ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಮನೆಯಲ್ಲೇ ಪೆನ್ ಡ್ರೈವ್ ಟ್ರಾನ್ಸ್ ಫರ್ ನಡೆದಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸರಿಯಾದ ತನಿಖೆ ನಡೆಸದೇ ಇದ್ರೆ ಕಾನೂನು ಹೋರಾಟ ನಡೆಸಬೇಕಾಗುತ್ತದೆ. ಪೆನ್ ಡ್ರೈವ್ ಪ್ರಕರಣದಲ್ಲಿ ಡಿಕೆ ಬ್ರದರ್ಸ್ ಕೈವಾಡ ಇದೆ. ಹಾಸನದ ಕಾಂಗ್ರೆಸ್ ಅಭ್ಯರ್ಥಿ ಹೊಳೆನರಸೀಪುರದಲ್ಲಿ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಡಿ.ಕೆ.ಸುರೇಶ್, ಡಿಕೆ …
Read More »UPSC IES/ISSE 2024 ಪರೀಕ್ಷೆ ದಿನಾಂಕ ಪ್ರಕಟ : ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ನವದೆಹಲಿ : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) 2024ನೇ ಸಾಲಿನ ಇಂಡಿಯನ್ ಎಕನಾಮಿಕ್ ಸರ್ವಿಸ್ (ಐಇಎಸ್) / ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಸರ್ವಿಸ್ ಎಕ್ಸಾಮಿನೇಷನ್ (ಐಎಸ್‌ಎಸ್‌ಇ) 2024ರ ವೇಳಾಪಟ್ಟಿಯನ್ನು ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಬಿಡುಗಡೆಯಾದ ವೇಳಾಪಟ್ಟಿಯ ಪ್ರಕಾರ ಅದಕ್ಕೆ ಅನುಗುಣವಾಗಿ ತಯಾರಿ ಪ್ರಾರಂಭಿಸಬಹುದು. ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ವಿವರವಾದ ವೇಳಾಪಟ್ಟಿಯನ್ನು ಪರಿಶೀಲಿಸಬಹುದು. ಯುಪಿಎಸ್ಸಿ ಐಇಎಸ್ / ಐಎಸ್‌ಎಸ್‌ಇ 2024 ಗೆ ಸಂಬಂಧಿಸಿದ ಹೆಚ್ಚಿನ …
Read More »ಗ್ಯಾಸ್ ಸಿಲಿಂಡರ್ ಹೊಂದಿರುವವರಿಗೆ ಬಿಗ್ ಶಾಕ್. ಈ ನಿಯಮ ಕಡ್ಡಾಯ..!
ಬೆಂಗಳೂರು:- ಗ್ಯಾಸ್ ಸಿಲಿಂಡರ್ ಹೊಂದಿರುವ ಕುಟುಂಬಗಳಿಗೆ ಶಾಕ್ ಎದುರಾಗಿದ್ದು, ಇನ್ಮುಂದೆ ಕೆಲವು ನಿಯಮ ಕಡ್ಡಾಯವಾಗಿದೆ. ಹೌದು.. ಗ್ಯಾಸ್ ಏಜೆನ್ಸಿಗಳಿಗೂ ಇ-ಕೆವೈಸಿ ಮಾಡಲು ಯಂತ್ರಗಳನ್ನು ನೀಡಲಾಗಿದೆ. ಇದರಲ್ಲಿ ಯಾರ ಹೆಸರಿನಲ್ಲಿ ಗ್ಯಾಸ್ ಸಂಪರ್ಕವಿದೆಯೋ ಅವರೇ ಕೆವೈಸಿ ಮಾಡಿಕೊಳ್ಳಬೇಕಾಗುತ್ತದೆ. ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ನಿಯಮದ ಪ್ರಕಾರ ಇ-ಕೆವೈಸಿ ಮಾಡದವರಿಗೆ ಕಡಿಮೆ ಸಿಲಿಂಡರ್ ನೀಡಲಾಗುವುದು ಅಥವಾ ಸಿಲಿಂಡರ್ ಸಬ್ಸಿಡಿ ಸಿಗುವುದಿಲ್ಲ. ಹಾಗಾಗಿಯೇ ಇಂತಹ ಸಮಸ್ಯೆಯನ್ನು ತಪ್ಪಿಸಲು.. ತಕ್ಷಣವೇ KYC ನ್ನು ಪೂರ್ಣಗೊಳಿಸಿ. ಕೇಂದ್ರದ ಹೊಸ …
Read More »ಗೃಹಲಕ್ಷ್ಮೀ ಹಣದಿಂದ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಡ ಮಹಿಳೆ
ರಾಮದುರ್ಗ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಎರಡು ಸಾವಿರ ರೂಪಾಯಿ ಹಣ ಕಳೆದ 10 ತಿಂಗಳಿಂದ ರಾಜ್ಯದ ಬಡ ಮಹಿಳೆಯರ ಪಾಲಿಗೆ ಸಂಜೀವಿನಿಯಾಗುತ್ತಿದೆ. ಗೃಹಲಕ್ಷ್ಮಿ ಹಣದಿಂದ ಬಡ ಮಹಿಳೆಯೊಬ್ಬರು ಮೊನ್ನೆಯಷ್ಟೆ ತಮ್ಮ ಮನೆಗೆ ಫ್ರೀಜ್ ಖರೀದಿಸಿದ್ದರೆ, ಮತ್ತೋರ್ವ ಮಹಿಳೆ ತನಗಿಷ್ಟದ ಮೊಬೈಲ್ ಖರೀದಿಸಿದ್ದರು. ಬಡ ವಿದ್ಯಾರ್ಥಿಗಳ ಪಾಲಿಗೆ ಈ ಯೋಜನೆ ಹಲವು ರೀತಿಯಲ್ಲಿ ವರದಾನವಾಗಿದೆ. ಇದೀಗ ಬೆಳಗಾವಿಯ ರಾಮದುರ್ಗದ ಸುರೇಬಾನ ಮನಿಹಾಳ ಗ್ರಾಮದ ಮಹಿಳೆಯೊಬ್ಬರು ಕಳೆದ 10 …
Read More »MLC Elections: ಬಿಜೆಪಿಯಲ್ಲಿ 3 ಸ್ಥಾನಕ್ಕೆ 30 ಆಕಾಂಕ್ಷಿಗಳು
ಬೆಂಗಳೂರು: ಚುನಾವಣೆಯಲ್ಲಿ ಸೋತ ಘಟಾನುಘಟಿಗಳೂ ಸೇರಿ ಪ್ರಭಾವಿಗಳು ಮೇಲ್ಮನೆ ಪ್ರವೇಶಕ್ಕೆ ನಡೆಸುತ್ತಿರುವ ಲಾಬಿ ಬಿಜೆಪಿ ನಾಯಕರಿಗೆ ತಲೆಬಿಸಿ ಸೃಷ್ಟಿಸಿದ್ದು, ಮೂರು ಸ್ಥಾನಕ್ಕಾಗಿ ಮೂವತ್ತಕ್ಕೂ ಹೆಚ್ಚು ಜನರು ಆಕಾಂಕ್ಷಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಭಾವ್ಯರ ಪಟ್ಟಿಯನ್ನು ದೆಹಲಿಗೆ ಕಳುಹಿಸುವುದಕ್ಕಾಗಿ ಬುಧವಾರ ಬಿಜೆಪಿಯ ಪ್ರಮುಖರ ಸಭೆ ನಡೆಯಲಿದ್ದು, ಆಕಾಂಕ್ಷಿಗಳೆಲ್ಲರ ಹೆಸರನ್ನು ದಿಲ್ಲಿ ವರಿಷ್ಠರಿಗೆ ಕಳುಹಿಸಲು ನಿರ್ಧರಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ರಾಜ್ಯ ಸಂಘಟನ ಪ್ರಧಾನ ಕಾರ್ಯದರ್ಶಿ ರಾಜೇಶ್ …
Read More »ರಾಜ್ಯ ಸರ್ಕಾರ ಗ್ಯಾರಂಟಿಗಳ ಅಮಲಿನಲ್ಲಿದೆ. : ಎನ್ ರವಿಕುಮಾರ್
ಕೊಪ್ಪಳ: ರಾಜ್ಯ ಸರ್ಕಾರ ಗ್ಯಾರಂಟಿಗಳ ಅಮಲಿನಲ್ಲಿದೆ. ಕಾಂಗ್ರೆಸ್ ಗ್ಯಾರಂಟಿಗಳಲ್ಲಿಯೇ ಕಾಲಹರಣ ಮಾಡುತ್ತಿದೆ. ಅಭಿವೃದ್ಧಿ ಕೆಲಸಕ್ಕೆ ಅನುದಾನ ಕೊಡುತ್ತಿಲ್ಲ. ಗ್ಯಾರಂಟಿ ಬಿಟ್ಟು ರಾಜ್ಯದಲ್ಲಿ ಏನೂ ಇಲ್ಲ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್ ರವಿಕುಮಾರ್ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರದ ದಾಹಕ್ಕಾಗಿ ಗ್ಯಾರಂಟಿ ಯೋಜನೆ ಜಾರಿ ತಂದರು.ರಾಜ್ಯದಲ್ಲಿ ನೀರಾವರಿ, ಕೈಗಾರಿಕೆ, ಕಂದಾಯ, ಶಿಕ್ಷಣ ಹಳ್ಳಹತ್ತಿ ಹೋಗಿವೆ. ಪೋಷಕರೂ ಸಹ ಆತಂಕದಲ್ಲಿದ್ದಾರೆ.ಸರ್ಕಾರಿ ಕೆಲಸ ಶಿಕ್ಷಕರಿಗೆ ಕೊಡಬೇಡಿ. ಶಿಕ್ಷಣದ ಕೆಲಸ …
Read More »ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸರ್ಕಾರದ ಪರ ಮೃದು ಧೋರಣೆ ಇಲ್ಲ: ಮೃತ್ಯುಂಜಯ ಸ್ವಾಮೀಜಿ
ಬೆಳಗಾವಿ: ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಕಾಂಗ್ರೆಸ್ ಸರ್ಕಾರ ಪರ ತಾವು ಮೃದು ಧೋರಣೆ ತೋರುತ್ತಿಲ್ಲ ಎಂದು ಕೂಡಲ ಸಂಗಮ ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸ್ಪಷ್ಟನೆ ನೀಡಿದರು. ಬೆಳಗಾವಿಯಲ್ಲಿ ಮಾತನಾಡಿದ ಅವರು, ನಮ್ಮ ಹೋರಾಟ ನಿರಂತರವಾಗಿದೆ. ಯಾವ ಸರಕಾರದ ಮೇಲೂ ಮೃದು ಧೋರಣೆ ಅನುಸರಿಸಿಲ್ಲ ಎಂದರು. ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಸರ್ಕಾರ ತಮ್ಮನ್ನ ಕರೆದು ಮಾತನಾಡಿಸಿಲ್ಲ. ಮೊದಲು ಮೀಸಲಾತಿಗಾಗಿ ಮನವಿ ಮಾಡುತ್ತೇವೆ. ಅದಕ್ಕೆ ಸ್ಪಂದನೆ ಸಿಗದಿದ್ದರೆ ಉಗ್ರ ಹೋರಾಟ …
Read More »ಲಕ್ಷ್ಮಣ್ ಸವದಿ ಸಹಮಾಲಿಕತ್ವದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ; ಮಹಿಳೆ ಸಾವು
ಬೆಳಗಾವಿ: ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಸಹ ಮಾಲಿಕತ್ವದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟಗೊಂಡು ಮಹಿಳೆಯೊಬ್ಬರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಅಥಣಿಯಲ್ಲಿ ನಡೆದಿದೆ. ಸ್ಪೋಟದಿಂದ ಗಂಭೀರವಾಗಿ ಗಾಯಗೊಂಡ ಶೋಭಾ ತೇಲಿ ಎಂಬವರು ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಅಸುನೀಗಿದ್ದಾರೆ. ಇಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದ ಹೊರ ವಲಯದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿರುವ ಪ್ರಿಯಾ ಎಕ್ಸ್‌ಪೋರ್ಟ್ ಕೈಗಾರಿಕಾ …
Read More »ACP ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ; 3.5 ಕೋಟಿ ರೂ. ಆಸ್ತಿ ಪತ್ತೆ!
ACP ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ; 3.5 ಕೋಟಿ ರೂ. ಆಸ್ತಿ ಪತ್ತೆ! ತೆಲಂಗಾಣ: ಹೈದರಾಬಾದ್(Hyderabad) ನ ಎಸಿಪಿ ಮನೆಯಲ್ಲಿ ಚಿನ್ನ, ಬೆಳ್ಳಿ ಸೇರಿದಂತೆ 3.5 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದನ್ನು ಭ್ರಷ್ಟಾಚಾರ ನಿಗ್ರಹ ದಳದ(Anti Corruption bureau) ಅಧಿಕಾರಿಗಳು ಪತ್ತೆ ಹಚ್ಚಿರುವುದಾಗಿ ವರದಿ ತಿಳಿಸಿದೆ. ದೂರಿನ ಆಧಾರದ ಮೇಲೆ ಸೆಂಟ್ರಲ್ ಕ್ರೈಮ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಅವರ(ACP house) ನಿವಾಸದ ಮೇಲೆ …
Read More »ಜಲಾಶಯದ ಹಿನ್ನೀರಿನಲ್ಲಿ ದೋಣಿ ಮಗುಚಿ ಆರು ಮಂದಿ ಮೃತ್ಯು
ಪುಣೆ : ಜಿಲ್ಲೆಯ ಉಜನಿ ಅಣೆಕಟ್ಟಿನ ಹಿನ್ನೀರಿನಲ್ಲಿ ದೋಣಿ ಮಗುಚಿ ಇಬ್ಬರು ಮಕ್ಕಳು ಸೇರಿದಂತೆ ಆರು ಜನರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಮಂಗಳವಾರ ಸಂಜೆ ಭಾರೀ ಗಾಳಿ ಮತ್ತು ಮಳೆಯ ಹಿನ್ನೆಲೆಯಲ್ಲಿ ಈ ದುರಂತ ನಡೆದಿದೆ. ಸಂಜೆ ನಗರದಾದ್ಯಂತ ಭಾರೀ ಮಳೆ ಮತ್ತು ಬಲವಾದ ಗಾಳಿ ಬೀಸಿದ ನಂತರ ಈ ಘಟನೆ ಸಂಭವಿಸಿದೆ . ಇಂದಾಪುರ ತಹಶೀಲ್ದಾರ್ ಶ್ರೀಕಾಂತ್ ಪಾಟೀಲ್ ಅವರು ನೀಡಿದ ಪ್ರಕಾರ, ಮೃತರಲ್ಲಿ ಮೂವರು …
Read More »
Laxmi News 24×7