಸಂಭವಿಸಿದೆ. ನಾಲ್ವರು ಸ್ಥಳದಲ್ಲೇ …

Read More »

ಕುಂದಾಪುರದ ಯುವಕನ ಜೊತೆ ಜರ್ಮನಿ ಯುವತಿಯ ಮದುವೆ

ಚಂದನ್ ಅವರು ಜರ್ಮನಿಯಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಶಿಕ್ಷಕಿಯಾಗಿರುವ ಕಾರಿನ್ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರು ತಮ್ಮ ಪ್ರೇಮದ ಬಗ್ಗೆ ತಮ್ಮ ಕುಟುಂಬಿಕರೊಂದಿಗೆ ಮಾತುಕತೆ ಮಾಡಿದ್ದು ಎರಡು ಕುಟುಂಬಗಳು ಪರಸ್ಪರ ಚರ್ಚಿಸಿ ಮದುವೆಗೆ ಸಮ್ಮತಿಸಿದ್ದರು.  ಜರ್ಮನಿ ಮೂಲದ ಯುವತಿ ಕುಂದಾಪುರ ತಾಲೂಕಿನ ಆಜ್ರಿ ಮೂಲದ ಯುವಕ ಜೊತೆ ಹಿಂದೂ ಸಂಪ್ರದಾಯದಂತೆ ಮದುವೆಯಾದ ಘಟನೆ ಕುಂದಾಪುರದಲ್ಲಿ ನಡೆಯಿತು. ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಇವರು ಹಸೆಮಣೆ ಏರಿದ್ದು ಎರಡೂ …

Read More »